Ram Navami 2021: ರಾಮನವಮಿಯ ವಿಶೇಷವಾಗಿ ಸ್ನೇಹಿತರಿಗೆ, ಕುಟುಂಬದವರಿಗೆ ಕಳುಹಿಸುವ ಸಂದೇಶಗಳು ಇಲ್ಲಿವೆ

ದೂರದಲ್ಲೆಲ್ಲೋ ಇರುವ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ರಾಮನವಮಿ ಹಬ್ಬದ ಶುಭಾಶಯವನ್ನು ಹೇಗೆ ಹೇಳಲಿದ್ದೀರಿ? ಹೊಸ ಯೋಚನೆಯೊಂದಿಗೆ ಒಳ್ಳೆಯ ಸಂದೇಶ ನಿಮ್ಮದಾಗಿರಲಿ. ಅಂತಹ ಸಂದೇಶಗಳ ಪಟ್ಟಿ ಈ ಕೆಳಗಿನಂತಿದೆ.

Ram Navami 2021: ರಾಮನವಮಿಯ ವಿಶೇಷವಾಗಿ ಸ್ನೇಹಿತರಿಗೆ, ಕುಟುಂಬದವರಿಗೆ ಕಳುಹಿಸುವ ಸಂದೇಶಗಳು ಇಲ್ಲಿವೆ
ರಾಮ ನವಮಿ 2021
Follow us
shruti hegde
|

Updated on: Apr 21, 2021 | 8:29 AM

ಹಿಂದೂ ಧರ್ಮದಲ್ಲಿ ರಾಮ ನವಮಿ ಆಚರಣೆ ವಿಶೇಷವಾದ್ದು. ಇಂದು ಎಲ್ಲೆಡೆ ರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ರಾಮನವಮಿ ಆಚರಿಸಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಸ್ತ್ರದಲ್ಲಿ ರಾಮನ ಭಜನೆ ಕೈಗೊಳ್ಳುವುದು ಆಚರಣೆ. ಜನರು ಶ್ರೀರಾಮನ ಕ್ಷೇತ್ರಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸುವ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ವಿಶೇಷ ದಿನದಂದು ಭಕ್ತರು ರಾಮನ ಮೂರ್ತಿಗೆ ಹೂವುಗಳನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಆದರೀಗ ಕೊರೊನಾ ಸಾಂಕ್ರಾಮಿಕ ದೇಶದೆಲ್ಲೆಡೆ ಆರ್ಭಟಿಸುತ್ತಿರುವುದರಿಂದ ಜನರು ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತಿಲ್ಲ. ಮನೆಯಲ್ಲಿಯೇ ಕೂತು ಶ್ರೀರಾಮನನ್ನು ಭಕ್ತಿಯಿಂದ ಭಜಿಸಬೇಕು. ಹಾಗಿದ್ದಾಗ ದೂರದಲ್ಲೆಲ್ಲೋ ಇರುವ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ರಾಮನವಮಿ ಹಬ್ಬದ ಶುಭಾಶಯವನ್ನು ಹೇಗೆ ಹೇಳಲಿದ್ದೀರಿ? ಹೊಸ ಯೋಚನೆಯೊಂದಿಗೆ ಒಳ್ಳೆಯ ಸಂದೇಶ ನಿಮ್ಮದಾಗಿರಲಿ. ಅಂತಹ ಸಂದೇಶಗಳ ಪಟ್ಟಿ ಈ ಕೆಳಗಿನಂತಿದೆ.

