
ನೀವು ದುಡಿದ ಹಣವನ್ನು ಮೊದಲು ಉಳಿತಾಯ ಮಾಡಿ, ಬಳಿಕ ಖರ್ಚು ಮಾಡಿ ಎಂದು ಶೇರು ಮಾರುಕಟ್ಟೆ ದಿಗ್ಗಜ ವರೇನ್ ಬಫೆಟ್ ಅವರು ಹೇಳಿರುವರು. ಆದರೆ ನಾವೆಲ್ಲರೂ ಮಾಡುವುದು ಇದರ ತದ್ವಿರುದ್ಧ. ಬಂದ ತಿಂಗಳ ಸಂಬಳವನ್ನು ಮೊದಲು ಖರ್ಚು ಮಾಡಿಕೊಂಡು, ಬಳಿಕ ಉಳಿದಿರುವುದನ್ನು ಉಳಿತಾಯ ಮಾಡುತ್ತೇವೆ. ಇನ್ನು ಕೆಲವು ಸಲ ಈ ಉಳಿತಾಯದ ಖಾತೆಗೆ ಹಣವೇ ಬೀಳುವುದಿಲ್ಲ.
ಹಿಂದೆ ಮನೆಯಲ್ಲಿದ್ದ ಮಹಿಳೆಯರು ತಮ್ಮ ಪತಿ ಅಥವಾ ಮನೆಯವರು ನೀಡಿದ ಹಣವನ್ನೇ ಉಳಿತಾಯ ಮಾಡುತ್ತಿದ್ದರು. ಆದರೆ ಇಂದು ಆಧುನಿಕ ಮಹಿಳೆಯು ಉದ್ಯೋಗಕ್ಕೆ ಹೋದರೂ ಉಳಿತಾಯ ತುಂಬಾ ಕಡಿಮೆ ಎನ್ನಬಹುದು. ಉದ್ಯೋಗಸ್ಥ ತಾಯಂದಿರಿಗೆ ಹಣ ಉಳಿತಾಯ ಮಾಡಲು ನಾವು ಏಳು ಸೂತ್ರಗಳನ್ನು ಹೇಳಿಕೊಡಲಿದ್ದೇವೆ.
ಹಣ ಎಲ್ಲಿ ಖರ್ಚಾಗುತ್ತೆ ಎಂದು ತಿಳಿದುಕೊಳ್ಳಿ:
ಇಂದಿನ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಯಾವುದೇ ಆಪ್ಗೆ ಜೋಡಿಸಬಹುದು. ಉದಾಹರಣೆಗೆ ಪರ್ಸನಲ್ ಕ್ಯಾಪಿಟಲ್, ಮಿಂಟ್. ಕಾಮ್ ಮತ್ತು ವೈಎನ್ಎಬಿಯಂತಹ ಕೆಲವೊಂದು ಆಪ್ಗಳು ನೀವು ಮಾಡಿದಂತಹ ಖರ್ಚು ಮತ್ತು ವೆಚ್ಚಗಳ ಬಗ್ಗೆ ದಾಖಲೆ ಇಟ್ಟುಕೊಳ್ಳುವುದು. ಯಾವುದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂದು ತಿಳಿದರೆ ಆಗ ನಿಮಗೆ ಖಂಡಿತವಾಗಿಯೂ ಜ್ಞಾನೋದಯವಾಗುವುದು. ಅನಗತ್ಯವಾಗಿ ಆಗುವಂತಹ ಖರ್ಚುಗಳ ಮೇಲೆ ನಿಗಾ ವಹಿಸಿ, ಅದನ್ನು ಕಡಿಮೆ ಮಾಡಬೇಕು. ಇದರಿಂದ ಕುಟುಂಬ ಆರ್ಥಿಕ ಗುರಿಗಳನ್ನು ಹೇಗೆ ಮುಟ್ಟುವುದು ಎಂದು ತಿಳಿದುಬರುವುದು.
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ:
ಹಣ ಎಲ್ಲಿ ಸೋರಿಹೋಗುತ್ತಿದೆ ಎಂದು ನಿಮಗೆ ಮನವರಿಕೆ ಆದ ಬಳಿಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಉದಾಹರಣೆ ಜಿಮ್ಗೆ ಹೋಗಿ ವ್ಯಾಯಾಮ ಮಾಡುವ ಬದಲು ಮನೆಯಲ್ಲೇ ಸ್ವಲ್ಪ ವ್ಯಾಯಾಮ ಅಥವಾ ಯೋಗ ಮಾಡಬಹುದು. ಬ್ಯೂಟಿ ಸಲೂನ್ಗೆ ತಿಂಗಳಲ್ಲಿ ನಾಲ್ಕೈದು ಸಲ ಹೋಗುವ ಬದಲು ಒಂದೇ ಸಲ ಹೋಗಬಹುದು. ಕೇಬಲ್, ಮ್ಯಾಗಜಿನ್ ಮತ್ತು ಡಿಜಿಟಲ್ ಸಬ್ ಸ್ಕ್ರಿಪ್ಶನ್ ಮತ್ತು ಯಾವಾಗಲೂ ಹೊರಗಡೆ ಹೋಗಿ ಊಟ ಮಾಡುವುದನ್ನು ನಿಲ್ಲಿಸಬಹುದು. ಕೆಲವನ್ನು ನೀವು ತೆಗೆಯಬಹುದು ಅಥವಾ ಮನೆಯವರಿಗೆ ಇದನ್ನು ತಗ್ಗಿಸುವ ಕೆಲಸ ನೀಡಬಹುದು.
