ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಮತ್ತು ಭೌತಶಾಸ್ತ್ರಜ್ಞ, ಮಿಶ್ರಣ-ಟ್ರಾಟೋನಿಯಮ್ ಎಂಬ ಸಂಗೀತ ವಾದ್ಯದಲ್ಲಿ ಧ್ವನಿ ಪರಿಣಾಮಗಳನ್ನು ಉತ್ಪಾದಿಸಿ ಗುರುತಿಸಲ್ಪಟ್ಟ ಆಸ್ಕರ್ ಸಲಾ (Oskar Sala) ಅವರ 112ನೇ ಜನ್ಮದಿನಚಾರಣೆಯನ್ನು ಆಚರಿಸಲಾಗುತ್ತಿದೆ. ಇವರ ಗೌರವಾರ್ಧವಾಗಿ ಗೂಗಲ್ ಡೂಡಲ್ (Google Doodle)ನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ದೂರದರ್ಶನ, ರೇಡಿಯೋ ಮತ್ತು ಚಲನಚಿತ್ರದ ಪ್ರಪಂಚವನ್ನು ವಿದ್ಯುನ್ಮಾನಗೊಳಿಸಿದ ಆಸ್ಕರ್ ಸಲಾ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಜರ್ಮನಿಯ ಗ್ರೀಜ್‌ನಲ್ಲಿ 1910ರ ಜು.18ರಂದು ಜನಿಸಿದ ಆಸ್ಕರ್ ಸಲಾ ಅವರ ಕುಟುಂಬವೇ ಸಂಗೀತದಲ್ಲಿ ಆಸಕ್ತಿ ಹೊಂದಿತ್ತು. ಸಲಾ ಇವರ ತಾಯಿ ಗಾಯಕಿಯಾಗಿದ್ದು, ತಂದೆ ಕೂಡ ಸಂಗೀತ ಪ್ರತಿಭೆ ಹಾಗೂ ನೇತ್ರಶಾಸ್ತ್ರಜ್ಞರೂ ಆಗಿದ್ದರು. ಪೋಷಕರು ಸಂಗೀತದಲ್ಲಿ ತೊಡಗಿಕೊಂಡಿರುವುದರಿಂದ ಸಲಾ ಅವರಿಗೂ ಸಂಗೀತದಲ್ಲಿ ಆಸಕ್ತಿ ಬೆಳೆಯತೊಡಗಿತು. ಅದರಂತೆ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಮೇಲೆ ಒಲವು ತೋರಿದ ಆಸ್ಕರ್ ಸಲಾ ಅವರು, 14ನೇ ವಯಸ್ಸಿನಲ್ಲಿ ಪಿಟೀಲು ಮತ್ತು ಪಿಯಾನೋ ಮುಂತಾದ ವಾದ್ಯಗಳಿಗೆ ಸಂಯೋಜನೆಗಳು ಮತ್ತು ಹಾಡುಗಳನ್ನು ರಚಿಸಲು ಪ್ರಾರಂಭಿಸಿದರು.
ಆಸ್ಕರ್ ಸಲಾ ಅವರು ಟ್ರಾಟೋನಿಯಮ್ ಎಂಬ ಸಾಧನದ ನಾದವನ್ನು ಕೇಳಿ ಆಕರ್ಷಿತರಾದರು. ಮುಂದೆ ಅವರು ಟ್ರಾಟೋನಿಯಮ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾದರು. ಇದು ಶಾಲೆಯಲ್ಲಿ ಭೌತಶಾಸ್ತ್ರ ಮತ್ತು ಸಂಯೋಜನೆಯಲ್ಲಿ ಅವರ ಅಧ್ಯಯನವನ್ನು ಪ್ರೇರೇಪಿಸುವಂತೆ ಮಾಡಿ.
