Basant Panchami:ಜಪಾನಿಗರು ಸರಸ್ವತಿ ದೇವಿಯನ್ನು ಯಾಕೆ ಪೂಜಿಸುತ್ತಾರೆ? ಏಳು ಅದೃಷ್ಟಶಾಲಿ ದೇವರುಗಳಲ್ಲಿ ಏಕೈಕ ಸ್ತ್ರೀ ದೇವತೆ

Saraswati Puja: ಜಪಾನಿನಲ್ಲಿ ಹಿಂದೂ ಧರ್ಮದ ಗಾಢವಾದ ಪ್ರಭಾವವು ಸಂಸ್ಕೃತಿ, ಆಚರಣೆ ಇತ್ಯಾದಿ ವಿವಿಧ ಅಂಶಗಳಿಂದ ಸ್ಪಷ್ಟವಾಗುತ್ತದೆ. ಬೆಂಜೈಟೆನ್ ನಂತಹ ದೇವತೆಗಳನ್ನು ಪೂಜಿಸುವುದರಿಂದ ಹಿಡಿದು ಸಂಸ್ಕೃತದಿಂದ ಪಡೆದ ಭಾಷೆ ಮತ್ತು ತಾತ್ವಿಕ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳುವವರೆಗೆ ವಿದೇಶಿ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಈ ವಿಷಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Basant Panchami:ಜಪಾನಿಗರು ಸರಸ್ವತಿ ದೇವಿಯನ್ನು ಯಾಕೆ ಪೂಜಿಸುತ್ತಾರೆ? ಏಳು ಅದೃಷ್ಟಶಾಲಿ ದೇವರುಗಳಲ್ಲಿ ಏಕೈಕ ಸ್ತ್ರೀ ದೇವತೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 15, 2024 | 2:02 PM

ಜಪಾನ್ ತನ್ನ ಇತಿಹಾಸದುದ್ದಕ್ಕೂ ಅಸಂಖ್ಯಾತ ಸಂಸ್ಕೃತಿಗಳಿಂದಾಗಿ ಶ್ರೀಮಂತ ಪರಂಪರೆಯಾಗಿ ರೂಪುಗೊಂಡಿದೆ. ಪ್ರಾಚೀನ ಭಾರತೀಯ ಧರ್ಮವು, ವೈವಿಧ್ಯಮಯ ದೇವತೆಗಳ ದೇವತಾಗಣ, ಆಳವಾದ ತತ್ವಶಾಸ್ತ್ರಗಳು ಮತ್ತು ಸಂಕೀರ್ಣ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಈ ಪ್ರಭಾವವು ಕಲೆ, ಸಾಹಿತ್ಯ, ಸಂಗೀತ ಮತ್ತು ಆಧ್ಯಾತ್ಮಿಕತೆ ಸೇರಿದಂತೆ ಜಪಾನಿನ ಸಂಸ್ಕೃತಿಯ ವಿವಿಧ ಅಂಶಗಳಲ್ಲಿ ಅಡಕವಾಗಿದೆ. ಜೊತೆಗೆ ಜಪಾನ್ ನಲ್ಲಿ ಹಿಂದೂ ಧರ್ಮ ಅನೇಕ ರೀತಿಯಲ್ಲಿ ಪ್ರಭಾವ ಬೀರಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ ಇಲ್ಲಿ ನಮ್ಮ ಜ್ಞಾನ ದೇವತೆಯಾದ ಸರಸ್ವತಿ ಮಾತೆಯನ್ನು ಪೂಜಿಸುವುದು. ಹಿಂದೂ ಸಂಪ್ರದಾಯದಲ್ಲಿ, ಸರಸ್ವತಿ ದೇವಿಯನ್ನು ವೀಣಾಪಾಣಿಯಾಗಿ ಚಿತ್ರಿಸಲಾಗುತ್ತದೆ. ಆದರೆ ಜಪಾನಿಗರು ಆಕೆಯನ್ನು ನೀರಿನ ಕೊಳದಲ್ಲಿಟ್ಟು ಪೂಜಿಸುತ್ತಾರೆ.

