ಸೋಂಕು ಭೀತಿ ತೂಗುಗತ್ತಿಯಂತೆ ನೇತಾಡುತ್ತಲೇ ಇದೆ Red Light ಸುಂದರಿಯರ ಮೇಲೆ..

| Updated By: ಸಾಧು ಶ್ರೀನಾಥ್​

Updated on: Jun 28, 2020 | 8:36 PM

ಲಾಕ್​ಡೌನ್​ನಿಂದ ಸಂಕಷ್ಟ ಎದುರಿಸಿದವರಲ್ಲಿ ನಗರದ ರೆಡ್​ ಲೈಟ್​ ಏರಿಯಾ ಎಂದೇ ಖ್ಯಾತಿ ಪಡೆದಿರುವ ಬುಧವಾರ ಪೇಟೆಯ ಲೈಂಗಿಕ ಕಾರ್ಯಕರ್ತೆಯರು ಸೇರುತ್ತಾರೆ. ಮಾರ್ಚ್​ ನಂತರ ಮೂರು ತಿಂಗಳ ಕಾಲ ಏರಿಯಾದ ಎಲ್ಲಾ ಲೈಂಗಿಕ ಗೃಹಗಳನ್ನು ಬಂದ್​ ಮಾಡಲಾಗಿತ್ತು. ಇದರಿಂದ ಅಲ್ಲಿನ ಲೈಂಗಿಕ ಕಾರ್ಯಕರ್ತೆಯರ ಸಂಪಾದನೆಯ ಮೂಲವೇ ಬತ್ತು ಹೋಗಿ ಬದುಕು ದುಸ್ತರವಾಗಿಬಿಟ್ಟಿತ್ತು. ಇದು ಇಡೀ ಜಗತ್ತಿನ ಕರಾಳ ರಾತ್ರಿಗಳ ಕಥೆಯೇ ಆಗಿದೆ. ಲೈಂಗಿಕ ಕಾರ್ಯಕರ್ತೆಯರ ಸ್ಥಿತಿ: ಅತ್ತ ದರಿ ಇತ್ತ ಪುಲಿ..! ಇದೀಗ ಲಾಕ್​ಡೌನ್​ ನಿಯಮಗಳು ಕೊಂಚ ಸಡಿಲವಾದ […]

ಸೋಂಕು ಭೀತಿ ತೂಗುಗತ್ತಿಯಂತೆ ನೇತಾಡುತ್ತಲೇ ಇದೆ Red Light ಸುಂದರಿಯರ ಮೇಲೆ..
Follow us on

ಲಾಕ್​ಡೌನ್​ನಿಂದ ಸಂಕಷ್ಟ ಎದುರಿಸಿದವರಲ್ಲಿ ನಗರದ ರೆಡ್​ ಲೈಟ್​ ಏರಿಯಾ ಎಂದೇ ಖ್ಯಾತಿ ಪಡೆದಿರುವ ಬುಧವಾರ ಪೇಟೆಯ ಲೈಂಗಿಕ ಕಾರ್ಯಕರ್ತೆಯರು ಸೇರುತ್ತಾರೆ. ಮಾರ್ಚ್​ ನಂತರ ಮೂರು ತಿಂಗಳ ಕಾಲ ಏರಿಯಾದ ಎಲ್ಲಾ ಲೈಂಗಿಕ ಗೃಹಗಳನ್ನು ಬಂದ್​ ಮಾಡಲಾಗಿತ್ತು. ಇದರಿಂದ ಅಲ್ಲಿನ ಲೈಂಗಿಕ ಕಾರ್ಯಕರ್ತೆಯರ ಸಂಪಾದನೆಯ ಮೂಲವೇ ಬತ್ತು ಹೋಗಿ ಬದುಕು ದುಸ್ತರವಾಗಿಬಿಟ್ಟಿತ್ತು. ಇದು ಇಡೀ ಜಗತ್ತಿನ ಕರಾಳ ರಾತ್ರಿಗಳ ಕಥೆಯೇ ಆಗಿದೆ.

ಲೈಂಗಿಕ ಕಾರ್ಯಕರ್ತೆಯರ ಸ್ಥಿತಿ: ಅತ್ತ ದರಿ ಇತ್ತ ಪುಲಿ..!
ಇದೀಗ ಲಾಕ್​ಡೌನ್​ ನಿಯಮಗಳು ಕೊಂಚ ಸಡಿಲವಾದ ನಂತರ ಪೇಟೆಯ ಲೈಂಗಿಕ ಗೃಹಗಳು ಮತ್ತೊಮ್ಮೆ ಬಾಗಿಲು ತೆರೆದುಕೊಂಡಿವೆ. ರಸಿಕರು ತಮ್ಮ ದೇಹದಾಹವನ್ನ ತಣಿಸಿಕೊಳ್ಳಲು ಇತ್ತ ಸುಳಿಯುತ್ತಿದ್ದಾರೆ. ಆದರೆ, ಇಲ್ಲಿನ ಲೈಂಗಿಕ ಕಾರ್ಯಕರ್ತೆಯರಲ್ಲಿ ಈಗಲೂ ತುಸು ಅಂಜಿಕೆ, ಆತಂಕ ಮನೆ ಮಾಡಿದೆ. ಅದಕ್ಕೆ ಕಾರಣ ಕೊರೊನಾ. ಮಹಾಮಾರಿಯ ಆರ್ಭಟ ಇನ್ನೂ ತಗ್ಗಿಲ್ಲ.

