AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಕ್ರವರ್ತಿಯ ಅಹಂಕಾರ ದಮನಕ್ಕೆ ತ್ರಿವಿಕ್ರಮನಾಗಿ ಅವತರಿಸಿದ ಮಹಾವಿಷ್ಣು

ಚಕ್ರವರ್ತಿಯೊಬ್ಬನ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ತನ್ನ ದಶಾವತಾರಗಳ ಪೈಕಿ ಐದನೇ ಅವತಾರ ತಳೆದ. ಆ ಐದನೇ ಅವತಾರವಾದ್ರೂ ಯಾವುದು ಅಂದ್ರೆ ಅದು ವಾಮನ ಅವತಾರ. ಹೌದು, ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಳೆದ ಅಂತಾ ಪುರಾಣಗಳಲ್ಲಿ ಉಲ್ಲೇಖವಿದೆ. ವಾಮನ ಅವತಾರದಲ್ಲಿ ಮಹಾವಿಷ್ಣುವು ಕುಬ್ಜ ಶರೀರಿಯಾಗಿ ಅವತರಿಸಿದ ಎಂದು ಹೇಳಲಾಗುತ್ತೆ. ವಿಷ್ಣುವಿನ ಈ ರೂಪವನ್ನು ಉಪೇಂದ್ರ […]

ಚಕ್ರವರ್ತಿಯ ಅಹಂಕಾರ ದಮನಕ್ಕೆ ತ್ರಿವಿಕ್ರಮನಾಗಿ ಅವತರಿಸಿದ ಮಹಾವಿಷ್ಣು
KUSHAL V
| Updated By: ಸಾಧು ಶ್ರೀನಾಥ್​

Updated on: Aug 29, 2020 | 4:31 PM

Share

ಚಕ್ರವರ್ತಿಯೊಬ್ಬನ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ತನ್ನ ದಶಾವತಾರಗಳ ಪೈಕಿ ಐದನೇ ಅವತಾರ ತಳೆದ. ಆ ಐದನೇ ಅವತಾರವಾದ್ರೂ ಯಾವುದು ಅಂದ್ರೆ ಅದು ವಾಮನ ಅವತಾರ.

ಹೌದು, ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಳೆದ ಅಂತಾ ಪುರಾಣಗಳಲ್ಲಿ ಉಲ್ಲೇಖವಿದೆ. ವಾಮನ ಅವತಾರದಲ್ಲಿ ಮಹಾವಿಷ್ಣುವು ಕುಬ್ಜ ಶರೀರಿಯಾಗಿ ಅವತರಿಸಿದ ಎಂದು ಹೇಳಲಾಗುತ್ತೆ. ವಿಷ್ಣುವಿನ ಈ ರೂಪವನ್ನು ಉಪೇಂದ್ರ ಅಥವಾ ತ್ರಿವಿಕ್ರಮನೆಂದೂ ಸಹ ಕರೆಯಲಾಗುತ್ತೆ. ಪ್ರಹ್ಲಾದನಿಗೂ ವಾಮನ ಅವತಾರಕ್ಕೂ ಇದೆ ವಿಶೇಷ ನಂಟು ಮಹಾವಿಷ್ಣುವಿನ ದಶಾವತಾರಗಳ ಪೈಕಿ ಕೆಲ ಅವತಾರಗಳಿಗೆ ಒಂದಕ್ಕೊಂದು ನಂಟಿದೆ. ನರಸಿಂಹ ಅವತಾರದಲ್ಲಿ ವಿಷ್ಣುಭಕ್ತನಾಗಿದ್ದ ಪ್ರಹ್ಲಾದನಿಗೂ ಇಂದು ನೋಡಲು ಹೊರಟಿರುವ ವಾಮನ ಅವತಾರಕ್ಕೂ ವಿಶೇಷ ನಂಟಿದೆ. ಮಹಾವಿಷ್ಣು ನರಸಿಂಹನ ಅವತಾರ ತಳೆದದ್ದೇ ತನ್ನ ಅಪ್ರತಿಮ ಭಕ್ತನಾಗಿದ್ದ ಪ್ರಹ್ಲಾದನಿಗಾಗಿ. ಪ್ರಹ್ಲಾದನ ತಂದೆ ಹಿರಣ್ಯಕಶಿಪುವಿನ ವಧೆಗಾಗಿ. ಅಂತೆಯೇ, ಮಹಾವಿಷ್ಣು ವಾಮನನ ಅವತಾರ ತಾಳಿದ್ದು ರಾಕ್ಷಸರ ರಾಜ ಹಿರಣ್ಯಕಶಿಪುವಿನ ಮಗನಾಗಿದ್ದ ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿಗಾಗಿ.

