ಶೀಘ್ರದಲ್ಲೇ ಭಕ್ತರಿಗೆ ತೆರೆಯಲಿದೆ ತಿಮ್ಮಪ್ಪನ ಬಾಗಿಲು, ಈಗಾಗಲೇ ಟ್ರಯಲ್ ಆರಂಭ

| Updated By: ಆಯೇಷಾ ಬಾನು

Updated on: Jun 05, 2020 | 3:25 PM

ಹೈದರಾಬಾದ್: ಕೊರೊನಾ ಹೆಮ್ಮಾರಿಯಿಂದ ದೇಶದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಆದ್ರೆ ಇದೀಗ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹಾಗಾಗಿ ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲೂ ಬಾಲಾಜಿ ದರ್ಶನ ಪಡೆಯಲು ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಜೂನ್ 11ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಟಿಟಿಡಿ ಹಾಗೂ ಅಧಿಕಾರಿಗಳು ತಿಮ್ಮಪ್ಪನ ಆಲಯದಲ್ಲಿ ದರ್ಶನ ವ್ಯವಸ್ಥೆಯ ಟ್ರಯಲ್ ಮಾಡಿದೆ. ಈ ವೇಳೆ 10 ಮಂದಿ ಟಿಟಿಡಿ ಉದ್ಯೋಗಿಗಳು ಶ್ರೀನಿವಾಸನ […]

ಶೀಘ್ರದಲ್ಲೇ ಭಕ್ತರಿಗೆ ತೆರೆಯಲಿದೆ ತಿಮ್ಮಪ್ಪನ ಬಾಗಿಲು, ಈಗಾಗಲೇ ಟ್ರಯಲ್ ಆರಂಭ
Follow us on

ಹೈದರಾಬಾದ್: ಕೊರೊನಾ ಹೆಮ್ಮಾರಿಯಿಂದ ದೇಶದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಆದ್ರೆ ಇದೀಗ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹಾಗಾಗಿ ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲೂ ಬಾಲಾಜಿ ದರ್ಶನ ಪಡೆಯಲು ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗುತ್ತಿದೆ.

ಜೂನ್ 11ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಟಿಟಿಡಿ ಹಾಗೂ ಅಧಿಕಾರಿಗಳು ತಿಮ್ಮಪ್ಪನ ಆಲಯದಲ್ಲಿ ದರ್ಶನ ವ್ಯವಸ್ಥೆಯ ಟ್ರಯಲ್ ಮಾಡಿದೆ. ಈ ವೇಳೆ 10 ಮಂದಿ ಟಿಟಿಡಿ ಉದ್ಯೋಗಿಗಳು ಶ್ರೀನಿವಾಸನ ದರ್ಶನ ಪಡೆದಿದ್ದಾರೆ.

ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಹಿನ್ನೆಲೆಯಲ್ಲಿ ಸರತಿ ಸಾಲುಗಳ ಮೂಲಕ ಎಷ್ಟು ಜನರನ್ನು ದರ್ಶನಕ್ಕೆ ಬಿಡಬಹುದು ಎಂದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಟಿಟಿಡಿ ಚೇರ್ಮನ್ ಸುಬ್ಬರೆಡ್ಡಿ, ಇಒ ಅನೀಲ್ ಕುಮಾರ್ ಸಿಂಘಾಲ್​ ಅವರು ಪರಿಶೀಲಿಸಿದ್ದಾರೆ.

ಜೂನ್ 11ರಿಂದ ಭಕ್ತರ ದರ್ಶನಕ್ಕೆ ಅನುಮತಿ:
ಜೂನ್ 8ರಿಂದ ತಿರುಮಲದ ದರ್ಶನ ವ್ಯವಸ್ಥೆ ಟ್ರಯಲ್ ಆರಂಭವಾಗಲಿದೆ. ಜೂನ್ 8 ಹಾಗೂ 9ರಂದು ಟಿಟಿಡಿ ಉದ್ಯೋಗಿಗಳೊಂದಿಗೆ ಟ್ರಯಲ್ ರನ್ ನಿರ್ವಹಿಸಲಾಗುವುದು.  ಜೂನ್ 11ರಿಂದ ಭಕ್ತರ ದರ್ಶನಕ್ಕೆ ಅನುಮತಿ ಕೊಡಲಾಗುತ್ತೆ. ಭಕ್ತರು ತಪ್ಪದೆ ಮಾಸ್ಕ ಧರಿಸಲೇಬೇಕು.  ಸಾಲುಗಳಲ್ಲಿ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ದಿನ ಆನ್​ಲೈನ್ ಮೂಲಕ ದರ್ಶನಕ್ಕೆ ನೋಂದಣಿ ಮಾಡಿಕೊಳ್ಳಬೇಕು.

ದಿನಕ್ಕೆ 3 ಸಾವಿರ ಮಂದಿಗೆ ಮಾತ್ರ ನೋಂದಣಿ:
ದಿನಕ್ಕೆ ಮೂರು ಸಾವಿರ ಮಂದಿಗೆ ನೋಂದಣಿ ಮಾಡಲು ಅನುಮತಿ ಇದೆ.  65 ವರ್ಷ ಮೇಲ್ಪಟ್ಟ ವೃದ್ಧರು, 10ವರ್ಷದೊಳಗಿನ ಮಕ್ಕಳಿಗೆ ಅನುಮತಿ ಇಲ್ಲ. ಕಂಟೈನ್​ಮೆಂಟ್​ ಜೋನ್, ರೆಡ್ ಜೋನ್ ವ್ಯಾಪ್ತಿಯ ನಿವಾಸಿಗಳು ದರ್ಶನಕ್ಕೆ ಬರಕೂಡದು. ಇವರು ಆನ್​ಲೈನ್ ಮೂಲಕ ನೋಂದಣಿ ಮಾಡಿದ್ದರೂ ಪರಿಶೀಲನೆ ಮಾಡುತ್ತೇವೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ದರ್ಶನಕ್ಕೆ ಅನುಮತಿ ಇದೆ.

ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು:
ಆಫ್​ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಭದ್ರತೆ ಕಾರಣದಿಂದ ಅಲಿಪಿರಿ ನಡೆಯುವ ದಾರಿ ಹಾಗೂ ಘಾಟ್ ರೋಡ್ ಮೂಲಕ ಮಾತ್ರ ಭಕ್ತರಿಗೆ ಅನುಮತಿ ಇದೆ. ಜೂನ್ 8ರಿಂದ ಲಾಡನ್ನು ಆನ್​ಲೈನ್​ ಡೋರ್ ಡೆಲಿವರಿ ಸ್ಥಗಿತಗೊಳಿಸಲಾಗುವುದು. ಅಲಿಪಿರಿ ಹಾಗೂ ಬೆಟ್ಟದ ಮೇಲೆ ಲ್ಯಾಬ್ ಏರ್ಪಾಡು ಮಾಡಲಾಗಿದೆ. ಹುಂಡಿಯನ್ನು ಭಕ್ತರು ಮುಟ್ಟದೇ ಜಾಗೃತೆ ವಹಿಸಲು ವಿನಂತಿ ಇದೆ. ಪ್ರತಿಬೊಬ್ಬ ಭಕ್ತರು ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಟಿಟಿಡಿ ಚೇರ್​ಮನ್ ಸುಬ್ಬಾರೆಡ್ಡಿ ಮನವಿ ಮಾಡಿದರು.

Published On - 1:12 pm, Fri, 5 June 20