ಆಸ್ಕರ್ ಸಲಾ ಅವರ ಹೊಸ ಆಲೋಚನೆಯು ಮಿಶ್ರಣ-ಟ್ರಾಟೋನಿಯಮ್ ಎಂಬ ತನ್ನದೇ ಆದ ಉಪಕರಣವನ್ನು ಅಭಿವೃದ್ಧಿಪಡಿಸುವಂತೆ ಮಾಡಿತು. ಸಂಗೀತ ಸಂಯೋಜಕ ಮತ್ತು ಎಲೆಕ್ಟ್ರೋ-ಎಂಜಿನಿಯರ್ ಶಿಕ್ಷಣದೊಂದಿಗೆ ಸಲಾ ಅವರು ಎಲೆಕ್ಟ್ರಾನಿಕ್ ಸಂಗೀತವನ್ನು ರಚಿಸಿದರು. ಮಿಶ್ರಣ-ಟ್ರಾಟೋನಿಯಮ್ ತುಂಬಾ ವಿಶಿಷ್ಟವಾಗಿದ್ದು, ಅದು ಏಕಕಾಲದಲ್ಲಿ ಹಲವಾರು ಶಬ್ದಗಳು ಅಥವಾ ಧ್ವನಿಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಸಾಲಾ ರೋಸ್ಮರಿ ಮತ್ತು ದಿ ಬರ್ಡ್ಸ್ ನಂತಹ ಅನೇಕ ದೂರದರ್ಶನ, ರೇಡಿಯೋ ಮತ್ತು ಚಲನಚಿತ್ರ ನಿರ್ಮಾಣಗಳಿಗೆ ಸಂಗೀತ ತುಣುಕುಗಳು ಮತ್ತು ಧ್ವನಿ ಪರಿಣಾಮಗಳನ್ನು ಸಂಯೋಜಿಸಿದರು. ವಾದ್ಯವು ಪಕ್ಷಿಗಳ ಕೂಗು, ಸುತ್ತಿಗೆ ಮತ್ತು ಬಾಗಿಲು ಮತ್ತು ಕಿಟಕಿಗಳ ಸ್ಲ್ಯಾಮ್‌ಗಳಂತಹ ಶಬ್ದಗಳನ್ನು ಸೃಷ್ಟಿಸಿತು.
Take a beat to celebrate German electronic composer Oskar Sala's 112th birthday. He developed & played the mixture-trautonium, which introduced a unique sound to television, radio & film.
Learn about his legacy & instrument in today’s #GoogleDoodle → https://t.co/YC1kOPZFxe pic.twitter.com/r1wXsrDoLW
— Google Doodles (@GoogleDoodles) July 17, 2022
ಸಲಾ ಅವರ ಇಂತಹ ಸಾಧನೆಗಳಿಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿದವು. ಇವರು ವಿಶ್ವದಲ್ಲಿ ಖ್ಯಾತಿ ಪಡೆಯುತ್ತಾ ಹೋದಂತೆ ಅನೇಕ ಸಂದರ್ಶನಗಳನ್ನು ನೀಡಿದರು. ಇದರ ಜೊತೆಗೆ ಹಲವಾರು ಕಲಾವಿದರನ್ನು ಭೇಟಿಯಾದರು. ರೇಡಿಯೋ ಪ್ರಸಾರಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಗೌರವಿಸಲ್ಪಟ್ಟರು. 1995ರಲ್ಲಿ ಅವರು ತಮ್ಮ ಮೂಲ ಮಿಶ್ರಣ-ಟ್ರಾಟೋನಿಯಮ್ ಅನ್ನು ಸಮಕಾಲೀನ ತಂತ್ರಜ್ಞಾನಕ್ಕಾಗಿ ಜರ್ಮನ್ ಮ್ಯೂಸಿಯಂಗೆ ದಾನ ಮಾಡಿದರು.
ಸಲಾ ಕ್ವಾರ್ಟೆಟ್-ಟ್ರಾಟೋನಿಯಂ ಅನ್ನು ಸಹ ನಿರ್ಮಿಸಿದರು, ಎಲೆಕ್ಟ್ರಾನಿಕ್ ಸಂಗೀತದಲ್ಲಿನ ಅವರ ಪ್ರಯತ್ನಗಳು ಸಬ್‌ಹಾರ್ಮೋನಿಕ್ಸ್ ಕ್ಷೇತ್ರವನ್ನು ತೆರೆಯಿತು. ಸಮರ್ಪಣೆ ಮತ್ತು ಸೃಜನಶೀಲ ಶಕ್ತಿಯಿಂದ ಆಸ್ಕರ್ ಸಲಾ ಅವರು ಏಕವ್ಯಕ್ತಿ ಆರ್ಕೆಸ್ಟ್ರಾ ಆಗಿ ಹೊರಹೊಮ್ಮಿದರು. ಇವರು 2022ರ ಫೆ.26ರಂದು ಕೊನೆಯುಸಿರೆಳೆದರು.