AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhadrapada Amavasya 2025: ಭಾದ್ರಪದ ಮಾಸದ ಅಮಾವಾಸ್ಯೆ ಯಾವಾಗ? ಮಹತ್ವ ಮತ್ತು ಪೂಜಾ ನಿಯಮಗಳನ್ನು ತಿಳಿಯಿರಿ

2025ರ ಭಾದ್ರಪದ ಅಮಾವಾಸ್ಯೆಯು ಆಗಸ್ಟ್ 22, ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ, ಸೂರ್ಯನಿಗೆ ಅರ್ಘ್ಯ, ಪಿತೃ ಪೂಜೆ, ಮತ್ತು ದಾನ ಮಾಡುವುದು ಮುಖ್ಯ. ಪೂರ್ವಜರ ಆಶೀರ್ವಾದಕ್ಕಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವಿಷ್ಣು, ಶಿವ ಮತ್ತು ಪೂರ್ವಜರ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನ ಪೂಜೆ ಸಲ್ಲಿಸುತ್ತಾರೆ.

Bhadrapada Amavasya 2025: ಭಾದ್ರಪದ ಮಾಸದ ಅಮಾವಾಸ್ಯೆ ಯಾವಾಗ? ಮಹತ್ವ ಮತ್ತು ಪೂಜಾ ನಿಯಮಗಳನ್ನು ತಿಳಿಯಿರಿ
Bhadrapada Amavasya
ಅಕ್ಷತಾ ವರ್ಕಾಡಿ
|

Updated on: Aug 16, 2025 | 11:03 AM

Share

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ದಿನಾಂಕವು ವಿಶೇಷ ಮಹತ್ವವನ್ನು ಹೊಂದಿದೆ. ಅಮಾವಾಸ್ಯೆಯಂದು ಜನರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ, ಅಮಾವಾಸ್ಯೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಸಂತೋಷ ಬರುತ್ತದೆ ಎಂದು ನಂಬಲಾಗಿದೆ. 2025 ರ ಭಾದ್ರಪದ ಮಾಸದ ಅಮಾವಾಸ್ಯೆ ಯಾವಾಗ ಎಂಬ ಗೊಂದ ಸಾಕಷ್ಟು ಜನರಲ್ಲಿದೆ. ಯಾವಾಗ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

2025ರ ಭಾದ್ರಪದ ಅಮಾವಾಸ್ಯೆ ತಿಥಿ:

  • ಭಾದ್ರಪದ ಮಾಸದ ಅಮಾವಾಸ್ಯೆ ಆಗಸ್ಟ್ 22 ರಂದು ಮಧ್ಯಾಹ್ನ 02:25 ಕ್ಕೆ ಪ್ರಾರಂಭವಾಗುತ್ತದೆ.
  • ಅಮಾವಾಸ್ಯೆ ತಿಥಿ ಆಗಸ್ಟ್ 23 ರಂದು ಮಧ್ಯಾಹ್ನ 02:05 ಕ್ಕೆ ಕೊನೆಗೊಳ್ಳುತ್ತದೆ.
  • ಅದಕ್ಕಾಗಿಯೇ ಭಾದ್ರಪದ ಮಾಸದ ಅಮಾವಾಸ್ಯೆಯನ್ನು ಆಗಸ್ಟ್ 22, ಶುಕ್ರವಾರದಂದು ಆಚರಿಸಲಾಗುತ್ತದೆ.

ಭಾದ್ರಪದ ಅಮವಾಸ್ಯೆ ಪೂಜಾ ನಿಯಮಗಳು:

  • ಅಮವಾಸ್ಯೆಯ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ.
  • ಈ ದಿನ ಗಂಗಾ ನದಿ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.
  • ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಿ.
  • ಈ ದಿನ, ಪೂರ್ವಜರ ಶಾಂತಿಗಾಗಿ ಪಿತೃ ಪೂಜೆ ಮತ್ತು ಪಿತೃ ತರ್ಪಣವನ್ನು ಮಾಡಿ.
  • ಈ ದಿನದಂದು ದಾನ ಮಾಡುವುದು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗಿದೆ.
  • ಬ್ರಾಹ್ಮಣರಿಗೆ ಅನ್ನ, ಬಟ್ಟೆ ಮತ್ತು ದಕ್ಷಿಣೆಯನ್ನು ಕೊಡಲು ಮರೆಯಬೇಡಿ.

ಇದನ್ನೂ ಓದಿ: ಮಕ್ಕಳಲ್ಲಿ ಕಂಡುಬರುವ ಬಾಲಾರಿಷ್ಟ ದೋಷಕ್ಕೆ ಸರಳ ಪರಿಹಾರ ಇಲ್ಲಿದೆ

ಅಮವಾಸ್ಯೆಯ ಮಹತ್ವ:

  • ಹಿಂದೂ ಧರ್ಮದಲ್ಲಿ ಅಮವಾಸ್ಯೆಯ ತಿಥಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಪಿತ್ರಾ ತರ್ಪಣ, ಶ್ರಾದ್ಧ ಮತ್ತು ಪಿಂಡದಾನ ಮಾಡಲಾಗುತ್ತದೆ.
  • ಈ ದಿನದಂದು ದಾನ ಮತ್ತು ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಅದಕ್ಕಾಗಿಯೇ ಈ ದಿನದಂದು ದಾನ ಮಾಡುವುದು ಶುಭ.
  • ಈ ದಿನದಂದು ವಿಷ್ಣು, ಭೋಲೇನಾಥ ಮತ್ತು ಪೂರ್ವಜರ ಆಶೀರ್ವಾದವನ್ನು ಪಡೆಯಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!