ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ?

ನಾವೆಲ್ಲರೂ ದೇವಸ್ಥಾನಕ್ಕೆ ಹೋಗುತ್ತೇವೆ. ಪ್ರದಕ್ಷಿಣೆ ಹಾಕುತ್ತೇವೆ, ಅಷ್ಟಕ್ಕೂ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಪ್ರದಕ್ಷಿಣೆ ಹಾಕುವುದರ ಅರ್ಥ. ದೇವಸ್ಥಾನದಲ್ಲಿ ನಾವು ಇಂತಿಷ್ಟೇ ಪ್ರದಕ್ಷಿಣೆಗಳನ್ನು ಹಾಕಬೇಕು ಎಂಬ ನಿಯಮವಿದೆ. ಆ ನಿಯಮಕ್ಕನುಸಾರವಾಗಿ ಹಾಕುವ ಪ್ರದಕ್ಷಿಣೆಯಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅಂತಾ ಶಾಸ್ತ್ರಗಳು ಹೇಳುತ್ತವೆ. ಪ್ರದಕ್ಷಿಣೆಯಲ್ಲಿ ಹಲವಾರು ರೀತಿಯ ಪ್ರದಕ್ಷಿಣೆಗಳಿವೆ. ಪ್ರದಕ್ಷಿಣೆಯ ವಿಧಗಳು * ಆದಿ ಪ್ರದಕ್ಷಿಣೆ -ಅತೀ […]

ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ?
Follow us
ಸಾಧು ಶ್ರೀನಾಥ್​
|

Updated on:Oct 16, 2019 | 12:33 PM

ನಾವೆಲ್ಲರೂ ದೇವಸ್ಥಾನಕ್ಕೆ ಹೋಗುತ್ತೇವೆ. ಪ್ರದಕ್ಷಿಣೆ ಹಾಕುತ್ತೇವೆ, ಅಷ್ಟಕ್ಕೂ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಪ್ರದಕ್ಷಿಣೆ ಹಾಕುವುದರ ಅರ್ಥ. ದೇವಸ್ಥಾನದಲ್ಲಿ ನಾವು ಇಂತಿಷ್ಟೇ ಪ್ರದಕ್ಷಿಣೆಗಳನ್ನು ಹಾಕಬೇಕು ಎಂಬ ನಿಯಮವಿದೆ. ಆ ನಿಯಮಕ್ಕನುಸಾರವಾಗಿ ಹಾಕುವ ಪ್ರದಕ್ಷಿಣೆಯಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅಂತಾ ಶಾಸ್ತ್ರಗಳು ಹೇಳುತ್ತವೆ. ಪ್ರದಕ್ಷಿಣೆಯಲ್ಲಿ ಹಲವಾರು ರೀತಿಯ ಪ್ರದಕ್ಷಿಣೆಗಳಿವೆ.

ಪ್ರದಕ್ಷಿಣೆಯ ವಿಧಗಳು * ಆದಿ ಪ್ರದಕ್ಷಿಣೆ -ಅತೀ ಸಣ್ಣ ಹೆಜ್ಜೆಗಳನ್ನು ಇಟ್ಟುಕೊಂಡು ಪ್ರದಕ್ಷಿಣೆ ಬರುವುದು. ಈ ಸಂದರ್ಭದಲ್ಲಿ ಕಾಲಿನ ಮುಂಭಾಗವು ಮತ್ತೊಂದು ಕಾಲಿನ ಹಿಂಭಾಗಕ್ಕೆ ತಾಗುತ್ತಿರಬೇಕು. * ಅಂಗ ಪ್ರದಕ್ಷಿಣೆ -ದೇವಸ್ಥಾನದ ಕೆರೆ ಅಥವಾ ಕೊಳದಲ್ಲಿ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಯಲ್ಲಿ ಮಂತ್ರ ಪಠಿಸುತ್ತಾ ದೇವರಿಗೆ ಪ್ರದಕ್ಷಿಣೆ ಹಾಕುವುದು. * ಮೊಣಕಾಲಿನ ಪ್ರದಕ್ಷಿಣೆ -ಮೊಣಕಾಲಿನಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದು. ಇದರ ಹೊರತಾಗಿ ಅಶ್ವತ್ಥ ಮರ ಮತ್ತು ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ತುಂಬಾ ಪವಿತ್ರವೆಂದು ನಂಬಲಾಗಿದೆ.

ನಿಮಗೆ ಗೊತ್ತಾ? ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದರಿಂದ ವರ್ತಮಾನದಲ್ಲಿ ಮಾಡಿರುವಂತಹ ಪಾಪಗಳು ಪರಿಹಾರ ಆಗುತ್ತವೆ ಎನ್ನಲಾಗುತ್ತೆ. ಹಾಗಾದ್ರೆ ದೇವಾಲಯಗಳಲ್ಲಿ ನಾವು ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಬೇಕು?ತಿಳಿಯೋಣ.

ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಿದರೆ ಏನು ಫಲ? * ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತೆ * ಸಂಜೆ ಪ್ರದಕ್ಷಿಣೆ ಮಾಡುವುದರಿಂದ ಮಾಡಿದ ಪಾಪಗಳು ದೂರವಾಗುತ್ತೆ * ರಾತ್ರಿ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಪ್ರಾಪ್ತಿಯಾಗುತ್ತೆ

ಪ್ರದಕ್ಷಿಣೆಯ ವಿಧಗಳು, ಪ್ರದಕ್ಷಿಣೆಯ ಸಮಯದ ಬಗ್ಗೆ ತಿಳಿದುಕೊಂಡದ್ದಾಯ್ತು. ಇನ್ನು ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕಿದ್ರೆ ಏನು ಫಲ ಅನ್ನೋದ್ರ ಬಗ್ಗೆಯೂ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು? ವಿಘ್ನ ನಿವಾರಕ ಗಣಪತಿಗೆ ಒಂದು ಪ್ರದಕ್ಷಿಣೆ ಲಯಕಾರಕ ಶಿವನಿಗೆ ಎರಡು ಪ್ರದಕ್ಷಿಣೆ ಸ್ಥಿತಿಕರ್ತ ಮಹಾವಿಷ್ಣುವಿಗೆ ಮೂರು ಪ್ರದಕ್ಷಿಣೆ ಹರಿಹರಸುತ ಅಯ್ಯಪ್ಪನಿಗೆ ನಾಲ್ಕು ಪ್ರದಕ್ಷಿಣೆ ಶಿವಸುತ ಸುಬ್ರಹ್ಮಣ್ಯನಿಗೆ ಐದು ಪ್ರದಕ್ಷಿಣೆ ಶಕ್ತಿಮಾತೆ ದುರ್ಗೆಗೆ ಆರು ಪ್ರದಕ್ಷಿಣೆ

ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಏನು ಫಲ ಸಿಗುತ್ತೆ ಅನ್ನೋದನ್ನೂ ಸಹ ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ. ಆ ನಿಯಮದ ಪ್ರಕಾರ ಪ್ರದಕ್ಷಿಣೆ ಹಾಕಿದ್ರೆ ವಿಶೇಷ ಫಲಗಳನ್ನು ಪಡೆಯಬಹುದು ಎನ್ನಲಾಗುತ್ತೆ.

ಪ್ರದಕ್ಷಿಣೆಯ ಫಲಗಳು 5 ಬಾರಿ ಪ್ರದಕ್ಷಿಣೆ ಹಾಕಿದರೆ ಜಯ ಸಿಗುತ್ತೆ 7 ಬಾರಿ ಪ್ರದಕ್ಷಿಣೆ ಹಾಕಿದ್ರೆ ಶತ್ರುಗಳನ್ನು ಸೋಲಿಸಬಹುದು 9 ಬಾರಿ ಪ್ರದಕ್ಷಿಣೆ ಹಾಕಿದ್ರೆ ಸಂತಾನ ಪ್ರಾಪ್ತಿಯಾಗುತ್ತೆ 11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ್ರೆ ಆಯುಷ್ಯ ವೃದ್ಧಿ 13 ಬಾರಿ ಪ್ರದಕ್ಷಿಣೆ ಹಾಕಿದರೆ ನಮ್ಮ ಬೇಡಿಕೆ ಈಡೇರುತ್ತೆ 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತೆ 17 ಬಾರಿ ಪ್ರದಕ್ಷಿಣೆ ಹಾಕಿದ್ರೆ ಧನ ವೃದ್ದಿಯಾಗುತ್ತೆ 19 ಬಾರಿ ಪ್ರದಕ್ಷಿಣೆ ಹಾಕಿದ್ರೆ ರೋಗ ನಿವಾರಣೆಯಾಗುತ್ತೆ

ವ್ಯಕ್ತಿಯು ಭೂತ ಹಾಗೂ ವರ್ತಮಾನದಲ್ಲಿ ಮಾಡಿರುವಂತಹ ಪಾಪಗಳನ್ನು ಪ್ರದಕ್ಷಿಣೆಯು ತೊಡೆದುಹಾಕುತ್ತೆ ಎನ್ನುವ ನಂಬಿಕೆಯಿದೆ. ಹೀಗಾಗೇ ಪ್ರದಕ್ಷಿಣೆ ಹಾಕುವ ಆಚರಣೆಯನ್ನು ನಮ್ಮ ಹಿರಿಯರು ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ.

Published On - 8:22 am, Tue, 15 October 19

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