
ಮುತ್ತು (Kiss) ಎಂದರೆ ನಾನಾ ತರಹದ ಯೋಚನೆಗಳು, ಕಲ್ಪನೆಗಳು ನಮ್ಮ ತಲೆಯಲ್ಲಿ ಸುಳಿಯಬಹುದು. ಅಣ್ಣ, ತಮ್ಮ, ಸಂಬಂಧಿಕರಲ್ಲಿ ಮುತ್ತು ಎಂಬ ಹೆಸರಿನವರಿದ್ದರೆ ಅವರ ಮುಖ ಕಣ್ಮುಂದೆ ಬರಬಹುದು. ಆಭರಣ ಪ್ರಿಯ ಮಹಿಳೆಯರಿಗೆ ಫಳಫಳ ಕಾಣುವ ಮುತ್ತಿನ ಮಣಿ ನೆನಪಾಗಬಹುದು. ಮುಗ್ಧ ಪುಟಾಣಿ ಮಕ್ಕಳಿಗೆ ಕಿಸಕ್ಕನೆ ನಗು ತರಿಸುವ ಅದ್ಯಾವುದೋ ಮಾತಾಡಬಾರದ ಸಂಗತಿ ಎನಿಸಬಹುದು. ಹದಿಹರೆಯದ ಯುವಜನತೆಗೆ ಮುತ್ತು ಎಂದರೆ ಹಸಿಬಿಸಿ ರೋಮಾಂಚನ ಎನಿಸಬಹುದು. ಪ್ರೀತಿ-ಬಂಧನದ ಸಂಕೇತ ಅಂತಲೂ ಕಾಣಬಹುದು. ಒಬ್ಬೊಬ್ಬರಿಗೆ ಒಂದೊಂದು ರೀತಿ, ಒಂದೊಂದು ಸಂದರ್ಭಕ್ಕೆ ಒಂದೊಂದು ವಿಧದಲ್ಲಿ ಕಾಣಿಸುವ ಮುತ್ತಿಗೆ, ಹಲವಾರು ಅರ್ಥಗಳು ಇವೆ ಎಂಬುದು ಗೊತ್ತೇ? Kiss Day ದಿನ ಮುತ್ತಿನ ಬಹುರೂಪ ಅರ್ಥಮಾಡಿಕೊಳ್ಳಲು ಇಲ್ಲಿನ ವಿವರಗಳನ್ನು ಓದಲೇಬೇಕು.
ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು!
ಕೆನ್ನೆ ಮೇಲಿನ ಮುತ್ತು ಸಹಜ, ಸರಳ ಮತ್ತು ಸುಂದರವಾದದ್ದು. ಇದು ಪರಸ್ಪರ ಹುಡುಗ ಮತ್ತು ಹುಡುಗಿಯ ನಡುವಿನ ಅನ್ಯೋನ್ಯತೆಯನ್ನು ಸೂಚಿಸುತ್ತದೆ. ಆತ್ಮೀಯತೆಯನ್ನು ಬಿಂಬಿಸುತ್ತದೆ. ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ, ಅವಳ ಬಗ್ಗೆ ಅವನುLo ಅಥವಾ ಅವನ ಬಗ್ಗೆ ಅವಳು ಎಷ್ಟು ಆಸಕ್ತಿ ವಹಿಸಿಕೊಂಡಿದ್ದೇವೆ ಎಂದು ತೋರಿಸುತ್ತದೆ. ಕೆಲವು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಯಂತೆ ಕೆನ್ನೆ ಮೇಲಿನ ಮುತ್ತು, ‘Hello’ ಎಂದಂತೆ. ಆದರೆ ಪ್ರೇಮಿಗಳ ಕೆನ್ನೆ ಮುತ್ತು, ಸರಳ ಸ್ಪರ್ಷದಿಂದ ತುಂಬಾ ಭಾವಗಳನ್ನು ಹೇಳಬಲ್ಲದು.
ಹಣೆಗೆ ಮುತ್ತಿಟ್ಟರೆ ಏನೆಂದು ಅರ್ಥ?
