ಸೀರಮ್ ಎಂದರೇನು? ತ್ವಚೆಯ ಅಂದಕ್ಕೆ ಸೀರಮ್ ಹೇಗೆ ಉಪಯುಕ್ತ?

|

Updated on: Oct 10, 2019 | 12:14 PM

ಸೀರಮ್ ಒಂದು ತೈಲವನ್ನು ಹೋಲುವ ದ್ರವ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಪೆಪ್ಟೈಡ್ ಗಳಂತಹ ಸಕ್ರಿಯ ಅಂಶಗಳು ತ್ವಚೆಯನ್ನು ಕಾಪಾಡುತ್ತವೆ. ಇದು ತ್ವಚೆಗೆ ಯೌವನವನ್ನು ನೀಡುತ್ತದೆ.ಜಸ್ಟ್ 2 ಹನಿ ಇದ್ರೆ ಸಾಕು.. ಮುಖದ ಪೂರ್ತಿಭಾಗಕ್ಕೆ ಹಚ್ಚಿಕೊಳ್ಳಬಹುದು. ಇದು ದ್ರವ ರೂಪದಲ್ಲಿ ಇರುವುದರಿಂದ ಇದು ಚರ್ಮದ ಆಳದವರೆಗೆ ತಲುಪಿ ಪೋಷಣೆಯನ್ನು ನೀಡುವುದು. ಸೀರಮ್ ಬಳಸುವುದರಿಂದ ಮೊಡವೆ, ಒಣ ಚರ್ಮ, ಸುಕ್ಕು ಹಾಗೂ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಹುಬೇಗ ನಿವಾರಣೆಯಾಗುವುದು. ಪ್ರಾರಂಭದಲ್ಲಿ ಸೀರಮ್ ದ್ರವರೂಪದಲ್ಲಿ ಮಾತ್ರ ದೊರೆಯುತ್ತಿತ್ತು. ಇದೀಗ ಮಾರುಕಟ್ಟೆಯಲ್ಲಿ […]

ಸೀರಮ್ ಎಂದರೇನು? ತ್ವಚೆಯ ಅಂದಕ್ಕೆ ಸೀರಮ್ ಹೇಗೆ ಉಪಯುಕ್ತ?
Follow us on

ಸೀರಮ್ ಒಂದು ತೈಲವನ್ನು ಹೋಲುವ ದ್ರವ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಪೆಪ್ಟೈಡ್ ಗಳಂತಹ ಸಕ್ರಿಯ ಅಂಶಗಳು ತ್ವಚೆಯನ್ನು ಕಾಪಾಡುತ್ತವೆ. ಇದು ತ್ವಚೆಗೆ ಯೌವನವನ್ನು ನೀಡುತ್ತದೆ.ಜಸ್ಟ್ 2 ಹನಿ ಇದ್ರೆ ಸಾಕು.. ಮುಖದ ಪೂರ್ತಿಭಾಗಕ್ಕೆ ಹಚ್ಚಿಕೊಳ್ಳಬಹುದು. ಇದು ದ್ರವ ರೂಪದಲ್ಲಿ ಇರುವುದರಿಂದ ಇದು ಚರ್ಮದ ಆಳದವರೆಗೆ ತಲುಪಿ ಪೋಷಣೆಯನ್ನು ನೀಡುವುದು. ಸೀರಮ್ ಬಳಸುವುದರಿಂದ ಮೊಡವೆ, ಒಣ ಚರ್ಮ, ಸುಕ್ಕು ಹಾಗೂ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಹುಬೇಗ ನಿವಾರಣೆಯಾಗುವುದು. ಪ್ರಾರಂಭದಲ್ಲಿ ಸೀರಮ್ ದ್ರವರೂಪದಲ್ಲಿ ಮಾತ್ರ ದೊರೆಯುತ್ತಿತ್ತು. ಇದೀಗ ಮಾರುಕಟ್ಟೆಯಲ್ಲಿ ತೈಲ ಆಧಾರಿತ ಸೀರಮ್ ಗಳನ್ನು ಸಹ ಕಾಣಬಹುದು. ಸೀರಮ್ ನ ಮತ್ತೊಂದು ವಿಶೇಷತೆ ಎಂದರೆ ಒಣ ಮತ್ತು ತೈಲಯುಕ್ತ ಚರ್ಮದವರು ಸಹ ಬಳಸಬಹುದು.

