ದೇವರ ಮನೆ ನಿರ್ಮಿಸಲು ಅನುಸರಿಸಬೇಕಾದ ನಿಯಮಗಳೇನು? ಸರಳ ತಂತ್ರದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋದು ಹೇಗೆ? ಇಲ್ಲಿದೆ ಸರಳ ಉತ್ತರ
ವಾಸ್ತುಶಾಸ್ತ್ರದ ಪ್ರಕಾರ, ಮನೆಗಳನ್ನು ನಿರ್ಮಿಸಬೇಕಾದ್ರೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಅದ್ರಲ್ಲೂ ಮನೆಗಳಲ್ಲಿ ದೇವರ ಮನೆಯನ್ನು ನಿರ್ಮಿಸೋಕೆ, ಮನೆಯ ಈಶಾನ್ಯ ಮತ್ತು ಬ್ರಹ್ಮಸ್ಥಾನವನ್ನು ಗುರುತಿಸಲಾಗುತ್ತೆ.
ಹಿಂದೂ ಪುರಾಣಗಳ ಪ್ರಕಾರ, ದೇವಸ್ಥಾನಗಳಲ್ಲಿ ಧನಾತ್ಮಕ ಶಕ್ತಿ ಅಡಗಿರುತ್ತೆ. ಇದೇ ಕಾರಣಕ್ಕೆ ದೇಗುಲಗಳಿಗೆ ಹೋದ್ರೆ, ನೆಮ್ಮದಿ, ಶಾಂತಿ, ಉಲ್ಲಾಸ ಹಾಗೂ ನವಚೈತನ್ಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇನ್ನೂ ವಾಸ್ತುಶಾಸ್ತ್ರದ ಪ್ರಕಾರ, ಮನೆಗಳನ್ನು ನಿರ್ಮಿಸಬೇಕಾದ್ರೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಅದ್ರಲ್ಲೂ ಮನೆಗಳಲ್ಲಿ ದೇವರ ಮನೆಯನ್ನು ನಿರ್ಮಿಸೋಕೆ, ಮನೆಯ ಈಶಾನ್ಯ ಮತ್ತು ಬ್ರಹ್ಮಸ್ಥಾನವನ್ನು ಗುರುತಿಸಲಾಗುತ್ತೆ. ಆದ್ರೆ ಯಾವುದೇ ಕಾರಣಕ್ಕೂ ವಾಯುವ್ಯ, ನೈಋತ್ಯ ಹಾಗೂ ಆಗ್ನೇಯ ದಿಕ್ಕುಗಳಲ್ಲಿ ದೇವರ ಮನೆಯನ್ನು ನಿರ್ಮಿಸಬಾರದು ಅನ್ನೋದನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮಸ್ಥಾನದಲ್ಲಿ ಭಜನೆ, ಕಥೆ, ಹವನ, ಸಾಮೂಹಿಕ ಪೂಜೆಗಳನ್ನಷ್ಟೇ ಮಾಡಬೇಕು ಅನ್ನೋದನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ದೇವರ ಮನೆ ನಿರ್ಮಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಅನ್ನೋದನ್ನು ತಿಳಿಯೋಣ.
ದೇವರ ಮನೆ ನಿರ್ಮಿಸಲು ಅನುಸರಿಸಬೇಕಾದ ನಿಯಮಗಳು 1.ದೇವರ ಕೋಣೆಯ ಗೋಡೆಯ ದಪ್ಪ 4 ಇಂಚು ಇರಬೇಕು. 2.ದೇವರ ಕೋಣೆಯ ಬಾಗಿಲು ಪಶ್ಚಿಮ ದಿಕ್ಕಿನ ಕಡೆ ಇರಬೇಕು. 3.ದೇವರ ವಿಗ್ರಹ, ಫೋಟೋಗಳನ್ನು ಪೂರ್ವ ದಿಕ್ಕಿನ ಕಡೆ ಇಡಬೇಕು. 4.ದೇವರ ಮನೆಯ ಮೇಲ್ಭಾಗ ಪಿರಮಿಡ್ ಆಕಾರದ್ದಾಗಿರಬೇಕು. 5.ಈಶಾನ್ಯ ಭಾಗ ಮುಚ್ಚದಂತೆ ಕಿಟಕಿಗಳನ್ನು ಇಡಬೇಕು. 6.ಪೂಜೆ ಮಾಡುವವರ ಮುಖ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆ ಇರಬೇಕು. 