AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Dance Day 2021: ಇಂದು ಅಂತಾರಾಷ್ಟ್ರೀಯ ನೃತ್ಯ ದಿನ; ಈ ಬಾರಿ ಆನ್​​ಲೈನ್ ಮೂಲಕವೇ ಆಚರಣೆ

ನೃತ್ಯವನ್ನು ಇಷ್ಟಪಡದವರು ತುಂಬ ಕಡಿಮೆ ಜನರು ಇದ್ದಾರೆ. ಈ ನೃತ್ಯವೆಂಬುದರಲ್ಲಿ ಅದೆಷ್ಟೋ ಪ್ರಕಾರಗಳು. ಜಾನಪದದಿಂದ ಹಿಡಿದು ಪಾಶ್ಚಿಮಾತ್ಯ ನೃತ್ಯದವರೆಗೆ ಎಲ್ಲ ರೀತಿಯ ಡ್ಯಾನ್ಸ್​ಗಳು ಒಂದೊಂದು ತರ ಇಷ್ಟವಾಗುತ್ತವೆ.

International Dance Day 2021: ಇಂದು ಅಂತಾರಾಷ್ಟ್ರೀಯ ನೃತ್ಯ ದಿನ; ಈ ಬಾರಿ ಆನ್​​ಲೈನ್ ಮೂಲಕವೇ ಆಚರಣೆ
ನೃತ್ಯದ ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Apr 29, 2021 | 1:31 PM

Share

ಇಂದು ಅಂತಾರಾಷ್ಟ್ರೀಯ ನೃತ್ಯ ದಿನ (International Dance Day). ನೃತ್ಯ ಕಲಿಕೆ, ಪ್ರದರ್ಶನವನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್​ 29ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ. ಹಾಗೇ ಈ ಬಾರಿ ನೃತ್ಯದ ಉದ್ದೇಶ (Purpose of dance) ಎಂಬ ಥೀಮ್​ನೊಂದಿಗೆ ಅಂತಾರಾಷ್ಟ್ರೀಯ ನೃತ್ಯದಿನವನ್ನು ಆಚರಿಸಲಾಗುತ್ತಿದೆ.

ಏನಿದರ ಇತಿಹಾಸ? ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್​ ಇನ್​​ಸ್ಟಿಟ್ಯೂಟ್​ (ಐಐಟಿ)ನ ನೃತ್ಯ ಸಮಿತಿ. ಈ ಐಐಟಿ ಯುನೆಸ್ಕೋದ ಕಲಾಪ್ರದರ್ಶನಗಳ ಪ್ರಮುಖ ಪಾಲುದಾರನೂ ಹೌದು. 1982ರಿಂದಲೂ ಇದನ್ನೂ ಆಚರಿಸಿಕೊಂಡು ಬರಲಾಗುತ್ತಿದ್ದು, ನೃತ್ಯ ಪ್ರಕಾರದ ಮೌಲ್ಯ, ಪ್ರಾಮುಖ್ಯತೆಯನ್ನು ಅರಿತವರು ಈ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ತುಂಬ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ನೃತ್ಯ ಪ್ರಕಾರಗಳು, ಕಲಾವಿದರ ಬಗ್ಗೆ ಸರ್ಕಾರಗಳು, ರಾಜಕಾರಣಿಗಳು ಒಲವು ತೋರಿಸುತ್ತಿಲ್ಲ ಎಂಬುದು ಅನೇಕರ ಬೇಸರ.

