Valentine’s Day 2021 | ಪ್ರೇಮಿಗಳ ದಿನ 2021; ಹತೋಟಿಗೆ ಸಿಗದೇ ಹುಚ್ಚು ಕುದುರೆಯಂತೆ ಓಡುವ ನನ್ನ ಪ್ರೀತಿಗೆ ಮುನ್ನುಡಿ ಬರೆಯುವೆಯಾ ಗೆಳೆಯಾ?

Valentine's Day 2021: ಪ್ರೀತಿ ಹೆಚ್ಚುತ್ತಾ ಹೋದಂತೆ ತಿರಸ್ಕಾರದ ಭಯವೂ ನಿಧಾನವಾಗಿ ಮನದ ಮೂಲೆಯಲೆಲ್ಲೋ ಆವರಿಸುತ್ತಿತ್ತು. ಇದನ್ನೆಲ್ಲ 'control' ಮಾಡ್ಬೇಕು ಅಂದುಕೊಂಡಾಗಲೆಲ್ಲಾ ನಿನ್ನ ಮೇಲಿನ ಪ್ರೀತಿ ಬೆಳೆಯುತ್ತಲೇ ಹೋಯ್ತು.

Valentine's Day 2021 | ಪ್ರೇಮಿಗಳ ದಿನ 2021; ಹತೋಟಿಗೆ ಸಿಗದೇ ಹುಚ್ಚು ಕುದುರೆಯಂತೆ ಓಡುವ ನನ್ನ ಪ್ರೀತಿಗೆ ಮುನ್ನುಡಿ ಬರೆಯುವೆಯಾ ಗೆಳೆಯಾ?
ಮುಗಿಲಗಲ ಪ್ರೀತಿಯನ್ನು ಹೊರ ಹಾಕಲು ಇದೇ ಸುದಿನ.
Follow us
guruganesh bhat
|

Updated on:Feb 14, 2021 | 6:19 PM

” ನಲ್ಮೆಯ ಗೆಳೆಯನಿಗೊಂದು ಒಲವಿನ ಓಲೆ”

”ನೀನಿಲ್ಲದೆ ನನಗೇನಿದೆ.. ಮನಸ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ.. ಕನಸ್ಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ..” (Valentine’s Day)

ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಒಂದೇ ಸಮನೆ ಭಾವಗೀತೆ ಕೇಳಿಬರುತ್ತಿತ್ತು. ಆಗ ತಾನೇ ಹಾಸಿಗೆಯಿಂದ ಎದ್ದ ನನಗೆ ಕೊಂಚ ಹಿತವೆನಿಸಿತು. ಹೊರಗೆ ಬಂದು ನೋಡಿದೆ. ಸೂರ್ಯ ಸ್ವಲ್ಪ ಸ್ವಲ್ಪವೇ ಮೋಡಗಳ ಸೆರೆಯಿಂದ ತಪ್ಪಿಸಿಕೊಳ್ಳುತ್ತಾ ಮೇಲೇರುತ್ತಿದ್ದ. ಮುಂಜಾನೆಯ ಕಂಪಿಗೆ ನಾಚಿ ಕೆಂಪಾಗಿದ್ದ ದಿನಕರ! ಅವನಿಗೂ ಈ ಇಳೆಯ ಮೇಲೆ ಅದೆಷ್ಟು ಪ್ರೀತಿ..ದಿನಾ ತಪ್ಪದೇ ಭೂಮಿಯನ್ನು ಭೇಟಿಯಾಗಲೆಂದೇ ಹಾಜರಾಗಿಬಿಡುತ್ತಾನೆ!

ಪ್ರೀತಿ ಎನ್ನುವುದೇ ಹಾಗೆ..ಅದೊಂದು ರೀತಿಯ ದಿವ್ಯಾನುಭೂತಿ. ಮುಂಜಾನೆಯ ಮಂಜು.ಮುಸ್ಸಂಜೆಯ ನೇಸರ. ಮನದ ಅಂಗಳದಲ್ಲಿ ಸದಾ ಕಾಡುವ ಮಾಯಾಮೃಗ. ಸೊಂಪಾಗಿ ಬೀಸುವ ತಂಗಾಳಿ.ತಣ್ಣಗೆ ಹರಿಯುವ ನದಿ. ಒಟ್ಟಾರೆ ಪ್ರೀತಿ ಎಂದರೆ ಅದು ನೀನೇ!