ಬಲಿ ಚಕ್ರವರ್ತಿ ದಾನ ನೀಡುವುದರಲ್ಲಿ ಪ್ರಸಿದ್ಧಿ ಪಡೆದಿದ್ದ. ಕೊಡುಗೈ ದಾನಿ ಎಂದೇ ಖ್ಯಾತನಾಗಿದ್ದ. ಬಲಿ ಚಕ್ರವರ್ತಿಯ ರಾಜ್ಯವೂ ಸಹ ಸುಭಿಕ್ಷವಾಗಿತ್ತು. ಆದರೆ, ಬಲಿ ಎಷ್ಟು ಪ್ರಬಲನಾಗಿದ್ದನೆಂದರೆ ಎಲ್ಲ ಗ್ರಹಗಳನ್ನೂ ಜಯಿಸಿಬಿಟ್ಟಿದ್ದ. ಬಲಿಯ ಪ್ರಾಬಲ್ಯ ಕಂಡು ದೇವತೆಗಳು ಭಯಗೊಂಡರು. ವಿಷ್ಣುವಿನ ಬಳಿ ತಮ್ಮ ಭೀತಿ ತೋಡಿಕೊಂಡರು. ಆಗ‌ ಭಗವಾನ್​ ವಿಷ್ಣು ಕಶ್ಯಪ ಋಷಿ ಮತ್ತು ಅದಿತಿ ದಂಪತಿಯ ಪುತ್ರ ವಾಮನನಾಗಿ ಅವತಾರ ತಾಳಿದ.

ಬಲಿ ಚಕ್ರವರ್ತಿ ಬಳಿ 3 ಹೆಜ್ಜೆಗಳಷ್ಟು ಭೂಮಿ ಕೇಳಿದ ವಾಮನ ಒಮ್ಮೆ ಬಲಿ ಚಕ್ರವರ್ತಿಗೆ ಅಶ್ವಮೇಧ ಯಾಗ ಮಾಡಬೇಕೆಂಬ ಯೋಚನೆ ಹುಟ್ಟಿತು. ಈ ಯಾಗ ಮಾಡುವಾಗ ಯಾರೇ ಬರಲಿ, ಬಂದವರೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಸಹ ಕೈಗೊಂಡ. ಇದೇ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ತಕ್ಕ ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪಿಯಾಗಿ ಯಾಗ ನಡೆಯುವ ಸ್ಥಳಕ್ಕೆ ಬಂದ. ತನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ನೀಡೆಂದು ಕೇಳಿಕೊಂಡನು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕೋದು. ಈ ಸಮಯದಲ್ಲಿ ರಾಕ್ಷಸರ ಗುರುವಾಗಿದ್ದ ಶುಕ್ರಾಚಾರ್ಯರು ಬಲಿ ಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಮಂಡಲದ ರಂಧ್ರದಲ್ಲಿ ಸೇರಿಕೊಳ್ತಾರೆ. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ.

ಆಗ, ಶುಕ್ರಾಚಾರ್ಯರ ಕುಯುಕ್ತಿ ಬುದ್ಧಿಯನ್ನು ವಿಷ್ಣು ಅರಿಯುತ್ತಾನೆ. ಕಮಂಡಲದಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ. ಅದನ್ನು ತೆಗೆಯುತ್ತೇನೆ ಎಂದು ಹೇಳಿ ಕಮಂಡಲದ ನಾಳಕ್ಕೆ ದರ್ಬೆಯೊಂದನ್ನು ಚುಚ್ಚಿದ. ದರ್ಬೆಯು ಶುಕ್ರಾಚಾರ್ಯರ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು.

ದಾನ ಪಡೆಯಲು ವಾಮನನಾದ ತ್ರಿವಿಕ್ರಮ ನಂತರ ಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿ ಚಕ್ರವರ್ತಿ ದಾನ ನೀಡಲು ಮುಂದಾದಾಗ ವಾಮನ ತ್ರಿವಿಕ್ರಮನಾಗಿ ಬೆಳೆದ. ತ್ರಿವಿಕ್ರಮ ಎಂದರೆ ಅಗಲವಾದ ಪಾದಗಳುಳ್ಳವನು ಎಂದರ್ಥ. ತ್ರಿವಿಕ್ರಮನಾಗಿ ಬೆಳೆದ ವಾಮನನ ಮೊದಲನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು.

ನಂತರ ತನ್ನ ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಇಡೀ ಆಕಾಶವೂ ವಾಮನನ ಪಾಲಾಯ್ತು. ಬಳಿಕ, ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ವಾಮನ ಪಾತಾಳ ಲೋಕಕ್ಕೆ ದೂಡಿಬಿಟ್ಟ.

ನಂತರ ಬಲಿ ಚಕ್ರವರ್ತಿಗೆ ವಾಮನ ರೂಪಿಯಾಗಿದ್ದ ವಿಷ್ಣು ತನ್ನ ನಿಜ ದರ್ಶನ ನೀಡಿದ. ಜೊತೆಗೆ ಚಕ್ರವರ್ತಿಗೆ ಒಂದು ವರ ಸಹ ನೀಡಿದ. ಅದೇನೆಂದರೆ, ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಇಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು ಎಂದ.

ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರನ ಪೂಜೆ ಕೈಗೊಳ್ತಾರೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಬಲಿ ಚಕ್ರವರ್ತಿಯ ಅಹಂಕಾರ ದಮನ ಮಾಡೋಕೆ ವಿಷ್ಣು ವಾಮನ ರೂಪಿಯಾಗಿ ಅವತರಿಸಿದ ಅಂತಾ ವಿಷ್ಣು ಪುರಾಣದಲ್ಲಿ ಉಲ್ಲೇಖವಿದೆ.

ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