Kannada News Specials Jaggi Vasudev Birthday Special; Know the Interesting unknown things about Sadhguru Jagadish Vasudev on his birthday
Jaggi Vasudev Birthday Special: ಸದ್ಗುರು ಜಗ್ಗಿ ವಾಸುದೇವ್ ಅವರ ಕುರಿತಾಗಿ ತಿಳಿದುಕೊಳ್ಳಬೇಕಾದ 10 ಕುತೂಹಲಕಾರಿ ಸಂಗತಿಗಳು..!
ಅವರು ಭಾರತೀಯರ ಮೇಲೆ ತಮ್ಮ ಛಾಪನ್ನು ಮೂಡಿಸುವುದರೊಂದಿಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ಅನೇಕರು ಇವರನ್ನು ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ.
ಜಗ್ಗಿ ವಾಸುದೇವ್ (ಸಂಗ್ರಹ ಚಿತ್ರ)
Follow us on
ಜಗ್ಗಿ ವಾಸುದೇವ್ (Jaggi Vasudev) ಅವರು ಭಾರತೀಯ ಯೋಗ ಗುರು ಮತ್ತು ಲೇಖಕರು. ಇವರು ಸದ್ಗುರು ಎಂದೇ ಚಿರಪರಿಚಿತರು. ಸದ್ಗುರು ಅವರು ಇಂದು 65ನೇ ವಸಂತಕ್ಕೆ (Birthday) ಕಾಲಿಟ್ಟಿದ್ದಾರೆ. ಇಂದಿಗೂ ಅದೇ ಹುಮ್ಮಸಿನಿಂದ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಅವರು ತಮ್ಮ ನಡೆ-ನುಡಿಗಳಿಂದ ಅನೇಕ ಜನರನ್ನು ಬೆರಗಾಗಿಸಿದ್ದಾರೆ. ಸದ್ಗುರು ಅವರು ಸೆಪ್ಟೆಂಬರ್ 3, 1957 ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಸದ್ಗುರುಗಳು 1982 ರಿಂದ ದಕ್ಷಿಣ ಭಾರತದಲ್ಲಿ ಯೋಗವನ್ನು ಕಲಿಸುತ್ತಿದ್ದರು. 1992 ರಲ್ಲಿ ಅವರು ಕೊಯಮತ್ತೂರು ಬಳಿ ‘ಇಶಾ ಫೌಂಡೇಶನ್’ (Isha Foundation) ಸ್ಥಾಪಿಸಿದರು. ಇದು ಆಶ್ರಮ ಮತ್ತು ಯೋಗ ಕೇಂದ್ರವು ಹೌದು. ಸದ್ಗುರುಗಳು ಆಧ್ಯಾತ್ಮಿಕತೆ, ಶಿಕ್ಷಣ ಮತ್ತು ಪರಿಸರ ಸಂಬಂಧಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಭಾರತೀಯರ ಮೇಲೆ ತಮ್ಮ ಛಾಪನ್ನು ಮೂಡಿಸುವುದರೊಂದಿಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ಅನೇಕರು ಇವರನ್ನು ಆಧ್ಯಾತ್ಮಿಕ ಗುರು ಎಂದು ಪರಿಗಣಿಸಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ಸಂಗತಿಗಳು ಹೀಗಿವೆ:
ಸದ್ಗುರುಗಳು 2007, 2017 ಮತ್ತು 2020 ರಲ್ಲಿ ವಿಶ್ವಸಂಸ್ಥೆಯ ಮಿಲೇನಿಯಮ್ ವರ್ಲ್ಡ್ ಪೀಸ್ ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಶೃಂಗಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
2017 ರಲ್ಲಿ, ಸದ್ಗುರು ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಭಾರತ ಸರ್ಕಾರವು ಸಮಾಜ ಕಲ್ಯಾಣಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ ಗೌರವಿಸಿತು.
ಭಾರತದ 50 ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಸದ್ಗುರುಗಳು ಒಬ್ಬರೆಂದು ಹೆಸರಿಸಲ್ಪಟ್ಟಿದ್ದಾರೆ.
ಇನ್ನರ್ ಇಂಜಿನಿಯರಿಂಗ್: ಎ ಯೋಗೀಸ್ ಗೈಡ್ ಟು ಜಾಯ್ ಪುಸ್ತಕಕ್ಕಾಗಿ, ಸೆಪ್ಟೆಂಬರ್ 2016 ರಲ್ಲಿ ನ್ಯೂಯಾರ್ಕ್ ಟೈಮ್ಸ್ನಿಂದ ಬೆಸ್ಟ್ ಸೆಲ್ಲರ್ ಬಿರುದು ನೀಡಲಾಗಿದೆ.
ಭಾರತದ ಅತ್ಯುನ್ನತ ಪರಿಸರ ಕಾಳಜಿಗಾಗಿ ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ ನೀಡಲಾಗಿದೆ.
ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಅಡಿಯಲ್ಲಿ, 2,00,000 ಸ್ವಯಂ ಸೇವಕರು, ಮೂರು ದಿನಗಳಲ್ಲಿ 8,00,000 ಮರಗಳನ್ನು ನೆಟ್ಟು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಮಣ್ಣು ಸಂರಕ್ಷಿಸುವ (SAVE SOIL) ಜಾಗತಿಕ ಆಂದೋಲನದ ಭಾಗವಾಗಿ 100 ದಿನಗಳಲ್ಲಿ 27 ರಾಷ್ಟ್ರಗಳಲ್ಲಿ 30,000 ಕಿಮೀ ದೂರ ಏಕಾಂಗಿಯಾಗಿ ಬೈಕ್ ಪ್ರಯಾಣವನ್ನು ಮಾಡಿದ್ದಾರೆ.
ಸದ್ಗುರು ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ವಯಂಘೋಷಿತ ದೇವಮಾನವ ಎಂದು ಕರೆಯಲ್ಪಡುತ್ತಾರೆ.
1992 ರಲ್ಲಿ ಅವರು ಕೊಯಮತ್ತೂರು ಬಳಿ ‘ಇಶಾ ಫೌಂಡೇಶನ್’ ಸ್ಥಾಪಿಸಿದರು.
1983 ರಲ್ಲಿ, ಜಗ್ಗಿ ವಾಸುದೇವ್ ಮೈಸೂರಿನಲ್ಲಿ ಯೋಗ ತರಗತಿಗಳನ್ನು ಕಲಿಸಲು ಪ್ರಾರಂಭಿಸಿದರು.