ಕಾಲೇಜಿನ ಆರಂಭದ ದಿನಗಳವು, ಸ್ನೇಹಿತರೇ ಇಲ್ಲದೆ ಒಂಟಿತನ ಅನುಭವಿಸುತ್ತಿದ್ದ ಕಾಲದಲ್ಲಿ ಸ್ನೇಹ ಹಸ್ತ ಚಾಚಿ ಜೊತೆಯಾದವನು ನೀನು. ಮರಳುಗಾಡಿನಲ್ಲಿ ಬಳಲಿದ ಪ್ರಯಾಣಿಕನೊಬ್ಬನಿಗೆ ‘ಓಯಸಿಸ್’ ಸಿಕ್ಕಂತಾಗಿತ್ತು ನಿನ್ನ ಗೆಳೆತನ. ಅದೆಷ್ಟು ಹಚ್ಚಿಕೊಂಡೆ ನಿನ್ನನ್ನು! ಆವಾಗ್ಲೇ ಎಲ್ಲಾ ಸಮಯದಲ್ಲೂ ನೀನೇ ನನ್ನ ಜೊತೆಗಿರಬೇಕೆನ್ನುವ ಸ್ವಾರ್ಥ ಬೇರೆ ಜೊತೆಯಾಯಿತು. ಕ್ಷಣವಷ್ಟೇ ನೀ ದೂರವಿದ್ದರೂ ಒಂದು ಯುಗ ಕಳೆದಂತಾಗುತ್ತಿತ್ತು ನನಗೆ. ನೀ ಜೊತೆಯಿದ್ದಾಗ ಉದಾರಿಯಂತೆ ಚಲಿಸುವ ಗಡಿಯಾರ ನೀ ಜೊತೆ ಇಲ್ಲದಾಗ ಥೇಟ್ ಕಂಜೂಸ್​ನಂತೆ ನಿಧಾನಕ್ಕೆ ಚಲಿಸುವಂತೆ ಭಾಸವಾಯಿತು. ನನ್ನೊಳಗಿನ ಬದಲಾವಣೆ ಅರಿವಿಗೆ ಬಂದಾಗ ನನಗೇ ದಿಗ್ಭ್ರಮೆಯಾಗುತ್ತಿತ್ತು. ಒಂದು ನೀರವ ರಾತ್ರಿಯಲ್ಲಿ ಕುಳಿತು ಅಂತರ್ಯದ ಬದಲಾವಣೆಗಳ ಬಗ್ಗೆ ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ಮನಸು ಕೊಟ್ಟ ಉತ್ತರವೇನು ಗೊತ್ತಾ ‘ಪ್ರೀತಿ’.

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಝೆರಾಕ್ಸ್ ಮಾಡಿಸಲು ಹೋದಾಗ ಕಂಡ ಹುಡುಗನ ಮೇಲೆ ಲವ್ ಆಯಿತು..!

ಹೌದು ಕಣೋ..ಅದ್ಯಾವುದೋ ಕ್ಷಣದಲ್ಲಿ ನನಗೆ ಅರಿವಿದ್ದೋ ಇಲ್ಲದೆಯೋ ನಿನ್ನ ಮೇಲೆ ಪ್ರೀತಿ ಆಗಿದೆ. ಪ್ರೀತಿಗೆ ಇಂಥದ್ದೇ ‘Particular reason’ ಬೇಕು ಅಂತೇನಿಲ್ಲ ಅಲ್ವಾ! ಅಂದಿನಿಂದಲೇ ಶುರುವಾಯಿತು ನೋಡು ನನ್ನ ಪ್ರೀತಿ ತಪಸ್ಸು.ಹಗಲು-ರಾತ್ರಿ ನಿನ್ನದೇ ಜಪ. ಆ ಕ್ಷಣದಿಂದಲೇ ಕನಸಿನ ಸೂಜಿಯಿಂದ ಪ್ರೀತಿ ಎಂಬ ಕುಲಾವಿ ಹೊಲೆಯಲು ಪ್ರಾರಂಭಿಸಿದೆ. ಕಾಲೇಜಿನಲ್ಲಿ ಸಾಲು-ಸಾಲು ಯುವಕರ ಗುಂಪೇ ಇರುವಾಗ ನೀನು ಮಾತ್ರ ಅದ್ಹೇಗೆ ನನ್ನ ಮನದ ಹೊಸ್ತಿಲ ದಾಟಿದೆ. ನೀ ತೋರುವ ಅತಿಯಾದ ಕಾಳಜಿ. ಪ್ರತಿ ವಿಷಯಕ್ಕೂ ನೀಡುವ ಪ್ರೋತ್ಸಾಹ..’ಬಜಾರಿ ಕಣೆ ನೀನು’ ಎಂದು ಗದರುವ ರೀತಿ..ಅಪ್ಪನಂತಹ ಹೃದಯವಂತಿಕೆ..ಅಮ್ಮನಂತಹ ಮಮತೆ.. ಬಹುಶಃ ನನ್ನನ್ನು ನಿನ್ನ ಪ್ರೀತಿ ಕಡಲಿಗೆ ಸೆಳೆಯುವಂತೆ ಮಾಡಿತು.

