ವರ್ಷವಿಡೀ ನಿಮಗೆ ರಿಟರ್ನ್ಸ್ ಕೊಡುವ, ಕಾಸು ಉಳಿಸೋ ಫ್ರಿಜ್ ಮಾತ್ರ ತಗೊಳ್ಳಿ
ದಸರಾ ಹಬ್ಬಕ್ಕೆಂದು ಮೆಗಾ ಸೇಲ್ ಬಂದಿದೆ. ಜನ ಮುಗಿ ಬಿದ್ದು ವಸ್ತುಗಳನ್ನು ಕೊಂಡುಕೊಳ್ತಾರೆ. ಹಾಗೆ ಈ ರಿಯಾಯಿತಿ ದೀಪಾವಳಿಯವರೆಗೂ ಮುಂದುವರೆಯುತ್ತೆ. ಹಾಗಾದ್ರೆ, ಕೆಲವರು ಎಲೆಕ್ಟ್ರಾನಿಕ್ಸ್ ವಸ್ತುಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಿರಬೇಕು ಅಲ್ವಾ..? ಅದ್ರಲ್ಲೂ ನೀವು ಫ್ರಿಜ್ ಕೊಂಡುಕೊಳ್ಳುವವರಾಗಿದ್ದರೆ ನಿಮಗೆ ಕೆಲವೊಂದು ಕಿವಿ ಮಾತು ಹೇಳಲೇಬೇಕು.. ನೀವು ಕೊಂಡುಕೊಳ್ಳುವ ಫ್ರಿಜ್ ಪವರ್ ಉಳಿಸಬೇಕು ಹಾಗಿದ್ರೆ ಮಾತ್ರ ನೀವು ಫ್ರಿಜ್ ಗೆ ಕೊಟ್ಟ ಪೈಸಾ ವಸೂಲ್ ಆಗುತ್ತೆ ಅಲ್ವಾ ಹಾಗಾದ್ರೆ, ಪೈಸಾ ವಸೂಲ್ ಫ್ರಿಡ್ಜ್ ಕೊಂಡುಕೊಳ್ಳುವುದು ಹೇಗೆ. ಈ […]
ದಸರಾ ಹಬ್ಬಕ್ಕೆಂದು ಮೆಗಾ ಸೇಲ್ ಬಂದಿದೆ. ಜನ ಮುಗಿ ಬಿದ್ದು ವಸ್ತುಗಳನ್ನು ಕೊಂಡುಕೊಳ್ತಾರೆ. ಹಾಗೆ ಈ ರಿಯಾಯಿತಿ ದೀಪಾವಳಿಯವರೆಗೂ ಮುಂದುವರೆಯುತ್ತೆ. ಹಾಗಾದ್ರೆ, ಕೆಲವರು ಎಲೆಕ್ಟ್ರಾನಿಕ್ಸ್ ವಸ್ತುಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಿರಬೇಕು ಅಲ್ವಾ..? ಅದ್ರಲ್ಲೂ ನೀವು ಫ್ರಿಜ್ ಕೊಂಡುಕೊಳ್ಳುವವರಾಗಿದ್ದರೆ ನಿಮಗೆ ಕೆಲವೊಂದು ಕಿವಿ ಮಾತು ಹೇಳಲೇಬೇಕು.. ನೀವು ಕೊಂಡುಕೊಳ್ಳುವ ಫ್ರಿಜ್ ಪವರ್ ಉಳಿಸಬೇಕು ಹಾಗಿದ್ರೆ ಮಾತ್ರ ನೀವು ಫ್ರಿಜ್ ಗೆ ಕೊಟ್ಟ ಪೈಸಾ ವಸೂಲ್ ಆಗುತ್ತೆ ಅಲ್ವಾ ಹಾಗಾದ್ರೆ, ಪೈಸಾ ವಸೂಲ್ ಫ್ರಿಡ್ಜ್ ಕೊಂಡುಕೊಳ್ಳುವುದು ಹೇಗೆ.