7.ದೇವರ ಮನೆಗೆ ಮರದಿಂದ ಮಾಡಿದ ಬಾಗಿಲನ್ನು ಮಾತ್ರ ಇಡಬೇಕು. 8.ದೇವರ ಜಗುಲಿಯನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮಾತ್ರ ಹಾಕಬೇಕು. 9.ದೇವರ ಸಲಕರಣೆಗಳನ್ನು ಇಡುವ ಪೆಟ್ಟಿಗೆಯನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಬೇಕು. 10.ದೇವರ ಮುಖ ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ನೊಡುವಂತಿರಬೇಕು. 11.ದೇವರ ಫೋಟೋಗಳ ಜತೆಯಲ್ಲಿ ಪಿತೃಗಳ ಫೋಟೋಗಳನ್ನು ಇಡಬಾರದು. 12.ಪೂಜೆ ಮಾಡುವವರ ಮುಖ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆ ಇಡಬೇಕು. 13.ಪೂಜೆ ಮಾಡುವವರ ಬೆನ್ನು ಬಾಗಿಲಿನ ಕಡೆ ಇರಬಾರದು. 14.ಎಲ್ಲಾ ದೇವರು ಒಂದೇ ದಿಕ್ಕನ್ನು ನೋಡಬೇಕು. 15.ಒಂದರ ಮೇಲೊಂದರಂತೆ ದೇವರ ಫೋಟೊ ಇಡಬಾರದು. 16.ದೇವರ ಎದುರು ನೇರವಾಗಿ ಕುಳಿತು ಪೂಜೆ ಮಾಡಬಾರದು. 17.ದೇವರ ಕೋಣೆಯಲ್ಲಿ ಚಿಕ್ಕದಾದ ವಿಗ್ರಹಗಳನ್ನಷ್ಟೇ ಇಡಬೇಕು. 18.ದೇವರ ಮನೆ ಹೊರತುಪಡಿಸಿ, ಬೇರೆಲ್ಲೂ ದೇವರ ಫೋಟೋಗಳನ್ನು ಇಡಬಾರದು. 19.ದೇವರ ಮನೆಗೆ ಹೊಸ್ತಿಲನ್ನು ಇಟ್ಟಿರಬೇಕು. 20.ದೇವರ ಮನೆಯಲ್ಲಿ ಕೇವಲ ಸೌಮ್ಯ ದೇವತೆಗಳನ್ನಷ್ಟೇ ಇಡಬೇಕು. 21.ದೇವರ ಮನೆಯ ಮೇಲೆ ಯಾವುದೇ ತೂಕದ ವಸ್ತುಗಳನ್ನು ಇಡಲು ಸಾಧ್ಯವಾಗದಂತೆ ನಿರ್ಮಿಸಬೇಕು. 22.ದೇವರ ಮನೆ ಬಾಗಿಲಿಗೆ ಎದುರಾಗಿ ಶೌಚಾಲಯ, ಮೆಟ್ಟಿಲುಗಳನ್ನು ಇಡಬಾರದು. 23.ದೇವರ ಮನೆ ಮೇಲೆ ಶೌಚಾಲಯ, ಅಡುಗೆ ಮನೆ, ಮೆಟ್ಟಿಲುಗಳು ಬರಬಾರದು. 24.ದೇವರ ಮನೆಗೂ ಹಾಗೂ ಶೌಚಾಲಯಕ್ಕೂ ಒಂದೇ ಗೋಡೆ ಇರಬಾರದು. 25.ದೇವರ ಮನೆ ಎದುರು ಅಡುಗೆ ಮನೆಯ ಬಾಗಿಲು, ಸ್ಟೌ ಇರಬಾರದು. 26.ದೇವರ ಮನೆಯ ನೆಲಕ್ಕೆ ಬಿಳಿ ಬಣ್ಣದ ಪ್ಲೋರಿಂಗ್ ಇರಬೇಕು. 27.ದೇವರ ಮನೆಯ ಗೋಡೆಗಳ ಬಣ್ಣ ಬಿಳಿ ಅಥವಾ ತಿಳಿ ನೀಲಿಯಾಗಿರಬೇಕು.
ಹೀಗೆ ದೇವರ ಮನೆ ಕಟ್ಟಲು ಇಷ್ಟೆಲ್ಲಾ ನಿಯಮಗಳನ್ನು ಅನುಸರಿಸಿದ್ರೆ ಮನೆಗೆ ಹಾಗೂ ಕುಟುಂಬಕ್ಕೆ ಶುಭವಾಗುತ್ತೆ ಎನ್ನಲಾಗುತ್ತೆ.
ಇದನ್ನೂ ಓದಿ: Vastu Tips: ಚಪ್ಪಲಿಗಳನ್ನು ಎಲ್ಲಿಡಬೇಕು? ಮನೆಯ ಋಣಾತ್ಮಕ ಅಂಶ ದೂರಮಾಡಲು ಈ ವಾಸ್ತು ಸಲಹೆಗಳನ್ನು ಗಮನಿಸಿ