ಜಪಾನಿನ ಜನರು ಸರಸ್ವತಿ ದೇವಿಯನ್ನು ಪೂಜಿಸುತ್ತಾರಾ?

ಜಪಾನಿನ ಸಂಸ್ಕೃತಿಯಲ್ಲಿ, ಸರಸ್ವತಿಯನ್ನು ಬೆಂಜೈಟೆನ್ ಎಂದು ಕರೆಯಲಾಗುತ್ತದೆ. ಇದು ಜಪಾನ್ ನ ಏಳು ಅದೃಷ್ಟಶಾಲಿ ದೇವರುಗಳಲ್ಲಿ ಏಕೈಕ ಸ್ತ್ರೀ ದೇವತೆ. ಅಲ್ಲಿಯ ಜನ ಜೀವನದಲ್ಲಿ ಅದೃಷ್ಟ ಮತ್ತು ಸಂತೋಷಕ್ಕಾಗಿ ಆಕೆಯನ್ನು ಪೂಜಿಸುತ್ತಾರೆ. ಇನ್ನು ಕೆಲವರು ಆಕೆಯನ್ನು ನೀರಿನ ಕೊಳಗಳಲ್ಲಿ ಇಟ್ಟು ಪೂಜಿಸುತ್ತಾರೆ. ಏಕೆಂದರೆ ಅಲ್ಲಿನವರ ನಂಬಿಕೆಯ ಪ್ರಕಾರ ಆಕೆ, ಭೂಕಂಪಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಹಾಗಾಗಿ ನೀರು, ಸಂಗೀತ, ಸಂಪತ್ತು ಮತ್ತು ಸಮಯದಂತಹ ಅಂಶಗಳ ಸಾರವನ್ನು ಬೆಂಜೈಟೆನ್ ಒಳಗೊಂಡಿದೆ. ಆಕೆಯ ಚಿತ್ರಣಗಳು ಹೆಚ್ಚಾಗಿ ಅವಳನ್ನು ಬಿವಾ, ಜಪಾನಿನ ಲ್ಯೂಟ್ ಮತ್ತು ಬಿಳಿ ಡ್ರ್ಯಾಗನ್ ಅಥವಾ ಸರ್ಪದೊಂದಿಗೆ ಒಳಗೊಂಡಿರುತ್ತವೆ, ಇದು ನೀರಿನೊಂದಿಗೆ ಅವಳಿಗಿರುವ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಬೆಂಜೈಟೆನ್ ಗೆ ಸಮರ್ಪಿತವಾದ ಜಾಗಗಳಿದ್ದು ಅಲ್ಲಿ ಜಪಾನಿನ ಭಕ್ತರು ಆಕೆಯ ಆಶೀರ್ವಾದ ಬೇಡುವ ಮೂಲಕ ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಜಪಾನ್​​​ನಲ್ಲಿ ಹಿಂದೂ ದೇವರ ಪೂಜೆ!

