ಶುಕ್ರವಾರ ಸಂಜೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

Friday Astro Tips: ಲಕ್ಷ್ಮಿ ದೇವಿಗೆ ವಿಶೇಷವಾಗಿ ಸ್ವಚ್ಛತೆ ಇಷ್ಟ. ಹಾಗಾಗಿ ಅಪ್ಪಿತಪ್ಪಿಯೂ ಮನೆಯನ್ನು ಕೊಳಕು ಮಾಡಬೇಡಿ. ಶುಕ್ರವಾರದಂದು ಮನೆಯನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ನೀಡಬೇಕು.

ಶುಕ್ರವಾರ ಸಂಜೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಶುಕ್ರವಾರದ ವಾಸ್ತು ಸಲಹೆ
Follow us
ಸಾಧು ಶ್ರೀನಾಥ್​
|

Updated on: Dec 15, 2023 | 3:13 PM

ಹಿಂದೂ ಧರ್ಮದಲ್ಲಿ ವಾರದ ಎಲ್ಲಾ ಏಳು ದಿನಗಳು ಯಾವುದಾದರೂ ದೇವರು ಅಥವಾ ದೇವತೆಗೆ ಮೀಸಲಾಗಿವೆ. ಅದೇ ರೀತಿ ಶುಕ್ರವಾರವನ್ನು ಲಕ್ಷ್ಮಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಲಕ್ಷ್ಮಿಯನ್ನು ಭಕ್ತಿ ಮತ್ತು ವಿಧಿವಿಧಾನಗಳಿಂದ ಪೂಜಿಸುವ ಮೂಲಕ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಲಕ್ಷ್ಮಿ ದೇವಿಯನ್ನು (Goddess Lakshmi Devi) ಮೆಚ್ಚಿಸಲು ಭಕ್ತರು ಶುಕ್ರವಾರ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಲಕ್ಷ್ಮಿ ದೇವಿಯು ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ (Friday Astro Tips).

ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನಾನಾ ನಿಯಮ ನಿಷ್ಠೆಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಆದಾಗ್ಯೂ, ಹಿಂದೂ ನಂಬಿಕೆಗಳ ಪ್ರಕಾರ ಶುಕ್ರವಾರದಂದು ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ. ಶುಕ್ರವಾರ ಕೆಲವು ಕೆಲಸಗಳನ್ನು ಮಾಡುವ ಮೂಲಕ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು ಎಚ್ಚರಿಕೆಯಿಂದ ಇರಿ. ಶುಕ್ರವಾರದಂದು ಮಾಡಬಾರದ ಐದು ಕೆಲಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಮನೆಯನ್ನು ಕೊಳಕು ಕೊಳಳಾಗಿ ಇಟ್ಟುಕೊಳ್ಳಬೇಡಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇವಲ ಪೂಜಾ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಮನೆಯಲ್ಲಿ ಶುಚಿತ್ವಕ್ಕೆ ವಿಶೇಷ ಮಹತ್ವವಿದೆ. ಲಕ್ಷ್ಮಿ ದೇವಿಗೆ ವಿಶೇಷವಾಗಿ ಸ್ವಚ್ಛತೆ ಇಷ್ಟ. ಹಾಗಾಗಿ ಅಪ್ಪಿತಪ್ಪಿಯೂ ಮನೆಯನ್ನು ಕೊಳಕು ಮಾಡಬೇಡಿ. ಶುಕ್ರವಾರದಂದು ಮನೆಯನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ನೀಡಬೇಕು. ಆದರೆ ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಡಿ.

ಇದನ್ನೂ ಓದಿ:  ಇಂದು ಶುಭ ಶುಕ್ರವಾರ -ಮಾತೆ ಮಹಾಲಕ್ಷ್ಮಿ ಕುರಿತು ಕೆಲ ವಿಸ್ಮಯಕಾರಿ ‌ಮಾಹಿತಿಗಳು ಇಲ್ಲಿವೆ

ಮದ್ಯ ಮತ್ತು ಮಾಂಸ ತಿನ್ನಬೇಡಿ.. ಮದ್ಯ ಮತ್ತು ಮಾಂಸಾಹಾರವನ್ನು ಪೂಜೆಯ ಸಮಯದಲ್ಲಿ ಮಾತ್ರವಲ್ಲದೆ ವಿಶೇಷ ರಜಾ ದಿನಗಳಲ್ಲಿಯೂ ನಿಷೇಧಿಸಲಾಗಿದೆ. ವಿಶೇಷವಾಗಿ ಶುಕ್ರವಾರದಂದು ಮದ್ಯ ಮತ್ತು ಮಾಂಸವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಆ ಮನೆಯ ವೈಭವ ಕ್ರಮೇಣ ಕಳೆದು ಹೋಗುತ್ತದೆ.

ಯಾರಿಗೂ ಸಕ್ಕರೆ ಸಾಲ ಕೊಡಬೇಡಿ ಹಿಂದೂ ನಂಬಿಕೆಗಳ ಪ್ರಕಾರ ಶುಕ್ರವಾರ ಸಕ್ಕರೆಯನ್ನು ದಾನ ಮಾಡಬಾರದು ಅಥವಾ ಎರವಲು ಪಡೆಯಬಾರದು. ಹೀಗೆ ಮಾಡುವುದರಿಂದ ಶುಕ್ರನು ದುರ್ಬಲನಾಗುತ್ತಾನೆ. ಸಂತೋಷ ಮತ್ತು ಖ್ಯಾತಿಯು ಶುಕ್ರನ ಅಂಶಗಳಾಗಿವೆ ಎಂದು ನಂಬಲಾಗಿದೆ. ಶುಕ್ರನು ದುರ್ಬಲನಾಗಿದ್ದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯ ಕೊರತೆ ಇರುತ್ತದೆ.

ಹಣ ಕೊಡಬೇಡಿ.. ತೆಗೆದು ಕೊಳ್ಳಬೇಡಿ ಶುಕ್ರವಾರ ಹಣದ ವ್ಯವಹಾರ ಮಾಡಬಾರದು. ಒಬ್ಬರಿಂದ ಹಣವನ್ನು ತೆಗೆದುಕೊಳ್ಳಬಾರದು ಅಥವಾ ಕೊಡಬಾರದು. ಅದೇ ರೀತಿ ಯಾರ ಬಳಿಯೂ ಸಾಲ ಮಾಡಬಾರದು, ಯಾರಿಗೂ ಸಾಲ ಕೊಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಬಡತನದಿಂದ ಮನೆಯಲ್ಲಿ ತೊಂದರೆ ಉಂಟಾಗುತ್ತದೆ.. ಮನೆಯಲ್ಲಿ ಅಶಾಂತಿ ಇರುತ್ತದೆ ಎಂಬ ನಂಬಿಕೆ ಇದೆ.

ಇತರರನ್ನು ಅವಮಾನ ಮಾಡಬೇಡಿ ಶುಕ್ರವಾರ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸಿ. ಈ ದಿನ ಎಲ್ಲಾ ರೀತಿಯ ಜಗಳಗಳನ್ನು ತಪ್ಪಿಸಿ. ಅದೇ ರೀತಿ ಮಾತಿನ ವಿಚಾರದಲ್ಲೂ ಹಿಡಿತ ಸಾಧಿಸಬೇಕು. ಯಾರನ್ನೂ ನಿಂದಿಸಬೇಡಿ ಅಥವಾ ಅನುಚಿತವಾಗಿ ವರ್ತಿಸಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಅಂಶಗಳನ್ನು ನೀಡಲಾಗಿದೆ. ಇದನ್ನು ಟಿವಿ9 ದೃಢಪಡಿಸಿಲ್ಲ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್