ಕೊರೊನಾ ಸಂಕಷ್ಟದಲ್ಲೂ ಎದೆಮಟ್ಟಕ್ಕಿಂತ ಎತ್ತರದ ಕೊತ್ತಂಬರಿ ಬೆಳೆದ ರೈತ! ಎಲ್ಲಿ?

ಕೊರೊನಾ ಅನ್ನೋ ಹೆಮ್ಮಾರಿ ಇಡೀ ದೇಶವನ್ನೇ ಕಂಪಿಸುತ್ತಿದೆ. ಲಾಕ್​​ಡೌನ್ ದಿಗ್ಬಂಧನದಿಂದ ಜನರು ಕಂಗೆಟ್ಟು ಕೂತಿದ್ದಾರೆ. ಜನ ಮುಂದೇನಪ್ಪಾ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ ಉತ್ತರಾಖಂಡ ರಾಜ್ಯದ ರೈತನೊಬ್ಬ ಏನಾದರೂ ಮಾಡುತಿರು, ಸುಮ್ಮನೇ ಕುಳಿತಿರಬೇಡ ಎಂಬ ನಾಣ್ಣುಡಿಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ದಾಖಲೆ ನಿರ್ಮಿಸಿದ್ದಾನೆ.  ಆ ರೈತ ತನ್ನ ಎದೆಮಟ್ಟಕ್ಕಿಂತ ಎತ್ತರವಾಗಿ, ಬರೋಬ್ಬರಿ 7 ಅಡಿ ಎತ್ತರದ ಕೊತ್ತಂಬರಿ ಬೆಳೆ ಬೆಳೆದು ದಾಖಲೆ ನಿರ್ಮಿಸಿದ್ದಾನೆ! ಇಂದಿನ ದಿನಗಳಲ್ಲಿ ಅನೇಕ ರೈತರು ತಮ್ಮ ಹಳ್ಳಿಗಳನ್ನು ತ್ಯಜಿಸಿ ನಗರಗಳತ್ತ ಮುಖ […]

ಕೊರೊನಾ ಸಂಕಷ್ಟದಲ್ಲೂ ಎದೆಮಟ್ಟಕ್ಕಿಂತ ಎತ್ತರದ ಕೊತ್ತಂಬರಿ ಬೆಳೆದ ರೈತ! ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on:May 13, 2020 | 1:02 PM

ಕೊರೊನಾ ಅನ್ನೋ ಹೆಮ್ಮಾರಿ ಇಡೀ ದೇಶವನ್ನೇ ಕಂಪಿಸುತ್ತಿದೆ. ಲಾಕ್​​ಡೌನ್ ದಿಗ್ಬಂಧನದಿಂದ ಜನರು ಕಂಗೆಟ್ಟು ಕೂತಿದ್ದಾರೆ. ಜನ ಮುಂದೇನಪ್ಪಾ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ ಉತ್ತರಾಖಂಡ ರಾಜ್ಯದ ರೈತನೊಬ್ಬ ಏನಾದರೂ ಮಾಡುತಿರು, ಸುಮ್ಮನೇ ಕುಳಿತಿರಬೇಡ ಎಂಬ ನಾಣ್ಣುಡಿಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ದಾಖಲೆ ನಿರ್ಮಿಸಿದ್ದಾನೆ.  ಆ ರೈತ ತನ್ನ ಎದೆಮಟ್ಟಕ್ಕಿಂತ ಎತ್ತರವಾಗಿ, ಬರೋಬ್ಬರಿ 7 ಅಡಿ ಎತ್ತರದ ಕೊತ್ತಂಬರಿ ಬೆಳೆ ಬೆಳೆದು ದಾಖಲೆ ನಿರ್ಮಿಸಿದ್ದಾನೆ!

