AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮದ್ದು ಬಳಸುವ ಮುನ್ನ ಹೀಗೆ ಎಚ್ಚರ ವಹಿಸಿ

ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದ್ದರು. ಮನೆ ಮದ್ದು ಎಂದರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಸುವ ಆಹಾರದ ಉತ್ಪನ್ನಗಳು, ತರಕಾರಿಗಳು, ಗಿಡಮೂಲಿಕೆಗಳು, ಹಣ್ಣು-ಹಂಪಲು ಹೀಗೆ ವಿವಿಧ ಆರೋಗ್ಯಕರ ಉತ್ಪನ್ನಗಳನ್ನು ಬಳಸುವುದರ ಮೂಲಕ ವಿವಿಧ ಔಷಧಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ ಕಷಾಯ, ಲೇಪನ, ಎಣ್ಣೆ, ಚೂರ್ಣ ಹೀಗೆ ವಿವಿಧ ರೀತಿಯಲ್ಲಿ ಔಷಧಗಳನ್ನು ತಯಾರಿಸಿ ಸೇವಿಸುವ ವಿಧಾನ. […]

ಮನೆ ಮದ್ದು ಬಳಸುವ ಮುನ್ನ ಹೀಗೆ ಎಚ್ಚರ ವಹಿಸಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 15, 2019 | 10:47 AM

Share

ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದ್ದರು. ಮನೆ ಮದ್ದು ಎಂದರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಸುವ ಆಹಾರದ ಉತ್ಪನ್ನಗಳು, ತರಕಾರಿಗಳು, ಗಿಡಮೂಲಿಕೆಗಳು, ಹಣ್ಣು-ಹಂಪಲು ಹೀಗೆ ವಿವಿಧ ಆರೋಗ್ಯಕರ ಉತ್ಪನ್ನಗಳನ್ನು ಬಳಸುವುದರ ಮೂಲಕ ವಿವಿಧ ಔಷಧಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ ಕಷಾಯ, ಲೇಪನ, ಎಣ್ಣೆ, ಚೂರ್ಣ ಹೀಗೆ ವಿವಿಧ ರೀತಿಯಲ್ಲಿ ಔಷಧಗಳನ್ನು ತಯಾರಿಸಿ ಸೇವಿಸುವ ವಿಧಾನ.

ಆದರೆ ಇತ್ತೀಚೆಗೆ ಕೆಲವರು ಮನೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಹಾಗೂ ಔಷಧಿಯ ಉತ್ಪನ್ನಗಳನ್ನು ವಿವಿಧ ಉಪಯೋಗಕ್ಕೆ ಬಳಸುವುದರ ಮೂಲಕ ಮನೆ ಮದ್ದು ಎನ್ನುವ ಧೋರಣೆಯನ್ನು ಹೊಂದುತ್ತಿದ್ದಾರೆ. ಅಂತಹ ಕೆಲವು ಅನಾರೋಗ್ಯಕರವಾದ ಮನೆ ಮದ್ದು ಅಭ್ಯಾಸಗಳನ್ನು ಈ ಮುಂದೆ ವಿವರಿಸಲಾಗಿದೆ. ಅವುಗಳ ಬಳಕೆ ನಿಮಗೆ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುವ ಭಾವನೆಯನ್ನು ಮೂಡಿಸಬಹುದು. ಆದರೆ ಅವು ಸಾಕಷ್ಟು ದುಷ್ಪರಿಣಾಮಗಳನ್ನು ನಿಮ್ಮ ಮೇಲೆ ಉಂಟುಮಾಡುತ್ತವೆ ಎನ್ನುವುದನ್ನು ಮರೆಯಬಾರದು.