ಏಪ್ರಿಲ್​ 29ರನ್ನೇ ಆಯ್ಕೆ ಮಾಡಿದ್ದೇಕೆ? ಐಐಟಿಯ ನೃತ್ಯ ಸಮಿತಿ ಏಪ್ರಿಲ್​ 29ರಂದೇ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಫ್ರೆಂಚ್​ನ ಪ್ರಸಿದ್ಧ ನೃತ್ಯಗಾರ, ಆಧುನಿಕ ಬ್ಯಾಲೆ ನೃತ್ಯದ ಸೃಷ್ಟಿಕರ್ತ ಜೀನ್​ ಜಾರ್ಜಸ್​ ನೊವೆರೆ ಅವರ ಜನ್ಮದಿನ. ಜೀನ್​ ಅವರ ಗೌರವಾರ್ಥ ಪ್ರತಿವರ್ಷ ಏಪ್ರಿಲ್​ 29ರಂದು ಸಂಭ್ರಮಿಸಲಾಗುತ್ತದೆ. ನೃತ್ಯ ಕಲೆಯೆಂಬುದು ಎಲ್ಲ ರೀತಿಯ ರಾಜಕೀಯ, ಸಾಂಸ್ಕೃತಿಕ, ಜನಾಂಗೀಯ ಅಡೆತಡೆಗಳನ್ನು ದಾಟಬೇಕು. ವಿಶ್ವಾದ್ಯಂತ ಜನರು ಈ ನೃತ್ಯವೆಂಬ ಭಾಷೆಯ ಮೂಲಕ ಒಗ್ಗಟ್ಟಾಗಬೇಕೆಂಬ ಬಲವಾದ ಆಶಯದೊಂದಿಗೆ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಈ ಬಾರಿ ಕೂಡ ಅಂತಾರಾಷ್ಟ್ರೀಯ ನೃತ್ಯದಿನವನ್ನು ಆನ್​ಲೈನ್ ಮೂಲಕವೇ ಆಚರಿಸಲಾಗುತ್ತಿದೆ. ನೃತ್ಯ ಮಾಡಿ ಆ ವಿಡಿಯೋವನ್ನು, ಇಂಟರ್​ನ್ಯಾಷನಲ್ ಡ್ಯಾನ್ಸ್​ ಡೇ ಸಂಬಂಧಿತ ಕೋಟ್​ಗಳೊಂದಿಗೆ www.iti-worldwide.org. ಎಂದು ಐಟಿಐನ ನೃತ್ಯ ಸಮಿತಿ ತಿಳಿಸಿದೆ.

ನೃತ್ಯವನ್ನು ಇಷ್ಟಪಡದವರು ತುಂಬ ಕಡಿಮೆ ಜನರು ಇದ್ದಾರೆ. ಈ ನೃತ್ಯವೆಂಬುದರಲ್ಲಿ ಅದೆಷ್ಟೋ ಪ್ರಕಾರಗಳು. ಜಾನಪದದಿಂದ ಹಿಡಿದು ಪಾಶ್ಚಿಮಾತ್ಯ ನೃತ್ಯದವರೆಗೆ ಎಲ್ಲ ರೀತಿಯ ಡ್ಯಾನ್ಸ್​ಗಳು ಒಂದೊಂದು ತರ ಇಷ್ಟವಾಗುತ್ತವೆ. ಭಾರತ ಸೇರಿ ಪ್ರತಿ ರಾಷ್ಟ್ರಗಳಲ್ಲೂ ಅಲ್ಲಿನ ಸಂಪ್ರದಾಯ, ಪರಂಪರೆ ಬಿಂಬಿಸುವ ನೃತ್ಯ ಪ್ರಕಾರಗಳು ಇವೆ. ನೃತ್ಯವನ್ನು ಕೇವಲ ಹವ್ಯಾಸ ಮಾಡಿಕೊಂಡವರೂ ಇದ್ದಾರೆ..ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುವವರ ಸಂಖ್ಯೆಯೂ ದೊಡ್ಡದಿದೆ. ಇದೇ ಡ್ಯಾನ್ಸ್ ಒಂದಷ್ಟು ಜನರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ಏರಿಸಿದೆ. ಇಂಥ ನೃತ್ಯ ಕಲೆಗೆ ಇನ್ನೂ ಹೆಚ್ಚಿನ ಆದ್ಯತೆ, ಬೆಲೆ, ಗೌರವ ಸಿಗಬೇಕು ಎಂಬುದು ಕಲಾವಿದರ, ನೃತ್ಯಪ್ರೇಮಿಗಳ ಆಶಯ.

ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಿ; ಬೇರೆ ಯಾವ ಬಾಬತ್ತಿನಲ್ಲೂ ಹಣ ಪಡೆಯಬೇಡಿ: ಸರ್ಕಾರದ ಖಡಕ್ ಆದೇಶ

VaccineDrive: ಲಸಿಕಾ ಅಭಿಯಾನಕ್ಕೆ 104 ದಿನ; ಇಲ್ಲಿಯವರೆಗೆ 15ಕೋಟಿಗಿಂತಲೂ ಹೆಚ್ಚು ಕೊವಿಡ್ ಲಸಿಕೆ ವಿತರಣೆ

ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ಸೋಮಣ್ಣ; ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ ಎಂದ ಮಾಜಿ ಸಚಿವ ಕೆ.ಜೆ. ಜಾರ್ಜ್

Published On - 1:29 pm, Thu, 29 April 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!