ಹಣೆಗೆ ಕೊಡುವ ಮುತ್ತು, ಪರಸ್ಪರ ಅರ್ಥಮಾಡಿಕೊಂಡಿರುವ ಭಾವನೆಗಳನ್ನು ಸೇದಿ ಸುರಿದಂತೆ. ಹಣೆಯ ಮುತ್ತು ಬಹುತೇಕ ಬಾರಿ ಅಭಿಮಾನ, ಗೌರವವನ್ನು ಸೂಚಿಸುತ್ತದೆ. ಆತ್ಮೀಯತೆಯನ್ನು ಸಂಕೇತಿಸುತ್ತದೆ. ಪ್ರೀತಿಯಲ್ಲಿ ಪಾಲುದಾರರಾಗಿರುವ ಹುಡುಗ ಮತ್ತು ಹುಡುಗಿಯ ನಡುವೆ ಇರುವ ನಂಬಿಕೆ, ಹಿತಭಾವವನ್ನೂ ಹೇಳುತ್ತದೆ. ನಿಮ್ಮ ಪ್ರೀತಿಯ ಹುಡುಗಿಯನ್ನು ಎದುರು ನಿಲ್ಲಿಸಿ, ಮೆತ್ತಗೆ ಹಣೆಗೆ ಮುತ್ತಿಡಿ. ವಿಶ್ವಾಸ, ಪ್ರೀತಿ ಹೆಚ್ಚಿಸಿಕೊಳ್ಳಿ.
ಕೈ ಹಿಡಿದು ಮುದ್ದಿಸಿ, ಮುತ್ತಿಕ್ಕಿದರೆ..
ಮುಂಗೈ ಮೇಲೆ ಮುತ್ತಿಡುವ ಸಂಪ್ರದಾಯವು ಯುರೋಪಿಯನ್ ದೇಶದಲ್ಲಿ ಆರಂಭಗೊಂಡಿತು ಎಂದು ಹೇಳುತ್ತಾರೆ. ಗೌರವ ಮತ್ತು ಅಭಿಮಾನ ಸೂಚಿಸುವ ಕಾರಣಕ್ಕಾಗಿ ಕೈ ಹಿಡಿದು ಕಿಸ್ ಕೊಡುವ ಸಂಸ್ಕೃತಿ ಬೆಳೆಯಿತು ಎನ್ನುತ್ತಾರೆ. ಏನೇ ಆದರೂ, ಕೈ ಮೇಲೆ ಯಾರು ಯಾರಿಗೆ ಮುತ್ತು ಕೊಡುತ್ತಾರೆ ಎಂಬ ಆಧಾರದಲ್ಲಿ ಅದರ ಅರ್ಥ ಭಿನ್ನವಾಗಬಹುದು. ಹುಡುಗ ತನ್ನ ಪ್ರೇಯಸಿಗೆ ಕಿಸ್ ಕೊಟ್ಟರೆ, ನಾನು ನಿನ್ನನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ ಎಂಬ ರಕ್ಷಣಾ ಭಾವ ಕೊಟ್ಟಂತಾಗಬಹುದು. ಪ್ರೀತಿ ಆರಂಭಿಸಲು, ನಿನ್ನೆದೆಯ ಪ್ರೇಮಸಾಗರಕ್ಕೆ ಕಾಲಿಡಲು ನಾನು ಉತ್ಸುಕನಾಗಿದ್ದೇನೆ ಎಂದಂತೆಯೂ ಆಗಬಹುದು. ತಿಳಿಯಾಗಿ ಹೇಳಬೇಕು ಎಂದರೆ, ಪ್ರಪೋಸ್ ಮಾಡಲು, ಹುಡುಗಿಯ ಕೈ ಹಿಡಿದು ಮುತ್ತಿಡಬಹುದು. ಇಲ್ಲಿ ಇನ್ನೊಂದು ವಿಶೇಷ ಗೊತ್ತಾ? ಕೈ ಮೇಲೆ ಕೊಡುವ ಕಿಸ್, ವಿಶ್ವದಲ್ಲೇ ಕಡಿಮೆ ಬಾರಿ ತಿರಸ್ಕೃತವಾದ ಮುತ್ತಂತೆ!
ಇದನ್ನೂ ಓದಿ: ನಿಮ್ಮ ಜೀವಕ್ಕಿಂತ ಹೆಚ್ಚು ಯಾರನ್ನೂ ಪ್ರೀತಿಸಬೇಡಿ
ಫ್ರೆಂಚ್ ಕಿಸ್ ಅಂದ್ರೇನು ಗೊತ್ತಾ?
