ಓದು ಮಗು ಓದು: ಶ್​! ಇದು ಸ್ಮಶಾನದ ಪುಸ್ತಕ…

ಬೆಂಗಳೂರಿನ ಆರ್.ಎನ್​.ಎಸ್​ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಐದನೇ ತರಗತಿ ಓದುತ್ತಿರುವ ಇಶಾನ್ ಬಿ.ಎಮ್. ತನ್ನಿಷ್ಟದ ಯಾವ ಐದು ಪುಸ್ತಕಗಳ ಬಗ್ಗೆ ಬರೆದಿದ್ದಾನೆ?

ಓದು ಮಗು ಓದು: ಶ್​! ಇದು ಸ್ಮಶಾನದ ಪುಸ್ತಕ...
ತನ್ನಿಷ್ಟದ ಪುಸ್ತಕಗಳೊಂದಿಗೆ ಬೆಂಗಳೂರಿನ ಇಶಾನ್ ಬಿ. ಎಂ.
Follow us
ಶ್ರೀದೇವಿ ಕಳಸದ
|

Updated on:Jan 12, 2021 | 3:53 PM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಇಷ್ಟೇ ಅಲ್ಲ, ಕೆಲ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಓದು ಮಗು ಓದು ಸರಣಿಯಲ್ಲಿ ಇರಲಿವೆ. ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ಬೆಂಗಳೂರಿನ ಇಶಾನ್ ಬಿ. ಎಂ. ತನ್ನ ನೆಚ್ಚಿನ ಐದು ಪುಸ್ತಕಗಳ ಬಗ್ಗೆ ಏನು ಹೇಳಿದ್ಧಾನೆ?

ಪು: ಹ್ಯಾರೀ ಪಾಟರ್ ಸೀರೀಸ್ (ಹದಿಹರೆಯದ ಮಕ್ಕಳ ಕಾದಂಬರಿ) ಲೇ: ಜೆ.ಕೆ. ರೌಲಿಂಗ್ಸ್ ಪ್ರ: ಬ್ಲೂಮ್ಸ್​ಬರಿ ಪಬ್ಲಿಷರ್ಸ್

ಪಂಚತಂತ್ರ ಕಥೆಗಳು, ಜಾತಕ ಕಥೆಗಳು, ಮಕ್ಕಳ ರಾಮಾಯಣ, ಸ್ಟಿಲ್ಟನ್ ಅಡ್ವೆಂಚರ್ಸ್ ಎಲ್ಲ ಓದಿ ಆದಮೇಲೆ ಒಂದಿನ ನಾನು ಅಮ್ಮನ ಜೊತೆ ಹ್ಯಾರಿ ಪಾಟರ್ ಸಿನಿಮಾ ನೋಡಿದೆ. ಅಲ್ಲಿ ಬರೋ ಮ್ಯಾಜಿಕ್ ಲೋಕ, ದೊಡ್ಡ ಹಾವು, ಡ್ರಾಗನ್, ಪುಟಾಣಿ ಡಾಬೀ… ಅಪ್ಪ ಅಮ್ಮನನ್ನ ಮಿಸ್ ಮಾಡ್ಕೊಳೋ ಹ್ಯಾರಿ, ಜೀನಿಯಸ್ ಹರ್ಮಾಯ್ನೀ, ರಾನೋಲ್ಡ್ ವೀಸ್ಲೀ, ಹ್ಯಾರೀಯ ಪೆಟ್ ಗೂಬೆ, ಹೆಡ್ ಮಾಸ್ಟರ್ ಡಂಬಲ್ಡೋರ್, ಜಯಂಟ್ ಹ್ಯಾಗ್ರಿಡ್ ಎಲ್ಲವನ್ನೂ ತುಂಬಾ ಇಷ್ಟಪಟ್ಟೆ. ಆ ಸ್ಕೇರೀ ಸ್ಕೇರೀ ವೋಲ್ಡೆಮೋರ್’ಟ್ ಬಂದಾಗ ಭಯ ಆಗಿ ನಾನಂತೂ ಕಣ್ಣು ಬ್ಲಿಂಕ್ ಕೂಡ ಮಾಡಿಲ್ಲ ಗೊತ್ತಾ? ಹೇಗೂ ನನಗೆ ಪುಸ್ತಕ ಓದೋದು ಇಷ್ಟ ಅಲ್ವಾ ಅಂತ ಅಮ್ಮ ಬೇಸಿಗೆ ರಜೆಗೆ ಹ್ಯಾರಿ ಪಾಟರ್ ಬುಕ್ ಸೆಟ್ ಕೊಡಿಸಿದಾಗ ಖುಷಿಯಿಂದ ನಿದ್ದೆಗೆಟ್ಟು ಎಲ್ಲವನ್ನೂ ಓದಿ ಮುಗಿಸಿದೆ. ಅಮ್ಮ ಕೂಡ ಹ್ಯಾರಿ ಪಾಟರ್ ಫ್ಯಾನ್ ಆಗಿರೋದ್ರಿಂದ ಅವಳ ಜೊತೆ ಕಥೆ, ಪಾತ್ರಗಳು, ಹಿನ್ನೆಲೆ ವಿಷಯ ಎಲ್ಲ ಮಾತಾಡೋದು ನಂಗೆ ತುಂಬಾ ಖುಷಿ. ಈ ಅಷ್ಟೂ ಪುಸ್ತಕಗಳೂ ಸಿನಿಮಾ ಆಗಿವೆ. ಆದ್ರೆ ಸಿನಿಮಾಗಿಂತ ನಂಗೆ ಪುಸ್ತಕಗಳೇ ಇಷ್ಟ ಆದವು. ಸಿನಿಮಾದಲ್ಲಿ ಇಲ್ಲದ/ತೆಗೆದು ಹಾಕಿದ ಎಷ್ಟೋ ವಿಷಯಗಳು ಘಟನೆಗಳು ಪುಸ್ತಕದಲ್ಲಿ ಓದೋದು ಚೆಂದದ ಅನುಭವ. ಬರೀ ಸಿನಿಮಾ ನೋಡಿದ ನನ್ನ ಸ್ನೇಹಿತರಿಗೆ ಅದರಲ್ಲಿಲ್ಲದ ಭಾಗವನ್ನು ಹೇಳೋದು ಮಜಾ ಖುಷಿ ಜೊತೆಗೇ, ಬುಕ್ ಓದುವಾಗ ನಾನೇ ಹ್ಯಾರಿ ಆಗಿ ಫೈಟ್ ಮಾಡ್ತಿರೋ ಫೀಲ್ ಬರುತ್ತೆ. And I love that very much.

