Rama Navami 2021: ರಾಮನವಮಿಯಂದು ತಿಳಿದುಕೊಳ್ಳಬೇಕಾದ ಶ್ರೀ ರಾಮನ ಪ್ರಮುಖ ದೇವಾಲಯಗಳು

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇಲ್ಲಿ ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆ ಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.

Rama Navami 2021: ರಾಮನವಮಿಯಂದು ತಿಳಿದುಕೊಳ್ಳಬೇಕಾದ ಶ್ರೀ ರಾಮನ ಪ್ರಮುಖ ದೇವಾಲಯಗಳು
ರಾಮ, ಲಕ್ಷ್ಮಣ, ಸೀತಾ
Follow us
ಆಯೇಷಾ ಬಾನು
|

Updated on: Apr 21, 2021 | 9:39 AM

ಇಂದು ರಾಮನವಮಿ. ರಾಮ ಹುಟ್ಟಿದ ದಿನ. ಈ ದಿನ ರಾಮ ಭಕ್ತರು ರಾಮನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಕೊರೊನಾ ಸೋಂಕು ದೇಶದಲ್ಲಿ ಆವರಿಸಿರುವ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ಕೆಲವು ನಿರ್ಬಂಧನೆಗಳನ್ನ ಹೇರಲಾಗಿದೆ. ಈ ಕಾರಣದಿಂದ ಇಂದು ಮನೆಯಲ್ಲೇ ಕುಳಿತು ರಾಮ ಭಜನೆ ಮಾಡುವುದು ಉತ್ತಮ. ಈ ಹೊತ್ತಿನಲ್ಲಿ ಮನೆಯಲ್ಲೇ ಕುಳಿತ ನಿಮಗೆ ರಾಮನ ಕೆಲವು ವಿಶೇಷ ದೇವಾಲಯಗಳ ಬಗ್ಗೆ ತಿಳಿಸುತ್ತೇವೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶ್ರೀರಾಮಚಂದ್ರನ ದೇವಾಲಯಗಳು ಕಾಣಿಸುತ್ತವೆ. ಹಾಗೆ ನೋಡಿದರೆ ರಾಮನಿಗಿಂತ ಅವನ ಪರಮಭಕ್ತ ಆಂಜನೇಯನಿಗೆ ಮೀಸಲಾದ ಗುಡಿಗಳೇ ದೇಶದಲ್ಲಿ ಹೆಚ್ಚಿವೆ. ಅಂತೆಯೇ, ರಾಮಮಂದಿರಗಳಲ್ಲಿ ಮತ್ತು ಆಂಜನೇಯನ ಗುಡಿಗಳಲ್ಲಿ ವಿಶೇಷ ಪೂಜೆ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಇಂದು ನೆರವೇರುತ್ತದೆ.

ರಾಮನ ಜತೆಗೆ ಭಾತೃ ಪ್ರೇಮಕ್ಕೆ ಹೆಸರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಪ್ರತ್ಯೇಕವಾದ ದೇಗುಲಗಳು ಅಷ್ಟಾಗಿ ಕಂಡುಬಾರವು. ಇವರೆಲ್ಲ ಒಟ್ಟಾಗಿ ಇರುವ ದೇಗುಲಗಳನ್ನು ನಾವು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಕಾಣಬಹುದು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇದು ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆ ಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.

ಆವಣಿ ಬೆಟ್ಟ ಈ ದೇಗುಲಕ್ಕೆ ಪುರಾಣ ಐತಿಹ್ಯವಿದೆ. ರಾಮ ಸೀತೆ ಲವಕುಶರನ್ನು ಲಾಲಿಸಿದುದು ಇಲ್ಲೇ ಎನ್ನುವ ನಂಬಿಕೆ ಸ್ಥಳೀಯರಿಗಿದೆ. ಈ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟವನ್ನು ‘ಸೀತಮ್ಮ ಕೊಂಡ’ ಎಂದು ಕರೆಯುತ್ತಾರೆ . ಇಲ್ಲಿ ವರ್ಷಕ್ಕೊಮ್ಮೆ ದನಗಳ ಜಾತ್ರೆ ನಡೆಯುತ್ತದೆ. ಆಗ ದೂರದೂರಿಂದ ರೈತರು ಬಂದು ಎತ್ತುಗಳನ್ನು ಕೊಳ್ಳುತ್ತಾರೆ. ಈ ಬೆಟ್ಟದ ತಪ್ಪಲಲ್ಲಿ ಶಾರದಾಂಬೆಯ ದೇಗುಲವಿದೆ.

