AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2021 | ಪ್ರೇಮಿಗಳ ದಿನ 2021; ಓ ನನ್ನ ಕನಸಿನ ಲೋಕದ ರಾಜಕುಮಾರ ನೀನೆಂದೂ ನನ್ನವನು..

Valentine's Day 2021: ನಾನು ನೀನು ಇಬ್ಬರೂ ಒಂದೇ ಬಸ್ಸಿನಲ್ಲಿ ಮನೆಗೆ ಹೋಗಬಹುದು ಎಂದು ತಿಳಿದು ನನಗೆ ಎಷ್ಟು ಖುಷಿಯಾಗಿತ್ತು ಎಂದರೆ..ಅದನ್ನು ಪದಗಳಲ್ಲಿ ಹೇಳಲಾಗದು ಮಾತಿನಲ್ಲಿ ವರ್ಣಿಸಲಾಗದು. ಹೇಳು ಮಾರಾಯಾ.. ಇಷ್ಟು ದಿನ ಎಲ್ಲಿದ್ದೆ ನೀನು? ನನ್ನನ್ನು ನೊಡಲು ಎಂದೇ ಆದಷ್ಟು ಬೇಗ ಬರುವೆಯಲ್ಲವೇ?

Valentine's Day 2021 | ಪ್ರೇಮಿಗಳ ದಿನ 2021; ಓ ನನ್ನ ಕನಸಿನ ಲೋಕದ ರಾಜಕುಮಾರ ನೀನೆಂದೂ ನನ್ನವನು..
ಮೊದಲು ನಿನ್ನ ಪರಿಚಯವಾದದ್ದು Instagramನಲ್ಲಿ..
Follow us
guruganesh bhat
|

Updated on:Feb 14, 2021 | 8:00 PM

ಪ್ರೀತಿಯೇ ಮಧುರ, ಪ್ರೀತಿಯೇ ಅಮರ. ಅದು ಉಸಿರಿನಷ್ಟೇ ಸಹಜ. ಪ್ರೇಮಿಗಳ ನಡುವೆ ಪ್ರೇಮ ಇಲ್ಲದ ಕ್ಷಣವಿಲ್ಲ, ಹೊತ್ತು ಗೊತ್ತಿಲ್ಲದೇ ಮೂಡುವ ಮನಸಲ್ಲಿ ಪ್ರೀತಿಯನ್ನು ಬಿಟ್ಟು ಬೇರಾವುದಕ್ಕೂ ಜಾಗವಿಲ್ಲ ಎನ್ನುತ್ತಾರೆ ಈ ಹರೆಯದ ಪ್ರೇಮಿಗಳು. ಭಾವನೆಗಳ ಗುಚ್ಛದಲ್ಲಿ ತುಟಿ ಜಪಿಸುವ ಮಧುರ ಮಂತ್ರವೇ ಪ್ರೀತಿಯ ಆಖ್ಯಾನ. ಪ್ರೇಮವನ್ನೇ ಧ್ಯಾನಿಸುವ ಹರೆಯದ ತರುಣಿಯರು ಬರೆದ ಎರಡು ಪುಟಾಣಿ ಪ್ರೇಮಪತ್ರಗಳು ನಿಮಗೋಸ್ಕರ..

