ಅನ್ಲಾಕ್ 4.0: ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ
ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಫೀಡ್ಬ್ಯಾಕ್ ಪಡೆದುಕೊಂಡ ನಂತರ ಸೆಪ್ಟೆಂಬರ್ 1, 2020 ರಿಂದ ಆರಂಭಗೊಳ್ಳುವ ಅನಲಾಕ್ 4.0 ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋಸೇವೆ ಹಂತಹಂತವಾಗಿ ಆರಂಭಿಸಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ. ಆಯಾ ಶಾಲೆ, ಕಾಲೇಜುಗಳ ಶೇಕಡಾ 50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬಹುದು. ಆನ್ಲೈನ್ ಶಿಕ್ಷಣವನ್ನು ಜಾರಿಯಲ್ಲಿಡುವುದಲ್ಲದೆ, ಅದನ್ನು ಪ್ರೋತ್ಸಾಹಿಸಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 9ರಿಂದ 12ನೇ […]
ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಫೀಡ್ಬ್ಯಾಕ್ ಪಡೆದುಕೊಂಡ ನಂತರ ಸೆಪ್ಟೆಂಬರ್ 1, 2020 ರಿಂದ ಆರಂಭಗೊಳ್ಳುವ ಅನಲಾಕ್ 4.0 ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋಸೇವೆ ಹಂತಹಂತವಾಗಿ ಆರಂಭಿಸಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ. ಆಯಾ ಶಾಲೆ, ಕಾಲೇಜುಗಳ ಶೇಕಡಾ 50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬಹುದು. ಆನ್ಲೈನ್ ಶಿಕ್ಷಣವನ್ನು ಜಾರಿಯಲ್ಲಿಡುವುದಲ್ಲದೆ, ಅದನ್ನು ಪ್ರೋತ್ಸಾಹಿಸಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮತ್ತು ಪೋಷಕರ ಅನುಮತಿ ಪಡೆದು ಶಾಲೆಗಳಿಗೆ ಭೇಟಿ ನೀಡಬಹುದು. ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನಡೆಸುವುದಕ್ಕೆ, ಉದ್ಯಮಶೀಲತಾ ತರಬೇತಿ ನಡೆಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಪಿಹೆಚ್ಡಿ, ತಾಂತ್ರಿಕ, ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡುವುದಕ್ಕೆ ಅವಕಾಶವಿದೆ.
ರಾಜಕೀಯ, ಧಾರ್ಮಿಕ, ಮನರಂಜನಾತ್ಮಕ, ಕ್ರೀಡೆ ಮತ್ತು ಸಾಂಸ್ಕೃತಿಕ ಸಭೆ ಸಮಾರಂಭಗಳಲ್ಲಿ 100 ಜನರು ಸೇರಲು ಅವಕಾಶವಿದೆ. ಆದರೆ, ಈ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಸರ್ಗಳನ್ನು ಬಳಸಬೇಕು.
ಸೆಪ್ಟೆಂಬರ್ 21ರಿಂದ ಬಯಲು ರಂಗಮಂದಿರ ತೆರೆಯಲು ಅವಕಾಶವಿದೆ. ಆದರೆ ಚಿತ್ರಮಂದಿರ, ಸ್ವಿಮ್ಮಿಂಗ್ಪೂಲ್ಗಳನ್ನು ಇನ್ನೂ ತೆರೆಯುವಂತಿಲ್ಲ.