ಮನೆಯ ಸದಸ್ಯರ ಖರ್ಚು ನಿಷೇಧಿಸಿ:
ಹೆಚ್ಚಾಗಿ ಆನ್ಲೈನ್ನಲ್ಲಿ ಶಾಪಿಂಗ್ ಮಾಡಿ:
ನೀವು ಹಣ ಖರ್ಚಾಗುವುದನ್ನು ಕಡಿಮೆ ಮಾಡಬೇಕು ಎಂದಿದ್ದರೆ ಆಗ ನೀವು ಮೊದಲಿಗೆ ಆನ್ ಲೈನ್ನಲ್ಲಿ ಶಾಪಿಂಗ್ ಮಾಡಬೇಕು. ನೀವು ಇಲ್ಲಿ ಹಣ ಖರ್ಚು ಮಾಡಿದರೂ ಆಗ ತುಂಬಾ ನಿಗದಿತ ಮತ್ತು ಲೆಕ್ಕಾಚಾರದ್ದಾಗಿರುವುದು. ಆನ್ ಲೈನ್ನಲ್ಲಿ ನೀವು ಕೆಲವೊಂದು ಕೂಪನ್ಗಳನ್ನು ಬಳಸಬಹುದು ಮತ್ತು ನಿಮ್ಮ ಬಜೆಟ್ ಮೀರದಂತೆ ತಡೆಯಬಹುದು. ನಿಮ್ಮ ಬಜೆಟ್ ಗಿಂತ ಹೆಚ್ಚು ಹಣವಾದರೆ ಆಗ ನೀವು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಯಾಕೆಂದರೆ ನೀವು ಇಲ್ಲಿ ಕೆಲವೊಂದು ವಸ್ತುಗಳನ್ನು ಕಡಿತ ಮಾಡಿ ನಿಮ್ಮ ಬಜೆಟ್ಗೆ ಸರಿಹೊಂದಿಸಬಹುದು.
ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೀರಾ?
ಕ್ರೆಡಿಟ್ ಕಾರ್ಡ್ ರಿವಾರ್ಡ್ಗಳನ್ನು ಇದಕ್ಕೆ ಬಳಕೆ ಮಾಡಬಹುದು
* ಆಹಾರ ಸಾಮಗ್ರಿಗಳು
* ಗ್ಯಾಸ್, ಆನ್ ಲೈನ್ ಶಾಪಿಂಗ್, ಪ್ರವಾಸ, ಮೆಡಿಕಲ್ ಅಥವಾ ಮನೆ ರಿಪೇರಿ ಖರ್ಚಿಗೆ ಇದನ್ನು ಬಳಕೆ ಮಾಡಬಹುದು.
* ವಾಹನ ಇಂಧನ ಖರ್ಚು: ಕೆಲವೊಂದು ಕಾರ್ಡ್ಗಳಲ್ಲಿ ಇಂಧನಕ್ಕಾಗಿ ಹಣ ವ್ಯಯಿಸಿದರೆ ಆಗ ನಿಮಗೆ ಶೇ. 1 ಅಥವಾ 2ರಷ್ಟು ನಗದು ವಾಪಸಾತಿ ಸಿಗುವುದು.
* ರೆಸ್ಟೋರೆಂಟ್ ನಲ್ಲಿ ಊಟ: ಕೆಲವೊಂದು ಕಾರ್ಡ್ ಗಳಲ್ಲಿ ಹೊರಗಡೆ ಊಟ ಮಾಡುವುದಕ್ಕೆ ಮತ್ತು ಸಿನಿಮಾ ನೋಡಲು ಶೇ.4ರಷ್ಟು ನಗದು ವಾಪಸಾತಿ ಸಿಗುವುದು. ಶೇ.2ರಷ್ಟು ಆಹಾರ ಸಾಮಗ್ರಿ ಖರೀದಿ ಮತ್ತು ಶೇ.1ರಷ್ಟು ಇತರ ಖರ್ಚಿಗೆ ಸಿಗುವುದು.
Published On - 6:56 am, Mon, 11 November 19