ಯಾವ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಏನು ಫಲ?
ದೇಹಕ್ಕೆ ಹೇಗೆ ಪೌಷ್ಟಿಕಾಂಶಯುಕ್ತವಾದ ಆಹಾರ ಮುಖ್ಯವೋ ಅದೇ ರೀತಿ ಅತ್ಯುತ್ತಮ ನಿದ್ದೆ ಕೂಡ ಅಷ್ಟೇ ಮುಖ್ಯ. ಸರಿಯಾಗಿ ನಿದ್ದೆ ಆಗದಿದ್ರೆ ಒತ್ತಡ, ಚಿಂತೆ, ನಿರಾಸಕ್ತಿ ಮೂಡುತ್ತೆ. ಆರೋಗ್ಯವಾಗಿರಲು ಮನುಷ್ಯನಿಗೆ ದಿನಕ್ಕೆ 6 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ ಎನ್ನುತ್ತೆ ವೈದ್ಯಶಾಸ್ತ್ರ. ಹಾಗಾದ್ರೆ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಇದಂತೂ ಸದಾ ಎಲ್ಲರ ಬಾಯಲ್ಲೂ ಕೇಳಿಬರುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಯೇ ನಿಮ್ಮ ನಿದ್ದೆಯನ್ನು ಕೆಡಿಸಿದ್ದರೆ ಇನ್ನು ಯೋಚಿಸುವ ಅಗತ್ಯ ಇಲ್ಲ. ಅಂದ ಹಾಗೆ ವಾಸ್ತುಶಾಸ್ತ್ರ […]
ದೇಹಕ್ಕೆ ಹೇಗೆ ಪೌಷ್ಟಿಕಾಂಶಯುಕ್ತವಾದ ಆಹಾರ ಮುಖ್ಯವೋ ಅದೇ ರೀತಿ ಅತ್ಯುತ್ತಮ ನಿದ್ದೆ ಕೂಡ ಅಷ್ಟೇ ಮುಖ್ಯ. ಸರಿಯಾಗಿ ನಿದ್ದೆ ಆಗದಿದ್ರೆ ಒತ್ತಡ, ಚಿಂತೆ, ನಿರಾಸಕ್ತಿ ಮೂಡುತ್ತೆ. ಆರೋಗ್ಯವಾಗಿರಲು ಮನುಷ್ಯನಿಗೆ ದಿನಕ್ಕೆ 6 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ ಎನ್ನುತ್ತೆ ವೈದ್ಯಶಾಸ್ತ್ರ. ಹಾಗಾದ್ರೆ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಇದಂತೂ ಸದಾ ಎಲ್ಲರ ಬಾಯಲ್ಲೂ ಕೇಳಿಬರುವ ಸಾಮಾನ್ಯ ಪ್ರಶ್ನೆ.
ಈ ಪ್ರಶ್ನೆಯೇ ನಿಮ್ಮ ನಿದ್ದೆಯನ್ನು ಕೆಡಿಸಿದ್ದರೆ ಇನ್ನು ಯೋಚಿಸುವ ಅಗತ್ಯ ಇಲ್ಲ. ಅಂದ ಹಾಗೆ ವಾಸ್ತುಶಾಸ್ತ್ರ ಎಂಬುದು ವಿಜ್ಞಾನ ಮತ್ತು ಜೀವನದ ಮಿಳಿತ. ವಾಸ್ತುಶಾಸ್ತ್ರದಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು? ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಉತ್ತಮ ಅಲ್ಲ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜತೆಗೆ ಬಹಳ ತೊಂದರೆಗಳೂ ಆಗುತ್ತವೆ. ಇನ್ನು ವೈಜ್ಞಾನಿಕವಾಗಿ ಹೇಳಬೇಕಂದ್ರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ-ದಕ್ಷಿಣಕ್ಕೆ ಚಲಿಸುತ್ತಿರುತ್ತೆ. ತಲೆಯನ್ನು ಉತ್ತರಕ್ಕೆ ಹಾಕಿದಾಗ ಆಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸವಾಗುತ್ತೆ.
-ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಹಲವು ಪದ್ಧತಿ ಹಾಗೂ ಸಂಸ್ಕೃತಿ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮ. ವಾಸ್ತು ಪ್ರಕಾರ, ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತೆ. ಜೊತೆಗೆ ಸಂತೋಷವೂ ಪ್ರಾಪ್ತಿಯಾಗುತ್ತೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನವಾಗಿ ಆಗುತ್ತಿದ್ರೆ ದಕ್ಷಿಣ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿ ಪ್ರಯತ್ನಿಸಿ ನೋಡಿ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಮನಃಶಾಂತಿ ದೊರೆತು, ಆರೋಗ್ಯ ವೃದ್ಧಿಯಾಗುತ್ತೆ.
-ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆಯ ನಿದ್ದೆಯೂ ಆಗುತ್ತೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತಹ ಭಾವನೆ ಮೂಡುತ್ತೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕಿಗೆ ತಲೆ ಹಾಕಿ ಮಲಗೋದು ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳು ಈ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಏಕಾಗ್ರತೆ ಹೆಚ್ಚಾಗುತ್ತೆ. ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿಯೂ ಹೆಚ್ಚಾಗುತ್ತೆ.
-ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ಅಷ್ಟು ಒಳ್ಳೆಯದೇನಲ್ಲ. ಆದರೂ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಹೊರ ಬರಬಹುದು. ಅಲ್ಲದೇ ಹೆಸರು, ಕೀರ್ತಿ, ಯಶಸ್ಸು ಪಡೆಯಲು ಸಹಕಾರಿಯಾಗುತ್ತೆ.
ನೆಮ್ಮದಿ ಜೀವನ, ಸ್ವಾಸ್ಥ್ಯ ಪೂರ್ಣ ಆರೋಗ್ಯಕ್ಕೆ ನಿದ್ದೆ ಬಹಳ ಮುಖ್ಯ. ಮನಸ್ಸಿಗೆ ಬಂದಂತೆ ಯಾವ ದಿಕ್ಕಿಗೆ ಬೇಕು ಆ ದಿಕ್ಕಿಗೆ ಮಲಗೋದ್ರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ನಮ್ಮ ಧರ್ಮಶಾಸ್ತ್ರ ಹೇಳುವ ಹಲವು ಆಚರಣೆಗಳಲ್ಲಿ ಕೆಲವು ವೈಜ್ಞಾನಿಕ ಅಂಶಗಳು ಅಡಗಿರುತ್ತವೆ. ಅವುಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಉತ್ತಮವಾಗಿರುತ್ತೆ.
Published On - 1:21 pm, Sun, 24 November 19