AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Buddha Purnima 2021: ಬುದ್ಧ ಪೂರ್ಣಿಮೆಯಂದು ಬೌದ್ಧರು ಭೇಟಿ ನೀಡುವ ಯಾತ್ರಾ ಸ್ಥಳಗಳು ಯಾವುವು?

ಭಾರತದಲ್ಲಿ ನೋಡಲೇ ಬೇಕಾದ ಬುದ್ಧನ ಪ್ರತಿಮೆಗಳು ಎಲ್ಲಿವೆ? ಬೌದ್ಧರು ಹೆಚ್ಚು ಭೇಟಿ ನೀಡುವ ಯಾತ್ರಾ ಸ್ಥಳ ಯಾವುವು? ಎಂಬುದರ ಕುರಿತು ತಿಳಿಯೋಣ.

Buddha Purnima 2021: ಬುದ್ಧ ಪೂರ್ಣಿಮೆಯಂದು ಬೌದ್ಧರು ಭೇಟಿ ನೀಡುವ ಯಾತ್ರಾ ಸ್ಥಳಗಳು ಯಾವುವು?
Buddha Purnima 2021
shruti hegde
|

Updated on:May 26, 2021 | 10:02 AM

Share

ಗೌತಮ ಬುದ್ಧ ಹುಟ್ಟಿದ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಬೌದ್ಧ ನಂಬಿಕೆಯನ್ನು ಅನುಸರಿಸುವ ಜನರ ಪ್ರಮುಖ ಹಬ್ಬವಿದು. ಈ ವರ್ಷ ಇಂದು (ಮೇ 26) ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಹಾಗಿರುವಾಗ ಭಾರತದಲ್ಲಿ ನೋಡಲೇ ಬೇಕಾದ ಬುದ್ಧನ ಪ್ರತಿಮೆಗಳು ಎಲ್ಲಿವೆ? ಬೌದ್ಧರು ಹೆಚ್ಚು ಭೇಟಿ ನೀಡುವ ಯಾತ್ರಾ ಸ್ಥಳ ಯಾವುವು? ಎಂಬುದರ ಕುರಿತು ತಿಳಿಯೋಣ.

ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಿದ ಮಹಾನ್​ ವ್ಯಕ್ತಿ. ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಎಲ್ಲೆಡೆ ಸಾರಿದ. ಇದೇ ಈತನ ತತ್ವವಾಗಿತ್ತು. ಧ್ಯಾನ ಮಾರ್ಗವನ್ನು ಅನುಸರಿಸಿ, ಈ ಮೂಲಕ ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತರಾಗಬಹುದು ಎಂಬುದರ ಕುರಿತಾಗಿ ಲೋಕಕ್ಕೇ ಸಾರಿದ. ಹಾಗಿದ್ದಾಗ ಭೇಟಿ ನೀಡಬೇಕಾದ ಪ್ರಮುಖ ಯಾತ್ರಾ ಸ್ಥಳಗಳು ಎಲ್ಲಿವೆ ಎಂಬುದನ್ನು ನೊಡೋಣ.

ಬಿಹಾರ ಬೋಧ ಗಯಾ ಬೋಧ್​ ಗಯಾ ಅಥವಾ ಬೋಧಗಯಾ ಎಂಬುದು ಭಾತರದ ಬಿಹಾರ​ ರಾಜ್ಯದಲ್ಲಿ ಕಂಡು ಬರುವ ಗಯಾ ಜಿಲ್ಲೆ ಒಂದು ನಗರವಾಗಿದೆ. ಇಲ್ಲಿ ನಾವು ಗೌಮಬುದ್ಧನ ಪ್ರತಿಮೆಯನ್ನು ಕಾಣಬಹುದು. ಗೌತಮ ಬುದ್ಧನ ನಿರ್ಮಾಣ ಹೊಂದಿರುವ ಸ್ಥಳಗಳಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಸ್ಥಳವಿದು. ಈ ಊರನ್ನು ಬೋಧಿಮಂದ ಎಂದು ಕರೆಯುತ್ತಾರೆ. ಅಂದರೆ ಬೋಧಿ ಮರದ ಸುತ್ತಲಿರುವ ಭೂಮಿ ಎಂದರ್ಥ. ಸಂಬೋಧಿ, ವಜ್ರಾಸನ, ಮಹಾಬೋಧಿ ಎಂಬ ನಾನಾ ಹೆಸರುಗಳಿಂದಲೂ ಈ ಊರನ್ನು ಕರೆಯುತ್ತಾರೆ. ಬೌದ್ಧ ಜನರು ಬುದ್ಧ ಪೂರ್ಣಿಮೆಯಂದು ಇಲ್ಲಿಗೆ ಭೇಟಿ ನೀಡಿ ಬುದ್ಧನ ಸ್ಮರಣೆ ಮಾಡುತ್ತಾರೆ.

