Sign In

By signing in or creating an account, you agree with Associated Broadcasting Company's Terms & Conditions and Privacy Policy.

Rama Navami 2021: ರಾಮ ಉತ್ತಮ ಬಿಲ್ಲಾಳೋ? ಅರ್ಜುನ ಉತ್ತಮ ಬಿಲ್ಲಾಳೋ? ಎಂಬ ಪ್ರಶ್ನೆಗೆ ಶತಾವಧಾನಿ ಆರ್.ಗಣೇಶ್ ಉತ್ತರಿಸಿದ್ದು ಹೀಗೆ

Shatavadhani Ganesh: ರಾಮ ಮತ್ತು ಅರ್ಜುನನನ್ನು ಜೊತೆಗಿಟ್ಟು ನೋಡೊದರೆ ರಾಮನೇ ಹೆಚ್ಚು ಉತ್ತಮನಾಗಿ ಕಾಣಲು ಕಾರಣ ಆತನ ಏಕಾಂಗಿ ಸಾಹಸ. ರಾಮ ಬಿಲ್ಲು ಹಿಡಿದು ನಿಲ್ಲುವಾಗ ತನ್ನ ಬಲವನ್ನೇ ನಂಬಿ ನಿಲ್ಲುತ್ತಿದ್ದ ಎನ್ನುವುದು ಮುಖ್ಯ. ಆದರೆ, ಅರ್ಜುನನ ವಿಚಾರಕ್ಕೆ ಬಂದಾಗ ಆತ ಯುದ್ಧದಲ್ಲಿ ಪೂರ್ತಿ ಕುಸಿದು ಬಿದ್ದಾಗ ಕೃಷ್ಣನೇ ಭಗವದ್ಗೀತೆ ಪಠಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

Rama Navami 2021: ರಾಮ ಉತ್ತಮ ಬಿಲ್ಲಾಳೋ? ಅರ್ಜುನ ಉತ್ತಮ ಬಿಲ್ಲಾಳೋ? ಎಂಬ ಪ್ರಶ್ನೆಗೆ ಶತಾವಧಾನಿ ಆರ್.ಗಣೇಶ್ ಉತ್ತರಿಸಿದ್ದು ಹೀಗೆ
ಶತಾವಧಾನಿ ಆರ್​.ಗಣೇಶ್​​
Follow us
Skanda
|

Updated on: Apr 21, 2021 | 9:15 AM

ಇಂದು ನಾಡಿನಾದ್ಯಂತ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಶ್ರೀ ರಾಮನಿಗೆ ವಿಶೇಷ ಮಹತ್ವವಿದ್ದು ಎಲ್ಲರ ಮನೆ, ಮನದಲ್ಲಿ ರಾಮ ನೆಲೆಸಿದ್ದಾನೆ. ಭಾರತೀಯರ ಪಾಲಿಗೆ ರಾಮ ಎಷ್ಟೇ ಆರಾಧ್ಯ ದೈವ ಎನಿಸಿಕೊಂಡರೂ ಆತ ಪ್ರಶ್ನಾತೀತವಾಗಿಯೇನು ಉಳಿದಿಲ್ಲ. ರಾಮನಿಗೆ ಸಂಬಂಧಿಸಿದಂತೆ ಎಷ್ಟೋ ಚರ್ಚೆಗಳಿವೆ. ಇದೀಗ ರಾಮನವಮಿಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ರಾಮ ಭಕ್ತರ ಗಮನ ಸೆಳೆದಿದೆ. ಶತಾವಧಾನಿ ಆರ್.ಗಣೇಶ್ ಅವರಿಗೆ ಸಂಬಂಧಿಸಿದ ವಿಡಿಯೋ ಅದಾಗಿದ್ದು, ರಾಮ ಉತ್ತಮ ಬಿಲ್ಲಾಳೋ? ಅರ್ಜುನ ಉತ್ತಮ ಬಿಲ್ಲಾಳೋ? ಎಂಬ ಪ್ರಶ್ನೆಗೆ ಶತಾವಧಾನಿ ಆರ್.ಗಣೇಶ್ ಅತ್ಯಂತ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ.

ಧನುರ್ವಿದ್ಯೆಯ ವ್ಯಾಕರಣದ ಪ್ರಕಾರ ರಾಮ ಉತ್ತಮ ಬಿಲ್ಲಾಳೋ ಅಥವಾ ಅರ್ಜುನ ಉತ್ತಮ ಬಿಲ್ಲಾಳೋ? ಎಂಬ ಪ್ರಶ್ನೆಗೆ ನಗುನಗುತ್ತಾ ಉತ್ತರಿಸಿದ ಶತಾವಧಾನಿ ಆರ್.ಗಣೇಶ್ ಇದು ಅತ್ಯಂತ ಸುಲಭದ ಪ್ರಶ್ನೆ ಎಂದಿದ್ದು, ರಾಮನೇ ಉತ್ತಮ ಬಿಲ್ಲಾಳು ಎಂಬ ಉತ್ತರ ನೀಡಿದ್ದಾರೆ. ಅವರ ಪ್ರಕಾರ ರಾಮ ಏಕೆ ಉತ್ತಮ ಬಿಲ್ಲಾಳು ಎನ್ನುವುದಕ್ಕೆ ಅವರು ನೀಡಿದ ಕಾರಣಗಳೂ ಅಷ್ಟೇ ಸ್ವಾರಸ್ಯಕರವಾಗಿವೆ.