ಸೋಂಕು ತಗಲುವ ಭೀತಿ ತೂಗುಗತ್ತಿಯಂತೆ ನೇತಾಡುತ್ತಲೇ ಇದೆ. ಆದರೆ, ಏನು ಮಾಡೋದು, ಹಾಳಾದ ಹಸಿವು ಮಾತು ಕೇಳಬೇಕಲ್ಲ. ಹೀಗಾಗಿ ಸೋಂಕು ತಗಲುವ ಅಪಾಯವಿದ್ರೂ ಬೇರೆ ದಾರಿಯಿಲ್ಲದೆ ತಮ್ಮ ಕಸುಬನ್ನು ಮುಂದುವರೆಸುವ ಅನಿವಾರ್ಯತೆ. ಪೇಟೆಯ ಕೆಂಪು ಸುಂದರಿಯರ ಸ್ಥಿತಿ ನಿಜಕ್ಕೂ ಅತ್ತ ದರಿ, ಇತ್ತ ಪುಲಿ ಎಂಬಂತೆ ಆಗಿದೆ.

PPE ಕಿಟ್​ ಧರಿಸಿ ಚಿಕಿತ್ಸೆ ನೀಡುವ ವೈದ್ಯರಿಗೇ ವೈರಸ್​ ವಕ್ಕರಿಸುತ್ತಿರೋವಾಗ..
ಆದರೆ, ಕೆಲವು ಲೈಂಗಿಕ ಕಾರ್ಯಕರ್ತೆಯರು ಸ್ವಲ್ಪ ಗಟ್ಟಿ ಮನಸ್ಸು ಮಾಡಿ ಬರುವ ಗ್ರಾಹಕರಿಗೆ ಕಾಂಡೋಮ್​ ಜೊತೆ ಮಾಸ್ಕ್​ ಕೂಡ ಕಡ್ಡಾಯ ಮಾಡಿದ್ದಾರೆ. ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರಿಗೆ ಹ್ಯಾಂಡ್​ ಸ್ಯಾನಿಟೈಸರ್​ ಕೂಡ ನೀಡ್ತಿದ್ದಾರೆ.

ಆದರೆ, ಕೆಲವು ಸಹಾಯ ಸಂಸ್ಥೆಗಳ ಪ್ರಕಾರ ಸೋಂಕು ಹರಡುವುದನ್ನು ತಡೆಯೋಕೆ ಇಷ್ಟು ಸಾಕಾಗಲ್ಲ. PPE ಕಿಟ್​ ಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೇ ವೈರಸ್​ ವಕ್ಕರಿಸುತ್ತಿರೋವಾಗ ಇನ್ನು ಇವರ ಸ್ಥಿತಿ ಊಹಿಸೋಕು ಅಸಾಧ್ಯ ಎಂಬುದು ಅವರ ವಾದ. ಹಾಗಾಗಿ, ನೇರ ಸಂಭೋಗದ ಬದಲು ತಮ್ಮ ಮಾಮೂಲಿ ಗಿರಾಕಿಗಳೊಂದಿಗೆ ಮೊಬೈಲ್​ ಮೈಥುನ (Phone Sex) ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ವರ್ಕ್​ಔಟ್​ ಆಗುತ್ತೆ ಅನ್ನೋದು ಡೌಟ್​.

ಒಟ್ನಲ್ಲಿ, ಬುಧವಾರ ಪೇಟೆಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿ ತಂತಿಯ ಮೇಲಿನ ನಡಿಗೆಯ ಹಾಗೆ. ಲಾಕ್​ಡೌನ್​ನಿಂದ ಮೂರು ತಿಂಗಳ ಕಾಲ ಹೊಟ್ಟೆಗೆ ಹಿಟ್ಟಿಲ್ಲದೆ ಕೊರಳು ಹಿಸುಕಿದಂತಾಗಿದೆ. ಆದರೆ, ಬೇರಾವ ದಾರಿಯೂ ಕಾಣುತ್ತಿಲ್ಲ. ಕಳೆದುಕೊಳ್ಳಲು ಬೇರೇನೂ ಇಲ್ಲಾ.. ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ.. ಕಳೆದು ಪಡೆದುಕೊಳ್ಳಿ ಎಂಬ ಭಟ್ಟರ ಸಾಹಿತ್ಯದ ಕಡ್ಡಿ ಪುಡಿ ಸಿನಿಮಾದ ಹಾಡಿನಂತೆ ಕಸುಬು ಮುಂದುವರೆಸುತ್ತಿದ್ದಾರೆ.

ಆದರೂ, ಸೌಂದರ್ಯ ಸಮರದಲ್ಲಿ ಸೋತವನೇ ಅಮರ ಎನ್ನದೇ ಈ ದೇಹ ದೇಗುಲ ಎಂಬುದನ್ನು ಅರಿತಿರುವ ಪೇಟೆಯ ಲೈಂಗಿಕ ಕಾರ್ಯಕರ್ತೆಯರು ತಮ್ಮ ಆರೋಗ್ಯ ರಕ್ಷಣೆಗೆ ತುಸು ಕಾಳಜಿ ವಹಿಸುತ್ತಿರೋದು ಎಲ್ಲರ ಹಿತದೃಷ್ಟಿಯಿಂದ ಸಮಾಧಾನಕರ.

Published On - 6:59 pm, Sun, 28 June 20