ಸೀರಮ್ ನಿಂದ ಕೆಲವು ಅದ್ಭುತ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಇದು ಚರ್ಮ ಸುಕ್ಕುಗಟ್ಟುವುದು ಮತ್ತು ನೆರಿಗೆಗಳಿಂದ ಕೂಡಿರುವುದರ ವಿರುದ್ಧ ಹೋರಾಡುತ್ತದೆ. ಚರ್ಮಕ್ಕೆ ಕಾಂತಿ ಮತ್ತು ಹೊಳಪನ್ನು ನೀಡುತ್ತದೆ. ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೂರ್ಯನ ಕಿರಣದಿಂದ ಉಂಟಾದ ಮಂಕು ತ್ವಚೆಯನ್ನು ಆಕರ್ಷಣೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಚರ್ಮವನ್ನು ಪುನರ್ ಯೌವನಗೊಳಿಸುವಂತೆ ಮಾಡುತ್ತದೆ.

ಸೀರಮ್ ಅನ್ನು ನೀವು ನಿಮ್ಮ ತ್ವಚೆಯ ಮೇಲೆ ಬಳಸುವಾಗ ಐದು ಕ್ರಮವನ್ನು ಅನುಸರಿಸಬೇಕು. ಆಗ ಅದು ಸೂಕ್ತ ರೀತಿಯಲ್ಲಿ ಚರ್ಮದ ರಕ್ಷಣೆ ನಡೆಸುವುದು. ಮೊದಲು ನಿಮ್ಮ ಮುಖ ಅಥವಾ ಚರ್ಮವನ್ನು ಮೊದಲು ಸ್ವಚ್ಛಗೊಳಿಸಿ, ಟೋನ್ ಮಾಡಿ. ನಂತರ ಸಾರಭೂತ ತೈಲ ಅಥವಾ ಎಸೆನ್ಸನ್ನು ಹಚ್ಚಿ. ಅಂಗೈಯಲ್ಲಿ ಸ್ವಲ್ಪ ಸೀರಮ್ ಅನ್ನು ತೆಗೆದುಕೊಂಡು, ಮುಖದ ಮೇಲೆ ಒಂದೊಂದು ಬೊಟ್ಟು ಇಟ್ಟಂತೆ ಅಪ್ಲೈ ಮಾಡಿ. ನಂತರ ನಿಮ್ಮ ತುದಿ ಬೆರಳುಗಳಿಂದ ಮುಖದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನೀವು ನಿಮ್ಮ ಸ್ಕಿನ್ ಕೇರ್ ಉತ್ಪನ್ನಗಳ ಜೊತೆಗೆ ಇದನ್ನು ಸೇರಿಸಬಹುದು.

ಸೀರಮ್ ಅನ್ನು ದಿನಕ್ಕೆ ಎರಡು ಬಾರಿ ಬಳಸಬಹುದು. ಮುಂಜಾನೆಯ ಸಮಯದಲ್ಲಿ ಮತ್ತು ರಾತ್ರಿ ಮಲಗುವ ಮುನ್ನ. ಅತಿಯಾಗಿ ಪದೇ ಪದೇ ಚರ್ಮಕ್ಕೆ ಅನ್ವಯಿಸಿಕೊಳ್ಳುವುದು ಸಹ ಉತ್ತಮವಲ್ಲ.

ನಡುವಿನ ವ್ಯತ್ಯಾಸ ಸೀರಮ್ ಮತ್ತು ಎಸೆನ್ಸ್ ಅನ್ನು ತುಲನೆ ಮಾಡಿದರೆ ಎಸೆನ್ಸ್ ಕಡಿಮೆ ಪ್ರಮಾಣದಲ್ಲಿ ಕೇಂದ್ರೀಕೃತವಾಗಿರುತ್ತದೆ. ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು. ಸೀರಮ್ ಚರ್ಮಕ್ಕೆ ಪುನಃಶ್ಚೇತನ ಹಾಗೂ ಉಲ್ಲಾಸವನ್ನು ನೀಡುತ್ತದೆ. ಚರ್ಮದ ರಕ್ಷಣೆಯ ಉತ್ಪನ್ನಗಳ ಜೊತೆಗೆ ಸೇರಿಸಿಕೊಂಡು ಬಳಸಬಹುದು. ಇದು ಚರ್ಮ ಸುಕ್ಕುಗಟ್ಟುವುದು, ಶುಷ್ಕತೆಯಿಂದ ಕೂಡಿರುವುದು, ಮೊಡವೆ ಸಮಸ್ಯೆ ಗಳನ್ನು ನಿವಾರಿಸುತ್ತದೆ. ಚರ್ಮವು ಕಾಂತಿಯಿಂದ ಕೂಡಿರುವಂತೆ ಮಾಡುವುದು.

ಇದನ್ನೂ ಓದಿ:
ಮಾರುಕಟ್ಟೆಯಲ್ಲಿವೆ ನಾನಾ ಸೀರಮ್! ಸುಂದರ ತ್ವಚೆಗೆ ಸೂಕ್ತ ಸೀರಮ್ ಆಯ್ಕೆ ಹೇಗೆ?

Published On - 11:42 am, Thu, 10 October 19