ಕೃ: ಪರ್ಸಿ ಜಾಕ್ಸನ್ ಸೀರೀಸ್ ಲೇ: ರಿಕ್ ರಿಯಾರ್ಡನ್ ಪ್ರ: ಪಫಿನ್ ಬುಕ್ಸ್

ಪರ್ಸಿ ಜಾಕ್ಸನ್ ಯಾಕೆ ಇಷ್ಟ ಅಂದರೆ, ಪುರಾಣ ಕಥೆಗಳ ಥರದ ದೇವರು ಇದರಲ್ಲಿ ಬರ್ತಾರೆ. ಆದರೆ ನಮ್ಮ ಗಣೇಶ, ಕೃಷ್ಣ ಎಲ್ಲ ಅಲ್ಲ ಮತ್ತೆ. ಅವರು ಗ್ರೀಕ್ ಪುರಾಣದ ದೇವದೇವತೆಗಳು-ಝ್ಯೂಸ್, ಅಪೋಲೋ, ಏರಿಸ್, ಆರ್ಟೆಮಿಸ್ ಮುಂತಾದವರು. ಅವರಲ್ಲಿ ಪೊಸೈಡನ್ (ಸಮುದ್ರದೇವ) ಮತ್ತು ಸ್ಯಾಲಿ ಜಾಕ್ಸನ್ನ್ ಇವರಿಬ್ಬರ ಮಗ ಪರ್ಸಿ ಜಾಕ್ಸನ್ ಮನುಷ್ಯರಿಂದ, ಗ್ರೀಕ್ ದೇವತೆಗಳಿಂದ, ಯಾವುದ್ಯಾವುದೋ ರಾಕ್ಷಸರಿಂದ ಎಲ್ಲ ಏನೇನೋ ಚಾಲೆಂಜ್ ಎದುರಿಸಬೇಕಾಗುತ್ತೆ. ಅವನ ಸಹಾಯಕ್ಕೆ ಅವನ ಸ್ನೇಹಿತರಾದ ಗ್ರೂವರ್ ಮತ್ತೆ ಆನಬೆತ್ ಇರ್ತಾರೆ. ಅವರಿಲ್ಲದೆ ಇವನಿಗೆ ಏನೂ ಕೆಲಸ ಮಾಡೋದಕ್ಕೆ ಆಗ್ತಾ ಇರಲ್ಲ. ಈ ಸೀರೀಸ್ ಕೂಡ ಸಿನಿಮಾ ಆಗಿದೆ. ಆದ್ರೆ ಅದು ಪುಸ್ತಕದಷ್ಟು ನನಗೆ ಇಷ್ಟ ಆಗಲಿಲ್ಲ.

