TTD Assets, Gold: ತಿರುಪತಿ ತಿಮ್ಮಪ್ಪನ ಬಳಿಯಿದೆ 11 ಟನ್ ಚಿನ್ನ, 17 ಸಾವಿರ ಕೋಟಿ ರೂ ನಗದು

|

Updated on: Jul 26, 2023 | 4:36 PM

ದೇಶಾದ್ಯಂತ 71 ದೇವಸ್ಥಾನಗಳನ್ನು ಟಿಟಿಡಿ ನಿರ್ವಹಿಸುತ್ತಿದ್ದು, ದೇವರ ಅಲಂಕಾರಕ್ಕೆ ಬಳಸುವ ಚಿನ್ನಾಭರಣಗಳು 1.2 ಟನ್ ಕೆಜಿ ಎಂದು ಟಿಟಿಡಿ ಹೇಳಿದೆ. ಬೆಳ್ಳಿ 10 ಟನ್ ಎಂದು TTD ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

TTD Assets, Gold: ತಿರುಪತಿ ತಿಮ್ಮಪ್ಪನ ಬಳಿಯಿದೆ 11 ಟನ್ ಚಿನ್ನ, 17 ಸಾವಿರ ಕೋಟಿ ರೂ ನಗದು
ತಿರುಪತಿ ತಿಮ್ಮಪ್ಪನ ಬಳಿಯಿದೆ 11 ಟನ್ ಚಿನ್ನ
Follow us on

ತಿರುಪತಿ: ತಿರುಮಲ ಬೆಟ್ಟದಲ್ಲಿರುವ ಏಡುಕೊಂಡಲ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಪ್ರಿಯ. ತಿರುಪತಿ ತಿಮ್ಮಪ್ಪ ಬೆಲೆಬಾಳುವ ಆಭರಣಗಳು ಮತ್ತು ವಜ್ರ ವೈಢೂರ್ಯಗಳು ಜೊತೆಗೆ ಅಪಾರ ನಗದು ಸಹ ಹೊಂದಿದ್ದಾರೆ. ಶ್ರೀಸಾಮಾನ್ಯನಿಂದ ಹಿಡಿದು ಶ್ರೀಮಂತರು, ರಾಜರು, ಸಾಮ್ರಾಟರು, ನವಾಬರು, ಬ್ರಿಟಿಷ್ ದೊರೆಗಳು, ಮಹಾಂತರು, ಗಣ್ಯರು, ಜನಪ್ರತಿನಿಧಿಗಳು, ದೇಣಿಗೆ ಮತ್ತು ಕಾಣಿಕೆಯಾಗಿ ಸಲ್ಲಿಸುವ ಅಮೂಲ್ಯವಾದ ಚಿನ್ನಾಭರಣಗಳು ಈ ಬೆಲೆಬಾಳುವ ವಸ್ತುಗಳ ಪಟ್ಟಿಯಲ್ಲಿದೆ (Assets, Gold). ಇದನ್ನೆಲ್ಲಾ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ -ಟಿಟಿಡಿ (Tirumala Tirupati Devasthanams-TTD) ದಾಖಲೆಗಳ ಪ್ರಕಾರ ಖಜಾನೆಯಲ್ಲಿರುವ ಅಮೂಲ್ಯ ಆಭರಣಗಳು 11 ಟನ್ ತೂಕವಿರುತ್ತವೆ. ಟಿಟಿಡಿ ಇದನ್ನೆಲ್ಲ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದೆ. ಇನ್ನು ತಿರುಪತಿ ತಿಮ್ಮಪ್ಪನ ಖಾತೆಯಲ್ಲಿ 17 ಸಾವಿರ ಕೋಟಿ ರೂ. ಹಣ ಸಹ ಇದೆ. ಟಿಟಿಡಿ ಬಳಿ 10 ಟನ್ ಬೆಳ್ಳಿಯಿದ್ದು. ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದೆ.