ಬಯಸುತಿದೆ ಮನಸ್ಸು ನಿನ್ನ ಪ್ರೇಮ ಬಂಧನ ನೀನೊಂದು ಸಿಹಿ-ಕಹಿ ಗುಣಗಳ ಸಂಕಲನ ಪ್ರೀತಿಯ ಹಾಡಿಗೆ ಜೊತೆಯಾದ ಗಾಯಕ ಬದುಕ ದೋಣಿಗೆ ನೀ ತಾನೆ ನಾವಿಕ..!

ಪ್ರೀತಿ ಹೆಚ್ಚುತ್ತಾ ಹೋದಂತೆ ತಿರಸ್ಕಾರದ ಭಯವೂ ನಿಧಾನವಾಗಿ ಮನದ ಮೂಲೆಯಲೆಲ್ಲೋ ಆವರಿಸುತ್ತಿತ್ತು. ಇದನ್ನೆಲ್ಲ ‘control’ ಮಾಡ್ಬೇಕು ಅಂದುಕೊಂಡಾಗಲೆಲ್ಲಾ ನಿನ್ನ ಮೇಲಿನ ಪ್ರೀತಿ ಬೆಳೆಯುತ್ತಲೇ ಹೋಯ್ತು. ನಮ್ಮಿಬ್ಬರ ನಡುವೆ ಇರುವುದು ಸ್ನೇಹವಷ್ಟೇ ಎಂದು ಮನಸ್ಸಿಗೆ ಅದೆಷ್ಟು ತಿಳಿ ಹೇಳಿದರೂ ಪೆದ್ದು ಮನಸ್ಸು ಕೇಳಲೊಲ್ಲದು. ‘ಹಾಳಾಗ್ ಹೋಗ್ಲಿ, ನಿನ್ನ ನೋಡ್ಲೇಬಾರ್ದು’ ಅನ್ಕೊಂಡ್ರೆ ಈ ಕಿಡಿಗೇಡಿ ಕಣ್ಣು ಕೇಳಬೇಕಲ್ಲ! ಅಂತೂ-ಇಂತೂ ಪ್ರೀತಿ ಹೌದೋ? ಅಲ್ವೋ? ಎಂಬ ಗೊಂದಲದಲ್ಲಿ ನಾನು ಸಂಪೂರ್ಣವಾಗಿ ಸೋತು, ‘ಪ್ರೀತಿ’ ಗೆಲುವಿನ ನಗೆ ಬೀರಿತು.

ಆವತ್ತಿಂದ ಅದೆಷ್ಟು ಸಾರಿ ಅನ್ಕೊಂಡೆ ಗೊತ್ತಾ.. ನನ್ನ ಪ್ರೀತೀನ ನಿನ್ ಹತ್ರ ಹೇಳ್ಬೇಕು ಅಂತ. ನನ್ನೀ ಹುಚ್ಚು ಹೃದಯ ಒಂಟಿಯಾಗಿದ್ದಾಗ ನಿನ್ನ ಕುರಿತು ಅದೆಷ್ಟು ಬಡಬಡಿಸುತ್ತದೆ. ನೀ ಎದುರಿಗೆ ಬಂದ್ರೆ ಒಂದೇ ಒಂದು ಅಕ್ಷರ ಬಾಯಿಂದ ಉದುರಲ್ಲ. ಹೃದಯ ಬಡಿತ ಮಾತ್ರ ಹತೋಟಿಗೆ ಸಿಗದೆ ಹುಚ್ಚು ಕುದುರೆಯಂತೆ ಓಡುತ್ತೆ! ನನ್ನ ಪ್ರತಿ ನಡವಳಿಕೆ, ಮಾತು, ನೋಟ, ಹಾಡಿನಲ್ಲೂ ಪ್ರೀತಿ ಎಂಬುದೇ ತುಂಬಿ ಹೋಗಿತ್ತು..Infact ಅದೆಷ್ಟೋ ಬಾರಿ Indirect ಆಗಿ ನನ್ನ ಪ್ರೀತಿಯನ್ನು ಹೇಳಿದರೂ ನಿನಗೆ ಅರ್ಥವಾಗದೇ ಹೋಯಿತು..ಅಥವಾ ಅರ್ಥವಾದರೂ ಅರ್ಥವಾಗದಂತೆ ನಟಿಸಿದ್ಯಾ?

