Vastu Tips: ಚಪ್ಪಲಿಗಳನ್ನು ಎಲ್ಲಿಡಬೇಕು? ಮನೆಯ ಋಣಾತ್ಮಕ ಅಂಶ ದೂರಮಾಡಲು ಈ ವಾಸ್ತು ಸಲಹೆಗಳನ್ನು ಗಮನಿಸಿ
ವಾಸ್ತು ಪ್ರಕಾರ ಚಪ್ಪಲಿ ಒಂದು ಋಣಾತ್ಮಕ ಶಕ್ತಿಯುಳ್ಳ ವಸ್ತು. ನೆಗೆಟಿವ್ ಎನರ್ಜಿ ಇರುವ ವಸ್ತು ಎಂದು ಚಪ್ಪಲಿ ಪರಿಗಣಿತವಾಗುತ್ತದೆ. ಹಾಗಾಗಿ, ಚಪ್ಪಲಿಯನ್ನು ತೆಗೆದಿಡಲು ಇಂಥದ್ದೇ ಎಂಬ ಸೂಕ್ತ ಸ್ಥಳವನ್ನು ಗುರುತಿಸಲಾಗಿದೆ. ಎಲ್ಲಿ ಇಂಥ ಶಿಸ್ತಿನ, ಸ್ವಚ್ಛತೆಯ ನಿಯಮ ಸರಿಯಾಗಿ ಇರುವುದಿಲ್ಲವೋ ಅಂಥ ಕಡೆಗಳಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ ಮತ್ತು ತಾಯಿ ಲಕ್ಷ್ಮೀ ದೇವಿಯು ಇರುವುದಿಲ್ಲ ಎಂಬ ನಂಬಿಕೆ ಇದೆ.
ಬಹಳಷ್ಟು ಮನೆಗಳಲ್ಲಿ ಚಪ್ಪಲಿಗಳನ್ನು ಬಿಡಲು ಸೂಕ್ತ ಸ್ಥಳ ಇರುವುದಿಲ್ಲ. ಅಥವಾ ಮನೆ ಮಂದಿಗೆ ಸರಿಯಾದ ಸ್ಥಳದಲ್ಲಿ ಚಪ್ಪಲಿ ತೆಗೆದಿಡುವ ಅಭ್ಯಾಸ ಇರುವುದಿಲ್ಲ. ಬಂದು ಹಾಗೇ ತೆಗೆದು ಅಲ್ಲೆಂದರಲ್ಲಿ ಇಟ್ಟುಬಿಡುತ್ತಾರೆ. ಆದರೆ, ನಮ್ಮ ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿ ಇಡುವುದಕ್ಕೂ ಸೂಕ್ತ ಸ್ಥಳ, ರೀತಿ-ನೀತಿ ಎಂಬುದಿತ್ತು.. ಮನೆಯ ಒಳಗೆ ಬರುವ ಮೊದಲು ಅಂಗಳದಲ್ಲೇ ಚಪ್ಪಲಿ ಬಿಟ್ಟು, ಕಾಲು ತೊಳೆದು ಬರುತ್ತಿದ್ದೆವು. ಈ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ವಾಸ್ತು ಪ್ರಕಾರ ಚಪ್ಪಲಿ ಒಂದು ಋಣಾತ್ಮಕ ಶಕ್ತಿಯುಳ್ಳ ವಸ್ತು. ನೆಗೆಟಿವ್ ಎನರ್ಜಿ ಇರುವ ವಸ್ತು ಎಂದು ಚಪ್ಪಲಿ ಪರಿಗಣಿತವಾಗುತ್ತದೆ. ಹಾಗಾಗಿ, ಚಪ್ಪಲಿಯನ್ನು ತೆಗೆದಿಡಲು ಇಂಥದ್ದೇ ಎಂಬ ಸೂಕ್ತ ಸ್ಥಳವನ್ನು ಗುರುತಿಸಲಾಗಿದೆ. ಎಲ್ಲಿ ಇಂಥ ಶಿಸ್ತಿನ, ಸ್ವಚ್ಛತೆಯ ನಿಯಮ ಸರಿಯಾಗಿ ಇರುವುದಿಲ್ಲವೋ ಅಂಥ ಕಡೆಗಳಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ ಮತ್ತು ತಾಯಿ ಲಕ್ಷ್ಮೀ ದೇವಿಯು ಇರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದರೆ, ವಾಸ್ತು ಪ್ರಕಾರ ಚಪ್ಪಲಿಗಳನ್ನು ಎಲ್ಲಿ ಬಿಡಬೇಕು ಎಂದು ಮಾಹಿತಿ ತಿಳಿದುಕೊಳ್ಳಿ.