ಆರ್ಟೆಮಿಸ್ ಫೌಲ್ ಸೀರೀಸ್ (ವಿಜ್ಞಾನ ಆಧಾರಿತ ಮಕ್ಕಳ ಕಾದಂಬರಿ) ಲೇ : ಇಯಾನ್ ಕೋಲ್ಫರ್ ಪ್ರ : ಪಫಿನ್ ಬುಕ್ಸ್, ಹಾರ್ಪರ್ ಕೋಲಿನ್ಸ್

ಆರ್ಟೆಮಿಸ್ ಫೌಲ್- ಆನ್ಲೈನಲ್ಲಿ ಏನಾದರೂ ತಗೊಂಡಾಗ ನಮ್ಮ ಟೇಸ್ಟ್ ನೋಡ್ಕೊಂಡು‌ ಅದೇ ಥರದ್ದು ಇನ್ನೂ ಏನೇನೋ ತಗೊಳ್ಳಿ ಅಂತ ಸಜೆಸ್ಟ್ ಮಾಡ್ತಾವಲ್ಲ ಆ್ಯಪ್​ಗಳು, ಹಾಗೇ ಹ್ಯಾರಿ ಪಾಟರ್, ಪರ್ಸಿ ಜಾಕ್ಸನ್ ಓದಿದ್ಮೇಲೆ ಆರ್ಟೆಮಿಸ್ ಫೌಲ್ ಬಗ್ಗೆ ಗೊತ್ತಾಯ್ತು. ತುಂಬಾ ಆ್ಯಕ್ಷನ್, ಫೈಟ್, ಕಾಮಿಡಿ ಎಲ್ಲಾ ಇರೋ ಈ ಪುಸ್ತಕದಲ್ಲಿ ಹೀರೋ ಆರ್ಟೆಮಿಸ್ ನಿಜಕ್ಕೂ ಹೀರೋನೇ ಅಲ್ಲ. ಅವನು ಒಬ್ಬ ಕ್ರಿಮಿನಲ್ ಮಾಸ್ಟರ್​ಮೈಂಡ್. ಭೂಮಿ ಮೇಲಷ್ಟೇ ಅಲ್ಲ ಭೂಮಿಯಡಿಯೂ ಇನ್ನೊಂದು ಲೋಕ ಇಲ್ಲಿರುತ್ತೆ. ಅಲ್ಲಿ ಏನೇನೋ ಸಾಹಸಗಳು ನಡೀತಾ ಇರುತ್ತವೆ. ಮತ್ತೆ ಅದರಲ್ಲಿ ಆರ್ಟೆಮಿಸ್ ತನ್ನ ಬುದ್ಧಿಶಕ್ತಿಯಿಂದಾನೇ ಎಲ್ಲಾ ಕಷ್ಟಗಳನ್ನ ಎದುರಿಸ್ತಾನೆ. ಡ್ವಾರ್ಫ್ಗಳು, ಫೇರಿಗಳು ಎಲ್ಲಾ ಇದಾರೆ ಈ ಕಥೆಗಳಲ್ಲಿ. ಒಟ್ಟು ಎಂಟು (ಜೊತೆಗೆ ಹೊಸ ಎರಡು) ಸಕತ್ ಅಡ್ವೆಂಚರ್ ಇರೋ ಸೂಪರ್ ಪುಸ್ತಕ ಇದು. ಒಂದು, ಎರಡು, ಮೂರನೇ ಪುಸ್ತಕ ಸೇರಿಸಿ ಸಿನಿಮಾ ಕೂಡ ಆಗಿದೆ.