ಕೆಲವರು ಟೂತ್ ಪೇಸ್ಟ್ ಅನ್ನು ಕೇವಲ ಹಲ್ಲುಜ್ಜಲು ಮಾತ್ರ ಬಳಸುವುದಿಲ್ಲ. ಅದರಿಂದ ವಿವಿಧ ರೀತಿಯ ಇತರ ಬಳಕೆಯನ್ನು ಮಾಡುತ್ತಾರೆ. ಅವುಗಳಲ್ಲಿ ಮೊಡವೆ ನಿವಾರಣೆಗೆ ಬಳಸುವ ಒಂದು ಪರಿಯೂ ಹೌದು. ನಿಮಗೆ ಟೂತ್ ಪೇಸ್ಟ್ ಬಳಕೆಯಿಂದ ಮೊಡವೆ ನಿವಾರಣೆ ಆಗುತ್ತದೆ ಎನ್ನಿಸಬಹುದು. ಆದರೆ ಇದು ಸರಿಯಾದ ವಿಧಾನವಲ್ಲ. ಅಡುಗೆ ಸೋಡಾ ಇರುವುದರಿಂದ ಟೂತ್ಪೇಸ್ಟ್ ನಿಮ್ಮ ಗುಳ್ಳೆಯನ್ನು ಒಣಗಿಸಬಹುದು. ಆದಾಗ್ಯೂ ಟೂತ್ ಪೇಸ್ಟಿನಲ್ಲಿ ನಿಮ್ಮ ಚರ್ಮವನ್ನು ಕೆರಳಿಸುವಂತಹ ಅನೇಕ ರಾಸಾಯನಿಕಗಳಾದ ಆಲ್ಕೋಹಾಲ್, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಮೆಂಥಾಲ್ ಇರುತ್ತವೆ. ಹಾಗಾಗಿ ಇದನ್ನು ಬಳಸಿ ಅಡ್ಡ ಪರಿಣಾಮಕ್ಕೆ ಒಳಗಾಗುವ ಬದಲು ಇದರಿಂದ ದೂರ ಇರುವುದು ಉತ್ತಮ.

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಚರ್ಮದ ಮೇಲೆ ಇರುವ ಶುಷ್ಕ ಚರ್ಮ ಅಥವಾ ಸತ್ತ ಜೀವ ಕೋಶಗಳ ನಿವಾರಣೆಗೆ ನಟ್ ಸ್ಕ್ರಬ್ ಗಳನ್ನು ಬಳಸಲಾಗುತ್ತದೆ. ಆದರೆ ಇದು ಅಪಾಯಕಾರಿ ಎನ್ನುವುದನ್ನು ಸಹ ಅರಿಯಬೇಕಿದೆ. ನಟ್ ಅಥವಾ ಕೆಲವು ಬೀಜಗಳನ್ನು ನೀವು ಕುಟ್ಟಿ ಪುಡಿಮಾಡಿರುವುದು ಸಾಕಷ್ಟು ನಯವಾದ ಗುಣವನ್ನು ಪಡೆದುಕೊಳ್ಳದೆ ಇರಬಹುದು. ಆಗ ಅದನ್ನು ಮುಖಕ್ಕೆ ಅಥವಾ ತ್ವಚೆಗೆ ಅನ್ವಯಿಸಿ, ಮಸಾಜ್ ಮಾಡಿದರೆ ಸಾಕಷ್ಟು ನೋವು ಹಾಗೂ ಗಾಯಗಳು ಕಾಣಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ಸಾಮಾನ್ಯವಾಗಿ ಮೊಟ್ಟೆಯ ಬಿಳಿಭಾಗವು ಸಾಕಷ್ಟು ಮನೆ ಮದ್ದುಗಳ ಬಳಕೆಗೆ ಬಳಸಲಾಗುತ್ತದೆ. ಇದು ಕೇಶರಾಶಿಗೆ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾಗಿ ಸಾತ್ ನೀಡುವುದು ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಆದರೆ ಇದಕ್ಕೆ ವಿರುದ್ಧವಾಗಿ ಹೇಳುವುದೇನೆಂದರೆ ಇದು ಚರ್ಮದ ಆರೋಗ್ಯ ಸುಧಾರಣೆಗೆ ಸಹಾಯ ಮಾಡದು ಎಂದು. ವಾಸ್ತವವಾಗಿ ಮೊಟ್ಟೆಯ ಬಿಳಿ ಭಾಗವು ಸಾಲ್ಮೊನೆಲ್ಲಾ ಸೋಂಕಿನ ಅಪಾಯವನ್ನು ತರಬಹುದು. ಇದು ಅತಿಸಾರ, ಜ್ವರ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.

Published On - 3:46 pm, Mon, 14 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?