ಭೂಮಿಯಲ್ಲಿ ಅವಿತಿಟ್ಟ ಸ್ಫೋಟಕಗಳನ್ನು ಪತ್ತೆ ಮಾಡಿ ಅನೇಕ ಪ್ರಾಣಗಳನ್ನು ಉಳಿಸಿದ ದೈತ್ಯ ಇಲಿ ವೃತ್ತಿಗೆ ವಿದಾಯ ಹೇಳಿದೆ!

ಸಿಎಮ್ಎಸಿ ನೀಡಿರುವ ಹೇಳಿಕೆಯ ಪ್ರಕಾರ ಮಗಾವಾ ಇನ್ನೂ ಕೆಲ ದಿನಗಳ ಕಾಲ ತನ್ನ ಹುದ್ದೆಯಲ್ಲಿ ಮುಂದುವರೆಯಲಿದ್ದು ಹೊಸದಾಗಿ ನೇಮಕಗೊಂಡಿರುವ ಇಲಿಗಳಿಗೆ ಮಾರ್ಗದರ್ಶನ ನೀಡಿ ಅವು ಸೆಟ್ಲ್ ಆದ ನಂತರ ಕೆಲಸಕ್ಕೆ ವಿದಾಯ ಹೇಳಲಿದೆ.

ಭೂಮಿಯಲ್ಲಿ ಅವಿತಿಟ್ಟ ಸ್ಫೋಟಕಗಳನ್ನು ಪತ್ತೆ ಮಾಡಿ ಅನೇಕ ಪ್ರಾಣಗಳನ್ನು ಉಳಿಸಿದ ದೈತ್ಯ ಇಲಿ ವೃತ್ತಿಗೆ ವಿದಾಯ ಹೇಳಿದೆ!
ಪತ್ತೇದಾರಿ ಮೂಷಕ ಮಗಾವಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2021 | 12:35 AM

ಭೂಮಿಯಡಿಯಲ್ಲಿ ಹುದುಗಿಸಿಟ್ಟ ಸ್ಫೋಟಕಗಳನ್ನು (ಲ್ಯಾಂಡ್​ಮೈನ್) ಪತ್ತೆ ಮಾಡುವಲ್ಲಿ ನಿಷ್ಣಾತನಾಗಿದ್ದ ಮತ್ತು ತನ್ನ ಪರಾಕ್ರಮಗಳಿಗೆ ಬಂಗಾರದ ಪದಕದಿಂದ ಗೌರವಿಸಲ್ಪಟ್ಟಿದ್ದ ಮಗಾವಾ ಹೆಸರಿನ ದೈತ್ಯ ಇಲಿ 5 ವರ್ಷಗಳ ಸೇವೆ ನಂತರ ನಿವೃತ್ತಿ ಹೊಂದುತ್ತಿದೆ. ಕಾಂಬೋಡಿಯಾದಲ್ಲಿ ಐದು ವರ್ಷಗಳ ತನ್ನ ವೃತ್ತಿಬದುಕಿನಲ್ಲಿ 71 ಲ್ಯಾಂಡ್​ಮೈನ್​ಗಳನ್ನು ಮತ್ತು ಹಲವಾರು ಸ್ಫೋಟಗೊಳ್ಳದ ವಸ್ತಗಳನ್ನು ಮಗಾವಾ ಪತ್ತೆ ಮಾಡಿದೆ.

ಅದರ ಹ್ಯಾಂಡ್ಲರ್ ಮೇಲನ್ ಹೆಸರಿನ ಮಹಿಳೆ, ‘7 ವರ್ಷ ವಯಸ್ಸಿನ ಆಫ್ರಿಕನ್ ಇಲಿಗೆ ವಯಸ್ಸಾಗುತ್ತಿದ್ದು ಅದರಲ್ಲಿ ಮೊದಲಿನ ತೀಕ್ಷ್ಣತೆ ಕಡೆಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಅವಶ್ಯಕತೆಗಳಿಗೆ ಗೌರವಿಸುವ ಅಗತ್ಯವಿದೆ,’ ಎಂದು ಹೇಳಿದ್ದಾರೆ.