ಇ೦ತಹುದೇ ಮತ್ತೊಂದು ಸ್ಥಳ ಕೇರಳದಲ್ಲಿದೆ. ಇಲ್ಲಿಯೂ ಈ ಅಣ್ಣತಮ್ಮಂದಿರ ಪ್ರತ್ಯೇಕ ದೇಗುಲಗಳು ಇವೆ. ಮಲಯಾಳದಲ್ಲಿ ಇದನ್ನು ನಲಂಬಲಂ ಎಂದು ಕರೆಯುತ್ತಾರೆ. ರಾಮನಿಂದ ಆರಂಭಿಸಿ ಆ ಬಳಿಕ ಶತ್ರುಘ್ನ ದೇಗುಲ ನೋಡುವುದರ ಮೂಲಕ ಮುಕ್ತಾಯ ಹಾಡುವ ಪದ್ಧತಿ ಇಲ್ಲಿದೆ. ಈ ದೇವಾಲಯ ತಿರುಚ್ಚಿ ಜಿಲ್ಲೆಯ ರಾಮಪುರದಲ್ಲಿದೆ. ಆವಣಿಯಂತೆ ಇಲ್ಲಿ ಎಲ್ಲಾ ಅಣ್ಣ ತಮ್ಮಂದಿರು ಒಟ್ಟಾಗಿ ಇಲ್ಲ. ಟ್ಯಾಕ್ಸಿ ಮೂಲಕ ಅಷ್ಟೂ ದೇಗುಲಗಳನ್ನು ಬೇರೆಬೇರೆಯಾಗಿ ಸಂದರ್ಶಿಸಬಹುದು. ಕೇವಲ ರಾಮಪುರದಲ್ಲಿ ಮಾತ್ರವಲ್ಲದೆ ಕೊಟ್ಟಾಯಂ, ಎರ್ನಾಕುಲಂ, ಮಲಪ್ಪುರಂ ಜಿಲ್ಲೆಗಳಲ್ಲೂ ಈ ಅಣ್ಣ ತಮ್ಮಂದಿರ ದೇಗುಲಗಳು ಇವೆ.

ಭಾರತದಲ್ಲಿರುವ ಇತರೆ ಪ್ರಸಿದ್ಧ ದೇವಾಲಯಗಳು ಇನ್ನು ತೆಲಂಗಾಣದ ಭದ್ರಾಚಲಂ ದೇವಸ್ಥಾನ ಭಾರತದ ಪ್ರಸಿದ್ಧ ರಾಮನ ದೇವಸ್ಥಾನ. ಇದು ಗೋದಾವರಿ ನದಿಯ ತೀರದಲ್ಲಿದೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ದೊಡ್ಡ ದೇವಾಲಯವಾಗಿರುವ ಕೋದಂಡರಾಮ ದೇವಾಲಯ ತುಂಬಾ ಫೇಮಸ್. ತಮಿಳುನಾಡಿನ ಕುಂಭಕೋಣಂನಲ್ಲಿ ರಾಮಸ್ವಾಮಿ ದೇವಾಲಯವಿದೆ. ಇದು ದಕ್ಷಿಣ ಭಾರತದಲ್ಲೇ ಅತಿ ಸುಂದರ ಮತ್ತು ಪ್ರಸಿದ್ಧ ರಾಮ ಮಂದಿರ. ನಾಸಿಕ್ನ ಕಲಾರಾಮ್ ದೇವಾಲಯ ಪಂಚವಟಿ ಪ್ರದೇಶದಲ್ಲಿದೆ. ಈ ದೇವಸ್ಥಾನದಲ್ಲಿ ರಾಮನ ಕಪ್ಪು ಪ್ರತಿಮೆ ಇದೆ. ಇನ್ನು ಒಡಿಸ್ಸಾದ ಭುವನೇಶ್ವರದಲ್ಲಿರುವ ರಾಮ ಮಂದಿರ ನೋಡಲು ಎರಡು ಕಣ್ಣು ಸಾಲದು. ಅಷ್ಟು ಸುಂದರವಾಗಿದೆ. ಬಿಹಾರದ ಹಾಜಿಪುರ ನಗರದ ರಾಮಚವುರ ಮಂದಿರ, ಮಧ್ಯಪ್ರದೇಶದ ಪ್ರಸಿದ್ಧ ದೇವಾಲಯ ರಾಮ್ ರಾಜಾ.. ಹೀಗೆ ಹಲವು ದೇವಾಲಯಗಳಲ್ಲಿ ರಾಮ ದರ್ಶನ ನೀಡುತ್ತಾನೆ.

ಇದನ್ನೂ ಓದಿ: Ram Navami 2021: ರಾಮನವಮಿಯ ವಿಶೇಷವಾಗಿ ಸ್ನೇಹಿತರಿಗೆ, ಕುಟುಂಬದವರಿಗೆ ಕಳುಹಿಸುವ ಸಂದೇಶಗಳು ಇಲ್ಲಿವೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್