ಫ್ರೆಂಚ್ ಕಿಸ್, ಫ್ರೆಂಚ್ನಲ್ಲಿ ಉಗಮವಾಯಿತು ಅಂದುಕೊಂಡರೆ ಅದು ತಪ್ಪು. ಫ್ರೆಂಚ್ ಕಿಸ್ ಆರಂಭವಾದದ್ದು ಅಮೆರಿಕಾ ಹಾಗೂ ಗ್ರೇಟ್ ಬ್ರಿಟನ್ ಭಾಗದಲ್ಲಂತೆ! ಇದೊಂದು ಅಡ್ವೆಂಚರಸ್ ಸ್ವರೂಪದ ಕಿಸ್ ಎಂದು ಪರಿಗಣಿತವಾಗಿದೆ. ಹುಡುಗ-ಹುಡುಗಿ ತುಟಿಗೆ ತುಟಿ ಬೆಸೆದು ತಣ್ಣಗೆ ಮುತ್ತಿನಲ್ಲಿ ಮುಳುಗಿ ಹೋಗುವುದನ್ನು ಫ್ರೆಂಚ್ ಕಿಸ್ ಎಂದು ಕರೆಯುತ್ತಾರೆ. ಹಾ.. ಅದೇ ಲಿಪ್ ಕಿಸ್ಗೂ ಕೊಂಚ ಮುಂದುವರಿದರೆ ಫ್ರೆಂಚ್ ಕಿಸ್!
ಲಿಪ್ ಕಿಸ್ ವಿಶೇಷವೇನು?
ತುಟಿಗೆ ತುಟಿ ತಾಗಿಸಿ ಒಂದೇ ಒಂದು ಬಾರಿ ಚುಂಬಿಸುವುದನ್ನು ಲಿಪ್ ಕಿಸ್ ಎನ್ನುತ್ತೇವೆ. ಪ್ರೇಮಿಗಳು ಪರಸ್ಪರ ಒಂದಾಗಿರುವುದನ್ನು, ಆತ್ಮೀಯರಾಗಿರುವುದನ್ನು ಈ ಕಿಸ್ ಸೂಚಿಸುತ್ತದೆ. ಆದರೆ, ಫ್ರೆಂಚ್ ಕಿಸ್ನೊಂದಿಗೆ ಲಿಪ್ ಕಿಸ್ ಗೊಂದಲ ಮಾಡಿಕೊಳ್ಳಬಾರದು.
ನೆಕ್ ಕಿಸ್ ಕೊಡಬಹುದಾ?
ಬಹುತೇಕಬಾರಿ, ಹುಡುಗಿಯ ಕುತ್ತಿಗೆಗೆ ಚುಂಬಿಸುವ ವಿಧಾನವು ಪ್ರೇಮಸಲ್ಲಾಪದ ಆರಂಭವೆಂದು ಹೇಳಬಹುದು. ಸರಸದ ಮೊದಲು, ನಿಮ್ಮ ಪ್ರಿಯತಮೆಯನ್ನು ಆವರಿಸಿಕೊಳ್ಳಲು ಹುಡುಗಿಯ ಕುತ್ತಿಗೆಯನ್ನು ಮುದ್ದಿಸಬಹುದು. ಕುತ್ತಿಗೆಗೆ ಮುತ್ತಿಕ್ಕಿ ಹುಡುಗಿಯನ್ನು ಬರಸೆಳೆದರೆ ಎಂಥವರೂ ನಾಚಿ ನೀರಾಗುವರು!
ಇವಿಷ್ಟೇ ಅಲ್ಲದೆ, ಇನ್ನೂ ಕೆಲವು ವಿಧದ ಕಿಸ್ ರೂಪಗಳಿವೆ. ಮೂಗಿನ ಮೇಲೆ ಮುತ್ತಿಟ್ಟರೆ ತುಂಟಾಟ, ಭುಜದ ಮೇಲೆ ಮುತ್ತಿಟ್ಟರೆ ಚೆಲ್ಲಾಟ.. ಹೀಗೆ ಹಲವು ವಿಧದಲ್ಲಿ ಪ್ರೇಯಸಿಯನ್ನು ಮುದ್ದಿಸಬಹುದು. ಒಂದೊಂದು ವಿಧದ ಮುತ್ತಿಗೂ ಒಂದೊಂದು ಕಥೆ ಇದೆ. ಭಾವ, ಅರ್ಥವಿದೆ. ಪ್ರೀತಿಯಲ್ಲಿ ಈಜಾಡಲು ಬಯಸುವ ಪ್ರೇಮಿಗಳು ಬಗೆಬಗೆಯ ಮುತ್ತನ್ನು ಪ್ರಯತ್ನಿಸಬಹುದು.
ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?
Published On - 3:24 pm, Sat, 13 February 21