ಮಧ್ಯವರ್ತಿಗಳ ಆಟಕ್ಕೆ ಬ್ರೇಕ್​.. ಕೊಪ್ಪಳದಲ್ಲಿ ಶುರುವಾಗುತ್ತಿದೆ ನೂತನ ರೈತ ಮಾರುಕಟ್ಟೆ!

ರಾಸಾಯನಿಕಗಳಿಂದ ತುಂಬಿದ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿರುವ ಈ ಕಾಲದಲ್ಲಿ ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು.

ಮಧ್ಯವರ್ತಿಗಳ ಆಟಕ್ಕೆ ಬ್ರೇಕ್​.. ಕೊಪ್ಪಳದಲ್ಲಿ ಶುರುವಾಗುತ್ತಿದೆ ನೂತನ ರೈತ ಮಾರುಕಟ್ಟೆ!
ಇದೇ ಮಾದರಿಯಲ್ಲಿ ಸಿದ್ಧಗೊಳ್ಳಲಿದೆ ರೈತ ಮಾರುಕಟ್ಟೆ
Follow us
Skanda
|

Updated on:Jan 23, 2021 | 3:36 PM

ಕೊಪ್ಪಳ: ಕೊಪ್ಪಳದಲ್ಲಿ ರೈತರಿಗಾಗಿ ವಿಶೇಷ ಮಾರುಕಟ್ಟೆಯೊಂದು ಶುರುವಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶದಿಂದ ಆರಂಭವಾಗುತ್ತಿರುವ ರೈತ ಮಾರುಕಟ್ಟೆಗೆ ಜನವರಿ 26 ರಂದು ಚಾಲನೆ ದೊರೆಯಲಿದೆ. ರೈತ ಹಾಗೂ ಗ್ರಾಹಕನ ನಡುವೆ ನೇರ ವ್ಯಾಪಾರ ವಹಿವಾಟು ಏರ್ಪಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೂಪುಗೊಂಡಿರುವ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಮೂಲಕ ಚಾಲನೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಗುರುವಾರ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾರುಕಟ್ಟೆ ಏರ್ಪಡಿಸಲು ನಿರ್ಧರಿಸಲಾಗಿದ್ದು, ಸಾವಯವ, ಶುದ್ಧ ಉತ್ಪನ್ನಗಳನ್ನ ರೈತ ನಿಗದಿಪಡಿಸಿದ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಬಿಸಿಲು, ಮಳೆ, ಚಳಿ ಎನ್ನದೇ ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗದೆ ಸಂಕಷ್ಟ ಎದುರಿಸುವಂತ ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಸಮಾನ ಮನಸ್ಕರ ಬಳಗ ಜಾರಿಗೆ ತರಲು ಉದ್ದೇಶಿಸಿರುವ ಈ ಯೋಜನೆ ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯ ಸಮಾನ ಮನಸ್ಕರ ಬಳಗ ಇತ್ತೀಚೆಗೆ ಒಂದೆಡೆ ಸೇರಿ ಮಣ್ಣಿನೊಂದಿಗೆ ಮಾತುಕತೆ ಎಂಬ ಪರಿಕಲ್ಪನೆಯಡಿ ಪ್ರತಿ ವಾರ ರೈತರ ಜಮೀನಿಗೆ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಈ ವೇಳೆ ರೈತರ ಮಾರುಕಟ್ಟೆ ಸ್ಥಾಪನೆಯ ವಿಚಾರವು ಪ್ರಸ್ತಾಪಕ್ಕೆ ಬಂದಿತ್ತು. ಲಗುಬಗೆಯಿಂದ ಅದನ್ನು ಈಡೇರಿಸಲು ಹೊರಟ ತಂಡ ಇದೇ ಜ. 26 ರಂದು ರೈತರ ಮಾರುಕಟ್ಟೆ ಲೋಕಾರ್ಪಣೆ ಮಾಡಲು ಸಿದ್ದತೆ ನಡೆಸಿದೆ.

ರಾಸಾಯನಿಕಗಳಿಂದ ತುಂಬಿದ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿರುವ ಈ ಕಾಲದಲ್ಲಿ ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು. ವಿಷಮುಕ್ತ ಆಹಾರವನ್ನು ದೂರ ಮಾಡಿ, ಶುದ್ಧತೆಯಿಂದ ಕೂಡಿರುವ ಪೌಷ್ಠಿಕ ಆಹಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಮಾನ ಮನಸ್ಕರ ಬಳಗ ಹೊಸ ಪರಿಕಲ್ಪನೆಯಡಿ ರೈತರು ಹಾಗೂ ಗ್ರಾಹಕರ ನಡುವೆ ಬಾಂಧವ್ಯ ಬೆಳೆಸಲು ರೈತ ಮಾರುಕಟ್ಟೆ ಸ್ಥಾಪನೆ ಮಾಡಿದೆ ಎಂದು ಬಳಗದ ಸದಸ್ಯರು ತಿಳಿಸಿದ್ದಾರೆ.

