Lal Bahadur Shastri: ಸದೃಢ ಸೇನೆಗೆ ಬುನಾದಿ ಹಾಕಿದ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ ಇಂದು

| Updated By: ಆಯೇಷಾ ಬಾನು

Updated on: Jan 11, 2023 | 11:36 AM

1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತವು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದಾಗ, ಶಾಸ್ತ್ರಿ ಅವರು ತಮ್ಮ ಸಂಬಳವನ್ನು ತೆಗೆದುಕೊಳ್ಳಲಿಲ್ಲ.

Lal Bahadur Shastri: ಸದೃಢ ಸೇನೆಗೆ ಬುನಾದಿ ಹಾಕಿದ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ ಇಂದು
ಲಾಲ್ ಬಹದ್ದೂರ್ ಶಾಸ್ತ್ರಿ
Follow us on

ಸರಳ ಸಜ್ಜನಿಕೆಯ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯ ಸ್ಮರಣೆಯ ದಿನವನ್ನು ಭಾರತದಲ್ಲಿ ಪ್ರತಿವರ್ಷ ಜನವರಿ 11 ರಂದು ಆಚರಿಸಲಾಗುತ್ತದೆ. ಲಾಲ್‌ ಬಹದ್ಧೂರ್ ಶಾಸ್ತ್ರಿ ಈ ದೇಶ ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ, ಅಪ್ರತಿಮ ನಾಯಕ, ಸಜ್ಜನಿಕೆಯ ನೇತಾರ. ಇವರ ಪುಣ್ಯ ಸ್ಮರಣೆಯ ದಿನವಾದ ಇಂದು ಅವರ ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳನ್ನು ತಿಳಿಯಿರಿ.

ಭಾರತದ ಮೂರನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮುಗಲ್ಸರಾಯಿಯಲ್ಲಿ ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಹಾಗೂ ತಾಯಿ ರಾಮದುಲಾರಿ. ದೇಶದ ಪಿತಾಮಹ ಮಹಾತ್ಮ ಗಾಂಧಿ ಹುಟ್ಟಿದ 35 ವರ್ಷಗಳ ಬಳಿಕ ಜನಿಸಿದ ಇವರು ಮುಂದೆ ಗಾಂಧೀಜಿ ಅವರ ಕಟ್ಟಾ ಅನುಯಾಯಿಯಾದರು. ಶಾಸ್ತ್ರಿ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ದೊಡ್ಡ ಕೊಡುಗೆಗಳನ್ನು ಮತ್ತು ತ್ಯಾಗಗಳನ್ನು ಮಾಡಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಶಾಸ್ತ್ರಿಯವರು ಒಂದೂವರೆ ವರ್ಷದವರಿದ್ದಾಗಲೇ ತಂದೆ ತೀರಿಹೋದರು. ಇದಾದ ಬಳಿಕ 20 ವರ್ಷ ವಯಸ್ಸಿನ ತಾಯಿಯ ಮಡಿಲಲ್ಲಿ ಶಾಸ್ತ್ರಿ ಬೆಳೆದರು. ಕಿತ್ತು ತಿನ್ನುವ ಬಡತನದಲ್ಲೂ ಜೀವನದ ಮೌಲ್ಯಗಳನ್ನು ಅಳವಳಿಸಿಕೊಂಡು ವಿದ್ಯಾಭ್ಯಾಸವನ್ನು ವಾರಣಾಸಿಯಲ್ಲಿ ಮಾಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ವಾತಂತ್ರ್ಯ ಚಳವಳಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಬೆಳೆಯುತ್ತ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚಿಸಿಕೊಂಡರು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು. ಈ ವೇಳೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದ್ದರು.

ಇದನ್ನೂ ಓದಿ: ಮಹಾತ್ಮ ಗಾಂಧಿ-ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನ; ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ನಿರ್ಧರಿಸಿದರು. ಅವರ ಈ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು. ಬ್ರಿಟಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.

ರೈಲು ದುರಂತಕ್ಕೆ ನೊಂದು ರಾಜೀನಾಮೆ ನೀಡಿದ್ದ ಶಾಸ್ತ್ರಿ

ಶಾಸ್ತ್ರಿ ಅವರು ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಲವು ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ್ದರು. ರೈಲ್ವೆ, ಸಾರಿಗೆ ಮತ್ತು ಸಂವಹನ ಹಾಗೂ ವಾಣಿಜ್ಯ ಮತ್ತು ಉದ್ಯಮ ಇಲಾಖೆಗಳಂತಹ ಮಹತ್ವದ ಸಚಿವಾಲಯಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ರೈಲು ದುರಂತವೊಂದು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡರು. ಅದರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತವು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದಾಗ, ಶಾಸ್ತ್ರಿ ಅವರು ತಮ್ಮ ಸಂಬಳವನ್ನು ತೆಗೆದುಕೊಳ್ಳಲಿಲ್ಲ.

ಶಾಸ್ತ್ರಿಯವರು 1930 ರ ದಶಕದಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು ಮತ್ತು 2 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರು. ಅವರು 1937 ರಲ್ಲಿ ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಬಹಳ ಮಿತವ್ಯಯಿ ಎಂದು ಹೆಸರಾಗಿದ್ದರು. ಅವರು ಭಾರತದ ಪ್ರಧಾನಿಯಾದಾಗ, ಅವರ ಕುಟುಂಬದ ಒತ್ತಾಯದ ಮೇರೆಗೆ ಅವರು ತಮ್ಮ ಮೊದಲ ಕಾರು ಖರೀದಿಸಲು 5,000 ರೂ ಸಾಲವನ್ನು ತೆಗೆದುಕೊಳ್ಳಬೇಕಾಯಿತು. ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶಾಸ್ತ್ರಿ ನಿಧನರಾದರು. ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ 1965 ರ ಸಂಘರ್ಷವನ್ನು ಅಧಿಕೃತವಾಗಿ ಮುಚ್ಚಿದೆ. ಮರುದಿನವೇ ಅವರು ನಿಧನರಾದರು ಮತ್ತು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ ಪಡೆದ ಮೊದಲ ಭಾರತೀಯರಾದರು.

ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆಗೆ ಸಿಎಂ ಬೊಮ್ಮಾಯಿ ಫೋಸ್ಟ್

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:23 am, Wed, 11 January 23