ಮನೆ ಗುಡಿಸಲು ಸರಿಯಾದ ಸಮಯ ಯಾವುದು ಗೊತ್ತಾ? ಈ ತಪ್ಪು ಮಾಡಿದರೆ ಲಕ್ಷ್ಮಿ ಕೃಪೆ ಕಳೆದುಕೊಳ್ಳುತ್ತೀರಿ!

ಮನೆ ಸ್ವಚ್ಛತೆಯು ದಿನಚರಿಯ ಅವಿಭಾಜ್ಯ ಅಂಗ. ಧರ್ಮಶಾಸ್ತ್ರಗಳ ಪ್ರಕಾರ ಮತ್ತು ವೈಜ್ಞಾನಿಕವಾಗಿ ಸ್ವಚ್ಛತೆ ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ, ಉತ್ತಮ ಆರೋಗ್ಯ ನೀಡುತ್ತದೆ. ಮನೆ ಗುಡಿಸಲು ನಿರ್ದಿಷ್ಟ ಶುಭ ಸಮಯವಿದೆ. ಬೆಳಗ್ಗೆ 8-10 ಗಂಟೆ ಮನೆ ಗುಡಿಸುವುದು ಮಂಗಳಕರ. ಸಂಜೆ ಅಥವಾ ರಾತ್ರಿ ಕಸ ಗುಡಿಸುವುದರಿಂದ ಲಕ್ಷ್ಮಿ ಕೃಪೆಗೆ ಧಕ್ಕೆ ಎಂದು ನಂಬಲಾಗಿದೆ.

ಮನೆ ಗುಡಿಸಲು ಸರಿಯಾದ ಸಮಯ ಯಾವುದು ಗೊತ್ತಾ? ಈ ತಪ್ಪು ಮಾಡಿದರೆ ಲಕ್ಷ್ಮಿ ಕೃಪೆ ಕಳೆದುಕೊಳ್ಳುತ್ತೀರಿ!
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು
Image Credit source: Getty Images

Updated on: Oct 21, 2026 | 7:56 AM

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ದಿನಚರಿಯ ಅತ್ಯಂತ ಪ್ರಮುಖ ಭಾಗವಾಗಿದೆ. ವೈಜ್ಞಾನಿಕವಾಗಿ ಮಾತ್ರವಲ್ಲದೆ, ನಮ್ಮ ಧರ್ಮ ಶಾಸ್ತ್ರಗಳಲ್ಲೂ ಸ್ವಚ್ಛತೆಗೆ ವಿಶೇಷ ಸ್ಥಾನ ಹಾಗೂ ಮಹತ್ವ ನೀಡಲಾಗಿದೆ. ಎಂದೆಂದಿಗೂ ಸ್ವಚ್ಛವಾಗಿರುವ ಮನೆಯಲ್ಲಿ ಪಾಸಿಟಿವ್ ವಾತಾವರಣ ನೆಲೆಸಿರುತ್ತದೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನಂಬಲಾಗಿದೆ. ಈ ಕಾರಣದಿಂದಲೇ ಅನೇಕ ಜನರು ತಮ್ಮ ಮನೆಯನ್ನು ಗುಡಿಸುವ ಮತ್ತು ಸ್ವಚ್ಛಗೊಳಿಸುವ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಶಾಸ್ತ್ರಗಳ ಪ್ರಕಾರ, ದಿನದ ನಿರ್ದಿಷ್ಟ ಸಮಯದಲ್ಲಿ ಮನೆ ಗುಡಿಸುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ.

ಮನೆ ಗುಡಿಸಲು ಸೂಕ್ತ ಸಮಯ ಯಾವುದು?

ಶಾಸ್ತ್ರಗಳ ಪ್ರಕಾರ, ಬೆಳಿಗ್ಗೆಯ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಿನದ ಆರಂಭವನ್ನು ಸ್ವಚ್ಛವಾದ ಮನೆಯಿಂದ ಮಾಡುವುದರಿಂದ ಇಡೀ ದಿನದ ವಾತಾವರಣ ಹಾಗೂ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಸಾಧ್ಯವಾದರೆ ಮಧ್ಯಾಹ್ನ 12 ಗಂಟೆಯ ಒಳಗಾಗಿ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುವುದು ಉತ್ತಮ. ಅದರಲ್ಲೂ ವಿಶೇಷವಾಗಿ ಬೆಳಿಗ್ಗೆ 8 ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಗುಡಿಸುವುದು ಅತ್ಯಂತ ಶುಭ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಮನೆ ಗುಡಿಸುವುದರಿಂದ ಮನೆ ಸ್ವಚ್ಛವಾಗುವುದರ ಜೊತೆಗೆ ಧಾರ್ಮಿಕ ದೃಷ್ಟಿಯಿಂದಲೂ ಇದು ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!

ಸಂಜೆ ಅಥವಾ ರಾತ್ರಿ ವೇಳೆ ಮನೆ ಗುಡಿಸಬಹುದೇ?

ಧರ್ಮಗ್ರಂಥಗಳ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಹಾಗೂ ರಾತ್ರಿಯ ವೇಳೆ ಮನೆಯನ್ನು ಗುಡಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಹಿಂದೂ ಧರ್ಮದಲ್ಲಿ ಸಂಜೆಯ ಸಮಯವನ್ನು ಲಕ್ಷ್ಮಿ ದೇವಿಯ ಪೂಜೆ ಹಾಗೂ ಆಗಮನಕ್ಕೆ ವಿಶೇಷ ಮಹತ್ವದ ಕಾಲವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಅನೇಕ ಹಿರಿಯರು ಸಂಜೆ ವೇಳೆ ಮನೆ ಗುಡಿಸಲು ಬಿಡುವುದಿಲ್ಲ. ಸಂಜೆಯ ವೇಳೆ ಮನೆ ಗುಡಿಸುವುದು ಅಥವಾ ಕಸ ಗುಡಿಸುವುದು ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಹಾಗೂ ಆಶೀರ್ವಾದದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಈ ಎಲ್ಲ ಕಾರಣಗಳಿಂದಾಗಿ ಜನರು ತಮ್ಮ ಮನೆಯನ್ನು ಬೆಳಗಿನ ಜಾವ ಅಥವಾ ಹಗಲಿನ ವೇಳೆಯಲ್ಲಿಯೇ ಸ್ವಚ್ಛಗೊಳಿಸಲು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:55 am, Wed, 21 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us