ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಹೋಟೆಲ್ ಕಾರ್ಮಿಕ ಸುರೇಶ್ ಕುಮಾರ್ ಅವರ ಅನಿಸಿಕೆ ಇಲ್ಲಿದೆ.
ನಾನು ಮಾಡುತ್ತಿರುವ ಉದ್ಯೋಗದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಬೇಕು ಎಂಬುದು ಆಸೆ. ಬೇರೆ ಕೆಲಸ ಶುರು ಮಾಡುವ ಯೋಜನೆಯೇನೂ ಇಲ್ಲ. ಈಗ ಮಾಡುತ್ತಿರುವ ಕೆಲಸದಲ್ಲೇ ಇನ್ನೂ ಪ್ರಗತಿ ಕಾಣಬೇಕು. ಬ್ಯುಸಿನೆಸ್ ಪಿಕ್ಅಪ್ ಆಗಬೇಕು.
ಸಮಾಜ, ದೇಶ, ರಾಜ್ಯದಲ್ಲಿ ಕಾಣ ಬಯಸುವ ಬದಲಾವಣೆ
2020ರಲ್ಲಿ ಕೊರೊನಾ ನಮಗೆ ಸರಿಯಾದ ಹೊಡೆತ ಕೊಟ್ಟಿತ್ತು. ಮುಂದಿನ ವರ್ಷದಲ್ಲಿ ಈ ಕಾಯಿಲೆಯೆಲ್ಲ ಸಂಪೂರ್ಣವಾಗಿ ನಾಶವಾಗಲಿ. ಹೊರದೇಶಗಳಂತೆ ನಮ್ಮ ದೇಶವೂ ಅಭಿವೃದ್ಧಿಯಾಗಬೇಕು. ಜನರು ದುಡಿದಿದ್ದು ಜನರಿಗೇ ಉಳಿಯುವಂತಾಗಬೇಕು. ರೈತರಿಗೆ ಒಳ್ಳೆಯ ಬೆಳೆ-ಬೆಲೆ ಸಿಗಲಿ. ಸರ್ಕಾರಗಳು ರೈತರಿಗೆ ಬೆಂಬಲ ನೀಡುವಂತಾಗಬೇಕು. ಹಾಗೇ ಸರ್ಕಾರಗಳಿಗೂ ಯಾವ ಸಮಸ್ಯೆಯೂ ಎದುರಾಗಬಾರದು. ಕೊರೊನಾ ಮುಕ್ತವಾಗಬೇಕು. ಒಟ್ಟಿನಲ್ಲಿ 2021ನೇ ವರ್ಷದಲ್ಲಿ ಎಲ್ಲವೂ ಸುಲಲಿತವಾಗಿ, ಒಳ್ಳೆಯದಾಗಿ ಇರಬೇಕು.
ಸಮಾಜದಲ್ಲಿ ಬದಲಾವಣೆ ಕಾಣಲು ನಾನು ಏನು ಮಾಡಬಲ್ಲೆ?
ನಾನು ಸಂಪಾದನೆ ಮಾಡಿದ್ದನ್ನು ಆಷ್ಟೋಇಷ್ಟೋ ಉಳಿಸಿಕೊಂಡು ನನ್ನ ವೈಯಕ್ತಿಕ ಪ್ರಗತಿಯತ್ತ ಗಮನ ಹರಿಸುತ್ತೇನೆ. ಸರ್ಕಾರದ ಬಳಿ ಕೇಳುವುದು, ಸರ್ಕಾರವೇ ಮಾಡಲಿ ಎಂದು ಬಯಸುವುದನ್ನು ಆದಷ್ಟು ಕಡಿಮೆ ಮಾಡುತ್ತೇನೆ. ನನ್ನ ಜವಾಬ್ದಾರಿಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಈ ಮೂಲಕ ಸಮಾಜಕ್ಕೂ ಪೂರಕವಾಗಿ ಇರುತ್ತೇನೆ.
Published On - 6:22 pm, Thu, 31 December 20