ಮುಖ್ಯ ಬಾಗಿಲಿನಿಂದ ಮೂರು ಅಡಿ ದೂರದಲ್ಲಿ ಚಪ್ಪಲಿಗಳನ್ನು ಬಿಡಿ ವಾಸ್ತು ಪ್ರಕಾರ, ಅತಿ ಉತ್ತಮವಾದ, ಹೆಚ್ಚು ಹಣದ ಚಪ್ಪಲಿಯನ್ನೂ ಮನೆಯ ಹೊರಗೆಯೇ ಇಡಬೇಕು. ಶೂ ರ್ಯಾಕ್ನ್ನು ಕೂಡ ಮನೆಯ ಹೊರಗೆಯೇ ಇಡಬೇಕು. ಯಾವುದೇ ಕಾರಣಕ್ಕೂ ಮನೆಯೊಳಗೆ ಚಪ್ಪಲಿ ಇಡುವುದು ಸೂಕ್ತವಲ್ಲ. ಜೊತೆಗೆ ಶೂ ರ್ಯಾಕ್ ಅಥವಾ ಚಪ್ಪಲಿ ಸ್ಟಾಂಡ್ ಮುಚ್ಚಿಕೊಂಡಿರಬೇಕು. ತೆರೆದಿರಬಾರದು.
ಹಾಸಿಗೆ ಅಡಿಯಲ್ಲಿ ಚಪ್ಪಲಿ ಬಿಡಬೇಡಿ ಕೆಲವರು ಚಪ್ಪಲಿಗಳನ್ನು ತಮ್ಮ ಮಲಗುವ ಹಾಸಿಗೆ, ಕುಳಿತುಕೊಳ್ಳುವ ಮಂಚದ ಕೆಳಗಡೆ ಇಡುತ್ತಾರೆ. ಇದು ಒಳ್ಳೆಯದಲ್ಲ. ಇದರಿಂದಲೂ ಮನೆಯಲ್ಲಿ ಅಶಾಂತಿ, ಸಂಬಂಧಗಳಲ್ಲಿ ಅಸಮಾಧಾನ ಉಂಟಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ, ಮಲಗುವ ಹಾಸಿಗೆಯ ಅಡಿಯಲ್ಲಿ ಚಪ್ಪಲಿ ಬಿಡಬೇಡಿ.
ಅಡುಗೆ ಕೋಣೆಯ ಬಳಿ ಚಪ್ಪಲಿ ಇಡಬಾರದು ಹಲವಾರು ಬಾರಿ ಮನೆಯ ಒಳಗೆ ಬಂದ ಚಪ್ಪಲಿ, ಅಡುಗೆ ಕೋಣೆಯಿಂದ ಬಹಳ ದೂರವೇನೂ ಇರುವುದಿಲ್ಲ. ಸಣ್ಣ ಮನೆಯಲ್ಲಿ ಅಡುಗೆ ಕೋಣೆಯ ವರೆಗೂ ಚಪ್ಪಲಿ ಬಂದುಬಿಡುತ್ತದೆ. ಈ ಅಭ್ಯಾಸವೂ ಒಳ್ಳೆಯದಲ್ಲ. ಚಪ್ಪಲಿಯನ್ನು ಅಡುಗೆ ಕೋಣೆಯ ಬಳಿ ತಂದರೆ ಸ್ವಚ್ಛತೆ, ಆರೋಗ್ಯಕ್ಕೂ ಸಮಸ್ಯೆ ಎದುರಾಗಬಹುದು. ಶುಚಿತ್ವಕ್ಕೆ ಧಕ್ಕೆಯಾಗಬಹುದು. ಹಾಗಾಗಿ ಅಲ್ಲಿಂದ ದೂರವೇ ಇರಬೇಕು.