ಹಬ್ಬದ ಆಚರಣೆಯಲ್ಲಿ ಭಕ್ತರು ಉಪವಾಸವನ್ನೂ ಕೈಗೊಳ್ಳುತ್ತಾರೆ. ಬಗವಾನ್ ರಾಮನಿಗೆ ಹೂವುಗಳನ್ನು, ತುಳಸಿದಳಗಳನ್ನು ಜೊತೆಗೆ ಹಣ್ಣುಗಳನ್ನು ಸಮರ್ಪಿಸಲಾಗುತ್ತದೆ. ಉಪವಾಸ ಮಾಡುವವರು ದಿನವಿಡೀ ವ್ರತ ಆಚರಿಸುತ್ತಾರೆ. ಶುಭ ದಿನದಂದು ಶ್ರೀರಾಮನಿಗೆ ವಿಶೇಷ ಆರತಿ ಬೆಳಗಿ, ಪೂಜೆ ನೆರವೇರಿಸಲಾಗುತ್ತದೆ. ರಾಮಚರಿತ ಮಾನಸ, ಶ್ರೀರಾಮನ ಭಜನೆ-ಸ್ತುತಿ, ರಾಮ ರಕ್ಷಸ್ತೋತ್ರ, ರಾಮಾಯಣವನ್ನು ಪಠಿಸಲಾಗುತ್ತದೆ. ಭಕ್ತಿಯಿಂದ ಶ್ರೀರಾಮನ ಮುಂದೆ ಕುಳಿತು ದೇವನ ನಾಮವನ್ನು ಜಪಿಸುತ್ತಾರೆ. ಜೈ ಜೈರಾಮ, ಶ್ರೀರಾಮ ಜೈರಾಮ ಮಂತ್ರವನ್ನು ಜಪಿಸುತ್ತಾರೆ.

ರಾಮ ನವಮಿ 2021ರ ಶುಭಾಶಯ ಸಂದೇಶಗಳು: * ನಿಮಗೂ ನಿಮ್ಮ ಕುಟುಂಬದವರಿಗೂ ರಾಮ ನವಮಿಯ ಹಾರ್ದಿಕ ಶುಭಾಶಯಗಳು * ಭಗವಂತ ರಾಮನ ದೈವಿಕ ಅನುಗ್ರಹವು ನಿಮ್ಮೊಂದಿಗೆ ಸದಾ ಇರಲಿ. ಜೀವನ ಪೂರ್ತಿ ನಿಮಗೆ ಸಂತೋಷ, ಸಮೃದ್ಧಿ ಸಿಗಲಿ. ರಾಮ ನವಮಿಯ ಹಾರ್ದಿಕ ಶುಭಾಶಯಗಳು * ರಾಮನವಮಿಯ ಪವಿತ್ರ ಸಂದರ್ಭವು ನಿಮ್ಮ ಜೀವನಕ್ಕೆ ಭರವಸೆ, ಶಾಂತಿಯನ್ನು ನೀಡಲಿ.. ರಾಮ ನವಮಿಯ ಶುಭಾಶಯಗಳು * ಈ ವರ್ಷದ ರಾಮನವಮಿಯ ವಿಶೇಷವಾಗಿ ಶ್ರೀ ರಾಮನ ಆಶೀರ್ವಾದ ನಿಮ್ಮ ಮೇಲಿರಲಿ. ನಿಮ್ಮ ಕುಟುಂಬದ ಶಾಂತಿ ಹೆಚ್ಚಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿಯ ಶುಭಾಶಯಗಳು. * ರಾಮ ನವಮಿ ಸಮಾನತೆ, ಸಹೋದರತ್ವವನ್ನು ಪ್ರೋತ್ಸಾಹಿಸುತ್ತದೆ.. ರಾಮನವಮಿಯ ಶೂಭಾಶಯಗಳು * ನಿಮ್ಮ ಜೀವನದಲ್ಲಿ ಎಂದಿಗೂ ಯಶಸ್ಸೇ ತುಂಬಿರಲಿ.. ಜಿವನದಲ್ಲಿ ಸಂತೋಷ ಪ್ರಜ್ವಲಿಸಲಿ.. ಹಬ್ಬದ ಹಾರ್ದಿಕ ಶುಭಾಶಯಗಳು

ಇದನ್ನೂ ಓದಿ: Rama Navami 2021: ರಾಮನವಮಿ ಆಚರಣೆಯ ಮುಹೂರ್ತ, ಇತಿಹಾಸ ಮತ್ತು ತಿಳಿದುಕೊಳ್ಳಲೇಬೇಕಾದ ಮಹತ್ವ ಇಲ್ಲಿದೆ

Horoscope | ದಿನ ಭವಿಷ್ಯ: ಶ್ರೀರಾಮ ನವಮಿಯ ದಿನ ಯಾವ ರಾಶಿಗೆ ಯಾವ ಫಲ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್