ದೆಹಲಿ: ಅನ್ಲಾಕ್ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್ ಸಿಕ್ಕಿದೆ. ವೀಕೆಂಡ್ ಮಸ್ತಿಗೆಂದು ಪಂಕಜ್ ಅಗರ್ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ಪ್ಲೇಸ್ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್ನ ಬ್ರಾಂಚ್ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್ ಮಸಾಲೆ ದೋಸೆ ಆರ್ಡರ್ ಮಾಡಿದ್ದರು.
ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು!
ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್ ಟೇಸ್ಟಿ ಟೇಸ್ಟಿ ಅನ್ನೋಕೆ ಹೊರಟಿದ್ರು. ಅಷ್ಟರಲ್ಲೇ ಬಾಯಲ್ಲಿ ರಬ್ಬರಿನಂಥ ಪದಾರ್ಥ ಸಿಕ್ಕಿದಂತೆ ಭಾಸವಾಯ್ತು. ಸಾಂಬಾರ್ನಲ್ಲಿರೋ ಪದಾರ್ಥ ಇರಬೇಕು ಅಂತಾ ಬಾಯಿಂದ ಹೊರ ತೆಗೆದಾಗಲೇ ಗೊತ್ತಾಗಿದ್ದು, ಅದು ಸತ್ತ ಹಲ್ಲಿಯೆಂದು.
ಅಂದು ಕ್ಷಣ ದಂಗಾದ ಪಂಕಜ್ಗೆ ಏನು ಮಾಡೋದು ಎಂದು ತೋಚಲೇ ಇಲ್ಲ. ಆಗಲೇ ಆತನಿಗೆ ಹೊಳೆದಿದ್ದು ಅದು ಬರಿ ಹಲ್ಲಿಯ ಅರ್ಧ ಕಳೆಬರ ಅಂತಾ! ಉಳಿದಿದ್ದು ಎಲ್ಲಿ ಅಂತಾ ಹುಡುಕಾಡಿದ, ಬಟ್ ಸಿಗಲಿಲ್ಲ. ಕೂಡಲೇ, ಹೋಟೆಲ್ ಸಿಬ್ಬಂದಿಯ ಮೇಲೆ ಕೂಗಾಡಿದ ಪಂಕಜ್, ಘಟನೆಯ ವಿಡಿಯೋ ಸಹ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಹೋಟೆಲ್ನ ಸಿಸಿಟಿವಿ ವಿಡಿಯೋ ಹಾಗೂ ಅಡುಗೆ ಭಟ್ಟನ ವಿವರ ಸಹ ಪಡೆದಿದ್ದಾರೆ.
A dead lizard found in sambar at most popular restaurant saravana Bhavan, Connaught Place (CP), New Delhi pic.twitter.com/yAwqBX7PvD
— Golden corner (@supermanleh) August 2, 2020
Published On - 2:04 pm, Mon, 3 August 20