ಕಾಂಬೋಡಿಯಾದಲ್ಲಿ ಸುಮಾರು 60 ಲಕ್ಷ ಲ್ಯಾಂಡ್​ಮೈನ್​ಗಳಿವೆಯೆಂದು ಹೇಳಲಾಗುತ್ತದೆ. ಮಗಾವಾಗೆ ಟಾಂಜೇನಿಯಾದಲ್ಲಿರುವ ಬೆಲ್ಜಿಯಂ-ನೋಂದಾಯಿತ ಚಾರಿಟಿ ಸಂಸ್ಥೆ ಅಪೊಪೊ ಎಂಬಲ್ಲಿ ತರಬೇತಿ ನೀಡಲಾಗಿತ್ತು. ಈ ಸಂಸ್ಥೆಯು 1990 ರಿಂದ ಲ್ಯಾಂಡ್​ಮೈನ್​ಗಳನ್ನು ಪತ್ತೆ ಮಾಡಲು ಉಪಯೋಗಿಸುವ ಇಲಿಗಳ ಸಾಕಾಣಿಕೆ ಮಾಡಿ ಅವುಗಳಿಗೆ ತರಬೇತಿಯನ್ನೂ ನೀಡುತ್ತದೆ. ಒಂದು ವರ್ಷದ ತರಬೇತಿಯ ನಂತರ ಹಿರೋ ಱಟ್ಸ್ ಎಂದು ಕರೆಸಿಕೊಳ್ಳುವ ಮೂಷಕಗಳಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ.

ಕಾಂಬೋಡಿಯಾಧ ಮೈನ್ ಌಕ್ಷನ್ ಸೆಂಟರ್ (ಸಿಎಮ್ಎಸಿ) ತರಬೇತಿಗಾಗಿ ಬಿಟ್ಟುಹೋಗಿದ್ದ ಯುವ ಇಲಿಗಳ ಒಂದು ಗುಂಪು ತರಬೇತಿಯನ್ನು ಅತ್ಯಂತ ಯಶಸ್ವೀಯಾಗಿ ಪೂರೈಸಿವೆ ಎಂದು ಕಳೆದ ವಾರ ಅಪೊಪೊ ಹೇಳಿತ್ತು.

ಸಿಎಮ್ಎಸಿ ನೀಡಿರುವ ಹೇಳಿಕೆಯ ಪ್ರಕಾರ ಮಗಾವಾ ಇನ್ನೂ ಕೆಲ ದಿನಗಳ ಕಾಲ ತನ್ನ ಹುದ್ದೆಯಲ್ಲಿ ಮುಂದುವರೆಯಲಿದ್ದು ಹೊಸದಾಗಿ ನೇಮಕಗೊಂಡಿರುವ ಇಲಿಗಳಿಗೆ ಮಾರ್ಗದರ್ಶನ ನೀಡಿ ಅವು ಸೆಟ್ಲ್ ಆದ ನಂತರ ಕೆಲಸಕ್ಕೆ ವಿದಾಯ ಹೇಳಲಿದೆ.

‘ವೃತ್ತಿಯಲ್ಲಿ ಮಗಾವಾದ ಪ್ರದರ್ಶನ ಅಪ್ರತಿಮವಾದದ್ದು, ಅದರೊಂದಿಗೆ ಕೆಲಸ ಮಾಡಿದ್ದು ಗೌರವ,’ ಎಂದು ಭಾವಿಸುತ್ತೇನೆ ಎಂದು ಮೇಲನ್ ಹೇಳಿದ್ದಾರೆ.

‘ಅದು ಗಾತ್ರದಲ್ಲಿ ಚಿಕ್ಕದಾಗಿರಬಹುದು ಆದರೆ ಅನೇಕ ಪ್ರಾಣಗಳನ್ನು ಉಳಿಸಲು ನೆರವಾಗಿದೆ ಮತ್ತು ನಮಗೆ ಅತ್ಯಂತ ಅವಶ್ಯಕವಾಗಿರುವ ಸುರಕ್ಷಿತ ಭೂಮಿಯನ್ನು ದೊರಕಿಸಿಕೊಟ್ಟಿದೆ,’ ಎಂದು ಮೇಲನ್ ಹೇಳಿದ್ದಾರೆ