ಕೊಪ್ಪಳ ರೈತ ಮಾರುಕಟ್ಟೆ ಸಮಿತಿ ಈಗಾಗಲೇ ನೋಂದಣಿಯಾಗಿದ್ದು, ಮಾರುಕಟ್ಟೆಯ ನಿರ್ವಹಣೆ ನೋಡಿಕೊಳ್ಳಲಿದೆ. ಇದು ಲಾಭದಾಯಕ ಉದ್ದೇಶಕ್ಕಾಗಿ ಸ್ಥಾಪಿತವಾಗದೆ ರೈತನ ಉತ್ಪನ್ನದ ಜೊತೆಗೆ ಗ್ರಾಹಕರಿಗೆ ಶುದ್ಧ ಉತ್ಪನ್ನ ಸಿಗಬೇಕೆನ್ನುವ ಧ್ಯೇಯವನ್ನಿಟ್ಟುಕೊಂಡಿದೆ. ವಿಜ್ಞಾನಿಗಳು, ಕೃಷಿ ತಜ್ಞರು ಹಾಗೂ ಅನುಭವಿ ರೈತರ ಸಲಹೆ, ಮಾರ್ಗದರ್ಶನದ ಮೇರೆಗೆ ರೈತರಿಂದಲೇ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ.

ಇಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ, ಕಮಿಷನ್ ಆಟವೂ ನಡೆಯಲ್ಲ. ಗ್ರಾಹಕನಿಂದ ಬಂದ ಎಲ್ಲ ಹಣವೂ ನೇರ ರೈತರಿಗೆ ಸಿಗಲಿದ್ದು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ರೈತ ಮಾರುಕಟ್ಟೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂಬಂಧಿಸಿದವರು ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ 20 ರೈತರು ನೋಂದಣಿ ಮಣ್ಣಿನೊಂದಿಗೆ ಮಾತುಕತೆಯಲ್ಲಿ ಪಾಲ್ಗೊಂಡ ರೈತ ಸಮೂಹದಲ್ಲಿ 20 ರೈತರು ಈಗಾಗಲೇ ರೈತ ಮಾರುಕಟ್ಟೆಯಲ್ಲಿ ಶುದ್ಧ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದೆ ಬಂದು ಸಮಿತಿಯಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ. ತರಕಾರಿ, ಸೊಪ್ಪು, ಹಣ್ಣು, ದೇಸಿ ತಳಿಯ ಅಕ್ಕಿ, ಸಿರಿಧಾನ್ಯ, ಬೇಳೆಕಾಳು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕೇವಲ ಸಾವಯವ ಉತ್ಪನ್ನಗಳಿಗಷ್ಟೇ ಅವಕಾಶವಿರುವುದರಿಂದ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಕೊಪ್ಪಳದಲ್ಲಿ ಮೊದಲ ಬಾರಿಗೆ ರೈತರ ಮಾರುಕಟ್ಟೆ ಸ್ಥಾಪನೆಯಾಗುತ್ತಿರುವುದು ಸಂತಸ ಹಾಗೂ ಒಳ್ಳೆಯ ಬೆಳವಣಿಗೆಯಾಗಿದೆ. ರೈತನ ಶುದ್ಧ ಉತ್ಪನ್ನವು ನೇರ ಗ್ರಾಹಕನಿಗೆ ಉತ್ತಮ ದರದಲ್ಲಿ ಸಿಗಲಿದೆ. ಇದರಿಂದ ರೈತರಿಗೂ ಬೆಲೆ ಸಿಗಲಿದೆ. ಗ್ರಾಹಕನಿಗೆ ಶುದ್ಧ ಆಹಾರವೂ ಸಿಗಲಿದೆ. ಕೆಲ ಹಿತಚಿಂತಕರು ಸೇರಿ ಈ ಮಾರುಕಟ್ಟೆ ಸ್ಥಾಪನೆ ಮಾಡಿರುವುದು ಖುಷಿ ತರಿಸಿದೆ. -ಡಾ.ಬದರಿ ಪ್ರಸಾದ, ಕೃಷಿ ವಿಜ್ಞಾನಿ

ಮಣ್ಣಿನೊಂದಿಗೆ ಮಾತುಕತೆಯ ಹೊಸ ಪರಿಕಲ್ಪನೆಯಡಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ ರೈತರಿಗೆ ಶುದ್ಧ ಉತ್ಪನ್ನವು ಕೈ ಸೇರಲಿ ಎಂಬ ಉದ್ದೇಶದಿಂದ ನಮ್ಮ ಸಮಿತಿಯು ರೈತರ ಮಾರುಕಟ್ಟೆ ಸ್ಥಾಪನೆ ಮಾಡಿದೆ. ಇದರಲ್ಲಿ ಸಾವಯವ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡಲಾಗುವುದು. -ಶಂಕರರಡ್ಡಿ ಕಾಟ್ರಳ್ಳಿ, ಕೊಪ್ಪಳ ರೈತ ಮಾರುಕಟ್ಟೆ ಸಮಿತಿ ಅಧ್ಯಕ್ಷ

ಒಟ್ಟಿನಲ್ಲಿ ಮಣ್ಣಿನೊಂದಿಗೆ ಮಾತುಕತೆ ನಡೆಸುವ ವೇಳೆ ಇಂತಹ ಆಲೋಚನೆ ಬಂದು ರೈತ-ಗ್ರಾಹಕರಿಗೆ ನೆರವಾಗುವಂತಹ ರೈತರ ಮಾರುಕಟ್ಟೆಯು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾಗುತ್ತಿರುವುದು ನಿಜಕ್ಕೂ ಅನ್ನದಾತ ವಲಯಕ್ಕೆ ಸಂತಸ ತರಿಸಿದೆ. ಅಂದುಕೊಂಡಂತೆ ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ, ಗ್ರಾಹಕನಿಗೆ ಶುದ್ಧ ಉತ್ಪನ್ನ ದೊರೆತರೆ ರೈತರ ಮಾರುಕಟ್ಟೆ ಸ್ಥಾಪನೆ ಮಾಡಿದ್ದು ನಿಜಕ್ಕೂ ಸಾರ್ಥಕವಾಗಲಿದೆ.

Published On - 3:36 pm, Sat, 23 January 21

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