ಟೈಟಾನಿಕ್ ಪ್ರಯಾಣಿಕನ ಪತ್ರ ಹರಾಜಿಗೆ.. ಏನಿದರ ವಿಶೇಷತೆ?
ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್ ಜಾಕೆಟ್ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್ ಹಾರ್ಪರ್ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಾನ್ ಹಾರ್ಪರ್ ಟೈಟಾನಿಕ್ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ […]
ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್ ಜಾಕೆಟ್ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್ ಹಾರ್ಪರ್ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಜಾನ್ ಹಾರ್ಪರ್ ಟೈಟಾನಿಕ್ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ ಮುಳುಗಡೆಯಾದಾಗ ತಮ್ಮ ಪತ್ನಿ ಮತ್ತು ಪುತ್ರಿಯನ್ನು ರಕ್ಷಣಾ ದೋಣಿಗೆ ಸ್ಥಳಾಂತರಿಸಿದ ಹಾರ್ಪರ್ ಬಳಿಕ ತಮ್ಮ ಲೈಫ್ ಜಾಕೆಟ್ನ ಮತ್ತೊಬ್ಬ ಪ್ರಯಾಣಿಕರಿಗೆ ನೀಡಿಬಿಟ್ಟರು. ಇದರ ಪರಿಣಾಮವಾಗಿ ಹಾರ್ಪರ್ ಹಡಗಿನೊಂದಿಗೆ ಸಮುದ್ರಪಾಲಾದರು.