ಉತ್ತರ ಪ್ರದೇಶದ ಸಾರಾನಾಥ ವಾರಣಾಸಿಯಲ್ಲಿರುವ ಸಾರಾನಾಥ ದೇವಾಲಯ ಬುದ್ಧನ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಬುದ್ಧನು ಮೊದಲ ಬಾರಿಗೆ ಧರ್ಮೋಪದೇಶವನ್ನು ನೀಡಿದ ಪವಿತ್ರ ಸ್ಥಳವಿದು. ಇಲ್ಲಿ ಸಂಘ ಎಂಬ ಸನ್ಯಾಸಿ ಸಮುದಾಯವನ್ನು ಬುದ್ಧ ಕಟ್ಟಿದ ಎಂಬ ಪ್ರತೀತಿ ಇದೆ. ಜನತೆಗೆ ಧರ್ಮದ ಪಾಠವನ್ನು ಕಲಿಸಿಕೊಟ್ಟ ಎಂಬ ಇತಿಹಾಸವಿದೆ. ಇಲ್ಲಿ 128 ಅಡಿ ಎತ್ತರದ ಧಮೇಕ್​ ಸ್ತೂಪನ್ನು ನೋಡಬಹುದಾಗಿದೆ. ಭಾರತದ ಸಮೀಕ್ಷೆಯ ಪ್ರಕಾರ ಪುರಾತತ್ವ ಕಾಲದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯ ಇಲ್ಲಿದೆ. ಕ್ರಿ.ಪೂ 3ನೇ ಶತಮಾನ ಮತ್ತು ಕ್ರಿ.ಶ 12ನೇ ಶತಮಾನದ ನಡುವಿನ ಪ್ರಾಚೀನ ವಸ್ತುಗಳು ವಸ್ತುಸಂಗ್ರಹಾಲಯದಲ್ಲಿದೆ.

ಉತ್ತರ ಪ್ರದೇಶ ಕುಶಿನಗರ ಬೌದ್ಧರಿಗೆ ಪವಿತ್ರ ಸ್ಥಳಗಳಲ್ಲಿ ಒಂದಾದ ಕುಶಿನಗರ ಭಾರತದಾದ್ಯಂತ ಪ್ರಸಿದ್ಧಿ ಪಡೆದಿದೆ. ಬುದ್ಧನು ಮರಣ ಹೊಂದಿದ ಸ್ಥಳವಿದು. ಹಾಗಾಗಿ ಬೌದ್ಧ ಜನರು ಬುದ್ಧ ಪೂರ್ಣಿಯ ಪ್ರಯುಕ್ತ ಈ ಸ್ಥಳಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. 5ನೇ ಶತಮಾನದಲ್ಲಿ ಬುದ್ಧನು ಮಲಗಿರುವ ಪ್ರತಿಮೆಯನ್ನು ಇಲ್ಲಿ ನೋಡಬಹುದು. ಪ್ರತಿಮೆ ಸುಮಾರು 20 ಅಡಿಗಳಿಗಿಂತ ಎತ್ತರವಿದೆ.

ಉತ್ತರ ಪ್ರದೇಶದ ಶ್ರಾವಸ್ತಿ ಶ್ರಾವಸ್ಥಿ ಎಂಬ ಪುರಾತನ ನಗರವು ಬೌದ್ಧ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಏಕೆಂದರೆ ಬುದ್ಧನು ಜ್ಞಾನೋದಯ ಪಡೆದ ನಂತರ ಇಲ್ಲಿ ಹೆಚ್ಚಿನ ಸಮಯವನ್ನು ಕಳೆದನು ಎಂಬುದನ್ನು ಇತಿಹಾಸ ತಿಳಿಸಿಕೊಡುತ್ತದೆ. ಬುದ್ಧ ಹಲವಾರು ಪವಾಡಗಳನ್ನು ಮಾಡಿದ ಸ್ಥಳವುದು ಎಂದು ನಂಬಲಾಗಿದೆ.

ಬಿಹಾರದ ರಾಜ್ ​ಗೀರ್​ ಪಾಟಲಿಪುತ್ರಕ್ಕಿಂತ ಮೊದಲು ರಾಜ್​ ಗೀರ್​​ ಮಗಧನ್​ ಸಾಮ್ಯಾಜ್ಯದ ರಾಜಧಾನಿ ಅಗಿತ್ತು. ಮಳೆಗಳಾದ ಸಮಯದಲ್ಲಿ ಬುದ್ಧ ವಾಸಿಸುವ ಸ್ಥಳ ಇದಾಗಿತ್ತು. ಆದ್ದರಿಂದ ಇದು ಬೌದ್ಧರಿಗೆ ಪವಿತ್ರವಾದ ಸ್ಥಳವಾಗಿದೆ.

ಇದನ್ನೂ ಓದಿ: Buddha Purnima 2021 Date: ಬುದ್ಧ ಪೂರ್ಣಿಮೆ ಆಚರಣೆಯ ದಿನಾಂಕ, ಶುಭ ಸಮಯ ಮತ್ತು ಮಹತ್ವ

Published On - 9:45 am, Wed, 26 May 21