ಈ ಬಾರಿ ನೀವು ಫ್ರಿಜ್ ಕೊಂಡುಕೊಳ್ಳಬೇಕೆಂದಿದ್ದರೆ, ನೀವು ಯಾವ ರೀತಿಯ ಫ್ರಿಜ್ ಗೆ ಒತ್ತು ಕೊಡಬೇಕು ಗೊತ್ತಾ..? ನೀವು ಶೋ ರೂಮ್ ಗೆ ಹೋಗ್ತೀರಿ. ಆಗ ಅಲ್ಲಿ ಹೊಸ ಹೊಸ ಮಾಡೆಲ್ ಫ್ರಿಜ್ ಗಳು ನಿಮ್ಮ ಕಣ್ಮನ ಸೆಳೆಯುತ್ತೆ. ನೀವು ಆ ಹೊಸ ಆಪ್ಷನ್ ಗಳನ್ನು ಯಾವುದಾದ್ರೂ ಒಪ್ಪಿಕೊಳ್ಳಬಹುದು. ಆದ್ರೆ, ಅದು ಕರೆಂಟ್ ಉಳಿಸ್ತಾ ಅಂತ ನೋಡಿ. ಇಲ್ಲಾಂದ್ರೆ ಪ್ರತಿ ತಿಂಗಳು ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು. ಒಂದು ಅಧ್ಯಯನದ ಪ್ರಕಾರ ನಿಮ್ಮ ಮಾಸಿಕ ಕರೆಂಟ್ ಬಿಲ್ ನಲ್ಲಿ ಹೆಚ್ಚು ಕಾಸು ತಿನ್ನೋದು ಫ್ರಿಜ್ ನ ಬಿಲ್. ಒಂದು ಮೂಲದ ಪ್ರಕಾರ ಶೇಕಡಾ 15ರಷ್ಟು ಖರ್ಚು ಹೆಚ್ಚಿಸುವುದು ಇದೇ..! ಹಾಗಾಗಿ ನೀವು ಫ್ರಿಜ್ ಕೊಳ್ಳುವುದಿದ್ರೆ 5 ಸ್ಟಾರ್ ರೇಟಿಂಗ್ ಇರುವ ಫ್ರಿಜ್ ಕೊಂಡುಕೊಳ್ಳಿ. ಇದು ನಿಮ್ಮ ಕರೆಂಟ್ ಬಿಲ್ಲನ್ನು 100 ಪರ್ಸೆಂಟ್ ಕಡಿಮೆ ಮಾಡುತ್ತೆ ನೆನೆಪಿರಲಿ..
ಫ್ರಿಜ್ ಅಂದ್ರೆ ತಂಗಳು ಪೆಟ್ಟಿಗೆ ಅಂತ ಹೆಚ್ಚಿನವರು ಭಾವಿಸ್ತಾರೆ. ಯಾಕೆಂದ್ರೆ ಜನ ತಾವು ತಿಂದು ಉಳಿದಿರೋದನ್ನು ಫ್ರಿಜ್ ತುಂಬಾ ತುಂಬಿಸಿ ಇಡ್ತಾರೆ. ಅದಕ್ಕೆ ತಂಗಳು ಪೆಟ್ಟಿಗೆ ಎನ್ನುವ ಹೆಸರು ಅದಕ್ಕೆ ಸೂಟಾಗುತ್ತೆ. ಯಾವಾಗ ನೀವು ಫ್ರಿಜ್ ತುಂಬಾ ಎರ್ರಾ ಬಿರ್ರಿ ತುಂಬಿಸಿಟ್ರೆ ಹೆಚ್ಚು ಕರೆಂಟ್ ಖರ್ಚಾಗುತ್ತೆ ಅನ್ನೋ ಮಾತಿದೆ. ಅದು ನಿಜ ಕೂಡಾ..!
ಯಾಕೆಂದ್ರೆ ಫ್ರಿಜ್ ಒಳಗೆ ತಂಪು ಗಾಳಿ ತುಂಬುವ ಜಾಗ ಕಡಿಮೆಯಾಗುತ್ತೆ ಮತ್ತು ತಂಪಾಗುವ ಪ್ರಮಾಣ ಕಡಿಮೆಯಾಗುತ್ತೆ ಮತ್ತು ಫ್ರಿಜ್ ನ್ನು ನಿರ್ದಿಷ್ಟ ಪ್ರಮಾಣಕ್ಕೆ ತಂಪಾಗಿಸಲು ಹೆಚ್ಚು ಕರೆಂಟ್ ವ್ಯಯವಾಗುತ್ತೆ. ಹಾಗಾಗಿ, ಫ್ರಿಜ್ ನಲ್ಲಿ ಎಷ್ಟು ಬೇಕೋ ಅಷ್ಟೇ ವಸ್ತುಗಳನ್ನು ತುಂಬಿಡಿ. ಇದರಿಂದ ಕರೆಂಟ್ ಉಳಿಯುತ್ತೆ.
