ಬೆಳಗ್ಗೆ ಎದ್ದ ಕೂಡಲೇ ಏನನ್ನು ನೋಡಬೇಕು, ಏನನ್ನು ನೋಡಬಾರದು?

ಬೆಳಗ್ಗೆ ಎದ್ದ ಕೂಡಲೇ ಏನನ್ನು ನೋಡಬೇಕು, ಏನನ್ನು ನೋಡಬಾರದು?

ಆರೋಗ್ಯಕರ ಜೀವನಕ್ಕೆ ನಿದ್ರೆ ಅತೀ ಮುಖ್ಯ. ವಿಜ್ಞಾನದ ಪ್ರಕಾರ, 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನಲಾಗುತ್ತೆ. ಇನ್ನು ಧರ್ಮಶಾಸ್ತ್ರದಲ್ಲಿ, ನಿದ್ರೆಯಿಂದ ಎದ್ದ ತಕ್ಷಣ ನಾವು ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂದು ಹೇಳಲಾಗಿದೆ. ಆ ದಿನದ ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೇರದಿದ್ದರೆ ಬೆಳಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗಿಕೊಳ್ಳುವವರು ಇದ್ದಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ದಿನವಿಡೀ ಕೆಲಸ ಮಾಡಿ ದೇಹಕ್ಕೆ, ಮನಸ್ಸಿಗೆ […]

sadhu srinath

|

Oct 14, 2019 | 1:48 PM

ಆರೋಗ್ಯಕರ ಜೀವನಕ್ಕೆ ನಿದ್ರೆ ಅತೀ ಮುಖ್ಯ. ವಿಜ್ಞಾನದ ಪ್ರಕಾರ, 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನಲಾಗುತ್ತೆ. ಇನ್ನು ಧರ್ಮಶಾಸ್ತ್ರದಲ್ಲಿ, ನಿದ್ರೆಯಿಂದ ಎದ್ದ ತಕ್ಷಣ ನಾವು ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂದು ಹೇಳಲಾಗಿದೆ. ಆ ದಿನದ ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೇರದಿದ್ದರೆ ಬೆಳಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗಿಕೊಳ್ಳುವವರು ಇದ್ದಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ.

ದಿನವಿಡೀ ಕೆಲಸ ಮಾಡಿ ದೇಹಕ್ಕೆ, ಮನಸ್ಸಿಗೆ ಆಯಾಸ ಆಗಿರುತ್ತೆ. ಅದಕ್ಕೆ ರಾತ್ರಿ ನಿದ್ರೆ ಮಾಡಿ ಮರುದಿನ ಬೆಳಗ್ಗೆ ಎದ್ದು ಹೊಸತನದೊಂದಿಗೆ ದಿನವನ್ನು ಆರಂಭಿಸುತ್ತೇವೆ. ಹೀಗೆ ದಿನ ಆರಂಭಿಸುವಾಗ ಧನಾತ್ಮಕ ವಸ್ತುಗಳನ್ನು ನೋಡುವುದು ಉತ್ತಮ. ಇದ್ರಿಂದ ನಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಿ, ನಾವು ಮಾಡುವ ಕಾರ್ಯ ಸುಗಮವಾಗಿ ಅಗಲಿದೆ ಅನ್ನೋ ನಂಬಿಕೆ ಇದೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುವ ಸಂಪ್ರದಾಯಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ರೆ ನಮ್ಮ ಶಾಸ್ತ್ರಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಬೇಕು? ಏನನ್ನು ನೋಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಏನನ್ನು ನೋಡಬಾರದು? -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು. -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು. -ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಲೇಬಾರದು. -ಚಪ್ಪಲಿ, ಪೊರಕೆಯನ್ನು ನೋಡಬಾರದು.

ಏನನ್ನು ನೋಡಬೇಕು? -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ. -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ. -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ. -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.

ಇವಿಷ್ಟೇ ಅಲ್ಲದೇ, ನಾವು ನಿತ್ಯ ಮುಂಜಾನೆ ಎದ್ದ ತಕ್ಷಣ ಭೂಮಿ ತಾಯಿಗೆ ನಮಸ್ಕರಿಸಬೇಕು. ಹಾಗೇ ತುಳಸಿ ಗಿಡಕ್ಕೂ ನಮಸ್ಕರಿಸೋದು ಶುಭಪ್ರದ. ಇದ್ರಿಂದ ನಮ್ಮಲ್ಲಿ ಧನಾತ್ಮಕ ಅಂಶಗಳು ಜಾಗೃತವಾಗಿ ನಮ್ಮ ದಿನದ ಕಾರ್ಯಗಳೆಲ್ಲವೂ ಸುತೂತ್ರವಾಗಿ ಆಗಲಿವೆ ಎಂದು ಹೇಳಲಾಗುತ್ತೆ. ಹಾಗೇ ಅಗ್ನಿ, ಜಲವನ್ನು ನೋಡಿದ್ರೂ ಆ ದಿನ ಒಳ್ಳೆದಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದ್ಯಾವುದನ್ನು ಮಾಡಲು ಸಾಧ್ಯವಾಗದಿದ್ದರೆ ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದ್ರೂ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ. ಯಾಕಂದ್ರೆ ನಮ್ಮ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹೊಸತನದೊಂದಿಗೆ ದಿನ ಆರಂಭಿಸುವಾಗ ಋಣಾತ್ಮಕ ಅಂಶಗಳನ್ನು ನೋಡಿ ನಮ್ಮ ಮನಸ್ಸು ನಿರಾಶೆಗೊಳ್ಳದಿರಲಿ. ಧನಾತ್ಮಕ ಅಂಶಗಳನ್ನು ನೋಡಿ ಮನಸ್ಸು ನೆಮ್ಮದಿಯಿಂದ ದಿನ ಕಾರ್ಯಗಳಿಗೆ ಅಣಿಗೊಳ್ಳಲಿ ಅನ್ನೋ ಉದ್ದೇಶ ನಮ್ಮ ಹಿರಿಯರದ್ದು. ಹೀಗಾಗೇ ಈ ಆಚರಣೆಯನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada