Valentine’s Day 2021 | ಪ್ರೇಮಿಗಳ ದಿನ 2021; ಝೆರಾಕ್ಸ್ ಮಾಡಿಸಲು ಹೋದಾಗ ಕಂಡ ಹುಡುಗನ ಮೇಲೆ ಲವ್ ಆಯಿತು..!

ಈ ಆಕರ್ಷಣೆಯೇ ನನ್ನಲ್ಲಿ ಪ್ರೀತಿ ಅನ್ನಿಸಿತೇನೋ ತಿಳಿದಿಲ್ಲ, ಅವನು ನನಗೆ ಕಪ್ಪು ಕಾಗೆಗಳ ಮಧ್ಯೆ ಹಾರಾಡುವ ಬಿಳಿ ಪಾರಿವಾಳದಂತೆ ಗಮನ ಸೆಳೆದನು!

Valentine's Day 2021 | ಪ್ರೇಮಿಗಳ ದಿನ 2021; ಝೆರಾಕ್ಸ್ ಮಾಡಿಸಲು ಹೋದಾಗ ಕಂಡ ಹುಡುಗನ ಮೇಲೆ ಲವ್ ಆಯಿತು..!
ಅದೇಕೋ ನನಗೆ ಆ ಹುಡುಗಿಯ ಮೇಲೆ ಸಣ್ಣ ಮುನಿಸಷ್ಟೇ..
Follow us
guruganesh bhat
|

Updated on:Feb 14, 2021 | 8:14 PM

ಒಮ್ಮೆ ನಾನು ಕಾಲೇಜಿನಿಂದ ಜೆರಾಕ್ಸ್ ಮಾಡಿಸಲು ಸ್ನೇಹಿತೆಯರೊಂದಿಗೆ ಹೋದಾಗ ಒಬ್ಬ ಯುವಕ ಅಂಗಡಿ ಮುಂದೆ ನಿಂತಿದ್ದ. ಆತನನ್ನು ನೋಡಿ ಮನಸ್ಸಿನಲ್ಲಿ ತಿಳಿಯದ ಒಂದು ಉಲ್ಲಾಸ ಉಂಟಾಯಿತು. ಆತನನ್ನು ಮಾತನಾಡಿಸುವ ಹಂಬಲ ಹೆಚ್ಚಾಯಿತು. ಅವನ ಸೌಂದರ್ಯಕ್ಕೆ ಬೆರಗಾಗಿ ಹೋಗಿದ್ದೆ. ಪ್ರಪಂಚವೇ ಅವನ ಮುಂದೆ ಶೂನ್ಯವೆಂಬಂತೆ ಒಂದು ಕ್ಷಣವೆನಿಸಿತು. ಆತನನ್ನು ನೋಡಿ ನನ್ನ ಹೃದಯದಲ್ಲಿ ಪ್ರೀತಿ ಹುಟ್ಟಿತೇನೋ..ಇಲ್ಲಿಯವರೆಗೆ ಅಷ್ಟು ಸುಂದರವಾದ ಹುಡುಗನನ್ನು ನಾನು ನೋಡಿರಲಿಲ್ಲ!

ಅವನ ಚೆಲುವು ಬೇರೆಲ್ಲ ಹುಡುಗರ ಸೌಂದರ್ಯಕ್ಕಿಂತಲೂ ವಿಶೇಷವಾಗಿತ್ತು. ಆತನನ್ನು ನನ್ನ ಸ್ನೇಹಿತರಿಗೆ ತೋರಿಸಿದಾಗ ಅವರು ಕೂಡ ಅವನ ಅಂದಕ್ಕೆ ಮನಸೋತರು. ಅವನನ್ನು ನನ್ನವನಾಗಿಸಿ ಕೊಳ್ಳಬೇಕೆಂಬ ಹಂಬಲ ನನ್ನಲ್ಲಿ ಮೂಡಿತು, ಅಷ್ಟರಮಟ್ಟಿಗೆ ಅವನನ್ನು ನಾನು ಮೆಚ್ಚಿಕೊಂಡೆ. ಅವನು ಉಡುಪು ಧರಿಸಿದ್ದ ರೀತಿ ಹೇಗಿತ್ತೆಂದರೆ ಬ್ಲಾಕ್ ಜೀನ್ಸ್ ಅಂಡ್ ವೈಟ್ ಶೂಸ್ ಕೈಗೆ ಬ್ರಾಸ್ಲೈಟ್ ಹಾಕಿದ್ದ ಆತನ ಡ್ರೆಸ್ಸಿಂಗ್ ಸೆನ್ಸ್ ಎಂಥವರನ್ನೂ ಆಕರ್ಷಿಸುವಂತಿತ್ತು. ಅವನ ಸ್ಟೈಲ್ ಲುಕ್ ಹೇಗಿತ್ತೆಂದರೆ ಪ್ರಪಂಚದ ಅದ್ಭುತಗಳಲ್ಲಿ ಅದು ಒಂದು ಎನ್ನುವಂತಿತ್ತು ಹುಡುಗರು ಕೂಡ “ಎಂಥ ಅಂದ ಮರಾಯ” ಎನ್ನುವಂತಿತ್ತು!

ಅವನನ್ನು ಬಿಟ್ಟು ಈ ಪ್ರಪಂಚದಲ್ಲಿ ಮತ್ತೇನಿಲ್ಲ.. 

