ಸನಾತನ ಧರ್ಮವು ನಮ್ಮ ಜೀವನ ಕ್ರಮದಲ್ಲಿ ಅನೇಕ ನಿಯಮಗಳನ್ನು ಕಲ್ಪಸಿಕೊಡುತ್ತದೆ. ಅವುಗಳನ್ನು ಅನುಸರಿಸಿ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಯಾವುದೇ ವ್ಯಕ್ತಿಯು ಮಾಡಬಹುದಾದ ಅನೇಕ ಚಟುವಟಿಕೆಗಳಿವೆ. ಅವು ಅತ್ಯಂತ ಪ್ರಯೋಜನಕಾರಿಯೂ ಆಗಿವೆ, ಸಾರ್ಥಕ್ಯದ ಅನುಭವವನ್ನೂ ನೀಡುತ್ತದೆ. ಈ ಉದಾತ್ತ ಧಾರ್ವಿುಕ ನಿಯಮಗಳ ಪಾಲನೆ ಮನುಷ್ಯನ ಜೀವನದಲ್ಲಿ ಸಂತೋಷ, ಸಂತೃಪ್ತಿ ಮತ್ತು ಆನಂದವನ್ನು ತಂದುಕೊಡುತ್ತದೆ. ಸಂಜೆ ಮನೆಯ ಮುಖ್ಯ ದ್ವಾರದಲ್ಲಿ (house entrance) ದೀಪವನ್ನು ಹಚ್ಚುವುದು (lighting the lamp) ಶುಭ ಎಂದು ನಾವು ಆಗಾಗ್ಗೆ ಹಿರಿಯರಿಂದ ಕೇಳುತ್ತೇವೆ. ಹಾಗೆ ದೀಪ ಹಚ್ಚುವುದಕ್ಕೆ ಹಿಂದೂ ಧಾರ್ಮಿಕ ಮಹತ್ವವಿದೆ. ಅದಲ್ಲದೆ, ಈ ದೀಪ ಹಚ್ಚುವಿಕೆಯು ವೈಜ್ಞಾನಿಕ ದೃಷ್ಟಿಯಿಂದಲೂ (scientific significance) ಹಲವು ಪ್ರಯೋಜನಗಳನ್ನು ಹೊಂದಿವೆ. ಅವು ಯಾವುವು ಎಂಬುದನ್ನು ತಿಳಿಯೋಣ. ಲಕ್ಷ್ಮಿ ದೇವಿಯು ಮನೆಯಲ್ಲಿ ಹೆಜ್ಜೆ ಹಾಕುತ್ತಾಳೆ ಎಂಬುದು ಪ್ರಧಾನ ನಂಬಿಕೆಯಾಗಿದೆ.
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಜೆ ಮುಖ್ಯದ್ವಾರದಲ್ಲಿ ನಿಯಮಿತವಾಗಿ ದೀಪವನ್ನು ಬೆಳಗಿಸಿದರೆ, ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಸಂಜೆ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ. ಇದರಿಂದ ಆ ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ರಾಹುವಿನ ಪ್ರಭಾವ ಕಡಿಮೆಯಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪ್ರತಿದಿನ ಸಂಜೆ ಮುಖ್ಯ ದ್ವಾರದಲ್ಲಿ ದೀಪ ಹಚ್ಚಿದರೆ… ಯಾರ ಜಾತಕದಲ್ಲಿಯಾದರೂ ರಾಹುವಿನ ಅಶುಭ ಪ್ರಭಾವ ಕಡಿಮೆಯಾದರೆ ಮನೆಯಲ್ಲಿ ಧನಾತ್ಮಕ ಶಕ್ತಿಯೂ ಬರುತ್ತದೆ. ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಇದನ್ನೂ ಓದಿ: ದೀಪಾರಾಧನೆ ಸಲಹೆಗಳು: ದೇವರ ಮುಂದೆ ದೀಪವನ್ನು ಹಚ್ಚುವಾಗ ಪಾಲಿಸಿಬೇಕಾದ ಕೆಲವು ನಿಯಮಗಳು ಇಲ್ಲಿವೆ
ಬಡತನ ದೂರವಾಗುತ್ತದೆ.. ಮನೆಯ ಮುಖ್ಯ ಬಾಗಿಲಿನಲ್ಲಿ ಸಂಜೆ ದೀಪ ಹಚ್ಚಿದರೆ ದಾರಿದ್ರ್ಯ ಬರುವುದಿಲ್ಲ. ಸಂತೋಷ ಇರುತ್ತದೆ. ಜೊತೆಗೆ ರೋಗಗಳಿಂದ ಮುಕ್ತಿ ದೊರಕುತ್ತದೆ.
ವೈಜ್ಞಾನಿಕವಾಗಿ ಹೇಳುವುದಾದರೆ ಮನೆಯ ಮುಖ್ಯ ದ್ವಾರದಲ್ಲಿ ನಿಯಮಿತವಾಗಿ ದೀಪವನ್ನು ಬೆಳಗಿಸುವುದರಿಂದ ಮನೆಯ ವಾತಾವರಣವು ಸ್ವಚ್ಛವಾಗಿರುತ್ತದೆ. ಕೆಲವು ವಿಧದ ಕೀಟಗಳು ಸಂಜೆ ಹೆಚ್ಚು ಸಕ್ರಿಯವಾಗಿರುತ್ತವೆ. ಕೀಟಗಳು ಬೆಳಕಿಗೆ ಆಕರ್ಷಿತವಾಗುತ್ತವೆ. ಮನೆಯ ಮುಖ್ಯ ದ್ವಾರದಲ್ಲಿ ದೀಪವಿದ್ದರೆ ಕ್ರಿಮಿ, ಕ್ರಿಮಿಕೀಟಗಳು ಮನೆಗೆ ಬರುವುದಿಲ್ಲ. ಹಿಂದೂ ಪುರಾಣಗಳ ಪ್ರಕಾರ ಮುಖ್ಯ ಬಾಗಿಲಿನ ಬಲಭಾಗದಲ್ಲಿ ದೀಪವನ್ನು ಇಡುವುದು ಯಾವಾಗಲೂ ಮಂಗಳಕರವಾಗಿರುತ್ತದೆ. ತುಪ್ಪ ಅಥವಾ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಎಂಬುದು ಗಮನಿಸತಕ್ಕ ವಿಷಯವಾಗಿದೆ.