ಮನೆಯಲ್ಲಿ ಹುತ್ತ, ಜೇನುಗೂಡು ಕಟ್ಟುವುದರಿಂದ ಸಿಗುವ ಫಲವೇನು? ಅದರ ಸಂಕೇತವೇನು?

|

Updated on: Apr 23, 2021 | 6:25 AM

ಮನೆಯ ಒಳಗೆ, ಹೊರಗೆ ಎರಡೂ ಕಡೆ ಏಕಕಾಲದಲ್ಲಿ ಜೇನುಗೂಡು ಕಟ್ಟಬಾರದು. ಇದು ನಮಗೆ ಅಪಾಯ ಹಾಗೂ ದುರಾದೃಷ್ಟದ ಮುನ್ಸೂಚನೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆಯಲ್ಲಿ ಹುತ್ತ, ಜೇನುಗೂಡು ಕಟ್ಟುವುದರಿಂದ ಸಿಗುವ ಫಲವೇನು? ಅದರ ಸಂಕೇತವೇನು?
ಜೇನುಗೂಡು
Follow us on

ನೆಮ್ಮದಿಯಿಂದ ಜೀವನ ಮಾಡಲು ತಮ್ಮದೇ ಆದ ಒಂದು ಸ್ವಂತ ಮನೆಗಳು ಇರಬೇಕು ಎಂದು ಎಲ್ಲರೂ ಆಸೆ ಪಡ್ತಾರೆ. ಅಷ್ಟೇ ಅಲ್ಲ, ಆ ಮನೆಯಲ್ಲಿ ಸದಾ ಸುಖ-ಸಂತೋಷ, ನೆಮ್ಮದಿ ಇರಬೇಕು ಎಂದು ಆಸೆ ಪಡ್ತಾರೆ. ಸುಖ ನೆಮ್ಮದಿ ಬೇಕು ಅಂದ್ರೆ ನಾವು ಕಟ್ಟುವ ಮನೆಯ ವಾಸ್ತು ಸರಿ ಇರಬೇಕು ಎನ್ನಲಾಗುತ್ತೆ. ಯಾವುದೇ ಮನೆ ಕಟ್ಟುವಾಗಲೂ ವಾಸ್ತು ನೋಡಿಯೇ ಕಟ್ಟುತ್ತಾರೆ. ಇದು ಹಿಂದಿನ ಕಾಲದಿಂದಲೂ ನೆಡೆದುಕೊಂಡು ಬಂದಿರುವ ಪದ್ಧತಿ ಮತ್ತು ನಂಬಿಕೆ. ಹೀಗೆ ವಾಸ್ತು ನೋಡಿ ಕಟ್ಟಿದ ಮನೆಯಲ್ಲೂ ಕೆಲವೊಮ್ಮೆ ನಾನಾ ವಿಧವಾದ ಅಶುಭಗಳು, ಅಪಶಕುನಗಳು ನಡೆಯೋದುಂಟು. ಹೀಗೆ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಡೆಯುವ ಕೆಲವೊಂದು ಘಟನೆಗಳು ಮುಂಬರುವ ಶುಭ, ಅಶುಭ ಘಟನೆಗಳನ್ನು ಸೂಚಿಸುತ್ತವೆ ಎನ್ನುವ ನಂಬಿಕೆ ಇದೆ.

ಹೀಗೆ ಮುನ್ನೆಚ್ಚರಿಕೆ ಸಿಗುವುದರಿಂದ ತಪ್ಪುಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತೆ. ಹೀಗೆ ಸೂಚನೆ ನೀಡುವ ವಿಚಾರಕ್ಕೆ ಬಂದ್ರೆ ಮನೆಯಲ್ಲಿ ಹುತ್ತ ಬೆಳೆಯುವುದು ಅಥವಾ ಜೇನುಗೂಡು ಕಟ್ಟುವುದು ಪ್ರಮುಖವಾದುದು. ಇಷ್ಟಕ್ಕೂ, ಮನೆಯಲ್ಲಿ ಹುತ್ತ, ಜೇನುಗೂಡುಗಳು ಕಟ್ಟೀದ್ರಿಂದ ಸಿಗುವ ಫಲವೇನು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಹಾಗೆಯೇ ಮನೆಯ ದಿಕ್ಕಿಗೆ ಜೇನುಗೂಡು ಕಟ್ಟಿದರೆ ಶುಭ? ಯಾವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಅಶುಭ ಅನ್ನೋ ಲೆಕ್ಕಾಚಾರ ಕೂಡ ನಡೆಯುತ್ತೆ. ಹಾಗಿದ್ರೆ ಬನ್ನಿ ಆ ಬಗ್ಗೆ ಇಲ್ಲಿ ತಿಳಿದುಕೊಳ್ಳಿ..

ಜೇನುಗೂಡು ಕಟ್ಟುವುದರ ಫಲಗಳೇನು?
1. ಮನೆಯ ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಉತ್ತಮ ಫಲ.
2.ಆಗ್ನೇಯದಲ್ಲಿ ಕಟ್ಟಿದರೆ ಆಪ್ತರು ಮನೆಗೆ ಆಗಮಿಸುತ್ತಾರೆ.
3.ದಕ್ಷಿಣದಲ್ಲಿ ಜೇನು ಕಟ್ಟಿದರೆ ಶುಭ ಫಲ.
4.ನೈರುತ್ಯದಲ್ಲಿ ಕಟ್ಟಿದರೆ ದಾರಿದ್ರ್ಯ, ಕಷ್ಟಗಳು ಬರುವ ಸಂಭವ.
5.ಪಶ್ಚಿಮ ದಿಕ್ಕಿನಲ್ಲಿ ಕಟ್ಟಿದರೆ ಶುಭ ಸೂಚನೆ.
6ವಾಯವ್ಯದಲ್ಲಿ ಕಟ್ಟಿದರೆ ಕೆಲಸ ಬೇಗ ಕೈಗೂಡುತ್ತೆ.
7.ಉತ್ತರ ದಿಕ್ಕಿನಲ್ಲಿ ಜೇನು ಕಟ್ಟಿದ್ರೆ ದ್ರವ್ಯ ಪ್ರಾಪ್ತಿಯಾಗುತ್ತೆ.
8.ಈಶಾನ್ಯದಲ್ಲಿ ಜೇಣು ಕಟ್ಟಿದ್ರೆ ಶುಭ .
9.ಮನೆಯ ಮಧ್ಯಭಾಗದಲ್ಲಿ ಜೇನು ಕಟ್ಟಿದ್ರೆ ಸ್ತ್ರೀಯರಿಂದ ಶುಭ.

ಇನ್ನು ಮನೆಯ ಒಳಗೆ, ಹೊರಗೆ ಎರಡೂ ಕಡೆ ಏಕಕಾಲದಲ್ಲಿ ಜೇನುಗೂಡು ಕಟ್ಟಬಾರದು. ಇದು ನಮಗೆ ಅಪಾಯ ಹಾಗೂ ದುರಾದೃಷ್ಟದ ಮುನ್ಸೂಚನೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?