ಕಳೆದ ಸೆಪ್ಟಂಬರ್​ನಲ್ಲಿ ಮಗಾವಾಗೆ ತನ್ನ ವೃತ್ತಿಬದುಕಿನಲ್ಲಿ ತೋರಿದ ‘ಕರ್ತವ್ಯಕ್ಕೆ ಪ್ರಾಣ-ಉಳಿಸುವ ಬದ್ಧತೆ’ ಗೆ ಪ್ರಾಣಿಗಳ ಜಾರ್ಜ್ ಕ್ರಾಸ್ ಎಂದು ಪರಿಗಣಿಸಲಾಗುವ ಎಸ್​ಎ ಚಿನ್ನದ ಪದಕದಿಂದ ಸನ್ಮಾನಿಸಲಾಯಿತು. ಚಾರಿಟಿಯ 77 ವರ್ಷಗಳ ಇತಿಹಾಸದಲ್ಲಿ ಚಿನ್ನದ ಪದಕ ಗಿಟ್ಟಿಸಿರುವ ಏಕೈಕ ಇಲಿ ಮಗಾವಾ ಆಗಿದೆ.

ಮಗಾವಾದ 1.2 ಕೆಜಿ ಭಾರವಿದ್ದು 70 ಸೆಮೀ ನಷ್ಟು ಉದ್ದವಿದೆ. ಬೇರೆ ಮೂಷಕ ಪ್ರಬೇಧಗಳಿಗೆ ಹೋಲಿಸಿದರೆ ಅದರ ಗಾತ್ರ ಬಹಳ ದೊಡ್ಡದೆನಿಸಿದರೂ ಅದು ಲ್ಯಾಂಡ್​ಮೈನ್​ಗಳ ಮೇಲೆ ನಡೆದರೆ ಅವು ಸ್ಫೋಟಗೊಳ್ಳದಷ್ಟು ಹಗುರವಾಗಿದೆ.

ಸ್ಫೋಟಕಗಳಲ್ಲಿ ಉಪಯೋಗಿಸುವ ರಾಸಾಯನಿಕ ಪದಾರ್ಥವನ್ನು ಮೂಸಿ ನೋಡಿ ಕಂಡುಹಿಡಿಯುವ ತರಬೇತಿಯನ್ನು ಇಲಿಗಳಿಗೆ ನೀಡಲಾಗುತ್ತದೆ. ಇದರಿಂದಾಗಿ ಅವು ಕಸವಾಗಿ ಬಿದ್ದಿರಬಹುದಾದ ಲೋಹಗಳನ್ನು ನಿರ್ಲಕ್ಷಿಸಿ ಲ್ಯಾಂಡ್​ಮೈನ್​ಗಳತ್ತ ಹೋಗುವುದು ಸುಲಭವಾಗುತ್ತದೆ.

ಒಂದು ಟೆನಿಸ್ ಕೋರ್ಟಿನ ಅಳತೆಯ ಪ್ರದೇಶವನ್ನು ಮಗಾವಾ ಕೇವಲ 20 ನಿಮಿಷಗಳಲ್ಲಿ ಶೋಧ ಮಾಡುವ ಸಾಮರ್ಥ್ಯ ಹೊಂದಿದೆ. ಒಬ್ಬ ಮಾನವ ಮೆಟಲ್ ಡಿಟೆಕ್ಟರ್​ಗಳ ಸಹಾಯದಿಂದ ಇಷ್ಟೇ ಅಳತೆಯ ಪ್ರದೇಶವನ್ನು ಶೋಧಿಸಲು ಒಂದರಿಂದ ನಾಲ್ಕು ದಿನಗಳಷ್ಟು ಸಮಯ ತೆಗೆದುಕೊಳ್ಳುತ್ತಾನೆ ಎಂದು ಅಪೊಪೊ ಹೇಳುತ್ತದೆ.

ಇದನ್ನೂ ಓದಿ: World Environment Day 2021: ಹೆಣ್ಣು ಮಗು ಹುಟ್ಟಿದರೆ 111 ಗಿಡ ನೆಡುವ ಗ್ರಾಮ, ಇದು ಪಿಪ್ಲಾಂತ್ರಿಯ ಹಸಿರು ಕ್ರಾಂತಿ