ಅದೇನೇ ಇದ್ರೂ ಇನ್ನು ನನ್ನೀ ಮನಸ್ಸಿಗೆ ಪ್ರೀತಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ಎರಡು ವರ್ಷವಿಡೀ ‘Friendship’ ಎಂಬ ಶೀರ್ಷಿಕೆ ಹೊತ್ತು ಅಂತರಾಳದಲ್ಲಿ ಹಿಡಿದಿಟ್ಟ ಮುಗಿಲಗಲ ಪ್ರೀತಿಯನ್ನು ಹೊರ ಹಾಕಲು ಇದೇ ಸುದಿನ. ಸುಪ್ತ ಹೃದಯದಲ್ಲಿ ಬೆಚ್ಚಗೆ ಕುಳಿತಿದ್ದ ಪ್ರೀತಿ ಹಕ್ಕಿ ಗರಿಗೆದರಿ ಹಾರಲು ಮುಕ್ತವಾದ ದಿನ. ಪ್ರೇಮಿಗಳ ದಿನ!

ನನ್ನ ಪ್ರೀತಿಯ ಮನಸ್ಸು ನಿನ್ನೆದೆಯಲ್ಲಿ ಹೂವಾಗಿ ಅರಳಲು ಚೂರೇ ಚೂರು ಜಾಗ ಕೊಡು. ನನ್ನೊಳಗಿನ ಭಾವನೆಗಳೆಂಬ ಹಿರಿದಾದ ಪೆಟ್ಟಿಗೆಗೆ ಪುಟ್ಟ ಕೀಲಿ ಕೈ ನೀನಾಗು. ಬೊಗಸೆಯಷ್ಟು ಪ್ರೀತಿ, ಚಿಟಿಕೆಯಷ್ಟು ಪೊಸೆಸಿವ್​ನೆಸ್, ಮುಷ್ಟಿಯಷ್ಟು ಕಾಳಜಿಯೊಂದಿಗೆ ಬದುಕ ತುದಿಯವರೆಗೂ ಜೊತೆಯಾಗಿರೋಣ. ನಿರಾಕರಣೆಯ ಮಾತು ಬೇಡ, ದಯಮಾಡಿ ನನ್ನ ಪ್ರೀತಿಯ ಒಪ್ಪಿಕೋ. ನನ್ನೆಲ್ಲಾ ಭಾವನೆಗಳನ್ನು ಅಕ್ಷರದೊಳಗೆ ಬಂಧಿಯಾಗಿಸಿ ನಿನ್ನ ಹೃದಯದಂಚೆಗೆ ರವಾನಿಸಿರುವೆ.’ಒಪ್ಪಿಗೆ’ ಎಂಬ ಮುದ್ರೆ ಒತ್ತಿ ‘ಹೊಸ ಪ್ರೇಮ ಅಧ್ಯಾಯಕ್ಕೆ’ ಮುನ್ನುಡಿ ಬರಿ. ಬಾಳ ಬುತ್ತಿಯಲಿ ಪ್ರೀತಿ ತುತ್ತಿಗೆ ಕೊರತೆಯಾಗದಿರುವಂತೆ ಬದುಕೋಣ…ಏನಂತೀಯಾ?

-ಇಂತಿ ನಿನ್ನವಳು

ಕವನ.ಬಿ.ಎಸ್ ಸ್ನಾತಕೋತ್ತರ ವಿದ್ಯಾರ್ಥಿನಿ ತೀರ್ಥಹಳ್ಳಿ ಶಿವಮೊಗ್ಗ

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಲಾಕ್​ಡೌನ್ ನನ್ನ ಪ್ರೀತಿಯನ್ನು ಫ್ಲಾಪ್ ಮಾಡಿತು..

Published On - 6:16 pm, Sun, 14 February 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