ಎನ್ನೆದೆಯ ಪಿಸುಮಾತಿನ ದನಿಗೆ ಮುನ್ನುಡಿ ಬರೆದ ನಿನಗೆ ನನ್ನ ನಮಸ್ಕಾರಗಳು. ಪ್ರತಿ ನೋಟದಲ್ಲೂ ಒಂದು ಕಥೆ ಇರುತ್ತದೆಯಂತೆ. ಆ ಕಥೆಗೊಬ್ಬ ಹೀರೋ ಇರ್ತಾನಂತೆ. ನನ್ನ ಪ್ರತೀ ಕಥೆಯಲ್ಲಿ ನೀನಿದ್ದೀಯ.ನನ್ನ ಕಥೆಗೆ ನೀನೇ ಹೀರೋ. ಅಷ್ಟಕ್ಕೂ ನೀನು ನನಗೆ ಅಷ್ಟು ಹತ್ತಿರದವನಾ? ಯೋಚಿಸ್ತಿದೀನಿ ನಮ್ಮ ಮೊದಲ ಭೇಟಿ ಹೇಗಾಯಿತ? ಯೋಚಿಸ್ತಿದ್ದೇನೆ..ಆ ಒಂದು ಕ್ಷಣ ನಿನ್ನನ್ನು ನೋಡಿದಾಗ ನನ್ನನ್ನು ನಾ ಮರೆತಿದ್ದೆ. ನನಗೆ ಗೊತ್ತಿಲ್ಲದೆ ನಿನ್ನ ಪ್ರತಿ ಧ್ವನಿಗೂ ನಾನು ಮಾರುಹೋಗಿದ್ದೆ. ಈಗಲೂ ನಾನು ನಿನ್ನವಳೇ. ನೀ ಸನಿಹ ಬಂದಾಗ ಯಾಕೊ ಗೊತ್ತಿಲ್ಲ, ಹೃದಯದ ಏರಿಳಿತ ಹೆಚ್ಚಾಗುತ್ತದೆ. ಮೈ ನಡುಗುತ್ತದೆ. ನೂರೆಂಟು ಮಾತನಾಡಬೇಕೆಂದರೂ ತುಟಿ ಒಣಗುತ್ತದೆ. ನಿನ್ನೆದುರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಶಕ್ತಿ ನನ್ನಲ್ಲಿಲ್ಲ. (Valentine’s Day 2021)

ಜಗತ್ತಿಗೆ ನೀನು ಸಾಮಾನ್ಯನಾದರೂ ನನಗೆ ಸ್ವರಾಭಿಷೇಕದ ಮಾಯಾವಿ. ಪದೇಪದೇ ನಿನ್ನ ಬಯಸುವ ಖಯಾಲಿ ನನ್ನದು. ನಿನ್ನ ಪ್ರತಿ ನೋಟದಲ್ಲಿ ಅರ್ಥವನ್ನು ಕಂಡುಹಿಡಿವ ನನಗೆ ನಿನ್ನ ಒಂದು ಕಿರುನಗೆಯಿಂದ ನನ್ನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಪ್ರತಿಕ್ಷಣ ನಿನ್ನ ಜತೆ ಇರುವಾಗ ಆಗುವ ಸಂತೋಷವನ್ನು ಪದಗಳಲ್ಲಿ ಬಣ್ಣಿಸಲಾಗದು. ನನ್ನ ಕಲ್ಪನಾ ಲೋಕದಲ್ಲಿ ನಿನ್ನನ್ನು ಕಾಣುವುದೇ ಒಂದು ಚೆಂದ. ನೀ ನನಗೆ ಸಿಗುತ್ತಿಯ ಎಂಬ ಬಲವಾದ ಆಸೆ ನನ್ನದು. ನಿನ್ನ ತಂಪಾದ ಧ್ವನಿ ನನ್ನ ಕಿವಿಗೆ ಬೆಚ್ಚನೆಯ ಉಸಿರಾಟ ಸ್ಪರ್ಶದೊಂದಿಗೆ ಪಿಸುಗುಡುತ್ತಾ ಸಾಧಿಸಿಕೊಳ್ಳುವ ಆಸೆ ನನ್ನದು ಇನಿಯ.

