Pingali Venkayya Birth Anniversary: ತಿರಂಗ ಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ; ಇಂದು ವಿಶೇಷ ಅಂಚೆ ಚೀಟಿ ಬಿಡುಗಡೆ

ಭಾರತದ ರಾಷ್ಟ್ರ ಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ ಇಂದು. ಬ್ರಿಟಿಷ್ ಸೈನ್ಯದಿಂದ ಹೊರಬಂದು ತಿರಂಗ ವಿನ್ಯಾಸ ಮಾಡಿರುವುದು ಚರಿತ್ರೆ. ಇವರ ಸ್ಮರಣಾರ್ಥ ಕೇಂದ್ರ ಸರ್ಕಾರವು ಇಂದು ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಿದ್ದು, ಪಿಂಗಳಿ ಕುಟುಂಬಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.

Pingali Venkayya Birth Anniversary: ತಿರಂಗ ಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ; ಇಂದು ವಿಶೇಷ ಅಂಚೆ ಚೀಟಿ ಬಿಡುಗಡೆ
ಪಿಂಗಳಿ ವೆಂಕಯ್ಯ
Follow us
TV9 Web
| Updated By: Rakesh Nayak Manchi

Updated on: Aug 02, 2022 | 7:20 AM

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಹರ್ ಘರ್ ತಿರಂಗ ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಯಲ್ಲಿ ಹಾರಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಒಳಗೊಂಡ ರಾಷ್ಟ್ರಧ್ವಜದ ಪರಿಕಲ್ಪಕರು, ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ ಅವರು. ಪತ್ತಿ ವೆಂಕಯ್ಯ ಎಂದೂ ಕರೆಯಲ್ಪಡುವ ವೆಂಕಯ್ಯ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಭಾರತಕ್ಕೊಂದು ಧ್ವಜವನ್ನು ಕೊಟ್ಟ ಪಿಂಗಳಿ ಅವರ ಜನ್ಮದಿನವಿಂದು. ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಹಾಗಿದ್ದರೆ ಪಿಂಗಳಿ ವೆಂಕಯ್ಯ ಅವರ ಜೀವನಚರಿತ್ರೆ ತಿಳಿದುಕೊಳ್ಳೋಣ.

ಪಿಂಗಳಿ ವೆಂಕಯ್ಯ ಯಾರು?

ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ ಮಚಲಿಪಟ್ಟಣಂ ಬಳಿ ಜನಿಸಿದ ಪಿಂಗಳಿ ವೆಂಕಯ್ಯ ಅವರು ಉತ್ಸಾಹಭರಿತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀ ವಿಚಾರವಾದಿಯಾಗಿರುವ ಇವರು ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರಾಗಿದ್ದರು. ಭಾತರಕ್ಕೊಂದು ಧ್ವಜ ನೀಡುವಲ್ಲಿ ಹಲವು ವರ್ಷಗಳನ್ನೇ ಮುಡಿಪಾಗಿಟ್ಟು 1916 ರಲ್ಲಿ ಭಾರತೀಯ ಧ್ವಜವನ್ನು ಮಾಡಬಹುದಾದ ಮೂವತ್ತು ವಿನ್ಯಾಸಗಳನ್ನು ನೀಡುವ ಪುಸ್ತಕವನ್ನು ಪ್ರಕಟಿಸಿದರು. 1921 ರ ಏಪ್ರಿಲ್ 1ರಂದು ವಿಜಯವಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಮಹಾತ್ಮ ಗಾಂಧಿಯವರು ವೆಂಕಯ್ಯ ಅವರ ಧ್ವಜದ ವಿನ್ಯಾಸವನ್ನು ಅನುಮೋದಿಸಿದರು. ಆ ಧ್ವಜನವನ್ನೇ ಇಂದು ನಾವು ಹೆಮ್ಮೆಯಿಂದ ತಲೆ ಎತ್ತಿ ನೋಡಿ ಸೆಲ್ಯುಟ್ ಮಾಡುತ್ತಿರುವುದು.

ಕಳೆದ ವರ್ಷಕ್ಕೆ ನಮ್ಮ ರಾಷ್ಟ್ರ ಧ್ವಜಕ್ಕೆ 100 ವರ್ಷಗಳು ಪೂರೈಸಿತು. ಪಿಂಗಳಿ ವೆಂಕಯ್ಯ ಅವರು ಸ್ವತಂತ್ರ ಭಾರತಕ್ಕೆ ಧ್ವಜವನ್ನು ಕೊಟ್ಟು 100 ವರ್ಷಗಳು ಕಳೆದರೂ 19363 ನಂತರ ಅವರ ನೆನಪು ತ್ರಿವರ್ಣ ಧ್ವಜದ ಹಿಂದೆ ಅಡಗಿದೆ. ಆ ವರ್ಷದ ಜು.4 ರಂದು ಅವರು ಇಹಲೋಕ ತ್ಯಜಿಸಿದರು.

