National Camera Day 2021: ಇಂದು ಕ್ಯಾಮೆರಾ ದಿನ, ನೀವು ಕ್ಯಾಮೆರಾ ಎದುರು ಕೊಟ್ಟ ಫೋಸ್ಗಳನ್ನು ಹಾಗೆ ಒಮ್ಮೆ ನೆನಪಿಸಿಕೊಳ್ಳಿ
ನಿಮ್ಮ ಸ್ನೇಹಿತರೊಡನೆ ಅಥವಾ ಮನೆಯವರ ಚಿತ್ರವನ್ನು ಸೆರೆಹಿಡಿಯುವುದರ ಮೂಲಕ ಇಂದಿನ ದಿನವನ್ನು ಆಚರಿಸಿ. ಇಲ್ಲವೇ, ಪ್ರಕೃತಿಯ ಸುಂದರ ಚಿತ್ರವನ್ನು ಸೆರೆಹಿಡಿಯಿರಿ.
ಕ್ಯಾಮೆರಾ ಎಂಬ ಕಪ್ಪು ಬುರುಡೆ ಎದುರಿಗಿದ್ದರೆ ಸಾಕು.. ಬೇಡ ಬೇಡ ಅಂದರೂ ಹಲ್ಲು ಕಿರಿದು ನಗುತ್ತಾ ಪೋಸ್ ಕೊಟ್ಟೇ ಬಿಡುತ್ತೇವೆ. ವಿವಿಧ ಸ್ಟೈಲಿಶ್ ಫೋಟೋ ತೆಗೆಸಿಕೊಳ್ಳುವುದು ಈಗಿನ ಯುವಪೀಳಿಗೆಗೆ ಹುಚ್ಚು ಎಂದರೆ ತಪ್ಪಾಗಲಾರದು. ಹಾಗಿದ್ದಾಗ ಇಂದು ಕ್ಯಾಮರಾದ ಜತೆ ಛಾಯಾಚಿತ್ರಗಾರರನ್ನುನೆನಯಲೂಬಹುದು. ಕ್ಯಾಮೆರಾದ ಮೂಲ ಯಾವುದು ಎಂಬುದು ಇಲ್ಲಿಯವರೆಗೆ ತಿಳಿದಿಲ್ಲ. ಆದರೆ ಇತಿಹಾಸದಲ್ಲಿ ತನ್ನದೇ ಆದ ಛಾಫು ಮೂಡಿಸಿದ ಕ್ಯಾಮೆರಾವನ್ನು ನೆನೆಯುವ ದಿನವಿದು.
ನೋಡಲು ಕಪ್ಪು ಪೆಟ್ಟಿಗೆಯಷ್ಟೇ. ನಮ್ಮ ಪ್ರತಿಬಿಂದದಂತೆ, ಇದ್ದುದನ್ನು ಇದ್ದ ಹಾಗೆಯೇ ನಕಲಿಸುವ ಚಿತ್ರಪಟ ತಯಾರಿಕೆಗೆ ಕ್ಯಾಮೆರಾ ಅವಶ್ಯಕ. ಕ್ಯಾಮೆರಾ ಎಂಬ ಪೆಟ್ಟಿಗೆಯ ಒಳಗಿರುವ ಮಸೂರ ಮತ್ತು ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ದ್ಯುತಿರಂಧ್ರದ ಮೂಲಕ ಚಿತ್ರ ಸೆರೆಹಿಡಿಯಲಾಗುತ್ತದೆ. ಕಾಲ ಕಳೆಯುತ್ತಿದ್ದಂತೆಯೇ ಅಭಿವೃದ್ಧಿಯ ಪಥದಲ್ಲಿ ಕ್ಯಾಮೆರಾ ಬೃಹತ್ ಪ್ರಮಾಣದಲ್ಲಿ ವಿಕಸನಗೊಂಡಿತು. ಮೊದಲಿಗೆ ವಾಣಿಜ್ಯ ತಯಾರಿಕೆಗಾಗಿ ತಯಾರಿಸಿದ ಮೊದಲ ಕ್ಯಾಮೆರಾ ಡಾಗ್ಯುರೊಟೈಪ್ ಕ್ಯಾಮೆರಾ. ಇದನ್ನು 1839ರಲ್ಲಿ ಕಂಡುಹಿಡಿದರು.
ಹಿಂದೆ ನಡೆದ ಘಟನೆಗಳಿಗೆ ಸಾಕ್ಷಿಯಾಗಿ, ಕಳೆದ ದಿನಗಳ ನೆನಪಿಗಾಗಿ ಇರುವುದು ಫೋಟೋ ಮಾತ್ರ. ಈಗೆಲ್ಲಾ ವೃತ್ತಿಪರರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದಾರೆ. ಮೊದಲೆಲ್ಲಾ ಕ್ಯಾಮೆರಾ ಅಂದರೆ ಒಂದು ದೊಡ್ಡ ಪೆಟ್ಟಿಗೆಯಾಗಿತ್ತು. ಇದೀಗ ಕಿಸೆಯಲ್ಲೂ ಇಟ್ಟುಕೊಂಡು ಹೋಗುವ ಪೆನ್ನಿನಷ್ಟು ಚಿಕ್ಕದಾಗಿರುತ್ತದೆ. ಬರಿಗಣ್ಣಿನಲ್ಲಿ ಪತ್ತೆಹಚ್ಚಲು ಸಾಧ್ಯವಾಗದ ಅದೆಷ್ಟೋ ವಿಷಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಕ್ಷಿಯಾಗಿ ನೀಡಲಾಗುತ್ತದೆ.
