ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ. ಈಕೆ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದಳು. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತೆ.
ಮಹಾಗೌರಿ ಮಂತ್ರ
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ
ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆ ಅನಾದಿಕಾಲದಿಂದಲೂ ಇದೆ. ಈ ದೇವಿಯ ಆರಾಧನೆ, ಕೃಪೆಯಿಂದ ಲೌಕಿಕ ಮತ್ತು ಅಲೌಕಿಕ ಸುಖ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.
* ಈಕೆ ಶೀಘ್ರ ಫಲದಾಯಿನಿ
* ದುಃಖ ದೂರ ಮಾಡ್ತಾಳೆ
* ಭಕ್ತರಲ್ಲಿರುವ ಕೆಟ್ಟ ಬುದ್ಧಿಯನ್ನು ಹೋಗಲಾಡಿಸ್ತಾಳೆ
* ಪೂರ್ವಜನ್ಮದ ಪಾಪ ಪರಿಹರಿಸ್ತಾಳೆ
* ಭಕ್ತರ ಕಷ್ಟ ದೂರ ಮಾಡ್ತಾಳೆ
* ಇವಳ ಕೃಪೆಯಿಂದ ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತವೆ
* ದುಷ್ಟಶಕ್ತಿಗಳನ್ನು ನಾಶಮಾಡ್ತಾಳೆ
ದುರ್ಗಾಷ್ಟಮಿ ಜಗಜ್ಜನನಿಯಾದ ಮಹಾಗೌರಿಗೆ ವಿಶೇಷ ದಿನ. ಇಂದು ಮಹಾಗೌರಿಯ ಧ್ಯಾನ, ಸ್ಮರಣೆ, ಪೂಜೆ–ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಇವಳ ಮಹಿಮೆಯನ್ನು ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರೆ. ಯಾರು ಮಹಾಗೌರಿಯನ್ನು ಪೂಜಿಸ್ತಾರೋ ಅವರು ಸಕಲ ಸುಖ–ಸಂಪತ್ತನ್ನು ಪಡೆಯಬಹುದು ಎಂಬ ಉಲ್ಲೇಖ ಪುರಾಣಗಳಲ್ಲಿ ಇದೆ.
Published On - 6:32 pm, Sun, 6 October 19