ಈ ಎಲ್ಲಾ ಘಟನಾವಳಿಗಿಂತ ಮುನ್ನ ಅವರು ಬ್ರಿಟಿಷ್ ಸೈನ್ಯದಲ್ಲಿದ್ದ ಬಗ್ಗೆ ತಿಳಿಯೋಣ. ಬ್ರಿಟಿಷ್ ಸೇನೆಗೆ ಸೇರಿದ್ದ ಪಿಂಗಳಿ ಅವರು ಬ್ರಿಟನ್ ಪರ ಹೋರಾಡಲು ತಮ್ಮ 19ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ಒತ್ತಾಯಿಸುತ್ತಿದ್ದ. ಇದು ಪಿಂಗಳಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ದಕ್ಷಿಣ ಆಫ್ರಿಕ ಬಿಟ್ಟು ಭಾರತಕ್ಕೆ ವಾಪಸ್ಸಾದರು. ನಂತರ ಭಾರತಕ್ಕೊಂದು ಧ್ವಜ ರೂಪಿಸಬೇಕು ಎಂದು ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟದ ಜೊತೆಗೆ ಮುಡಿಪಾಗಿಟ್ಟರು.

ಇಂದು ಅಂಚೆ ಚೀಟಿ ಬಿಡುಗಡೆ

ಪಿಂಗಳಿ ವೆಂಕಯ್ಯ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದೆ. ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆಚೀಟಿ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಿಂಗಳಿಯವರು ವಿನ್ಯಾಸಗೊಳಿಸಿದ ಮೂಲ ಧ್ವಜವನ್ನು ಪ್ರದರ್ಶಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಪಿಂಗಳಿ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದ್ದು, ಇವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸನ್ಮಾನಿಸಲಿದ್ದಾರೆ. ನಂತರ ಪಿಂಗಳಿ ಅವರ ಕುಟುಂಬದ ಸದಸ್ಯರೊಂದಿಗೂ ಪ್ರಧಾನಿ ಸಂವಾದ ನಡೆಸಲಿದ್ದಾರೆ. 

ಪಿಂಗಳಿ ವೆಂಕಯ್ಯ ಅವರ ಹೆಸರಿನಲ್ಲಿ ಈ ಹಿಂದೆಯೊಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು, 2009 ರಲ್ಲಿ ಅವರ ಸ್ಮರಣಾರ್ಥವಾಗಿ ಬಿಡುಗಡೆ  ಮಾಡಲಾಗಿತ್ತು. ಅದಾದ ನಂತರ 2011ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಪ್ರಸ್ತಾಪವನ್ನು ಇಡಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಯಡಿಯೂರಪ್ಪ ಅಲ್ಲ: ರೇಣುಕಾಚಾರ್ಯ
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಯಡಿಯೂರಪ್ಪ ಅಲ್ಲ: ರೇಣುಕಾಚಾರ್ಯ
ಕೋವಿಡ್ ಹಗರಣದಲ್ಲಿ ಎಫ್​ಐಅರ್; ತನಿಖೆ ಶುರುವಾಗಲಿದೆ: ಪೊಲೀಸ್ ಕಮೀಶನರ್
ಕೋವಿಡ್ ಹಗರಣದಲ್ಲಿ ಎಫ್​ಐಅರ್; ತನಿಖೆ ಶುರುವಾಗಲಿದೆ: ಪೊಲೀಸ್ ಕಮೀಶನರ್
ಫಾಲೋಆನ್​ ತಪ್ಪಿಸಿಕೊಂಡ ಟೀಮ್ ಇಂಡಿಯಾಗೆ ಗೆದ್ದಷ್ಟೇ ಖುಷಿ..!
ಫಾಲೋಆನ್​ ತಪ್ಪಿಸಿಕೊಂಡ ಟೀಮ್ ಇಂಡಿಯಾಗೆ ಗೆದ್ದಷ್ಟೇ ಖುಷಿ..!
ಯಡಿಯೂರಪ್ಪ ನಮ್ಮ ಸಹಾಯವಿಲ್ಲದೆ ಪಕ್ಷವನ್ನು ಕಟ್ಟಿಲ್ಲ: ಬಸನಗೌಡ ಯತ್ನಾಳ್
ಯಡಿಯೂರಪ್ಪ ನಮ್ಮ ಸಹಾಯವಿಲ್ಲದೆ ಪಕ್ಷವನ್ನು ಕಟ್ಟಿಲ್ಲ: ಬಸನಗೌಡ ಯತ್ನಾಳ್
ರೇಣುಕಾಸ್ವಾಮಿ ಹತ್ಯೆ ಮುಂಚಿನ ಸ್ಥಿತಿ ಪುನಃ ನಿರ್ಮಾಣವಾಗಲಿದೆಯೇ?
ರೇಣುಕಾಸ್ವಾಮಿ ಹತ್ಯೆ ಮುಂಚಿನ ಸ್ಥಿತಿ ಪುನಃ ನಿರ್ಮಾಣವಾಗಲಿದೆಯೇ?
Belagavi Session Live: ಬೆಳಗಾವಿ ಚಳಿಗಾಲ ಅಧಿವೇಶನದ ನೇರಪ್ರಸಾರ
Belagavi Session Live: ಬೆಳಗಾವಿ ಚಳಿಗಾಲ ಅಧಿವೇಶನದ ನೇರಪ್ರಸಾರ