ಛಾಯಾಗ್ರಹಣ ಆವಿಷ್ಕಾರ ಮೊದಲು 11ರಿಂದ 17ನೇ ಶತಮಾನದಲ್ಲಿ ಆರಂಭಗೊಂಡಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಮೊದಲು ಅಬ್ಸ್ ಕುರ ಕ್ಯಾಮರಾನ್ನು ಬಳಸಲಾಗುತ್ತಿತ್ತು ಎಂದು ಇತಿಹಾಸ ತಿಳಿಸುತ್ತದೆ.
1825ರಲ್ಲಿ ಫ್ರೆಂಚ್ ವಿಜ್ಞಾನಿ ಮುದ್ರಣ ಯಂತ್ರವನ್ನು ಕಂಡುಹಿಡಿದನು. ಈ ಮೂಲಕ ಸೆರೆ ಹಿಡಿದ ಚಿತ್ರವನ್ನು ನಕಲಿ ರೂಪದಲ್ಲಿ ಮುದ್ರಣ ತಯಾರಿಸಲಾಗುತ್ತಿತ್ತು.
1839ರಲ್ಲಿ ಲೂಯಿಸ್ ಡಾಗರೆ, ಡಾಗ್ಯುರೊಟೈಪ್ ಕ್ಯಾಮರಾವನ್ನು ಕಂಡು ಹಿಡಿದನು.
1900ರ ವೇಳೆಗೆ ಸಾರ್ವಜನಿಕರಿಗೆ ಕ್ಯಾಮೆರಾ ಮಾರಾಟವಾಗಲು ಪ್ರಾರಂಭವಾಯಿತು.
80 ಮತ್ತು 90ರ ದಶಕದಲ್ಲಿ ಕ್ಯಾಮೆರಾ ಡಿಜಿಟಲ್ ಯುಗ ಪ್ರಾರಂಭವಾಯಿತು. ಈ ನಂತರ ಚಿತ್ರಗಳನ್ನು ಸಂಗ್ರಹಿಸುವ ಸಾಧನಗಳಲ್ಲಿ ಜನರು ಕೆಲಸ ಮಾಡಲು ಪ್ರಾರಂಭಿಸಿದರು.
2000ರ ಹೊತ್ತಿಗೆ ನಾವು ಮೊಬೈಲ್ ಫೋನ್ಗಳಲ್ಲಿಯೇ ಕ್ಯಾಮರಾವನ್ನು ನೋಡುತ್ತಿದ್ದೇವೆ. ಚಿಕ್ಕದಾದ ಸಣ್ಣ ಪೆಟ್ಟಿಗೆಯಲ್ಲಿ ಅದೆಷ್ಟೋ ಚಿತ್ರಗಳನ್ನು ಸೆರೆ ಹಿಡಿದು ನೆನಪಿಗಾಗಿ ಇಟ್ಟುಕೊಳ್ಳುತ್ತಿದ್ದೇವೆ.
ಕ್ಯಾಮೆರಾ ದಿನವನ್ನು ಹೇಗೆ ಆಚರಿಸುವುದು? ನಿಮ್ಮ ಸ್ನೇಹಿತರೊಡನೆ ಅಥವಾ ಮನೆಯವರ ಚಿತ್ರವನ್ನು ಸೆರೆಹಿಡಿಯುವುದರ ಮೂಲಕ ಇಂದಿನ ದಿನವನ್ನು ಆಚರಿಸಿ. ಇಲ್ಲವೇ, ಪ್ರಕೃತಿಯ ಸುಂದರ ಚಿತ್ರವನ್ನು ಸೆರೆಹಿಡಿಯಿರಿ. ವೃತ್ತಿಪರರಾಗಿದ್ದರೆ, ಕ್ಯಾಮೆರಾ ಬಳಕೆಯನ್ನು ಇನ್ನಿತರರಿಗೆ ಕಲಿಸಿಕೊಡಿ. ಜತೆಗೆ ಆನ್ಲೈನ್ ತರಗತಿಗಳನ್ನೂ ಸಹ ಮಾಡಬಹುದು.
ಕ್ಯಾಮೆರಾ ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ನೀವು ಕ್ಲಿಕ್ಕಿಸಿದ ಸುಂದರ ಚಿತ್ರಗಳನ್ನು ಹರಿಬಿಡಬಹುದು . ಜತೆಗೆ ಚಿತ್ರಗಳನ್ನು ಸೆರೆ ಹಿಡಿಯುವ ಕುರಿತಾಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಬಹುದು.
ಇದನ್ನೂ ಓದಿ:
Kiccha Sudeep New Look : ಲೈಟ್, ಕ್ಯಾಮೆರಾ ಮುಂದೇ ಬಂದ ಕಿಚ್ಚ ಸುದೀಪ್
IPL 2021: ಕ್ಯಾಮೆರಾ ಕಣ್ಣಿಗೆ ಬಿದ್ದ ಆರ್ಸಿಬಿ ಅಭಿಮಾನಿ; ಖ್ಯಾತಿ ಗಳಿಸಿದ್ದೇ ಕಷ್ಟವಾಯ್ತು ಅಂದಿದ್ದೇಕೆ?
Published On - 10:30 am, Tue, 29 June 21