ರಾಮ ಮತ್ತು ಅರ್ಜುನನನ್ನು ಜೊತೆಗಿಟ್ಟು ನೋಡುವುದಾದರೆ ರಾಮನೇ ಹೆಚ್ಚು ಉತ್ತಮನಾಗಿ ಕಾಣಲು ಕಾರಣ ಆತನ ಏಕಾಂಗಿ ಸಾಹಸ. ರಾಮ ಬಿಲ್ಲು ಹಿಡಿದು ನಿಲ್ಲುವಾಗ ತನ್ನ ಬಲವನ್ನೇ ನಂಬಿ ನಿಲ್ಲುತ್ತಿದ್ದ ಎನ್ನುವುದು ಮುಖ್ಯ. ಆದರೆ, ಅರ್ಜುನನ ವಿಚಾರಕ್ಕೆ ಬಂದಾಗ ಆತ ಯುದ್ಧದಲ್ಲಿ ಪೂರ್ತಿ ಕುಸಿದು ಬಿದ್ದಾಗ ಕೃಷ್ಣನೇ ಭಗವದ್ಗೀತೆ ಪಠಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅರ್ಜುನನ ಒಳಗೆ ತುಡಿತ ಇತ್ತಾದ್ದರೂ ಆತನಿಗೆ ಇನ್ನೊಬ್ಬರನ್ನು ಮೆಚ್ಚಿಸುವ ಆಸೆ ಇತ್ತು. ಹೀಗಾಗಿ ಆತ ಗೊತ್ತೋ, ಗೊತ್ತಿಲ್ಲದೆಯೋ ಕೃಷ್ಣನ ಮೇಲೆ ಅವಲಂಬಿತನಾದವನು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ರಾಮನದ್ದು ಲೋಕಕಲ್ಯಾಣ ದೃಷ್ಟಿ. ಆತನಿಗೆ ಲೋಕ ರಕ್ಷಣೆ ಮುಖ್ಯವಾಗಿತ್ತೇ ಹೊರತು ಬೇರೆಯವರನ್ನು ಮೆಚ್ಚಿಸುವ ಇಚ್ಛೆ ಇರಲಿಲ್ಲ. ಇದೆಲ್ಲದಕ್ಕೂ ಮಿಗಿಲಾಗಿ ರಾಮನಿಗೆ ಇದ್ದಿದ್ದು ಒಬ್ಬಳೇ ಹೆಂಡತಿ. ಹಾಗಾಗಿ ಆತ ಕಷ್ಟ, ಸುಖ ಏನೇ ಇದ್ದರೂ ಅವಳನ್ನೇ ಸಲಹಬೇಕಾಗಿದ್ದು ಅನಿವಾರ್ಯ. ಆಕೆಗೆ ಒಂದು ಕಾಗೆ ನೋವು ಮಾಡಿದರೂ ಆತ ಸಹಿಸುತ್ತಿರಲಿಲ್ಲ. ಇತ್ತ ಅರ್ಜುನನಿಗೆ ದೊಡ್ಡ ಬಲವೇ ಇದ್ದರೂ ತನ್ನ ಹೆಂಡತಿಯ ವಸ್ತ್ರಾಪಹರಣ ಆಗುವಾಗ ಏನೂ ಮಾಡಲಾಗದೇ ನಿಂತಿದ್ದ. ಹೀಗಾಗಿ ರಾಮನೇ ಉತ್ತಮ ಬಿಲ್ಲಾಳು ಎಂದು ಶತಾವಧಾನಿ ಆರ್.ಗಣೇಶ್ ನವಿರಾಗಿ ವಿವರಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆ; ಶ್ರೀರಾಮನವಮಿ ಪ್ರಯುಕ್ತ ಆಂಜನೇಯ ಹಾಗೂ ಬಾಬಯ್ಯನಿಗೆ ವಿಶೇಷ ಪೂಜೆ 

Rama Navami 2021: ರಾಮನವಮಿ ಆಚರಣೆಯ ಮುಹೂರ್ತ, ಇತಿಹಾಸ ಮತ್ತು ತಿಳಿದುಕೊಳ್ಳಲೇಬೇಕಾದ ಮಹತ್ವ ಇಲ್ಲಿದೆ