ಆಮೆಯನ್ನು ಜಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಮತ್ತು ಫೆಂಗ್ಶುಯ್ ಎರಡೂ ವಿಧಾನದಲ್ಲೂ ಮನೆಯಲ್ಲಿ ಆಮೆ ಇರುವುದು ಶುಭದಾಯಕ ಎಂದು ಪರಿಗಣಿಸಲಾಗುತ್ತದೆ. ಇನ್ನು ಪೌರಾಣಿಕ ಹಿನ್ನೆಲೆಯಿಂದ ನೋಡುವುದಾದರೆ, ಸ್ವತಃ ಭಗವಾನ್ ಮಹಾವಿಷ್ಣು ಕೂರ್ಮಾವತಾರ (ಅಮೆಯ ರೂಪ) ತಾಳಿದ್ದ ಬಗ್ಗೆ ಪ್ರಸ್ತಾವ ಸಿಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಆಮೆಯು ಸುಖ, ಶಾಂತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಬಹಳ ಮಂದಿ ನಾನಾ ಬಗೆಯಲ್ಲಿ ಆಮೆಯ ರೂಪವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಆಮೆಯ ಆಕಾರವನ್ನು ಮಾಡಿಸಿ, ಅದರ ಉಂಗುರವನ್ನು ಧರಿಸುತ್ತಾರೆ.
ಆಮೆಯ ರೂಪದ ಉಂಗುರ ಧರಿಸುವುದರಿಂದ ಶಾಂತಿ, ಸೌಭಾಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕೆಲವು ರಾಶಿಯವರು ಅಪ್ಪಿತಪ್ಪಿ ಕೂಡ ಆಮೆ ಆಕಾರದ ಉಂಗುರವನ್ನು ಧರಿಸಬಾರದು. ಹಾಗೊಂದು ವೇಳೆ ಧರಿಸಿಬಿಟ್ಟರೆ ಇವರ ಪಾಲಿನ ಸೌಭಾಗ್ಯವು ದೌರ್ಭಾಗ್ಯವಾಗಿ ಮಾರ್ಪಾಡಾಗಿ ಬಿಡುತ್ತದೆ. ಆದ್ದರಿಂದ ಉಂಗುರ ಹಾಕಿಕೊಳ್ಳುವ ಮೊದಲೇ ಜ್ಯೋತಿಷದ ಸಲಹೆ ಪಡೆಯಿರಿ. ಈ ಉಂಗುರ ಧರಿಸುವುದರ ಲಾಭ ಏನು ಹಾಗೂ ಯಾವ ರಾಶಿಗಳವರು ಧರಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
ಉಂಗುರ ಧರಿಸುವುದರ ಲಾಭ ಏನು?
ಆಮೆ ರೂಪದ ಉಂಗುರ ಧರಿಸುವುದರಿಂದ ಜೀವನದ ಹಲವು ಸಮಸ್ಯೆಗಳು ದೂರಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮತ್ತು ಜೀವನದಲ್ಲಿ ನಕಾರಾತ್ಮಕ ಭಾವನೆಗಳು ದೂರವಾಗುತ್ತವೆ. ಮೊದಲೇ ಹೇಳಿದ ಹಾಗೆ ಆಮೆಯನ್ನು ಭಗವಾನ್ ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುತ್ತದೆ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಇದರ ಜತೆಗೆ ಯಾವ್ಯಾವುದೋ ಕಾರಣಗಳಿಗೆ ಅದೃಷ್ಟ ದೊರೆಯುವುದು ವಿಳಂಬ ಆಗುತ್ತಿದ್ದಲ್ಲಿ ಅದೂ ವೇಗ ಪಡೆಯುತ್ತದೆ. ಹಣ ಬರುವ ಮಾರ್ಗ ತೆರೆದುಕೊಳ್ಳುತ್ತದೆ ಹಾಗೂ ಈಗ ಇರುವ ದೋಷಗಳ ನಿವಾರಣೆ ಆಗುತ್ತದೆ.
ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು
ಈ ಉಂಗುರ ಧರಿಸುವುದು ಶುಭವೇನೋ ನಿಜ. ಆದರೆ ಮೇಷ, ವೃಶ್ಚಿಕ, ಮೀನ ಮತ್ತು ಕನ್ಯಾ ರಾಶಿಯವರು ಈ ಉಂಗುರವನ್ನು ಧರಿಸಬಾರದು. ಒಂದು ವೇಳೆ ಧರಿಸಿದರೆ ಬಹಳ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಸಂಕಷ್ಟಕ್ಕೆ ಸಿಲುಕಿಕೊಂಡು, ವ್ಯವಹಾರ ಮಾಡುತ್ತಿದ್ದಲ್ಲಿ ನಷ್ಟ ಕಾಣುವಂತಾಗುತ್ತದೆ. ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ. ಕೌಟುಂಬಿಕ ಕಲಹ ಏರ್ಪಡುತ್ತದೆ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಕಳೆದುಹೋಗುತ್ತದೆ. ಈ ರಾಶಿಯವರು ಆಮೆ ಆಕಾರದ ಉಂಗುರ ಧರಿಸುವ ಬದಲಿಗೆ ಮನೆಯಲ್ಲಿ ಆಮೆ ಆಕಾರದ ವಸ್ತುಗಳನ್ನು ತಂದಿಟ್ಟರೆ ಇಡೀ ಕುಟುಂಬಕ್ಕೆ ಶ್ರೇಯಸ್ಸಾಗುತ್ತದೆ.
ಇದನ್ನೂ ಓದಿ: Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?
(Aries, Scorpio, Pisces and Virgo zodiac sign natives should not wear turtle finger ring according to astrology)
Published On - 5:13 pm, Fri, 30 April 21