Male Population on Extinct: ಭವಿಷ್ಯದಲ್ಲಿ ಗಂಡಸರೇ ಇರುವುದಿಲ್ವಂತೆ… ಪುರುಷ ವಂಶವಾಹಿ ಶಕ್ತಿ ಕ್ಷೀಣಿಸುತ್ತಿದೆಯಂತೆ! ಮುಂದೇನು?
ಪುರುಷ ವಂಶವಾಹಿ ಶಕ್ತಿ ಕ್ಷೀಣಿಸುತ್ತಿದೆಯಂತೆ! ಹಾಗಾದರೆ ಪುರುಷ ಲಿಂಗ ನಿರ್ಧಾರಕ Y ಕ್ರೋಮೋಸೋಮ್ ಕಣ್ಮರೆಯಾಗುವಂತಿದ್ದರೆ ಅದು ಪುರುಷರ ಅಂತ್ಯವನ್ನು ಸೂಚಿಸುತ್ತದೆ. ಅಂದರೆ ಅದು ಸಂತಾನೋತ್ಪತ್ತಿಗೇ ಕಂಟಕವಾಗಿ ಮನುಷ್ಯ ಸಂಕುಲವೇ ನಶಿಸಿಬಿಡುತ್ತದೆ ಅಲ್ಲವೇ!? ಆದರೆ ಅದು ಹಾಗಾಗುವುದಿಲ್ಲ... ಏಕೆಂದರೆ ಸ್ಪೈನಿ ಹೆಗ್ಗಣಗಳ ವಿಷಯದಲ್ಲಿ ಸಾಬೀತಾಗುತ್ತಿರುವಂತೆ ಭವಿಷ್ಯದಲ್ಲಿ ಜೀವನವು ಗಮನಾರ್ಹವಾದ ಆನುವಂಶಿಕ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತದೆ.

ಸದ್ಯೋಭವಿಷ್ಯದಲ್ಲಿ ಪುರುಷರ ಸಂಖ್ಯೆ ಅಳಿವಿನಂಚಿಗೆ ತಲುಪುತ್ತದಂತೆ. ಇದ ಕೇಳಿ ಪುರುಷರಿಗೆ ಅಳುವಿನ ಸ್ಥಿತಿ ಬರುತ್ತಿದೆ. ಹೊಸ ಅಧ್ಯಯನವೊಂದು ಪುರುಷ ಲಿಂಗ ನಿರ್ಧಾರಕ ವೈ ಕ್ರೋಮೋಸೋಮ್ (Y chromosome) ಕಣ್ಮರೆಯಾಗುವ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಪುರುಷರು ತಮ್ಮ ಪುರುಷ ಪ್ರಧಾನ Y ಕ್ರೋಮೋಸೋಮ್ ಅನ್ನು (ಗಂಡು ಮಕ್ಕಳ ಜನನಕ್ಕೆ ಕಾರಣವಾಗುವ ವರ್ಣತಂತು) ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ವೈಜ್ಞಾನಿಕ ಅಧ್ಯಯನ ತೋರಿಸುತ್ತಿದೆ. ಆದರೆ ಇದೇ ಉಸಿರಿನಲ್ಲಿ ಸಮಾಧಾನಕರ ಸಂಗತಿಯನ್ನೂ ಬಹರಂಗಪಡಿಸಿದೆ. ಈಗಾಗಲೇ ಸ್ಪೈನಿ ಹೆಗ್ಗಣಗಳು (Japan spiny rat) ಇಂತಹುದೇ ಸ್ಥಿತಿಯನ್ನು ತಲುಪಿಬಿಟ್ಟಿದ್ದವು. ಆದರೆ ಸ್ಪೈನಿ ಹೆಗ್ಗಣಗಳಲ್ಲಿ ಹೊಸ ಲೈಂಗಿಕ ಜೀನ್ ಆವಿಷ್ಕಾರಗೊಂಡು, ಸಂತಾನವು ವಿನಾಶದತ್ತ ಸಾಗುವುದನ್ನು ತಪ್ಪಿಸಿದೆ. ಹಾಗಾಗಿ ಮನುಷ್ಯರಲ್ಲಿ ಇದು ಭರವಸೆಯನ್ನು ತಂದಿದೆ. ಇದರರ್ಥ ಪುರುಷರು ನಾಳೆಯೇ ಕಣ್ಮರೆಯಾಗುತ್ತಾರೆ, ಲಕ್ಷಾಂತರ ವರ್ಷಗಳಿಂದ ಈ ಭೂಮಿಯ ಮೇಲೆ ವಿಹರಿಸುತ್ತಿರುವ ಮನುಷ್ಯನ ಜೀವನ ಅಂತ್ಯವಾಗಿಬಿಡುತ್ತದೆ ಎಂದಲ್ಲ. ಆಶಾದಾಯಕವಾಗಿ ಹೇಳಬೇಕೆಂದರೆ ಭವಿಷ್ಯದಲ್ಲಿ ಮನುಷ್ಯನ ವಿಕಸನವು (human evolution) ಆಶ್ಚರ್ಯಕರ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅಂದಹಾಗೆ ಮಾನವ ವಿಕಾಸವು ಇದುವರೆಗೂ 7 ಹಂತಗಳನ್ನು ದಾಟಿಕೊಂಡುಬಂದಿದ್ದು(7 Stages Of Human Evolution), 8ನೇಯದರತ್ತ ದಾಪುಗಾಲು ಇಡಬೇಕಿದೆ. ಸದ್ಯದ ಏಳು ಹಂತಗಳು ಹೀಗಿವೆ ನೋಡಿ: 1. ಡ್ರೈಯೋಪಿಥೆಕಸ್ (ಡ್ರೈಯೋಪಿಥೆಸಿನ್) 2. ರಾಮಾಪಿಥೆಕಸ್ (ಸಿವಾಪಿಥೆಕಸ್) 3. ಆಸ್ಟ್ರಲೋಪಿಥೆಕಸ್ (ದಕ್ಷಿಣ ಮಂಗಗಳು) 4. ಹೋಮೋ ಹ್ಯಾಬಿಲಿಸ್ (ಸಮರ್ಥ ವ್ಯಕ್ತಿ) 5. ಹೋಮೋ ಎರೆಕ್ಟಸ್ (ನೇರವಾದ ಮನುಷ್ಯ) 6. ಹೋಮೋ ಸೇಪಿಯನ್ಸ್ ನಿಯಾಂಡರ್ತಲೆನ್ಸಿಸ್ (ಹೊಸ ಮಾನವ ಪ್ರಭೇದಗಳು) ಮತ್ತು ಚಾಲ್ತಿಯಲ್ಲಿರುವುದು 7. ಹೋಮೋ ಸೇಪಿಯನ್ಸ್ (ಬುದ್ಧಿವಂತರು). ಅಂದಹಾಗೆ ಬುದ್ಧಿವಂತ...