ಇಂದಿನ ದಿನಗಳಲ್ಲಿ ಅನೇಕ ರೈತರು ತಮ್ಮ ಹಳ್ಳಿಗಳನ್ನು ತ್ಯಜಿಸಿ ನಗರಗಳತ್ತ ಮುಖ ಮಾಡುವುದೇ ಹೆಚ್ಚು. ಆದ್ರೆ ಇಲ್ಲೊಬ್ಬ ರೈತ ದೆಹಲಿಯಲ್ಲಿ ಮಾಡುತ್ತಿದ್ದ ಕಾರ್ಪೊರೇಟ್​ ಕೆಲಸವನ್ನು ತ್ಯಜಿಸಿ, ತನ್ನ ಹಳ್ಳಿಗೆ ಮರಳಿದ್ದಾನೆ. ಅಲ್ಮೋರಾ ಜಿಲ್ಲೆಯ ರಾಣಿಖೇತ್‌ ನಗರದ ಸಮೀಪವಿರುವ ಬಿಲ್ಲೆಕ್ ಗ್ರಾಮದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ರೈತ ಗೋಪಾಲ್ ಉಪ್ರೇತಿ ಇತಿಹಾಸ ನಿರ್ಮಿಸಿದ್ದಾನೆ.

Coriander Guinness Record:

ಸಾವಯವ ಕೃಷಿ ಮೂಲಕ 7 ಅಡಿ ಎತ್ತರದ ಕೊತ್ತಂಬರಿ ಬೆಳೆಸಿದ್ದಕ್ಕಾಗಿ ಗೋಪಾಲ್ ಉಪ್ರೇತಿ ಭಾರತದ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ಮುಂದೆ ಇದು ಗಿನ್ನಿಸ್ ಬುಕ್ ಆಫ್​ ವರ್ಲ್ಡ್​ ರೆಕಾರ್ಡ್ಸ್​ ಗೂ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದರಿಂದ, ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಸಾವಯವ ಕೃಷಿಯಲ್ಲಿ ರೈತನ ಸಾಹಸ: ಗೋಪಾಲ್ ಉಪ್ರೇತಿ ಅವರು 2016ರಲ್ಲಿ ಸ್ವಂತ ಸೇಬು ತೋಟಗಳನ್ನು ಮಾಡಿದರು. ಇದೀಗ ತನ್ನ ಹಳ್ಳಿಯಲ್ಲಿ ಸಾವಯವ ಕೃಷಿಯ ಮೂಲಕ ಸೇಬಿನ ಜೊತೆಗೆ ಆವಕಾಡೊ, ಜಲ್ದರು ಹಣ್ಣು (Apricot) ಮತ್ತು ರುಚಿಕರವಾದ ಪೀಚ್ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ, ಇವರ ಸಾವಯವ ತೋಟದಲ್ಲಿ ಬೆಳ್ಳುಳ್ಳಿ, ಎಲೆಕೋಸು, ಮೆಂತ್ಯ ಬೆಳೆಯುತ್ತಿದ್ದಾರೆ.

ಕೊತ್ತಂಬರಿ ಮೂಲಕ ದಾಖಲೆ: ಕೃಷಿ ತಜ್ಞರ ಪ್ರಕಾರ ಅತ್ಯುತ್ತಮವಾದ ಕೊತ್ತೊಂಬರಿ ಗಿಡವು ಸುಮಾರು 4 ಅಡಿ ವರೆಗೆ ಮಾತ್ರ ಬೆಳೆಯುತ್ತದೆ. ಆದ್ರೆ ಗೋಪಾಲ್ ಅವರು ಸಾವಯವ ಕೃಷಿ ಮೂಲಕ 7 ಅಡಿ ಎತ್ತರದ ಕೊತ್ತಂಬರಿ ಬೆಳೆದಿದ್ದಾರೆ. ಹಾಗಾಗಿ ಇದನ್ನು ಗಣನೀಯ ಸಾಧನೆ ಎಂದು ಕೃಷಿ ತಜ್ಞರು ಪರಿಗಣಿಸಿದ್ದಾರೆ. ಈ ಹಿಂದೆ 5 ಅಡಿ 11 ಇಂಚು ಇದ್ದ ದಾಖಲೆಯನ್ನು ಗೋಪಾಲ್ ಮುರಿದಿದ್ದಾರೆ.

ವಾರ್ಷಿಕ ಆದಾಯ 1 ಕೋಟಿಗೂ ಹೆಚ್ಚು: ತೋಟಗಾರಿಕೆಯಲ್ಲಿ ಗೋಪಾಲ್ ಅವರು ಹಲವು ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಸಾವಯವ ಕೃಷಿ ಮೂಲಕ ವಾರ್ಷಿಕ ಆದಾಯ 1 ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ. ಗೋಪಾಲ್​ಗೆ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಇಷ್ಟೊಂದು ಆದಾಯ ಇರಲಿಲ್ಲವಂತೆ!

Published On - 4:59 pm, Tue, 12 May 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