ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿಸೋ ಆಚರಣೆ ಪುರಾತನ ಕಾಲದಿಂದಲೂ ಇದೆ. ಮಗು ಹೆಣ್ಣಾಗಲೀ ಗಂಡಾಗಲೀ ಹಿಂದೂ ಧರ್ಮದಲ್ಲಿ ಈ ಸಂಸ್ಕಾರವನ್ನು ಪಾಲಿಸೋದು ಕಡ್ಡಾಯ. ಮಕ್ಕಳಿಗೆ 5 , 9 ತಿಂಗಳು ಇರುವಾಗ ಕಿವಿ ಚುಚ್ಚಿಸಲಾಗುತ್ತೆ. ಈ ಆಚರಣೆಯನ್ನು ಪಾಲಿಸಿ ಮಕ್ಕಳಿಗೆ ಸುಂದರವಾದ ಆಭರಣಗಳನ್ನು ಧರಿಸಲಾಗುತ್ತೆ. ಇದು ಕೇವಲ ನಮ್ಮ ಸನಾತನ ಆಚರಣೆಯಲ್ಲ, ಈ ಆಚರಣೆಯ ಹಿಂದೆ ಆರೋಗ್ಯದ ರಹಸ್ಯವೂ ಅಡಗಿದೆ. ಇದ್ರಲ್ಲೇನು ಆರೋಗ್ಯ ರಹಸ್ಯ ಅಂತೀರಾ? ಆಯುರ್ವೇದದ ಪ್ರಕಾರ, ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿಗೆ ಕಿವಿ ಚುಚ್ಚಿಸುವ ಮೂಲಕ ಮಗುವಿನ ಭವಿಷ್ಯ ಉಜ್ವಲವಾಗುತ್ತೆ ಎನ್ನಲಾಗುತ್ತೆ. ಹೀಗಾಗೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಳ್ಳೆಯ ದಿನ ಹಾಗೂ ಸಮಯ ನೋಡಿ ಈ ಸಂಸ್ಕಾರವನ್ನು ಪಾಲಿಸಲಾಗುತ್ತೆ. ಇನ್ನು ಕಿವಿ ಚುಚ್ಚಿಸಿಕೊಳ್ಳುವುದರಿಂದ ಸಾಕಷ್ಟು ಲಾಭಗಳಿವೆ.
*ಕಿವಿ ಚುಚ್ಚಿಸಿಕೊಂಡರೆ ಕಣ್ಣಿನ ನೋಟದ ಶಕ್ತಿ ಹೆಚ್ಚುತ್ತೆ.
*ಆಕ್ಯುಪಂಕ್ಚರ್ ವೈದ್ಯ ವಿಧಾನದ ಪ್ರಕಾರ, ಕಿವಿ ಚುಚ್ಚಿಸಿಕೊಂಡರೆ ಇಡೀ ಶರೀರಕ್ಕೆ ಒಳ್ಳೆಯದು.
*ಕಿವಿಯ ಕೆಳಗಿನ ಮೃದುಭಾಗದ ನಟ್ಟ ನಡುವೆ ಇರುವ ನರಾಗ್ರಗಳು ಮೆದುಳಿನ ಮಧ್ಯಭಾಗಕ್ಕೆ ನೇರ ಸಂಪರ್ಕ ಹೊಂದಿದೆ. ಈ ಭಾಗ ಮಗುವಿನ ಜನನಾಂಗಗಳನ್ನು ಸುಸ್ಥಿತಿಯಲ್ಲಿರಿಸಲು ಹಾಗೂ ಹೆಣ್ಣುಮಕ್ಕಳು ವಯಸ್ಕರಾದಾಗ ಋತುಚಕ್ರ ಆರೋಗ್ಯಕರವಾಗಿರಲು ಇದು ನೆರವಾಗುತ್ತೆ.
*ತಜ್ಞರ ಪ್ರಕಾರ, ಕಿವಿ ಚುಚ್ಚುವುದರಿಂದ ಈ ಭಾಗದಲ್ಲಿರುವ ನರಗಳು ಮೆದುಳಿನ ಕೆಲವು ಭಾಗಗಳಿಗೆ ಸತತವಾಗಿ ಪ್ರಚೋದನೆ ನೀಡುತ್ತಿರುತ್ತವೆ. ಈ ಪ್ರಚೋದನೆ ಮೆದುಳಿನ ಉತ್ತಮ ಬೆಳವಣಿಗೆಗೆ ನೆರವಾಗುತ್ತೆ.
*ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತೆ.
ಈ ವಿಷಯವನ್ನು ಅರಿತ ಚೀನೀಯರು ನರಾಗ್ರಗಳಿರುವ ಕೆಲವು ಸೂಕ್ಷ್ಮ ಭಾಗಗಳಿಗೆ ಸೂಜಿ ಚುಚ್ಚುವ ಮೂಲಕ ಚಿಕಿತ್ಸೆ ನೀಡ್ತಾರೆ. ಆದ್ದರಿಂದ ಕಿವಿ ಚುಚ್ಚಿಸಿಕೊಂಡ ಮಕ್ಕಳು ಅತಿ ಹೆಚ್ಚು ಆಹಾರ ತಿನ್ನದೇ ಅಗತ್ಯವಿದ್ದಷ್ಟು ಮಾತ್ರ ಸೇವಿಸ್ತಾರೆ. ಇದ್ರಿಂದ ತಾವು ತಿಂದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಂಡು ಹದವಾದ ಮೈಕಟ್ಟು ಮತ್ತು ಸದೃಢ ಶರೀರ ಹೊಂದಿರುತ್ತಾರೆ.
Published On - 8:12 pm, Mon, 14 October 19