ಈ ಆಕರ್ಷಣೆಯೇ ನನ್ನಲ್ಲಿ ಪ್ರೀತಿ ಅನ್ನಿಸಿತೇನೋ ತಿಳಿದಿಲ್ಲ, ಅವನು ನನಗೆ ಕಪ್ಪು ಕಾಗೆಗಳ ಮಧ್ಯೆ ಹಾರಾಡುವ ಬಿಳಿ ಪಾರಿವಾಳದಂತೆ ಗಮನ ಸೆಳೆದನು! ಅವನನ್ನು ಮಾತನಾಡಿಸಿ ನನ್ನ ಭಾವನೆ ಹೇಳಿಕೊಳ್ಳಬೇಕೆಂಬ ಹಂಬಲ ಎಷ್ಟಿತ್ತೆಂದರೆ ಅವನನ್ನು ಬಿಟ್ಟು ಈ ಪ್ರಪಂಚದಲ್ಲಿ ಮತ್ತೇನು ಇಲ್ಲವೆಂಬಂತೆ ಅನಿಸಿತು. ಹಾಗೆ ನೋಡುತ್ತಾ ಮೈಮರೆತು ನಿಂತುಹೋದೆನು. ಸ್ವಲ್ಪ ಸಮಯದ ನಂತರ ಅವನ ಬಳಿ ಹೋಗಲು ನಿರ್ಧರಿಸಿದೆ. ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ ಆ ಹುಡುಗ ತನ್ನ ಸ್ನೇಹಿತನಿಗೆ ಫೋನ್ ಮಾಡಿದ. ‘ಮಗ ಬೈಕ್ ತಗೊಂಡು ಬಾರೋ.. ನನ್ನ ಹುಡುಗಿ ಕಾಯುತ್ತಿದ್ದಾಳೆ’ ಅಂದ.

ಆ ಕ್ಷಣ ಆಕಾಶವೇ ಕಳಚಿ ಬಿದ್ದಂತಾಯಿತು. ಅದನ್ನು ಕೇಳಿ ನಾ ಕಟ್ಟಿದ ಕನಸೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ನಾ ಎಂಥ ದಡ್ಡಿ ಮಾರಾಯ, ಅಂತ ಹ್ಯಾಂಡ್ಸಮ್ ಯುವಕನಿಗೆ ಹುಡುಗಿ ಇರುವುದಿಲ್ಲವೇ..! ಅನ್ನುವ ಒಂದು ಚಿಕ್ಕ ಪರಿಕಲ್ಪನೆಯೂ ಕೂಡ ನನ್ನಲ್ಲಿ ಮೂಡಿರಲಿಲ್ಲ. ಅಷ್ಟರಮಟ್ಟಿಗೆ ಮನಸೋತಿದ್ದೆ! ಅವನು ಇನ್ನೊಬ್ಬರನ್ನು ಪ್ರೀತಿಸುತ್ತಿರುವುದನ್ನು ತಿಳಿದು ಬೇಸರಗೊಂಡೆ. ಅವನ ಅಂದಕ್ಕೆ ಮನಸೋತ ನನಗೆ ಆತ ಪ್ರೀತಿಸಿದ ಹುಡುಗಿಯ ಚೆಲುವನ್ನು ನೋಡಬೇಕೆಂಬ ಆಸೆಯಾಯಿತು. ಆದರೂ ತಿಳಿದೋ ತಿಳಿಯದೆಯೋ ಅವರಿಗೆ ಒಳಿತನ್ನೇ ಬಯಸುತ್ತಿರುವೇ, ಅದನ್ನು ತಿಳಿದ ನನ್ನ ಗೆಳತಿಯರು ನಸುನಕ್ಕರು.

ಅದೇಕೋ ನನಗೆ ಆ ಹುಡುಗಿಯ ಮೇಲೆ ಸಣ್ಣ ಮುನಿಸಷ್ಟೇ.. ಪ್ರೀತಿ ಮಧುರ ತ್ಯಾಗ ಅಮರ ಎಂಬಂತೆ ಎಲ್ಲೇ ಇದ್ದರೂ ಹೇಗೆ ಇದ್ದರೂ ಅವನು ಖುಷಿಯಿಂದ ಕಾಲಕಳೆಯಲಿ. ಆದರೂ ಮರಳಿ ಒಮ್ಮೆ ನಿನ್ನನ್ನು ನೋಡಬೇಕೆಂದು ಆಶಿಸುತ್ತಿರುವೆ. ಇನ್ನೊಮ್ಮೆ ನೀ ನನ್ನ ಬಳಿ ಬಂದರೆ ನಿನ್ನ ನೋಡಿದಾಗ ನನಗಾದ ಭಾವನೆಗಳನ್ನು ನಿನಗೆ ಹೇಳಬೇಕು. ಅದಾಗದಿದ್ದರೆ ನೀ ಎಲ್ಲೋ ಒಂದು ಕಡೆ ಇದನ್ನು ಓದುತ್ತಿರುವೆ ಎಂದು ಭಾವಿಸಿಕೊಳ್ಳುವೆನು…..

ಐಶ್ವರ್ಯ ಕೆ ಆರ್ ಆಲೂರು (ಕೂಡ್ಲಿಗಿ ತಾ)

ಇದನ್ನೂ ಓದಿ: Valentine’s Day 2021| ಪ್ರೇಮಿಗಳ ದಿನ 2021; ಹದಿ ಹೃದಯ ಕುದಿ ಹರೆಯ ! ಇದು ಪ್ರೇಮದ ಮನೋವೈಜ್ಞಾನಿಕ ವಿಶ್ಲೇಷಣೆ

Published On - 3:53 pm, Sun, 14 February 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