ಎಸ್​ಪಿಬಿ ಆರೋಗ್ಯ ಸ್ಥಿರ, ವೆಂಟಿಲೇಟರ್ ವ್ಯವಸ್ಥೆ ಮೂಲಕ ಚಿಕಿತ್ಸೆ ಮುಂದುವರಿಕೆ

|

Updated on: Aug 22, 2020 | 7:51 PM

ಬಹುಭಾಷಾ ಗಾಯಕ ಎಸ್.​ಪಿ.ಬಾಲಸುಬ್ರಹ್ಮಣ್ಯಂ ಅವರ ಚಿಕಿತ್ಸೆ ಚೆನೈ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದಿದ್ದು ಅವರನ್ನು ಇನ್ನೂ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಿ ಈಸಿಹೆಚ್​ಎಮ್​ಒ ಸಪೋರ್ಟ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬಾಲು ಅವರ ಆರೋಗ್ಯ ಸ್ಥಿರವಾಗಿದೆ. ‘‘ನಮ್ಮ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞರು ಅವರ ಆರೋಗ್ಯವನ್ನು ಸತತವಾಗಿ ಮಾನಿಟರ್ ಮಾಡುತ್ತಿದ್ದು ಅವರ ದೇಹಸ್ಥಿತಿ ಹಾಗೂ ಸುಧಾರಣೆ ಬಗ್ಗೆ ಕುಟುಂಬಕ್ಕೆ ಮಾಹಿತಿಯನ್ನು ಅಪ್​ಡೇಟ್ ಮಾಡಲಾಗುತ್ತಿದೆ,’’ ಎಂದು ಬುಲೆಟಿನ್​ನಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ಬಾಲು ಅವರ ಮಗ […]

ಎಸ್​ಪಿಬಿ ಆರೋಗ್ಯ ಸ್ಥಿರ, ವೆಂಟಿಲೇಟರ್ ವ್ಯವಸ್ಥೆ ಮೂಲಕ ಚಿಕಿತ್ಸೆ ಮುಂದುವರಿಕೆ
Follow us on

ಬಹುಭಾಷಾ ಗಾಯಕ ಎಸ್.​ಪಿ.ಬಾಲಸುಬ್ರಹ್ಮಣ್ಯಂ ಅವರ ಚಿಕಿತ್ಸೆ ಚೆನೈ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದಿದ್ದು ಅವರನ್ನು ಇನ್ನೂ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಿ ಈಸಿಹೆಚ್​ಎಮ್​ಒ ಸಪೋರ್ಟ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬಾಲು ಅವರ ಆರೋಗ್ಯ ಸ್ಥಿರವಾಗಿದೆ. ‘‘ನಮ್ಮ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞರು ಅವರ ಆರೋಗ್ಯವನ್ನು ಸತತವಾಗಿ ಮಾನಿಟರ್ ಮಾಡುತ್ತಿದ್ದು ಅವರ ದೇಹಸ್ಥಿತಿ ಹಾಗೂ ಸುಧಾರಣೆ ಬಗ್ಗೆ ಕುಟುಂಬಕ್ಕೆ ಮಾಹಿತಿಯನ್ನು ಅಪ್​ಡೇಟ್ ಮಾಡಲಾಗುತ್ತಿದೆ,’’ ಎಂದು ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಬಾಲು ಅವರ ಮಗ ಚರಣ್, ವಿಡಿಯೊ ಸಂದೇಶವೊಂದರ ಮೂಲಕ ತಂದೆಯ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

‘‘ವೈದ್ಯರು ಬುಲೆಟಿನ್​ನಲ್ಲಿ ‘ಚಿಂತಾಜನಕ’ ಎಂಬ ಪದವನ್ನು ಬಳಸಿಲ್ಲ. ಅದರರ್ಥ ತಂದೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಅಂತಲ್ಲ. ಅಂದರೆ, ಅವರ ಪ್ರಮುಖ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ, ಯಾವುದೇ ತೆರನಾದ ಏರಿಳಿತಗಳು ಅವರ ಆರೋಗ್ಯದಲ್ಲಿ ಕಾಣುತ್ತಿಲ್ಲ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ತಂಡದ ಮೇಲೆ ನಮ್ಮ ಕುಟುಂಬಕ್ಕೆ ಸಂಪೂರ್ಣ ಭರವಸೆ ಇದೆ. ಅವರಿಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ,’’ ಎಂದು ಚರಣ್ ಹೇಳಿದ್ದಾರೆ.