AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಯಾವತ್ತೂ ದೂರವಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು ಗೆಳತಿ

My Love Story: ಪ್ರೌಢಕ್ಕೆ ಬಂದ ಚಂದಿರನಂತಿರುವ ಆ ನಿನ್ನ ಕಂಗಳು. ಘಾಟಿ ರಸ್ತೆಯಂತೆ ಕ್ಷಣಕ್ಕೊಮ್ಮೆ ಬಳಕುವ ಹುಬ್ಬುಗಳು. ಗಿಣಿ ಮೂಗಿನ ಮೇಲೇ ರವೆಯಷ್ಟೇ ಇರುವ ಮೂಗುತಿ. ನಕ್ಕರೆ ಸಾಕು ಹಾಜರಾತಿ ತೋರುವ ಗುಳಿಕೆನ್ನೆ. ತಾವರೆ ಮೊಗದ ನೋಟ. ಅಬ್ಬಬ್ಬಾ..

Valentine's Day: ಯಾವತ್ತೂ ದೂರವಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು ಗೆಳತಿ
ಜೊತೆಗಿದ್ದುಬಿಡು ಹುಡುಗಿ..
Skanda
|

Updated on:Feb 12, 2021 | 6:59 PM

Share

ಹೇ ಹುಡುಗಿ, ನಿನ್ನನ್ನು ಮೊದಲ ಸಲ ನೋಡಿದಾಗ ಮುಂದೆ ನೀ ನನಗೆ ಇಷ್ಟು ಹತ್ತಿರ ಅಗುತ್ತೀಯ ಎಂದು ತಿಳಿದಿರಲಿಲ್ಲ. ಸ್ನೇಹದ ನೌಕೆಯಲ್ಲಿ ಅರಂಭವಾದ ನಮ್ಮಿಬ್ಬರ ಪಯಣ ಪ್ರೀತಿ ಎಂಬ ದಡಕ್ಕೆ ಬಂದು ಸೇರಿದೆ ಎಂದು ತಿಳಿದಿದ್ದೇ ನೀನು ಅಂತರಂಗದ ಒಲವ ಬಿಚ್ಚಿ ಐ ಲವ್ ಯೂ ಅಂದಾಗ. ನಿನ್ನ ಕಾಡಿಸುವ ಸಲುವಾಗಿ ‘ಈಗ ಮನಸಿಲ್ಲ, ಮುಂದೆ ನೋಡೊಣ’ ಎಂದು ಹೇಳಿ ಹೊರಟ್ಟಿದ್ದೆ. ನಾ ಹೇಳಿದ್ದು ನಿಜವಲ್ಲ ಎಂದು ನಿನಗೂ ಗೊತ್ತಿದ್ದರಿಂದ ನೀ ಹೆಚ್ಟು ಮಾತನಾಡಲಿಲ್ಲ. ನಿಜ ಹೇಳಬೇಕೆಂದರೆ ನಾ ನಿನ್ನ ಮೊದಲ ಬಾರಿ ಕಂಡಾಗಲೇ ‘ಸಾಕ್ಷತ್ ದೇವತೆ ಏನಾದರು ಅಡ್ರೆಸ್ ಮಿಸ್ಸಾಗಿ ಭೂಲೋಕಕ್ಕೆ ಇಳಿದುಬಿಟ್ಳಾ?’ ಅಂದುಕೊಂಡಿದ್ದೆ. ಕಡುಕತ್ತಲಲ್ಲಿ ಕೋಟಿ ನಕ್ಷತ್ರಗಳು ಒಮ್ಮೆಲೇ ಮಿಂಚುವಂಥಾ ಅ ನಿನ್ನ ಚೆಲುವಿಗೆ ಯಾರೇ ಆದರು ಸೋಲಲೇಬೇಕು. ಇನ್ನೂ ನಾ ಹೇಗೇ ತಾನೇ ಸೋಲದೆ ಇರಲಿ ಅದರಲ್ಲೂ ನೀನೇ ಮುಂದಡಿ ಇಡುವಾಗ.