ಇತ್ತೀಚೆಗೆ ವಾರಾಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಟಿಟಿಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇ.ಒ. ಧರ್ಮಾ ರೆಡ್ಡಿ ಅವರು ತಿರುಪತಿ ತಿಮ್ಮಪ್ಪನ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ. ಶ್ರೀ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನಕ್ಕೆ ಸುಮಾರು ಒಂದು ಲಕ್ಷ ಜನರನ್ನು ತಲುಪಿರುವುದರಿಂದ ಟಿಟಿಡಿಗೆ ಅದೇ ಪ್ರಮಾಣದಲ್ಲಿ ಆದಾಯವೂ ಹೆಚ್ಚಾಗಿದೆ. ಹುಂಡಿ ಕಾಣಿಕೆ, ತಾಳಮದ್ದಳೆ, ವಿವಿಧ ಸೇವೆಗಳು, ದರ್ಶನದ ಟಿಕೆಟ್‌ಗಳ ಮಾರಾಟ, ಪ್ರಸಾದ ಮಾರಾಟ, ಕೊಠಡಿಗಳ ಹಂಚಿಕೆ, ದೇಣಿಗೆ ಇತ್ಯಾದಿಗಳ ಮೂಲಕ ಟಿಟಿಡಿ ಆದಾಯ ಗಳಿಸುತ್ತದೆ. ಆಸ್ತಿ ವಿವರಗಳ ಜತೆಗೆ ಟಿಟಿಡಿಗೆ ಸಂಬಂಧಿಸಿದ ಹಲವು ವಿಷಯಗಳು ವಾರಣಾಸಿ ಸಮ್ಮೇಳನದಲ್ಲಿ ಬಹಿರಂಗಗೊಂಡಿವೆ.

ದೇಶಾದ್ಯಂತ 71 ದೇವಸ್ಥಾನಗಳನ್ನು ಟಿಟಿಡಿ ನಿರ್ವಹಿಸುತ್ತಿದ್ದು, ದೇವರ ಅಲಂಕಾರಕ್ಕೆ ಬಳಸುವ ಚಿನ್ನಾಭರಣಗಳು 1.2 ಟನ್ ಕೆಜಿ ಎಂದು ಟಿಟಿಡಿ ಹೇಳಿದೆ. ಬೆಳ್ಳಿ 10 ಟನ್ ಎಂದು ಸ್ಪಷ್ಟಪಡಿಸಿದ್ದಾರೆ. ಈವರೆಗೆ ವಿವಿಧ ಬ್ಯಾಂಕ್ ಗಳಲ್ಲಿ 17 ಸಾವಿರ ಕೋಟಿ ರೂ. ಠೇವಣಿ ಇಟ್ಟಿರುವ ಟಿಟಿಡಿ, 11 ಟನ್ ಚಿನ್ನ ಠೇವಣಿ ಇಟ್ಟಿರುವುದಾಗಿ ಸ್ಪಷ್ಟಪಡಿಸಿದೆ. ಅಲ್ಲದೆ, ತಿರುಮಲೇಶನನ್ನು ಅಲಂಕರಿಸಲು ಪ್ರತಿ ವರ್ಷ 500 ಟನ್ ಹೂವುಗಳನ್ನು ಬಳಸಲಾಗುತ್ತದೆ. ಪ್ರಸ್ತುತ 24,500 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಟಿಟಿಡಿ ತಿಳಿಸಿದೆ.

ದೇಗುಲದಲ್ಲಿ ಭಕ್ತರ ಸೇವೆಗೆ ನಿತ್ಯ 800 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀವಾರಿ ದೇವಸ್ಥಾನದಲ್ಲಿ ಪ್ರತಿ ವರ್ಷ 5 ಸಾವಿರ ಟನ್ ತುಪ್ಪವನ್ನು ಪ್ರಸಾದ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ. ಟಿಟಿಡಿ ಸ್ಥಿರಾಸ್ತಿ ದಾಖಲೆಯಲ್ಲಿ 6,000 ಎಕರೆ ಅರಣ್ಯ ಪ್ರದೇಶ ಒಳಗೊಂಡಿದೆ ಎಂದು ನಮೂದಿಸಲಾಗಿದೆ.