ನೀವು ಫ್ರಿಜ್ ಒಳಕ್ಕೆ ನಿಮಗೆ ಬೇಕಾದ ವಸ್ತುಗಳನ್ನು ಇರಿಸಬಹುದು. ಆದ್ರೆ, ಯಾವುದೇ ವಸ್ತುವನ್ನು ಫ್ರಿಜ್ ನಲ್ಲಿರಿಸಬೇಕಾದ್ರೆ ಅದಕ್ಕೆ ಒಂದು ಕ್ರಮವಿದೆ. ನೀವು ಒಳಗೆ ಇಡಬೇಕಾದ ವಸ್ತುವನ್ನು ತುಂಬಾ ಬಿಸಿಯಾಗಿರುವಾಗ ಇಡೋದಲ್ಲ. ಬದಲಿಗೆ ನೀವು ಫ್ರಿಜ್ ಒಳಕ್ಕೆ ಇಡುವ ವಸ್ತು ರೂಮ್ ಟೆಂಪರೇಚರಿ ನಲ್ಲಿರಬೇಕು. ಹೀಗೆ ಇಡೋದ್ರಿಂದ ಫ್ರಿಜ್ ಕ್ಷಮತೆ ಹೆಚ್ಚುತ್ತೆ ಮತ್ತು ಕರೆಂಟ್ ಉಳಿಯುತ್ತೆ.
ಅನಾವಶ್ಯಕವಾಗಿ ಫ್ರಿಜ್ ತೆರೆಯಬೇಡಿ. ಇದೊಂದು ತಪ್ಪನ್ನು ಎಲ್ಲರೂ ಮಾಡ್ತಾರೆ ಹೇಗೆ ಅಂತೀರಾ..? ಹೆಚ್ಚಿನವರು ಅನಾವಶ್ಯಕವಾಗಿ ಫ್ರಿಜ್ ಬಾಗಿಲು ತೆರೆಯೋದು ಮುಚ್ಚೋದು ಮಾಡ್ತಾರೆ. ಇದ್ರಿಂದ ಹೊರಗಿನ ಬಿಸಿಗಾಳಿ ಪ್ರಿಜ್ ಒಳಕ್ಕೆ ನುಗ್ಗುತ್ತೆ. ಇದು ಫ್ರಿಜ್ ಸಕ್ಷಮತೆಯನ್ನು ಕುಗ್ಗಿಸುತ್ತೆ. ಹಾಗಾಗಿ, ಫ್ರಿಜ್ ಬಾಗಿಲನ್ನು ಹೆಚ್ಚಾಗಿ ತೆರೆಯಲೇಬೇಡಿ. ಫ್ರಿಜ್ ತೆರೆದ್ರೆ ಗಟ್ಟಿಯಾಗಿ ಮುಚ್ಚಿ ಬಿಡಿ. ಅದಕ್ಕಾಗಿ ಒಳಗಿರೋ ಫ್ಲಾಶ್ ಲೈಟ್ ಆನ್ ಆಗಿರುವಂತೆ ನೋಡಿ. ಆ ಲೈಟ್ ಬೆಳಕು ಹೊರಗೆ ಕಂಡ್ರೆ ಫ್ರಿಜ್ ಓಪನ್ ಇದೆ ಅನ್ನೋದನ್ನು ಗ್ರಹಿಸಿ. ನಿಮಗೆ ಗೊತ್ತಿರೋ ಹಾಗೆ ಫ್ರಿಜ್ ಒಳಗಿನ ಟೆಂಪರೇಚರನ್ನು ಸಮದೂಗಿಸಲು ಒಂದಿಷ್ಟು ಪ್ರಮಾಣದ ಹೆಚ್ಚುವರಿ ಕರೆಂಟ್ ಇಲ್ಲಿ ವ್ಯಯವಾಗುತ್ತೆ.