ಜಪಾನ್ ನಲ್ಲಿ ಪೂಜಿಸಲ್ಪಡುವ ಬೆಂಜೈಟೆನ್ ಜೊತೆಗೆ ಕಿಚಿಜೋಟೆನ್ ಅಥವಾ ಕಿಶೋಟೆನ್ (ಲಕ್ಷ್ಮೀ), ತೈಶಾಕುಟೆನ್ (ಇಂದ್ರ), ಬೊಂಟೆನ್ (ಬ್ರಹ್ಮ), ಕಂಗಿಟೆನ್ ಅಥವಾ ಕಂಕಿಟೆನ್ (ಗಣೇಶ), ಕರೂರ (ಗರುಡ) ಮತ್ತು ಬಿಶಮೊಂಟನ್ (ಕುಬೇರ) ಎಂಬ ನಾನಾ ಹೆಸರುಗಳ ಮೂಲಕ ಹಿಂದೂ ದೇವರುಗಳನ್ನು ಪೂಜಿಸಲಾಗುತ್ತದೆ. ಈ ದೇವರಲ್ಲಿ ಅನೇಕ ಮೂರ್ತಿ ಅಥವಾ ಪ್ರತಿಮೆಗಳನ್ನು ಬೌದ್ಧ ದೇವತಾಗಣದಲ್ಲಿ ಇಡಲಾಗಿದೆ. ನಂಬಿಕೆಯ ಪ್ರಕಾರ ಜಪಾನ್ ಜನರು ನಮ್ಮ ಹಿಂದೂ ಧರ್ಮದ ಅನೇಕ ಅಂಶಗಳನ್ನು ಪಾಲನೆ ಮಾಡುತ್ತಿದ್ದು ಇನ್ನು ಕೆಲವು ಇಲ್ಲಿನ ಸ್ಥಳೀಯ ಪೂರ್ವಜರ ಆಚಾರ ವಿಚಾರಗಳೊಂದಿಗೆ ಹೆಣೆದುಕೊಂಡಿವೆ.

ಇದನ್ನೂ ಓದಿ: ವಸಂತ ಪಂಚಮಿಯ ದಿನ ಈ ವಸ್ತುಗಳನ್ನು ದಾನ ಮಾಡಿ, ಭವಿಷ್ಯವೇ ಬದಲಾಗುತ್ತೆ!

ಸಂಸ್ಕೃತ ಭಾಷೆಯಿಂದ ಸ್ಫೂರ್ತಿ ಪಡೆದ ಪದಗಳು!

ಹಿಂದೂ ಧರ್ಮದ ಪ್ರಭಾವವು ದೇವಾನು ದೇವತೆಗಳನ್ನು ಮೀರಿ ಭಾಷೆ, ತತ್ವಶಾಸ್ತ್ರ ಮತ್ತು ಸಂಸ್ಕೃತಿಗೆ ವಿಸ್ತರಿಸಿದೆ. ಹಲವಾರು ಜಪಾನಿ ಪದಗಳು ಹಿಂದೂ ಧರ್ಮ ಗ್ರಂಥಗಳ ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ಕಂಡು ಬರುತ್ತವೆ. ಉದಾಹರಣೆಗೆ, “ಹನ” (ಹೂವು) “ಪುಷ್ಪ”, “ರೆಂಗೆ” (ಕಮಲ) “ಪದ್ಮ” ಮತ್ತು “ತೇರಾ” (ದೇವಾಲಯ) ದಿಂದ ಹುಟ್ಟಿಕೊಂಡಿದೆ. ಜಪಾನಿನ ವರ್ಣಮಾಲೆಯಾದ ಕಾನಾ ಕೂಡ ಸಂಸ್ಕೃತ ಲಿಪಿಯಾದ ಸಿದ್ದಂನಿಂದ ಸ್ಫೂರ್ತಿ ಪಡೆದಿದೆ. ಇದಲ್ಲದೆ, ಯೋಗ, ಧ್ಯಾನ ಮತ್ತು ಹೋಮದಂತಹ ಅಭ್ಯಾಸಗಳು ಹಿಂದೂ ಸಂಪ್ರದಾಯಗಳನ್ನು ಹೋಲುತ್ತವೆ. ಕರ್ಮ, ಪುನರ್ಜನ್ಮ ಮತ್ತು ಜ್ಞಾನೋದಯದಂತಹ ಪರಿಕಲ್ಪನೆಗಳು ಕೂಡ ಹಿಂದೂ ಮತ್ತು ಬೌದ್ಧ ಧರ್ಮಗಳಿಂದ ಪ್ರಭಾವ ಬೀರಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅಲ್ಲದೆ ಇವೆಲ್ಲಾ ಜಪಾನಿನ ಆಧ್ಯಾತ್ಮಿಕತೆಯ ಮೇಲೆ ಆಳವಾಗಿ ಪ್ರಭಾವ ಬೀರಿರುವುದು ಸುಳ್ಳಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:05 pm, Wed, 14 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