ದೇವರ ಕೋಣೆ, ಹಣ ಇಡುವ ಸ್ಥಳಗಳಲ್ಲಿ ಚಪ್ಪಲಿ ಬಿಡಬೇಡಿ ಹಣ ಇಡುವ ಸ್ಥಳ, ದೇವರ ಕೋಣೆ, ಪೀಠ, ಫೋಟೋ ಇರುವ ಪ್ರದೇಶದ ಬಳಿ ಚಪ್ಪಲಿಗಳನ್ನು ಇಡಬೇಡಿ. ಇದು ಶೋಭೆಯಲ್ಲ. ದೇವರು, ಹಣ ಎಂದರೆ ನಮ್ಮಲ್ಲಿ ವಿಶೇಷವಾದ ಗೌರವ ಇದೆ. ದೇವರ ಬಗ್ಗೆ ನಂಬಿಕೆ ಇರುವಂತೆ, ಹಣವನ್ನು ಕೂಡ ನಾವು ಲಕ್ಷ್ಮೀದೇವಿ ಎಂದು ಪೂಜಿಸುತ್ತೇವೆ. ಹಾಗಾಗಿ, ಇಂಥ ಸ್ಥಳಗಳಲ್ಲಿ ಚಪ್ಪಲಿ ಬಿಡಬಾರದು.
ಹಾಗೊಂದು ವೇಳೆ ಮನೆಯ ಸಿಟ್ಔಟ್ನಂಥ ಕೋಣೆಯಲ್ಲಿ ಚಪ್ಪಲಿ ಇಡುವುದಾದರೆ.. ನೀವು ಹಾಗೂ ಮನೆಯ ಹೊರಗೆ ಚಪ್ಪಲಿ ಬಿಡಲಾಗುವುದಿಲ್ಲ. ಮನೆಯೊಳಗೆ ತರುವುದು ಇಂದಿನ ದಿನಮಾನದಲ್ಲಿ ಅನಿವಾರ್ಯವೇ ಆಗಿದೆ ಅಂತಾದರೆ, ಚಪ್ಪಲಿಗಳನ್ನು ಸಿಟ್ಔಟ್ಗಳಲ್ಲಿ ಇಡಬಹುದು. ಅಥವಾ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿಗೆ ಮುಖಮಾಡಿ ಚಪ್ಪಲಿ ಬಿಡಬಹುದು.
ಈ ಬಗ್ಗೆಯೂ ಗಮನ ಕೊಡಿ ಈಗೀಗ ಹಲವರು ಮನೆಯ ಒಳಗೂ ಚಪ್ಪಲಿ ಧರಿಸುತ್ತಾರೆ. ಆದರೆ ಗಮನಿಸಲೇಬೇಕಾದ ಅಂಶ ಎಂದರೆ, ನೀವು ಮನೆಯ ಒಳಗೆ ಮತ್ತು ಹೊರಗೆ ಬಳಸುವ ಚಪ್ಪಲಿಗಳು ಬೇರೆ ಬೇರೆ ಆಗಿರಲಿ. ಯಾವುದೇ ಕಾರಣಕ್ಕೂ ಒಂದೇ ಚಪ್ಪಲಿಗಳನ್ನು ಬಳಸಬೇಡಿ. ಅಷ್ಟೇ ಅಲ್ಲದೆ, ಶೌಚಾಲಯಕ್ಕೆ ಅಥವಾ ಮನೆಯ ಒಳಗಿನ ಬಾತ್ರೂಂಗೆ ಬಳಸುವ ಚಪ್ಪಲಿಯನ್ನು ಮನೆಯ ಇತರ ಕೋಣೆಗಳಿಗೆ ಹಾಕಿ ತಿರುಗಾಡಬೇಡಿ.
ಇದನ್ನೂ ಓದಿ: Ugadi Rashi Bhavishya 2021: ವೃಷಭ ರಾಶಿ ಯುಗಾದಿ ಭವಿಷ್ಯ: ವೇತನ ಹೆಚ್ಚಳ, ನಿಯಮಿತವಾಗಿ ವ್ಯಾಯಾಮ ಮಾಡಿ
Published On - 6:38 am, Wed, 31 March 21