Valentine’s Day ಉಡುಗೊರೆ ತೆಗೆದುಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ..!

| Updated By: Skanda

Updated on: Feb 15, 2021 | 2:13 PM

ಜನರಿಗೆ ಮೋಸ ಮಾಡುವ ಉದ್ದೇಶದಿಂದ ಆನ್​ಲೈನ್​ನಲ್ಲಿ ಸಾಕಷ್ಟು ನಕಲಿ ತಾಣಗಳು ಹುಟ್ಟಿವೆ. ಜನರಿಗೆ ಮೋಸ ಮಾಡುವುದೇ ಇವರ ಧ್ಯೇಯ. ಇದಕ್ಕಾಗಿ, ಮೆಸೇಜಿಂಗ್​ ಆ್ಯಪ್​, ಆನ್​ಲೈನ್​ ಶಾಪಿಂಗ್​ ತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Valentines Day ಉಡುಗೊರೆ ತೆಗೆದುಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ..!
ಸಾಂದರ್ಭಿಕ ಚಿತ್ರ
Follow us on

ವ್ಯಾಲಂಟೈನ್ಸ್​ ಡೇ ಹತ್ತಿರ ಬರುತ್ತಿದೆ. ರೋಸ್​ ಡೆ, ಪ್ರಪೋಸ್​ ಡೆ, ಚಾಕೋಲೇಟ್​ ಡೇ, ಟೆಡ್ಡಿ ಡೇ, ಪ್ರಾಮಿಸ್​ ಡೇ, ಹಗ್​ ಡೇ, ಕಿಸ್​ ಡೇ ನಂತರ ಫೆಬ್ರವರಿ 14ರಂದು ವ್ಯಾಲಂಟೈನ್ಸ್​ ಡೇ ಆಚರಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಹುಡುಗ ಹುಡುಗಿಗೆ ಹಾಗೂ ಹುಡುಗಿ ಹುಡಗನಿಗೆ ಗಿಫ್ಟ್​ ನೀಡೋ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ಇದಕ್ಕಾಗಿ ಸಾಕಷ್ಟು ಜನರು ಆನ್​ಲೈನ್​ ಮೊರೆ ಹೋಗುತ್ತಾರೆ. ಆನ್​ಲೈನ್​ ಶಾಪಿಂಗ್​ ಮಾಡುವ ಭರದಲ್ಲಿ ಮೋಸ ಹೋಗದೇ ಎಚ್ಚರಿಕೆಯಿಂದ ವರ್ತಿಸಿ. ಇಲ್ಲದಿದ್ದರೆ, ನಿಮ್ಮ ಮಾಹಿತಿ ಸೋರಿಕೆ ಆಗಬಹುದು.

ಹೌದು, ಜನರಿಗೆ ಮೋಸ ಮಾಡುವ ಉದ್ದೇಶದಿಂದ ಆನ್​ಲೈನ್​ನಲ್ಲಿ ಸಾಕಷ್ಟು ನಕಲಿ ತಾಣಗಳು ಹುಟ್ಟಿವೆ. ಜನರಿಗೆ ಮೋಸ ಮಾಡುವುದೇ ಇವರ ಧ್ಯೇಯ. ಇದಕ್ಕಾಗಿ, ಮೆಸೇಜಿಂಗ್​ ಆ್ಯಪ್​, ಆನ್​ಲೈನ್​ ಶಾಪಿಂಗ್​ ತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಆಫರ್​ಗಳು ಹಾಗೂ ಡಿಸ್ಕೌಂಟ್​ಗಳನ್ನು ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ.

ಜ್ಯುವೆಲರಿ ವೆಬ್​ಸೈಟ್​ಗಳು
ಜ್ಯುವೆಲರಿಯನ್ನು ನೀವು ಆನ್​ಲೈನ್​ನಲ್ಲಿ ಖರೀದಿಸಬಹುದು. ನಾನಾ ವಿಧದ ಆಭರಣಗಳು ಆನ್​ಲೈನ್​ನಲ್ಲಿ ಲಭ್ಯವಿದೆ. ಆದರೆ, ಇವುಗಳಿಗೆ ಕಾಲಿಡುವ ಮುನ್ನ ಸ್ವಲ್ಪ ಯೋಚಿಸಿ. ಏಕೆಂದರೆ, ಈ ರೀತಿಯ ಸಾಕಷ್ಟು ನಕಲಿ ಸೈಟ್​ಗಳು ಹುಟ್ಟಿಕೊಂಡಿವೆ. ನಿಮ್ಮ ಖಾಸಗಿ ಮಾಹಿತಿ ಕದಿಯುವುದೇ ಇವರ ಮುಖ್ಯ ಉದ್ದೇಶ…

ಬೆಲೆ ಡಾಲರ್​ನಲ್ಲಿರುತ್ತದೆ..
ಈ ರೀತಿಯ ನಕಲಿ ಆನ್​ಲೈನ್​ ಶಾಪ್​ಗಳು ಅಮೆರಿಕದ ಡಾಲರ್​ನಲ್ಲಿ ವಸ್ತುಗಳ ಬೆಲೆಯನ್ನು ಹಾಕಿರುತ್ತಾರೆ. ಅಷ್ಟೇ ಅಲ್ಲ, ಅಮೆರಿಕದ ಯಾವುದಾದರೂ ಒಂದು ಸ್ಥಳದ ಹೆಸರನ್ನು ವಿಳಾಸದ ರೂಪದಲ್ಲಿ ಹಾಕಿರುತ್ತಾರೆ. ನೀವು ಖರೀದಿಸಹೋದರೆ, ಭಾರತಕ್ಕೂ ಡೆಲಿವರಿ ಮಾಡುತ್ತೇವೆ ಎಂದಿರುತ್ತದೆ. ಇದು ಸಂಪೂರ್ಣವಾಗಿ ಫೇಕ್​ ಎನ್ನುತ್ತಾರೆ ಆನ್​ಲೈನ್​ ಮಾರುಕಟ್ಟೆ ತಜ್ಞರು.

ವಾಟ್ಸ್​ಆ್ಯಪ್​ನಲ್ಲಿ ನಕಲಿ ಗ್ರೂಪ್​
ಟಾಟಾ ಗ್ರೂಪ್​ ಸೇರಿ ಸಾಕಷ್ಟು ಸಂಸ್ಥೆಗಳು ವ್ಯಾಲಂಟೈನ್ಸ್​ ಡೇಗೆ ಗಿಫ್ಟ್​ ನೀಡುತ್ತಿವೆ ಎನ್ನುವ ಮೆಸೇಜ್​ ಹರಿದಾಡುತ್ತಿದೆ. ಈ ರೀತಿ ಸಂದೇಶಗಳನ್ನು ಕ್ಲಿಕ್​ ಮಾಡಿದಾಗ ನಿಮ್ಮ ಮಾಹಿತಿ ಸೋರಿಕೆ ಆಗಬಹುದು. ಹೀಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: ಯಾವತ್ತೂ ದೂರವಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು ಗೆಳತಿ

Published On - 2:44 pm, Sun, 14 February 21