ಜಲಪಾತದಲ್ಲಿ ಹರಿವ ನದಿ ತೊರೆಯಂತೆ ಹಣೆ ಮೇಲೆ ಹರಡುವ ಕೇಶ ರಾಶಿ. ಪ್ರೌಢಕ್ಕೆ ಬಂದ ಚಂದಿರನಂತಿರುವ ಆ ನಿನ್ನ ಕಂಗಳು. ಘಾಟಿ ರಸ್ತೆಯಂತೆ ಕ್ಷಣಕ್ಕೊಮ್ಮೆ ಬಳಕುವ ಹುಬ್ಬುಗಳು. ಗಿಣಿ ಮೂಗಿನ ಮೇಲೇ ರವೆಯಷ್ಟೇ ಇರುವ ಮೂಗುತಿ. ನಕ್ಕರೆ ಸಾಕು ಹಾಜರಾತಿ ತೋರುವ ಗುಳಿಕೆನ್ನೆ. ತಾವರೆ ಮೊಗದ ನೋಟ. ಅಬ್ಬಬ್ಬಾ.. ಒಂದಾ.. ಎರಡಾ.. ನಿನ್ನ ಅಂದವ ಹೊಗಳುತ್ತಾ ನಿಂತರೆ ಪತ್ರಕರ್ತ ಅಗಬೇಕೆಂದಿರುವ ನಾನು ಅದೆಲ್ಲಿ ಪ್ರೇಮಕವಿಯಾಗು ಬಿಡುತ್ತೇನೆ ಎನ್ನುವ ಅಂಜಿಕೆ ಶುರುವಾಗುತ್ತೆ. ನಾನು ಸಹ ಎಲ್ಲಾ ಪ್ರೇಮಿಗಳಂತೆ ನಿನಗಾಗಿ ನೂರಾರು ಕನಸು ಕಂಡಿರುವೆ. ಅದರೆ, ನಿನ್ನೆದುರು ಹೇಳಲಾಗದೆ ಪರದಾಡುತ್ತಿದ್ದೇನೆ. ಹೇಗೋ ಧೈರ್ಯಮಾಡಿ ಈ ಪತ್ರದಲ್ಲಿ ಹೇಳುತ್ತಿರುವೆ. ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್ ಮಾಡ್ಕೋ.. ನನಗೆ ನಿನ್ನೊಂದಿಗೆ ಕಾಫೀ ಡೇ ಕಪ್ಪುಗಳಿಗೆ ಮುತ್ತಿಕ್ಕುತ್ತ ಕಣ್ಣಲ್ಲಿ ಕಣ್ಗೂಡಿಸುವಾಸೆ, ತೀಡುವ ತಂಗಾಳಿಯೊಂದಿಗೆ ಕಿರುಬೆರಳ ಹಿಡಿದು ಕಡಲ ತೀರದಲ್ಲಿ ನಡೆಯುವಾಸೆ, ಮಾಗಿ ಚಳಿಯಲ್ಲಿ ಜಗವ ಮರೆತು ಕೊಡಚಾದ್ರಿ ಬೆಟ್ಟವ ಏರಿ ಕುಳಿತುಕೊಳ್ಳುವಾಸೆ, ನನ್ನ ಬುಲೆಟ್ ಬೈಕಿನ ಮೇಲೆ ನಿನ್ನ ಕೂರಿಸಿ ಊರೆಲ್ಲ ಸುತ್ತುವಾಸೆ, ಚಾಚಿದ ಕೈಗಳ ನಿನ್ನನ್ನು ಗೋಲ್​ಗುಂಬಜ್​ನಲ್ಲಿ ಎತ್ತಿ ಹಿಡಿಯುವಾಸೆ.. ಹೀಗೆ ಆಸೆಗಳೆನೋ ಕೋಟಿ ಇವೆ. ಅದರೆ, ಅದ್ಯಾಕೋ ಕಾಣೇ ಗೆಳತಿ ನಿನ್ನ ಎದುರು ನಿಂತರೆ ಮಾತಾಡುವುದೇ ಮರೆತು ಹೋಗುತ್ತದೆ.

ಇದನ್ನೂ ಓದಿ: ದಿನಪೂರ್ತಿ ಬಿಕ್ಕಳಿಸುವಷ್ಟು ನೆನಪಿಸಿಕೊಳ್ಳುವೆ ನಿನ್ನ, ಗೊತ್ತಿಲ್ಲದಂತೆ ನಟಿಸಬೇಡವೋ

ಇನ್ನು ನಿನ್ನನ್ನು ಕಾಯಿಸಲ್ಲ, ಈ ಸಂಕಷ್ಟದ ದಿನಗಳು ಮುಗಿದ ನಂತರ ಎಂದಿನಂತೆ ನಮ್ಮ ಅಡ್ಡಾದಲ್ಲಿ ಭೇಟಿಯಾಗುವ. ಎದೆಗೂಡಲ್ಲಿ ಬಚ್ಚಿಟ್ಟು ಬಟವಾಡೆಗೊಂಡ ನೂರಾರು ಮಾತುಗಳೊಂದಿಗೆ, ಅಂತರ್ಯದಲ್ಲಿ ಹುದುಗಿಟ್ಟ ಹತ್ತಾರು ಬಾವಗಳೊಂದಿಗೆ ಆ ದಿನ ಎದುರಾಗುವೆ. ಪ್ಲೀಸ್.. ಯಾವತ್ತೂ ದೂರಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು.

ಇಂತಿ ನೀನೇ ಕರೆವಂತೆ ಡುಮ್ಮ ರೂಪೇಶ್ ಸುಮ್ಮನೆ

Published On - 6:59 pm, Fri, 12 February 21

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