ಭಾರತದಲ್ಲಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನ (National Handloom Day 2022) ವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಂದರೆ 1905 ರಲ್ಲಿ ಬಂಗಾಳದಲ್ಲಿ ಸ್ವದೇಶಿ ಚಳುವಳಿ ಪ್ರಾರಂಭವಾಗಿತ್ತು. ಆ ಚಳುವಳಿಯ ಮೂಲ ಉದ್ದೇಶ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿ, ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಉತ್ತೇಜಿಸುವುದಾಗಿದೆ. ಹಾಗಾಗಿ ಪ್ರತಿ ವರ್ಷವು ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತವಿರು ನೇಕಾರರ ಕೆಲಸ ಮತ್ತು ಅವರ ಶ್ರಮವನ್ನು ಶ್ಲಾಘಿಸುವ ಮೂಲಕ ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು.
ಇದನ್ನೂ ಓದಿ: National Handloom Day: ಆ.7ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ: ಸಚಿವ ದರ್ಶನಾ ಜರ್ದೋಶ್
ಇತಿಹಾಸ:
1905 ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯ 100 ನೇ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ಅದೇ ದಿನವನ್ನು ಆಯ್ಕೆಕೊಂಡಿದೆ. ಬ್ರಿಟಿಷ್ ಸರ್ಕಾರದ ಬಂಗಾಳ ವಿಭಜನೆಯ ವಿರುದ್ಧ ಪ್ರತಿಭಟನೆಯಾಗಿ ಕಲ್ಕತ್ತಾ ಟೌನ್ ಹಾಲ್ನಲ್ಲಿ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಈ ಆಂದೋಲನದ ಮುಖ್ಯ ಉದ್ದೇಶ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸುವುದು ಮತ್ತು ಸ್ವದೇಶಿ ವಸ್ತುಗಳನ್ನು ಉತ್ತೇಜಿಸುವುದಾಗಿತ್ತು. ಇದು ಸ್ವದೇಶಿ ಸ್ವರಾಜ್ಯದ ಆತ್ಮ ಎಂದು ಮಹಾತ್ಮ ಗಾಂಧಿಯವರು ಅಂದು ಬಣ್ಣಿಸಿದ್ದರು. ಸ್ವದೇಶಿ ಚಳವಳಿಯನ್ನು ಬಲಪಡಿಸಲು, ಗಾಂಧೀಜಿ 1,50,000 ವಿದೇಶಿ ಬಟ್ಟೆಗಳನ್ನು ಮುಂಬೈನಲ್ಲಿ 31 ಜುಲೈ 1921 ರಂದು ಸುಟ್ಟುಹಾಕಿದರು. ಗಾಂಧೀಜಿ ಅವರು ದೇಶದಾದ್ಯಂತ ಖಾದಿ ನೂಲು ಗಿರಣಿಗಳನ್ನು ಬೆಳೆಸಿದರು ಮತ್ತು ಅವರು ಖಾದಿ ನೂಲುವವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿದರು. ಸ್ವದೇಶಿ ಆಂದೋಲನದ ನೆನಪಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 7, 2015 ರಂದು ಚೆನ್ನೈನ ಮದ್ರಾಸ್ ಕಾಲೇಜಿನ ಶತಮಾನೋತ್ಸವದಲ್ಲಿ ಮೊದಲ ಕೈಮಗ್ಗ ದಿನವನ್ನು ಉದ್ಘಾಟಿಸಿದರು.
ಮಹತ್ವ:
ದೇಶದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಕುರುಹು ಆಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಕೈಮಗ್ಗವು ಮಹಿಳೆಯರಿಗೆ ಜೀವನೋಪಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದ್ದು, ಇದು ದೇಶದ ಕೈಮಗ್ಗ ನೇಕಾರರನ್ನು ಗೌರವಿಸುವ ದಿನವೂ ಹೌದು. ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (NHDP), ಕೈಮಗ್ಗ ನೇಕಾರರ ಸಮಗ್ರ ಕಲ್ಯಾಣ ಯೋಜನೆ (HWCWS), ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ (CHCDS) ಮತ್ತು ನೂಲು ಸರಬರಾಜು ಯೋಜನೆ (YSS) ನಂತಹ ಕೈಮಗ್ಗ ಸಮುದಾಯಗಳಿಗೆ ಸಹಾಯ ಮಾಡಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಭಾರತವು ವಿಶ್ವದ ಹತ್ತಿಯ ಅತಿದೊಡ್ಡ ಗ್ರಾಹಕ ಮತ್ತು ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ಭಾರತವು ಪ್ರಪಂಚದಲ್ಲೇ ಎರಡನೇ ಅತಿ ದೊಡ್ಡ ಕೈಮಗ್ಗ ಉತ್ಪನ್ನಗಳ ರಫ್ತುದಾರನಾಗಿದೆ. ಭಾರತದಲ್ಲಿನ ದೇಶೀಯ ಉಡುಪು ಉದ್ಯಮವು ಭಾರತದ ಒಟ್ಟು GDP ಯಲ್ಲಿ 5% ಕೊಡುಗೆ ನೀಡುತ್ತದೆ ಮತ್ತು 2025-26 ರ ವೇಳೆಗೆ ಜವಳಿ ಮತ್ತು ಉಡುಪುಗಳ ರಫ್ತು $ 65 ಬಿಲಿಯನ್‌ಗೆ ಬೆಳೆಯುವ ಸಾಧ್ಯತೆಗಳಿವೆ.
ಥೀಮ್:
ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರತಿ ವರ್ಷ ಆಗಸ್ಟ್ 7 ರಂದು ಆಚರಿಸಲಾಗುತ್ತದೆ ಮತ್ತು 2022 ರ ಥೀಮ್ನ್ನು ಇನ್ನೂ ಘೋಷಿಣೆ ಮಾಡಿಲ್ಲ.
ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.