ಕೃ: ದಿ ಟೇಲ್ ಆಫ್ ಮ್ಯಾಜಿಕ್ (ಸಾಹಸಭರಿತ ಮಕ್ಕಳ ಕಾದಂಬರಿ) ಲೇ: ಕ್ರಿಸ್ ಕೋಲ್ಫರ್ ಪ್ರ: ಲಿಟಲ್, ಬ್ರೌನ್ ಎಂಡ್ ಕಂಪೆನಿ (ಹ್ಯಾಷೆಟ್ ಚಿಲ್ಡ್ರನ್ಸ್ ಗ್ರೂಪ್)

ದಿ ಟೇಲ್ ಆಫ್ ಮ್ಯಾಜಿಕ್ – ಫಿಕ್ಷನ್ ಅಂದ್ರೆ, ಮ್ಯಾಜಿಕ್ ಅಂದ್ರೆ ಬಹಳ ಇಷ್ಟಪಡೋ ನನಗೆ ಈ ಪುಸ್ತಕದ ಟೈಟಲ್ ನೋಡಿಯೇ ಇಷ್ಟ ಆಗಿತ್ತು. ಕಥೆ ಅಂತೂ ಸೂಪರ್. ಆ ಹುಡುಗಿ ಹೆಸರು ಬ್ರಿಸ್ಟಲ್ ಎವರ್ಗ್ರೀನ್ ಅಂತ. ಅವಳಿಗೂ ನನ್ನ ಥರಾನೇ ಓದೋದಂದ್ರೆ ಇಷ್ಟ. ಆದ್ರೆ ಅವಳಿರೋ ದೇಶದಲ್ಲಿ ಹುಡುಗಿಯರು ಓದಬಾರದು, ಸ್ಕೂಲಿಗೆ ಹೋಗಬಾರದು. ಮನೆಕೆಲಸ, ಅಡುಗೆ, ಗಂಡ ಮಕ್ಕಳನ್ನು ನೋಡಿಕೊಂಡಿರಬೇಕು ಅಂತಷ್ಟೇ ಇರುತ್ತೆ. ಆದ್ರೆ ಬ್ರಿಸ್ಟಲ್ ಸುಮ್ನಿರ್ತಾಳಾ? ಕದ್ದು ಮುಚ್ಚಿ ಅಣ್ಣನ ಪುಸ್ತಕ ಓದ್ತಾಯಿರ್ತಾಳೆ. ಅಣ್ಣನ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಿದಾಗ ಹತ್ತಿರದ ಲೈಬ್ರರಿಯಲ್ಲಿ ಕಸ ಗುಡಿಸೋ ಕೆಲಸಕ್ಕೆ ಸೇರಿ ಅಲ್ಲಿ ಗುಟ್ಟಾಗಿ ಪುಸ್ತಕ ಓದ್ತಾ ಇರ್ತಾಳೆ. ಆಗ ಒಂದಿನ ಅವಳಿಗೆ ಒಂದು ಮಾಂತ್ರಿಕ ಪುಸ್ತಕ ಸಿಗುತ್ತೆ. ಅಲ್ಲಿಂದ ಕಥೆ ಶುರು‌‌. ಮಾಟ ಮಂತ್ರ ಅಂದ್ರೆ ಇಷ್ಟ ಇಲ್ಲದ ಅಪ್ಪ ಅಮ್ಮ ಬ್ರಿಸ್ಟಲ್​ಗಳನ್ನು ಮನೆಯಿಂದ ಆಚೆ ಹಾಕ್ತಾರೆ. ಮುಂದೇನು ಅಂತ ಹೇಳಿಬಿಟ್ರೆ ಸ್ಪಾಯ್ಲರ್ ಆಗಲ್ವಾ? ಸ್ವಲ್ಪ ದೊಡ್ಡ ಪುಸ್ತಕವಾದರೂ ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

ಕೃ: ದಿ ಗ್ರೇವ್ಯಾರ್ಡ್ ಬುಕ್ (ಸಾಹಸಮಯ ಮಕ್ಕಳ ಕಾದಂಬರಿ) ಲೇ: ನೀಲ್ ಗೇಮನ್ ಪ್ರ: ಹಾರ್ಪರ್ ಕೋಲಿನ್ಸ್