ಫ್ರಿಜ್ ತಾಪಮಾನ ಎಷ್ಟಿರಬೇಕು..?ಈ ಸಂಗತಿ ಹೆಚ್ಚಿನವರಿಗೆ ಗೊತ್ತಿರಲ್ಲ. ಸಾಮಾನ್ಯವಾಗಿ ಫ್ರಿಜ್ ತಾಪಮಾನ ಎಷ್ಟಿರಬೇಕು ಅನ್ನೋ ಸಂಗತಿ ತಿಳಿದುಕೊಳ್ಳಲೇಬೇಕು. ಯಾವಾಗಲೂ ಫ್ರಿಜ್ ನಲ್ಲಿ ಮಧ್ಯಮ ತಾಪಮಾನ ಇದ್ದರೆ ಉತ್ತಮ. ಅದು ಫ್ರಿಜ್ ಕ್ಷಮತೆ ಹೆಚ್ಚಿಸುತ್ತೆ ಮತ್ತು ಕರೆಂಟ್ ಬಿಲ್ ಕಡಿಮೆ ಮಾಡುತ್ತೆ.. ನೀವು ಗರಿಷ್ಟ ತಾಪಮಾನಕ್ಕೆ ಸೆಟ್ ಮಾಡಿದ್ರೆ ನಿಮಗೆ ಕನಿಷ್ಟವೆಂದರೂ ಶೇಕಡಾ 25 ರಷ್ಟು ಬಿಲ್ ಹೆಚ್ಚಳವಾಗುತ್ತೆ ನೆನಪಿರಲಿ..
ಫ್ರಿಜ್ ನಲ್ಲಿ ದ್ರವ ವಸ್ತುಗಳನ್ನು ಇರಿಸ್ತೀರಾ.?ನೀವು ಫ್ರಿಜ್ ನಲ್ಲಿ ದ್ರವವಸ್ತು ಇಟ್ಟಿದ್ದೇ ಆದನ್ನು ಮುಚ್ಚಿಡುವ ಅಭ್ಯಾಸ ನಮ್ಮಲ್ಲಿ ಎಷ್ಟು ಮಂದಿಗಿರುತ್ತೆ ಹೇಳಿ..? ಹೀಗೆ ದ್ರವ ವಸ್ತುಗಳನ್ನು ಮುಚ್ಚಿಡದೇ ಹೋದ್ರೆ ಮಂಜುಗಟ್ಟುವ ನೀರ ಬಿಂದುಗಳು ಫ್ರಿಜ್ ನ ಕಂಡೆನ್ಸರನ್ನು ಹಾಳುಗಡವುತ್ತೆ.
ಕಂಡೆನ್ಸರ್ ಹಾಳಾದ್ರೆ ಮತ್ತದೇ ಹಳೇ ಕತೆ. ಫ್ರಿಜ್ ಕಾರ್ಯಕ್ಷಮತೆ ಕೆಡುತ್ತೆ ಮತ್ತು ಬಿಲ್ ಜಾಸ್ತಿ ಬರುತ್ತೆ.. ಹೀಗೆ ಕಾರ್ಯಕ್ಷಮತೆ ಕಡಿಮೆ ಮಾಡಿ ಬಿಲ್ ಹೆಚ್ಚಿಸುವ ಯಾವ ಕೆಲಸವನ್ನು ಮಾಡಲೇಬೇಡಿ. ಪ್ರಿಜ್ ಒಳಕ್ಕೆ ಮಂಜುಗಟ್ಟೋದನ್ನು ಕಡಿಮೆ ಮಾಡಲು ಆಗಾಗ ಡೀಫ್ರೋಸ್ಟ್ ಮಾಡ್ತಾ ಇರಿ.
ಫ್ರಿಜ್ ಯಾವಾಗಲೂ ಕ್ಲೀನ್ ಮಾಡ್ತಾ ಇರಿ. ನೀವು ಇದೊಂದು ಅಭ್ಯಾಸ ಬೆಳೆಸಿಕೊಳ್ಳಬೇಕು. ದಿನಾ ಫ್ರಿಜ್ ಕ್ಲೀನ್ ಮಾಡ್ತಾ ಇರಬೇಕು. ಫ್ರಿಜ್ ಗೆ ಧೂಳು ಸೇರಿದ್ರೆ ಅದ್ರ ಕಾರ್ಯಕ್ಷಮತೆ ಕುಗ್ಗುತ್ತೆ. ಸಾಮಾನ್ಯವಾಗಿ ಫ್ರಿಜ್ ಹಿಂದೆ ಮತ್ತು ಕೆಳಗೆ ಜಾಸ್ತಿ ಧೂಳಿದ್ರೆ ಅದು ಮುಂದೆ ಮೋಟಾರೊಳಗೆ ಸೇರುವ ಸಾಧ್ಯತೆ ಇಲ್ಲದಿಲ್ಲ. ಇಂಥ ಸಂದರ್ಭದಲ್ಲಿ ಕಾರ್ಯಕ್ಷಮತೆ ಸರಿದೂಗಿಸಲು ಹೆಚ್ಚು ಕರೆಂಟ್ ವ್ಯಯಿಸಬೇಕಾದೀಕು ಎಚ್ಚರ.