ಹುಚ್ಚು ಗಟ್ಟಿ ಕನಸು ಕಾಣುವೆ ನಿನಗೆ ನಾನು ಅಪರಿಚಿತ ಆದರೆ ನೀನು ನನಗೆ ಹೃದಯದ ಸಮೀಪದವ. ಹಾಗಾಗಿಯೇ ನಿನ್ನನ್ನು ನೋಡಿಲ್ಲವೆಂದರೆ ನನ್ನ ನಗುವನ್ನು ಕಂಡಿಲ್ಲವೆಂದರೆ ನನ್ನ ಮನವು ತಲ್ಲಣಕ್ಕೆ ಒಳಗಾಗುತ್ತದೆ. ನಮ್ಮ ನಡುವೆ ಇರುವ ಈ ಸಂಬಂಧಕ್ಕೆ ಹೆಸರಿಲ್ಲ, ಹೆಸರಿಲ್ಲದೇ ಇರಬಹುದು, ಆದರೆ ಅದರಲ್ಲಿ ಅಡಗಿ ಕುಳಿತಿರುವ ಬಾಂಧವ್ಯವಿದೆ. ನಿನ್ನನ್ನು ದೂರದಿಂದ ಕಂಡ ಕ್ಷಣಕ್ಷಣವೂ ನೀನು ನನಗೇ ಸಿಗಬೇಕು ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ. ಸದಾ ನಿನ್ನ ಯಶಸ್ಸು ನಗು ಧ್ವನಿಗಾಗಿ ಹಂಬಲಿಸುವೆ.

ಓ ನನ್ನ ಪ್ರೀತಿಯ ಗಾನ ಚತುರ, ನನ್ನ ಕನಸಿನ ಲೋಕದ ರಾಜಕುಮಾರ ವಾಸುಕಿ ವೈಭವ್..ನೀನೆಂದೂ ನನ್ನವನು, ನನ್ನವನು ಮಾತ್ರ.

ಆಕರ್ಷ. ಆರ್. ಆರಿಗ

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಮೊಬೈಲ್ ನೋಡಿಕೊಂಡು ಒಬ್ಬೊಬ್ನೆ ಯಾಕೋ ನಗ್ತಿದೀಯಾ..ಹುಚ್ಚಾ?

****

Instagram ನಿಂದ ನನ್ನ ಪುಟ್ಟ ಪ್ರಪಂಚವಾದವನೇ..

ಮೊದಲು ನಿನ್ನ ಪರಿಚಯವಾದದ್ದು Instagramನಲ್ಲಿ. ನೀನು ಮೊದಲ ಬಾರಿಗೆ ನನ್ನ ಪೋಟೋ ಲೈಕ್ ಮಾಡಿದಾಗಲೇ ನೀನು ಯಾರು? ಊರು ಯಾವುದು? ಹೆಸರು ಏನು? ತಿಳಿಯುವ ಹಂಬಲ. ಆದರೆ ಏನು ಮಾಡಲಿ ಯಾರ ಕೇಳಲಿ ಎಂದು ತಿಳಿಯಲಿಲ್ಲ.ರೋಗಿ ಬಯಸೋದೂ ಹಾಲು ಅನ್ನ; ವೈದ್ಯ ಹೇಳೋದೂ ಹಾಲು ಅನ್ನ ಅನ್ನೋಹಾಗೆ ನಿನ್ನ ಕಡೆಯಿಂದ ಮೊದಲ ಮೊದಲ ಸಂದೇಶ ಬಂತು. ಆಗ ನನಗೆ ಆದ ಸಂತೋಷಕ್ಕೆ ಪಾರವೇ ಇಲ್ಲ. ಸಂತೋಷವನ್ನು ನಿನ್ನ ಬಳಿ ಹೇಳಲು ಆಗದಷ್ಟು ಮುಜುಗರ. ಆ ಮುಜುಗರದಲ್ಲೂ ಒಂದು ಸಂತೋಷವಿದೆ.