ದಿ ಗ್ರೇವ್ಯಾರ್ಡ್ ಬುಕ್ ಅಂದ್ರೆ ಸ್ಮಶಾನದ ಪುಸ್ತಕ! ಹೆಸರೇ ಹೀಗಿದೆ, ಇದನ್ನ ಓದಿ ನೀನು ಹೆದರೋದು ಬೇಡ ಅಂತ ಅಮ್ಮ ಎಷ್ಟೇ ಹೇಳಿದ್ರೂ ಇದು ಮಕ್ಕಳ ಸಾಹಿತ್ಯ ವಿಭಾಗದಲ್ಲಿದೆ. ಹಾಗಾಗಿ ನಾನು ಓದಬಹುದು ಅಂತ ಜಗಳ ಮಾಡಿ ಖರೀದಿಸಿದ ಪುಸ್ತಕ ಇದು. ಒಂದು ಮನೆ ಇರುತ್ತೆ. ಯಾವುದೋ ದ್ವೇಷಕ್ಕೆ ಒಬ್ಬ ಕೆಟ್ಟ ಮನುಷ್ಯ ಮನೆಲಿರೋ ಎಲ್ಲರನ್ನೂ ಕೊಂದುಬಿಡ್ತಾನೆ. ಆದ್ರೆ ಒಂದು ಪುಟಾಣಿ ಮಗು ಮಾತ್ರ ಅಂಬೆಗಾಲಿಟ್ಕೊಂಡು ಮನೆಯಾಚೆ ಬಂದು ಕೊಲೆಗಾರನಿಂದ ತಪ್ಪಿಸ್ಕೊಳ್ಳತ್ತೆ. ಹಾಗೆ ತಪ್ಪಿಸ್ಕೊಂಡಿದ್ದು ಸೀದಾ ಹೋಗಿ ಯಾವುದೋ ಒಂದು ಹಳೇಕಾಲದ ಗ್ರೇವ್ಯಾರ್ಡ್ ಸೇರುತ್ತೆ. ಅಲ್ಲಿರೋ ಸಾವಿರಾರು ವರ್ಷ ಹಳೇ ಭೂತಗಳೆಲ್ಲ ಈ ಮುದ್ದು ಮಗುವನ್ನ ನೋಡಿ ಪ್ರೀತಿ ಬಂದು ಅದನ್ನ ಸಾಕಿ ದೊಡ್ಡ ಹುಡುಗನನ್ನಾಗಿ ಮಾಡ್ತಾವೆ. ನಂತರ ಮಿಸ್ಟರ್ ಅಂಡ್ ಮಿಸೆಸ್ ಓವಿನ್ಸ್ ದಂಪತಿ ಆ ಮಗುವನ್ನ ದತ್ತು ತಗೊಂಡು ಸಾಕ್ತಾರೆ. ಆ ಮಗುವಿನ ಹೆಸರು ‘ನೋಬಡಿ’ ಅಥವಾ ‘ಬಾಡ್ ಓವಿನ್ಸ್’. ಬಾಡ್ ಮತ್ತು ಭೂತಗಳ ಗೆಳೆತನ, ಜೀವಂತ ಮನುಷ್ಯರ ಜೊತೆಗಿನ ಗೆಳೆತನಕ್ಕಿಂತ ಚೆನ್ನಾಗಿರುತ್ತದೆ. ಕಡೆಗೊಮ್ಮೆ ಬಾಡ್ ಅವನ ಅಪ್ಪ ಅಮ್ಮನನ್ನು ಕೊಂದ ಕೆಟ್ಟ ಮನುಷ್ಯನನ್ನು ನೋಡುತ್ತಾನೆ. ಆಮೇಲೇನಾಗುತ್ತೆ ಅನ್ನೋದು ನಾ ಹೇಳಲ್ಲ. ಕಥೆ ಮಧ್ಯದಲ್ಲಿ ಬಾಡ್ಗೆ ವಿಚಿತ್ರ ಸ್ನೇಹಿತರು ಸಿಗ್ತಾರೆ. ಭೂತಗಳ ಜೊತೆಗೆ ಇದ್ದೂ ಇದ್ದೂ ತಾನೂ ಅದೃಶ್ಯ ಆಗೋ, ಗೋಡೆಗಳ ಮೂಲಕ ಸಂಚರಿಸೋ ಶಕ್ತಿ ಕೂಡ ಪಡ್ಕೊಳ್ತಾನೆ. ಓದೋಕೆ ಸ್ವಲ್ಪವೂ ಭಯ ಆಗಲ್ಲ, ಗಮ್ಮತ್ತಾಗಿ ಓದಿ ಖುಷಿಪಡಬಹುದು. ಥ್ರಿಲ್ ಆಗೋದು ಖಂಡಿತ.

ಓದು ಮಗು ಓದು: ಪುಸ್ತಕವನ್ನು ಹರಿದು ಹಾಳು ಮಾಡಲಿ ಬಿಡಿ ಅದಕ್ಕೇನು?

Published On - 7:13 pm, Mon, 11 January 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