New Year Resolution | ಕಾತರದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇನೆ

ರಕ್ಕಸ ಸೋಂಕು ಇಷ್ಟರ ಮಟ್ಟಿಗೆ ಆಟವಾಡಿಸುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಆದರೂ ಜೀವನ ಹಾಗೂ ಸಂಬಂಧದ ಮೌಲ್ಯಗಳ ಬೆಲೆ ಸೇರಿದಂತೆ ಹಲವು ಪಾಠಗಳನ್ನು ಕೊರೊನಾ ಸೋಂಕು ಕಲಿಸಿದೆ.

New Year Resolution | ಕಾತರದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇನೆ
ಕಂಡಕ್ಟರ್ ಆನಂದ ಮಾಲಗತ್ತಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 01, 2021 | 9:39 PM

2021ಕ್ಕೆ ಕಾಲಿಟ್ಟ ಮೊದಲ ದಿನ ಒಂದಿಡೀ ವರ್ಷದ ತಮ್ಮ ಪ್ಲಾನ್ ಹಂಚಿಕೊಂಡರು ಬಿಎಂಟಿಸಿ ಬಸ್ ಕಂಡಕ್ಟರ್ ಆನಂದ್ ಮಾಲಗತ್ತಿ. ವೈಯಕ್ತಿಕವಾಗಿ ಎಂಥ ಬದಲಾವಣೆಗಳನ್ನು ಬಯಸುತ್ತಿದ್ದಾರೆ? ಸಮಾಜದಲ್ಲಿ ಏನೆಲ್ಲಾ ಅಂಶಗಳು ಬದಲಾಗಬೇಕೆಂದು ನಿರೀಕ್ಷಿಸುತ್ತಾರೆ? ಅದಕ್ಕಾಗಿ ಅವರೇನು ಮಾಡಬೇಕೆಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಈ ಯುವ ಕಂಡಕ್ಟರ್​ ಕೊಟ್ಟ ಉತ್ತರಗಳಿವು..

ಹಲವು ಕನಸುಗಳನ್ನು ಹೊತ್ತಿದ್ದ ನಾನು 2020ರಲ್ಲಿ ಅವುಗಳನ್ನು ಈಡೇರಿಕೊಳ್ಳಬೇಕೆಂಬ ಕಾತರದಲ್ಲಿದ್ದೆ. ಬಹು ಮುಖ್ಯವಾಗಿ ವಿದೇಶಗಳಿಗೆ ಪ್ರವಾಸ ಹೋಗಬೇಕೆಂಬ ಆಸೆಯಿತ್ತು. ಕೊರೊನಾ ಕಾರಣದಿಂದ ಅದು ಈಡೇರಲಿಲ್ಲ. 2020ರ ವರ್ಷ ಪೂರ್ತಿ ನಿರೀಕ್ಷೆ ಮಾಡದ ಸ್ಥಿತಿಯಲ್ಲಿ ಅತ್ಯಂತ ಹೀನಾಯವಾಗಿ ಕಳೆದಿದೆ. ಕೊರೊನಾ ಮಹಾಮಾರಿಯು ಆಸೆ ಆಕಾಂಕ್ಷೆಗಳಿಗೆ ತಣ್ಣೀರು ಎರಚಿತ್ತು. ಸಾಧ್ಯವಾದಷ್ಟು ಮಟ್ಟಿಗೆ ನನ್ನ ಗುರಿ ಮತ್ತು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ 2021ರ ಹೊಸ ವರ್ಷಕ್ಕೆ ಕಾತರದಿಂದ ಕಾಲಿಡುತ್ತಿದ್ದೇನೆ.

ರಕ್ಕಸ ಸೋಂಕು ಇಷ್ಟರ ಮಟ್ಟಿಗೆ ಆಟವಾಡಿಸುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಆದರೂ ಜೀವನ ಹಾಗೂ ಸಂಬಂಧದ ಮೌಲ್ಯಗಳ ಬೆಲೆ ಸೇರಿದಂತೆ ಹಲವು ಪಾಠಗಳನ್ನು ಕೊರೊನಾ ಸೋಂಕು ಕಲಿಸಿದೆ.

ಸಮಾಜ ಬದಲಾಗಬೇಕಾದರೆ ಮೊದಲು ಭ್ರಷ್ಟಾಚಾರ ಸಂಪೂರ್ಣವಾಗಿ ಮಣ್ಣು ಪಾಲಾಗಬೇಕು. ಸಾಮಾನ್ಯ ಜನರನ್ನು ತುಳಿಯುತ್ತಿರುವ ಭ್ರಷ್ಟಾಚಾರ ದೇಶದಿಂದ ಕಣ್ಮರೆಯಾದಾಗ ಮಾತ್ರ ದೇಶವು ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯ. ರಾಜ್ಯ ಅಥವಾ ದೇಶವನ್ನಾಳುವ ಅಧಿಕಾರಿಗಳು ತಮ್ಮತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಮನಸ್ಥಿತಿಯನ್ನು ತೆಗೆದು ಸಮಾಜದ ಹಿತಕ್ಕಾಗಿ ದುಡಿದರೆ ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯ. 2021 ರಲ್ಲಿ ನಿರ್ಗತಿಕರಿಗೆ ಅಥವಾ ಬಡವರಿಗೆ ನನ್ನ ಕೈಯಲಾದಷ್ಟು ಸಹಾಯ ಮಾಡಬೇಕೆಂದುಕೊಂಡಿದ್ದೇನೆ.

Published On - 9:37 pm, Fri, 1 January 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