ನಿನ್ನಿಂದ ಅಷ್ಟೇ ಅಲ್ಲ, ಬೇರೆಯವರೂ ನಿನ್ನನ್ನು ಹೊಗಳುವುದನ್ನ ಕೇಳಿ ಆಕಾಶವೇ ನನ್ನ ಕೈನಲ್ಲಿದೆ ಎನ್ನುವಷ್ಟು ಸಂತೋಷಪಟ್ಟೆ. ನೀನು ನಿನ್ನ ಗೆಳೆಯನನ್ನು ಕಳುಹಿಸಲು ನಿನ್ನ ಮನೆ ಹತ್ತಿರದ ಬಸ್ಸ್ ನಿಲ್ದಾಣಕ್ಕೆ ಬಂದಿದ್ದಾಗ ನಾನು ಮೊದಲು ನಿನ್ನನ್ನು ನೋಡಿದ್ದೆ. ನಾನು ನೀನು ಇಬ್ಬರೂ ಒಂದೇ ಬಸ್ಸಿನಲ್ಲಿ ಮನೆಗೆ ಹೋಗಬಹುದು ಎಂದು ತಿಳಿದು ನನಗೆ ಎಷ್ಟು ಖುಷಿಯಾಗಿತ್ತು ಎಂದರೆ..ಅದನ್ನು ಪದಗಳಲ್ಲಿ ಹೇಳಲಾಗದು ಮಾತಿನಲ್ಲಿ ವರ್ಣಿಸಲಾಗದು. ಹೇಳು ಮಾರಾಯಾ.. ಇಷ್ಟು ದಿನ ಎಲ್ಲಿದ್ದೆ ನೀನು? ನನ್ನನ್ನು ನೋಡಲು ಎಂದೇ ಆದಷ್ಟು ಬೇಗ ಬರುವೆಯಲ್ಲವೇ?

ನೀನು ಮೊದಲ ಸಲ ನನ್ನ ಬಗ್ಗೆ ಕಾಳಜಿ ತೋರಿಸಿದ ಕ್ಷಣ, ನನ್ನ ತಪ್ಪನ್ನು ತಿದ್ದಿ ನನಗೆ ಬುದ್ದಿಹೇಳಿ ಸರಿ ಮಾರ್ಗದಲ್ಲಿ ನಡೆಸಿರುವುದು ನನ್ನ ಜೀವನದ ಒಂದು ಸಿಹಿ ಮರೆಯಲಾಗದ ಘಳಿಗೆ. ಮೊದಮೊದಲು ನಾನು ಮಾಡಿದ ತುಂಟಾಟವನ್ನು ಕ್ಷಮಿಸದೇ ನನ್ನನ್ನು ಸತಾಯಿಸಿದ ಆ ಕ್ಷಣ ಇಂದಿಗೂ ಕಣ್ಣ ಮುಂದೆ ಬರುತ್ತದೆ. ನನಗೆ ದುಃಖವಾಗಲಿ, ಸಂತೋಷವಾಗಲಿ ಮೊದಲು ನಿನ್ನ ಬಳಿ ಹಂಚಿಕೊಳ್ಳಬೇಕು ಅನಿಸುತ್ತದೆ. ನನ್ನ ಪುಟ್ಟ ಹೃದಯ. ಆ ಹೃದಯದಲ್ಲಿ ಒಂದು ಪುಟ್ಟ ಕನಸು. ಆ ಕನಸಿನ ಪ್ರಪಂಚವೇ ನೀನು. ಹೇಳು ಈ ನನ್ನ ಮಧುರ ವ್ಯಾಖ್ಯಾನ ಸರಿಯಲ್ಲವೇ?

ಅಂಕಿತಾ ಭಟ್ಟ

ಇದನ್ನೂ ಓದಿ: Valentine‘s Day 2021 | ಪ್ರೇಮಿಗಳ ದಿನ 2021; ಝೆರಾಕ್ಸ್ ಮಾಡಿಸಲು ಹೋದಾಗ ಕಂಡ ಹುಡುಗನ ಮೇಲೆ ಲವ್ ಆಯಿತು..!

Published On - 7:51 pm, Sun, 14 February 21

ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